ಸಂಸತ್ತು​ ಪ್ರವೇಶಿಸುವ ಮೊದಲು ಎಲ್ಲ ಸಂಸದರು ಕೊರೋನಾ ಪರೀಕ್ಷೆಗೆ ಒಳಗಾಗೋದು ಕಡ್ಡಾಯ

ಅಧಿವೇಶನದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಆ ರೀತಿಯಲ್ಲೇ ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು, ವಿಸಿಟರ್ಸ್​​ಗೆ ಸಂಸತ್​ ಪ್ರವೇಶಿಸಲು ಅವಕಾಶ ಇರುವುದಿಲ್ಲ. ಅಧಿವೇಶನ ಸೆಪ್ಟೆಂಬರ್​ 14ರಂದು ಆರಂಭಗೊಂಡು ಅಕ್ಟೋಬರ್​ 1ಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಸಂಸತ್​ ಭವನ

ಸಂಸತ್​ ಭವನ

 • Share this:
  ನವದೆಹಲಿ (ಆಗಸ್ಟ್​​29) ಸೆಪ್ಟೆಂಬರ್​  14ರಿಂದ ಮಾನ್ಸೂನ್​ ಅಧಿವೇಶನ ಆರಂಭವಾಗಲಿದೆ. ಅಧಿವೇಶನಕ್ಕೆ ಬರುವುದಕ್ಕೂ 72 ಗಂಟೆ ಮೊದಲು ಎಲ್ಲ ಸಂಸದರು ಕೊರೋನಾ ಪರೀಕ್ಷೆಗೆ ಒಳಗಾಗುವುದು ಕಡ್ಡಾಯ ಎಂದು ಲೋಕಸಭೆ ಸ್ಪೀಕರ್​ ಓಂ ಬಿರ್ಲಾ ಹೇಳಿದ್ದಾರೆ. ಸಂಸದರ ಜೊತೆ ಸಂಸತ್ತಿನಲ್ಲಿರುವ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಮಾಧ್ಯಮದವರು ಕೂಡ ಕೊರೋನಾ ಟೆಸ್ಟ್​​ಗೆ ಒಳಗಾಗುವುದು ಕಡ್ಡಾಯವಾಗಿದೆ.

  ಅಧಿವೇಶನದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಆ ರೀತಿಯಲ್ಲೇ ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು, ವಿಸಿಟರ್ಸ್​​ಗೆ ಸಂಸತ್​ ಪ್ರವೇಶಿಸಲು ಅವಕಾಶ ಇರುವುದಿಲ್ಲ. ಅಧಿವೇಶನ ಸೆಪ್ಟೆಂಬರ್​ 14ರಂದು ಆರಂಭಗೊಂಡು ಅಕ್ಟೋಬರ್​ 1ಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

  ಆರೋಗ್ಯ ಇಲಾಖೆ ಅಧಿಕಾರಿಗಳು, ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ದೆಹಲಿ ಸರ್ಕಾರ, ಲೋಕಸಭಾ ಹಾಗೂ ರಾಜ್ಯ ಸಭಾ ಕಾರ್ಯದರ್ಶಿಗಳ ಜೊತೆ ಓಂ ಬಿರ್ಲಾ ಶುಕ್ರವಾರ ಸಭೆ ನಡೆಸಿದ್ದಾರೆ. ಅಧಿವೇಶನ ನಡೆಯುವ ವೇಳೆ ತೆಗೆದುಕೊಳ್ಳಬೇಕಾಗಿರುವ ಮುನ್ನೆಚ್ಚರಿಕೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

  ಇದನ್ನೂ ಓದಿ: ಜಿಎಸ್‌ಟಿ ವಿಚಾರದಲ್ಲಿ ಬಿಜೆಪಿ ನಾಯಕರು ರಾಜ್ಯಕ್ಕೆ ಬಗೆದಿರುವ ದ್ರೋಹವನ್ನು ಸಹಿಸಲು ಸಾಧ್ಯವಿಲ್ಲ; ಸಿದ್ದರಾಮಯ್ಯ

  ಈ ಬಗ್ಗೆ ಮಾತನಾಡಿರುವ ಓಂ ಬಿರ್ಲಾ, ಅಧಿವೇಶನ ನಡೆಸಲು ಬೇಕಿರುವ ಎಲ್ಲ ರೀತಿಯ ಕ್ರಮಗಳನ್ನು ನಾವು ತೆಗೆದುಕೊಂಡಿದ್ದೇವೆ. ಸಂಸದರು ಸೇರಿ ಸಂಸತ್​ ಪ್ರವೇಶಿಸುವ ಎಲ್ಲರೂ ಕೊರೋನಾ ಟೆಸ್ಟ್​​ಗೆ ಒಳಗಾಗುವುದು ಕಡ್ಡಾಯವಾಗಿದೆ, ಎಂದಿದ್ದಾರೆ. ಈ ಮೂಲಕ ಕೊರೋನಾ ಹರಡದಂತೆ ನೋಡಿಕೊಳ್ಳಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.

  ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಒಟ್ಟು 11 ವಿಧೇಯಕಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
  Published by:Rajesh Duggumane
  First published: