ಸಂಸದೆ ಶೋಭಾ ಕರಂದ್ಲಾಜೆ ಎಸ್​ಬಿಐ ಖಾತೆ ಹ್ಯಾಕ್​; 20 ಲಕ್ಷ ರೂ.ಗುಳುಂ!

ಪ್ರತಿಯೊಬ್ಬ ಸಂಸದರಿಗೂ ಸಂಸತ್​ ಭವನ ಸ್ಟೇಟ್ ಬ್ಯಾಂಕ್​ ಆಫ್ ಇಂಡಿಯಾದಲ್ಲಿ ಖಾತೆ ತೆರೆಯಲಾಗಿರುತ್ತದೆ. ಸಂಸದರ ವೇತನ, ಇತರೆ ಭತ್ಯೆಗಳು ನೇರವಾಗಿ ಈ ಬ್ಯಾಂಕಿನ ಖಾತೆಗೆ ಸಂದಾಯವಾಗುತ್ತದೆ. ಹಲವು ಸಂಸದರು ಈ ಖಾತೆಗೆ ಬರುವ ಹಣವನ್ನು ಎಷ್ಟೋ ವರ್ಷಗಳವರೆಗೂ ಬಳಸಿಕೊಳ್ಳದೆ ಹಾಗೆ ಬಿಟ್ಟಿರುತ್ತಾರೆ. 

HR Ramesh | news18
Updated:February 12, 2019, 5:19 PM IST
ಸಂಸದೆ ಶೋಭಾ ಕರಂದ್ಲಾಜೆ ಎಸ್​ಬಿಐ ಖಾತೆ ಹ್ಯಾಕ್​; 20 ಲಕ್ಷ ರೂ.ಗುಳುಂ!
ಸಂಸದೆ ಶೋಭಾ ಕರಂದ್ಲಾಜೆ
HR Ramesh | news18
Updated: February 12, 2019, 5:19 PM IST
ನವದೆಹಲಿ: ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರ ಎಸ್​ಬಿಐ ಖಾತೆಯನ್ನು ದುಷ್ಕರ್ಮಿಗಳು ಹ್ಯಾಕ್​ ಮಾಡಿ, ಅದರಿಂದ 20 ಲಕ್ಷ ದೋಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹ್ಯಾಕ್​ ಆಗಿರುವುದನ್ನು ಸ್ವತಃ ಕರಂದ್ಲಾಜೆ ಅವರೇ ಒಪ್ಪಿಕೊಂಡಿದ್ದಾರೆ. ಆದರೆ, ವಿಷಯ ದೊಡ್ಡದು ಮಾಡಲು ಇಷ್ಟವಿಲ್ಲ ಎಂದು ಹೇಳಿ, ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಅವರು ನಿರಾಕರಿಸಿದ್ದಾರೆ.

ಸಂಸತ್ ಭವನದ ಎಸ್​ ಬಿಐ ಖಾತೆಯಿಂದ 20 ಲಕ್ಷ ಎಗರಿಸಲಾಗಿದ್ದು, ಈ ಸಂಬಂಧ ಶೋಭಾ ಕರಂದ್ಲಾಜೆ ಅವರು ಸಂಸತ್ ಭವನ ಮಾರ್ಗದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಾಯ್ಬಿಡದಂತೆ ಗೊಯೆಲ್​ ತಾಕೀತು

ನಿಮ್ಮ‌ ಹಣ ಹೋದರೂ ಪರವಾಗಿಲ್ಲ. ನಿಮ್ಮ‌ ಬ್ಯಾಂಕ್ ಅಕೌಂಟ್ ಹ್ಯಾಕ್ ಆದರೂ ಪರವಾಗಿಲ್ಲ. ಬ್ಯಾಂಕಿನಿಂದ ಹಣ ಬರುವುದು ತಡವಾದರೂ ತಡೆದುಕೊಳ್ಳಿ. ಬರದೇ ಇದ್ದರೂ ಬಾಯಿ ಮುಚ್ಚಿಕೊಂಡಿರಿ. ಯಾವ ಕಾರಣಕ್ಕೂ ಬ್ಯಾಂಕ್ ಖಾತೆ ಹ್ಯಾಕ್​ ಆಗಿದೆ ಎಂದು ಮಾಧ್ಯಮಗಳಿಗೆ ತಿಳಿಸಬೇಡಿ ಎಂದು ಸಂಸದೆ ಶೋಭಾ ಕರಂದ್ಲಾಜೆಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ತಾಕೀತು ಮಾಡಿದ್ದರಿಂದ ಕರಂದ್ಲಾಜೆ ಅವರು ಈ ವಿಚಾರವನ್ನು ಎಲ್ಲಿಯೂ ಬಾಯ್ಬಿಟ್ಟಿರಲಿಲ್ಲ. ಕಳೆದ ಡಿಸೆಂಬರ್ ನಲ್ಲೇ ಕರಂದ್ಲಾಜೆ ಹಣ ಕಳೆದುಕೊಂಡಿದ್ದಾರೆ. ಮೂರು ತಿಂಗಳಾದರೂ ಹ್ಯಾಕ್ ಆಗಿದ್ದ ಹಣ ವಾಪಸ್ ಬಂದಿಲ್ಲ.

ಇದನ್ನು ಓದಿ: ವಾಟ್ಸ್​​ಆ್ಯಪ್​ ಸೇಫ್​ ಅಂದುಕೊಂಡಿದ್ದೀರಾ? ಖಂಡಿತ ಇಲ್ಲ; ಹೇಗೆ ಹ್ಯಾಕ್​ ಮಾಡ್ತಾರೆ ಗೊತ್ತೇ?

ಪ್ರತಿಯೊಬ್ಬ ಸಂಸದರಿಗೂ ಸಂಸತ್​ ಭವನ ಸ್ಟೇಟ್ ಬ್ಯಾಂಕ್​ ಆಫ್ ಇಂಡಿಯಾದಲ್ಲಿ ಖಾತೆ ತೆರೆಯಲಾಗಿರುತ್ತದೆ. ಸಂಸದರ ವೇತನ, ಇತರೆ ಭತ್ಯೆಗಳು ನೇರವಾಗಿ ಈ ಬ್ಯಾಂಕಿನ ಖಾತೆಗೆ ಸಂದಾಯವಾಗುತ್ತದೆ. ಹಲವು ಸಂಸದರು ಈ ಖಾತೆಗೆ ಬರುವ ಹಣವನ್ನು ಎಷ್ಟೋ ವರ್ಷಗಳವರೆಗೂ ಬಳಸಿಕೊಳ್ಳದೆ ಹಾಗೆ ಬಿಟ್ಟಿರುತ್ತಾರೆ.

First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...