ಕಾಲೇಜುಗಳಲ್ಲಿ (Collage) ರ್ಯಾಗಿಂಗ್ ಇತ್ತೀಚೆಗೆ ಹೆಚ್ಚಾಗುತ್ತಿದೆ. ಕಾಲೇಜು ಆಡಳಿತ ಮಂಡಳಿ ಎಚ್ಚರಿಕೆ ಕ್ರಮ ವಹಿಸಿದ್ದರೂ ಅದೆಷ್ಟೋ ಹಿರಿಯ ವಿದ್ಯಾರ್ಥಿಗಳು (Seniors) ಕಿರಿಯ (Juniors) ವಿದ್ಯಾರ್ಥಿಗಳ ಮೇಲೆ ರ್ಯಾಗಿಂಗ್ ಹೆಸರಿನಲ್ಲಿ ದಬ್ಬಾಳಿಕೆ ನಡೆಸುತ್ತಲೇ ಇದ್ದಾರೆ. ರ್ಯಾಗಿಂಗ್ಗೆ (Ragging) ಒಳಗಾದ ಅನೇಕ ವಿದ್ಯಾರ್ಥಿಗಳು ಕಾಲೇಜಿನಿಂದ ದೂರ ಸರಿದಿರುವುದು, ಆತ್ಮಹತ್ಯೆಗೆ ಶರಣಾಗಿರುವ ಘಟನೆಗಳು ಕೂಡ ಇದೆ. ಕಾಲೇಜುಗಳಲ್ಲಿ ರ್ಯಾಗಿಂಗ್ನಿಂದ ವಿದ್ಯಾರ್ಥಿಗಳು ಮಾರಾಮಾರಿ ನಡೆಸಿರುವ ಘಟನೆಗಳು ಸಾಕಷ್ಟು ಬಾರಿ ಮುನ್ನೆಲೆಗೆ ಬಂದಿದೆ. ಆದರೆ ಮಧ್ಯಪ್ರದೇಶದ (Madhya Pradesh) ಕಾಲೇಜೊಂದರಲ್ಲಿ ರ್ಯಾಗಿಂಗ್ ಮಾಡುವವರನ್ನು ಕಂಡು ಹಿಡಿಯಲು ಪೊಲೀಸರು ಬಳಸಿದ ಟ್ರಿಕ್ಸ್ಸೇ ಬೇರೆ. ಅಷ್ಟಕ್ಕೂ ಏನಪ್ಪಾ ಅಂತ ಕೇಳಿದರೆ ನೀವು ಕೂಡ ಅಚ್ಚರಿ ಪಡೋದು ಗ್ಯಾರಂಟಿ.
ವಿದ್ಯಾರ್ಥಿನಿ ವೇಷದಲ್ಲಿ ಕಾಲೇಜಿಗೆ ಎಂಟ್ರಿ ಕೊಟ್ಟ ಪೊಲೀಸ್
ಹೌದು, ಮಹಿಳಾ ಪೊಲೀಸ್ ಒಬ್ಬರು ರ್ಯಾಗಿಂಗ್ ಮಾಡುವವರನ್ನು ಪತ್ತೆ ಹಚ್ಚಲು ವಿದ್ಯಾರ್ಥಿನಿ ವೇಷದಲ್ಲಿ ಕಾಲೇಜಿಗೆ ಎಂಟ್ರಿಕೊಟ್ಟಿದ್ದರು. ಮಹಿಳಾ ಪೊಲೀಸ್ ವಿದ್ಯಾರ್ಥಿನಿಯರಂತೆ ಪ್ರತಿದಿನ ಭುಜದ ಮೇಲೆ ಬ್ಯಾಗ್ ಹೊತ್ತುಕೊಂಡು ಹೋಗುತ್ತಿದ್ದರು. ವಿದ್ಯಾರ್ಥಿಗಳೊಂದಿಗೆ ಹರಟೆ ಹೊಡೆಯುವುದರಿಂದ ಹಿಡಿದು ಕ್ಲಾಸ್ ಬಂಕ್ ಮಾಡಿ ಕ್ಯಾಂಟೀನ್ಗೆ ಹೋಗುವುದು ಮಾತ್ರವಲ್ಲದೇ, ಕ್ಯಾಂಪಸ್ನಲ್ಲಿ ರ್ಯಾಗಿಂಗ್ ಮಾಡುತ್ತಿದ್ದವರ ಬಗ್ಗೆ ಮಾಹಿತಿಯನ್ನು ಕಲೆ ಹಾಕುವ ರಹಸ್ಯ ಪೊಲೀಸ್ (ಸಿಕ್ರೇಟ್ ಪೊಲೀಸ್) ಆಗಿದ್ದರು.
ಇಂದೋರ್ನ ಮಹಾತ್ಮಾ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ರ್ಯಾಗಿಂಗ್ ವಿರುದ್ಧದ ಕಾರ್ಯಾಚರಣೆಯಲ್ಲಿ ಮಧ್ಯಪ್ರದೇಶ ಪೊಲೀಸರಲ್ಲಿ 24 ವರ್ಷದ ಕಾನ್ಸ್ಟೆಬಲ್ ಶಾಲಿನಿ ಚೌಹಾಣ್ ಪ್ರಮುಖ ಪಾತ್ರವಹಿಸಿದ್ದಾರೆ.
11 ಮಂದಿ ಹಿರಿಯ ವಿದ್ಯಾರ್ಥಿಗಳು ಕಾಲೇಜು ಹಾಸ್ಟೆಲ್ನಿಂದ ಅಮಾನತು
ಮೂರು ತಿಂಗಳ ಅವಧಿಯಲ್ಲಿ, ಮೊದಲ ವರ್ಷದ ವಿದ್ಯಾರ್ಥಿಗಳ ಮೇಲೆ ಕ್ರೂರವಾಗಿ ರ್ಯಾಗಿಂಗ್ ನಡೆಸಿದ್ದ 11 ಮಂದಿ ಹಿರಿಯ ವಿದ್ಯಾರ್ಥಿಗಳನ್ನು ಶಾಲಿನಿ ಅವರು ಗುರುತಿಸಿದ್ದಾರೆ. ಇದೀಗ ಅಷ್ಟು ಹಿರಿಯ ವಿದ್ಯಾರ್ಥಿಗಳನ್ನು ಮೂರು ತಿಂಗಳ ಕಾಲ ಕಾಲೇಜು ಮತ್ತು ಹಾಸ್ಟೆಲ್ನಿಂದ ಅಮಾನತುಗೊಳಿಸಲಾಗಿದೆ.
ಈ ರಹಸ್ಯ ಕಾರ್ಯಾಚರಣೆ ಕುರಿತಂತೆ ಮಾಧ್ಯಮದವರೊಂದಿಗೆ ಶಾಲಿನಿ ಚೌಹಾಣ್ ಮತ್ತು ಅವರ ಹಿರಿಯ ಇನ್ಸ್ಪೆಕ್ಟರ್ ತೆಹಜೀಬ್ ಖಾಜಿ ಮಾಹಿತಿ ಹಂಚಿಕೊಂಡಿದ್ದಾರೆ.
ರಹಸ್ಯ ಕಾರ್ಯಾಚರಣೆ ಹಿರಿಯ ಇನ್ಸ್ಪೆಕ್ಟರ್ ರಿಯಾಕ್ಷನ್
ರ್ಯಾಗಿಂಗ್ ಬಗ್ಗೆ ವಿದ್ಯಾರ್ಥಿಗಳಿಂದ ಅನಾಮಧೇಯ ದೂರುಗಳು ಬರುತ್ತಿದ್ದವು. ಅಲ್ಲದೇ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ದಿಂಬಿನೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿರುವಂತೆ ಅಸಭ್ಯ ಕೃತ್ಯಗಳನ್ನು ನಡೆಸಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಆದರೆ ದೂರು ನೀಡಲು ಮಾತ್ರ ಯಾರು ಸಹ ಮುಂದೆ ಬರಲಿಲ್ಲ ಮತ್ತು ಆರೋಪಿಯ ಹೆಸರನ್ನು ಸಹ ಹೇಳಲಿಲ್ಲ. ಬಹುಶಃ ಕಿರುಕುಳದ ಭಯದಿಂದ ಯಾರು ಮುಂದೆ ಬರಲಿಲಲ್ಲ ಅನಿಸುತ್ತದೆ.
ನಂತರ ನಾವು ಕ್ಯಾಂಪಸ್ ಪರಿಶೀಲನೆ ನಡೆಸಲು ಹೋದೆವು, ಈ ವೇಳೆ ವಿದ್ಯಾರ್ಥಿಗಳು ತುಂಬಾ ಭಯಗೊಂಡಿದ್ದರು, ಸಮವಸ್ತ್ರದಲ್ಲಿ ನಮ್ಮನ್ನು ನೋಡಿದ ನಂತರ ವಿದ್ಯಾರ್ಥಿಗಳು ಮುಂದೆ ಬರಲಿಲ್ಲ. ನಾವು ದೂರುದಾರರ ಸಂಪರ್ಕ ಸಂಖ್ಯೆಗಳನ್ನು ಪತ್ತೆಹಚ್ಚಲು ಪ್ರಯತ್ನಿಸಿದ್ದೇವೆ, ಆದರೆ ಸಹಾಯವಾಣಿಯ ನೀತಿಯು ಅದನ್ನು ಅನುಮತಿಸಲಿಲ್ಲ. ಹೀಗಾಗಿ ನಾವು ಕಾಲೇಜಿನಿಂದ ಹಿಂದಿರುಗಿದ್ದೇವು.
ಶಾಲಿನಿ ಮೂಲಕ ಸಾಕ್ಷಿ ಕಲೆ ಹಾಕಿದೆವು
ಬಳಿಕ ಶಾಲಿನಿ ಮತ್ತು ಇತರ ಕಾನ್ಸ್ಟೆಬಲ್ಗಳಿಗೆ ಕ್ಯಾಂಪಸ್ನಲ್ಲಿ ಮತ್ತು ಸುತ್ತಮುತ್ತ ವಿದ್ಯಾರ್ಥಿನಿಯರಂತೆ ಸಾಮಾನ್ಯ ಬಟ್ಟೆ ಧರಿಸಿ ಸಮಯ ಕಳೆಯಲು, ಕ್ಯಾಂಟೀನ್ ಮತ್ತು ಹತ್ತಿರದ ಟೀ ಸ್ಟಾಲ್ಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಹರಟೆ ಹೊಡೆಯುವಂತೆ ಸೂಚಿಸಿದೆವು. ಅವರು ಜೂನಿಯರ್ ವಿದ್ಯಾರ್ಥಿಗಳೊಂದಿಗೆ ಮಾತನಾಡಲು ಪ್ರಾರಂಭಿಸಿದಾಗ, ವಿದ್ಯಾರ್ಥಿಗಳು ಅನುಭವಿಸುತ್ತಿರುವ ಭಯಾನಕ ಅನುಭವವನ್ನು ಹೇಳಿಕೊಂಡಿದ್ದಾರೆ. ಈ ರೀತಿ ನಾವು ಸಾಕ್ಷಿಗಳನ್ನು ಪಡೆದುಕೊಂಡು, ಪ್ರಕರಣವನ್ನು ಭೇದಿಸಿದ್ದೇವೆ ಎಂದು ಇನ್ಸ್ಪೆಕ್ಟರ್ ತೆಹಜೀಬ್ ಖಾಜಿ ತಿಳಿಸಿದ್ದಾರೆ.
ಇದೊಂದು ಕಂಪ್ಲೀಟ್ ಹೊಸ ಅನುಭವ - ಮಹಿಳಾ ಪೊಲೀಸ್ ಕಾನ್ಸ್ಟೇಬಲ್
ನಂತರ ಮಾತನಾಡಿದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್, ಇದೊಂದು ಕಂಪ್ಲೀಟ್ ಹೊಸ ಅನುಭವ, ನಾನು ಪ್ರತಿನಿತ್ಯ ಕಾಲೇಜಿಗೆ ವಿದ್ಯಾರ್ಥಿನಿಯರಮತೆಯೇ ವೇಷ ಹಾಕಿಕೊಂಡು ಹೋಗುತ್ತಿದ್ದೆ. ಕ್ಯಾಂಟೀನ್ನಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿದ್ದೆ. ಕ್ರಮೇಣ ಅವರು ನನ್ನ ಬಳಿ ತಮಗೆ ಆಗುತ್ತಿರುವ ತೊಂದರೆಗಳನ್ನು ತೆರೆದಿಡಲು ಆರಂಭಿಸಿದರು.
ಇದನ್ನೂ ಓದಿ: Anti-Ragging Regulations: ಕಾಲೇಜುಗಳಲ್ಲಿ ರ್ಯಾಗಿಂಗ್ ತಡೆಯಲು ನಿಯಮಾವಳಿ ಮರು-ರೂಪಿಸಿದ ಯುಜಿಸಿ
ವಿದ್ಯಾರ್ಥಿಗಳು ಎಂದಾದರೂ ತಮ್ಮ ಬಗ್ಗೆ ಅನುಮಾನ ಹೊಂದಿದ್ದಾರಾ ಎಂದು ಕೇಳಿದಾಗ, ಅವರು ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದರು. ಆದರೆ ನಾನು ಅವರಿಂದ ತಪ್ಪಿಸಿಕೊಳ್ಳುತ್ತಿದ್ದೆ ಮತ್ತು ವಿಷಯವನ್ನು ಬದಲಾಯಿಸಿಬಿಡುತ್ತಿದ್ದೆ. ಕ್ಯಾಂಟೀನ್ ಜನಸಂದಣಿಯಿಂದ ತುಂಬಿರುತ್ತದೆ ಮತ್ತು ಮಾತನಾಡುವಾಗ ಯಾರು ಹೆಚ್ಚಾಗಿ ಯೋಚಿಸಲಿಲ್ಲ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ