ಕೊಲ್ಕತ್ತಾ (ಮಾ. 4): ಪಶ್ಚಿಮ ಬಂಗಾಳದಲ್ಲಿ ಮೇ. 3ರಂದು ಇದೇ ಮೊದಲ ಬಾರಿ ಬಿಜೆಪಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ. ಆ ಮೂಲಕ ಬಿಜೆಪಿ ಈ ಬಾರಿ ಬಹುಮತ ಪಡೆಯಲಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಅವರು, 294 ಕ್ಷೇತ್ರಗಳಲ್ಲಿ ಬಿಜೆಪಿ ಕನಿಷ್ಠ 200 ಸ್ಥಾನಗಳಲ್ಲಿ ವಿಜಯ ಸಾಧಿಸಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದಿನಗಳನ್ನು ಎಣಿಸುತ್ತಿದ್ದಾರೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು. ಕಮ್ಯುನಿಸ್ಟರ ಪರಂಪರೆಯನ್ನು ಮಮತಾ ಬ್ಯಾನರ್ಜಿ ಮುಂದುವರೆಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಇಲ್ಲಿ ರಕ್ತಪಾತ ಮತ್ತು ರಾಜಕೀಯ ಕೊಲೆ ಅಂತ್ಯಕಾಣಲಿದೆ ಎಂದರು.
ಇದೇ ವೇಳೆ ಮಾತನಾಡಿದ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್, ತಮ್ಮ ಪಕ್ಷ 200ಕ್ಕೂ ಅಧಿಕ ಸ್ಥಾನದಲ್ಲಿ ಗೆಲುವು ಸಾಧಿಸಲಿದೆ, ಇದಕ್ಕಾಗಿ ಐದು ವರ್ಷಗಳ ಹಿಂದೆಯೇ ಸಿದ್ಧತೆ ನಡೆಸಲಾಗಿದೆ ಎಂದರು. 200ಕ್ಕಿಂತಲೂ ಕಡಿಮೆ ಸ್ಥಾನವನ್ನು ನಾವು ಪಡೆಯುವುದಿಲ್ಲ. ಐದು ವರ್ಷದ ಹಿಂದೆ ಮಮತಾ ಬ್ಯಾನರ್ಜಿ ಬಹುಮತದೊಂದಿಗೆ ಜಯಗೊಳಿಸಿದ ದಿನದಿಂದಲೂ ನಾವು ಕೆಲಸ ಆರಂಭಿಸಿದ್ದೇವು ಎಂದರು.
ಇದನ್ನು ಓದಿ: ಇಪಿಎಫ್ಒ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಇಲ್ಲ; ಶೇ. 8.5ರಷ್ಟು ಮುಂದುವರಿಕೆ
ನಾವು ಹಂತ ಹಂತವಾಗಿ ಸಿದ್ಧತೆ ನಡೆಸಿದ್ದೇವೆ. ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಇದು ಈಗಾಗಲೇ ಪ್ರಕಟವಾಗಿದೆ. ಅರ್ಧ ಸ್ಥಾನ 2019ರಲ್ಲಿ, ಸಂಪೂರ್ಣ ಗೆಲವು 2021ರಲ್ಲಿ ಎಂಬ ಮಂತ್ರದ ಅನುಸಾರ ಕೆಲಸ ಮಾಡಿದ್ದೇವೆ ಎಂದರು.
ಮಾರ್ಚ್ 27ರಿಂದ ಪಶ್ಚಿಮ ಬಂಗಾಳದಲ್ಲಿ ಏಂಟು ಹಂತದ ಚುನಾವಣೆ ಆರಂಭವಾಗಲಿದೆ, ಏಪ್ರಿಲ್ 29ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಇಷ್ಟು ದೀರ್ಘವಾಧಿಯವರೆಗೆ ಚುನಾವಣಾ ಪ್ರಕ್ರಿಯೆ ನಡೆಸುತ್ತಿರುವ ಕುರಿತು ತಿಳಿಸಿದ್ದ ಚುನಾವಣಾ ಆಯೋಗ ರಾಜಕೀಯ ಹಿಂಸೆ ಯಿಂದ ಈ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿತ್ತು. ಆದರೆ, ಈ ಕುರಿತು ಟೀಕಿಸಿದ ಮಮತಾ ಬ್ಯಾನರ್ಜಿ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ