HOME » NEWS » National-international » MP PRAGYA THAKURS SESSION WITH MPS ON INTERNATIONAL YOGA DAY

Pragya Thakur : ಯೋಗ ದಿನದಂದು ಸಂಸದರಿಗೆ ಪ್ರಗ್ಯಾ ಠಾಕೂರ್​ರಿಂದ ಪಾಠ​; ಕಾಂಗ್ರೆಸ್​ ಟೀಕೆ

ಕೋವಿಡ್​ ಹಿನ್ನಲೆಯಲ್ಲಿ ವರ್ಚುಯಲ್​ ಮೂಲಕ ಯೋಗ ಡೇ ಆಚರಿಸಲು ನಿರ್ಧರಿಸಿದ್ದು, ವರ್ಚುಯಲ್​ ಆಗಿ ಪ್ರಗ್ಯಾ ಸಂಸದರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

news18-kannada
Updated:June 18, 2021, 3:43 PM IST
Pragya Thakur : ಯೋಗ ದಿನದಂದು ಸಂಸದರಿಗೆ ಪ್ರಗ್ಯಾ ಠಾಕೂರ್​ರಿಂದ ಪಾಠ​; ಕಾಂಗ್ರೆಸ್​ ಟೀಕೆ
ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್‌.
  • Share this:
ನವದೆಹಲಿ (ಜೂ. 18):  ಜೂನ್​ 21ರ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಲೋಕಸಭಾ ಸಚಿವಾಲಯ ಆಯೋಜಿಸಿರುವ ಕಾರ್ಯಕ್ರಮವೊಂದನ್ನು ಸಂಸದೇ ಪ್ರಜ್ಞಾ ಠಾಕೂರ್​ ನಡೆಸಲಿದ್ದಾರೆ. ಪ್ರಗ್ಯಾ ಸಿಂಗ್​ ಠಾಕೂರ್​ ಸೋಮವಾರ ಆಯೋಜಿಸಿರುವ ವಿಶೇಷ ಕಾರ್ಯಕ್ರಮದಲ್ಲಿ ಸಂಸದರನ್ನು ಉದ್ದೆಶಿಸಿ ಮಾತನಾಡಲಿದ್ದಾರೆ. ಯೋಗ: ಎ ವೇ ಆಫ್​ ಲೈಫ್​ ಎಂಬ ವಿಚಾರದ ಕುರಿತು ಅವರು ಸಂಸದರ ಎದುರು ಭಾಷಣ ಮಾಡಲಿದ್ದಾರೆ. ಕೋವಿಡ್​ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ವರ್ಚುಯಲ್​ ಮೂಲಕ ಯೋಗ ಡೇ ಆಚರಿಸಲು ನಿರ್ಧರಿಸಿದ್ದು, ವರ್ಚುಯಲ್​ ಮೂಲಕ ಪ್ರಗ್ಯಾ ಸಂಸದರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಯೋಗ ಡೇ ಅಂಗವಾಗಿ ಯೋಗ ಕುರಿತು ಆಯೋಜಿಸಲಾಗಿರುವ ವಿಶೇಷ ಕಾರ್ಯಕ್ರಮ ಉಪನ್ಯಾಸದ ಅಂಗವಾಗಿ ಅನೇಕರು ಮಾತನಾಡಲಿದ್ದು,. ಈ ಕುರಿತು ಲೋಕಸಭಾ ಬುಲೆಟಿನ್​ನಲ್ಲಿ ಪ್ರಕಟಿಸಿದೆ.

ಯೋಗ ದಿನದಂದ ಯೋಗಾಭ್ಯಾಸದ ಮೂಲಕ ಕಾರ್ಯಕ್ರಮ ಆರಂಭಿಸಲಾಗುವುದು. ಅಮಿದೇಸಾಯಿ ಈ ಕುರಿತು ಸದಸ್ಯರಿಗೆ ಅಭ್ಯಾಸ ಮಾಡಿಸಲಿದ್ದಾರೆ. ಇದಾದ ಬಳಿಕ ಧ್ಯಾನದ ಸೆಷನ್​ ಅನ್ನು ಸಿಕರ್​ ಸಂಸದ ಸುಮೆದನಂದನ್​ ಸರಸ್ವತಿ ನಡೆಸಲಿದ್ದು, ಮಧ್ಯಾಹ್ನ ಪ್ರಗ್ಯಾ ಠಾಕೂರ್​ ಸೆಷನ್​ ಇರಲಿದೆ. ಇದಾದ ಬಳಿಕ ಕಡೆಯ ಸೆಷನ್​ ನಲ್ಲಿ ಕೋವಿಡ್​ ಮತ್ತು ಕೋವಿಡ್​ನಂತರದಲ್ಲಿ ಯೋಗದ ಪ್ರಾಮುಖ್ಯತೆ ಕುರಿತು ಡಾ ಈಶ್ವರ್​ ಬಿ ಸವರಡ್ಡಿ ತಿಳಿಸಲಿದ್ದಾರೆ.

ಇದನ್ನು ಓದಿ: ನಾಳೆ ಸಂಜೆ 2ನೇ ಹಂತದ ಅನ್ ಲಾಕ್ ಬಗ್ಗೆ ಸಿಎಂ ತೀರ್ಮಾನ: ಯಾವುದಕ್ಕೆಲ್ಲಾ ವಿನಾಯಿತಿ?

2019ರಲ್ಲಿ ಭೂಪಾಲ್​ ಕ್ಷೇತ್ರದಲ್ಲಿ ಕಾಂಗ್ರೆಸ್​ ಹಿರಿಯ ನಾಯಕ ದಿಗ್ವಿಜಯ್​ ಸಿಂಗ್​ ವಿರುದ್ಧ ಗೆಲುವು ಸಾಧಿಸಿರುವ ಪ್ರಗ್ಯಾ ಠಾಕೂರ್​ ಸಂಸದರಿಗೆ ಯೋಗ ಕುರಿತು ಪಾಠ ನಡೆಸಲು ಮುಂದಾಗಿರುವ ಕ್ರಮಕ್ಕೆ ಕಾಂಗ್ರೆಸ್​ ಟೀಕಿಸಿದೆ. 2008ರ ಮಲೆಗಾಂವ್​ ಸ್ಪೋಟದ ಆರೋಪಿಯಾಗಿರುವ ಪ್ರಗ್ಯಾ, ಈ ಹಿಂದೆ ನಾಥುರಾಮ್​ ಗೋಡ್ಸೆ ಪರವಾಗಿ ಮಾತನಾಡಿ ವಿವಾದ ಸೃಷ್ಟಿಸಿದ್ದರು. ಈ ಕುರಿತು ವರದಿ ನೀಡುವಂತೆ ಸಂಸದೆ ಪ್ರಗ್ಯಾ ಸಿಂಗ್ ಪಕ್ಷ ಕೂಡ ನೋಟಿಸ್​ ಜಾರಿ ಮಾಡಿತ್ತು. ಪ್ರಧಾನಿ ಕೂಡ ಇದರಿಂದ ಇರಿಸು ಮುರಿಸು ಅನುಭವಿಸಿದ್ದರು. ವಿವಾದಿತ ಸಂಸದೆಯಾಗಿ ಗುರುತಿಸಿಕೊಂಡಿರುವ ಪ್ರಗ್ಯಾ ಅವರಿಂದ ಕಾರ್ಯಕ್ರಮ ಆಯೋಜಿಸಲು ಕೇಂದ್ರ ಮುಂದಾಗಿದೆ ಎಂದರೆ, ಪ್ರಧಾನಿ ನರೇಂದ್ರ ಮೋದಿ ತಮ್ಮ ಮನಸು ಬದಲಾಯಿಸಿರಬೇಕು ಎಂದು ಟೀಕಿಸಿದೆ,

ಈ ಸಂಬಂಧ ಟ್ವೀಟ್​ ಮಾಡಿರುವ ಕಾಂಗ್ರೆಸ್​ ಸಂಸದ ಮಾಣಿಕಂ ಟ್ಯಾಗೋರ್​​, ಪ್ರಾಗ್ಯಾ ಠಾಕೂರ್​ ಪರ ಮೋದಿ ಮನಸ್ಸು ಬದಲಾಯಿಸಿದ್ದಾರಾ? ಮೋದಿ ಅವರ ಯೋಗ ಡೇ ಯೋಜನೆಯಲ್ಲಿ ಸಂಸದೆ ಮುಖ್ಯ ಅತಿಥಿಯಾಗಿರುವುದನ್ನು ಗಮನಿಸಿದರೆ, ಅವರ ಹೃದಯ ಕ್ಷಮಿಸಿದೆ ಎಂದು ಅರ್ಥ ಎಂದಿದ್ದಾರೆ.
Youtube Video
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು
Published by: Seema R
First published: June 18, 2021, 3:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories