ಮಧ್ಯಪ್ರದೇಶದ ಕಮಲನಾಥ್ ಸರ್ಕಾರಕ್ಕೆ ಇಂದು ಅಗ್ನಿಪರೀಕ್ಷೆ; ವಿಶ್ವಾಸಮತ ಯಾಚನೆಗೆ ರಾಜ್ಯಪಾಲರ ಸೂಚನೆ

ಅಲ್ಪಮತಕ್ಕೆ ಕುಸಿದಿರುವ ಕಮಲನಾಥ್ ಸರ್ಕಾರ ಇಂದು ಸದನದಲ್ಲಿ ವಿಶ್ವಾಸ ಮತ ಯಾಚಿಸಲಿದೆಯೋ ಅಥವಾ ಈ ಬೆಳವಣಿಗೆ ಮತ್ತೊಂದು ರಾಜಕೀಯ ತಿರುವು ಪಡೆದುಕೊಳ್ಳುತ್ತದೆಯೋ ಎಂಬ ಕುತೂಹಲ ಮೂಡಿದೆ. ಏತನ್ಮಧ್ಯೆ, ಬೆಂಗಳೂರಿನ ಪ್ರೆಸ್ಟಿಜ್​ ಗಾಲ್ಫ್​ಶೆರ್ ರೆಸಾರ್ಟ್​ನಲ್ಲಿ ಬೀಡುಬಿಟ್ಟಿದ್ದ ಬಂಡಾಯ ಶಾಸಕರು ಸಿಂಗನಾಯಕನಹಳ್ಳಿ ಬಳಿಯ ರಣಮ ರೆಸಾರ್ಟ್​ಗೆ ವಾಸ್ತವ್ಯ ಬದಲಿಸಿದ್ದಾರೆ.

ಸಿಎಂ ಶಿವರಾಜ್​​ ಸಿಂಗ್​​ ಚವ್ಹಾಣ್​ ​, ಮಾಜಿ ಸಿಎಂ ಕಮಲ್​​ನಾಥ್​

ಸಿಎಂ ಶಿವರಾಜ್​​ ಸಿಂಗ್​​ ಚವ್ಹಾಣ್​ ​, ಮಾಜಿ ಸಿಎಂ ಕಮಲ್​​ನಾಥ್​

  • Share this:
ಭೋಪಾಲ್(ಮಾ.17): ಮಧ್ಯಪ್ರದೇಶದ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಇಂದು ಅಗ್ನಿ ಪರೀಕ್ಷೆ ಎದುರಾಗಲಿದೆ. ಸೋಮವಾರ ಆರಂಭವಾದ ವಿಧಾನಸಭೆ ಅಧಿವೇಶನ ಹಲವು ರಾಜಕೀಯ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಮಾರ್ಚ್ 26ರವರೆಗೆ ಸದನವನ್ನು ಸ್ಪೀಕರ್ ಮುಂದೂಡುವ ಮೂಲಕ ಕಮಲನಾಥ್ ಸರ್ಕಾರವನ್ನು ಭಾರೀ ಕಂಟಕದಿಂದ ಪಾರು ಮಾಡಿದರೆ. ಇದರ ನಡುವೆಯೇ ಮಂಗಳವಾರ ವಿಶ್ವಾಸಮತ ಯಾಚಿಸುವಂತೆ ರಾಜ್ಯಪಾಲರು ಹೊಸದಾಗಿ ಆದೇಶ ನೀಡಿದ್ದಾರೆ. 

ಸೋಮವಾರ ಆರಂಭವಾದ ಸದನವನ್ನು ಸ್ಪೀಕರ್ ಎನ್​ಪಿ ಪ್ರಜಾಪತಿ ಅವರು ಕೊರೋನಾ ವೈರಸ್ ಕಾರಣ ನೀಡಿ ಮುಂದೂಡಿದ್ದರು. ಆ ಬಳಿಕ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಸದನದಲ್ಲಿ ವಿಶ್ವಾಸಮತ ಯಾಚಿಸುವಂತೆ ನಿರ್ದೇಶನ ನೀಡುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.

ಬಳಿಕ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಬಿಜೆಪಿಯ 106 ಶಾಸಕರು ಸೋಮವಾರ ರಾಜ್ಯಪಾಲ ಲಾಲ್​ಜಿ ಟಂಡನ್ ಅವರನ್ನು ಭೇಟಿಯಾದರು. ಕಾಂಗ್ರೆಸ್​ನ 22 ಶಾಸಕರು ರಾಜೀನಾಮೆ ನೀಡಿದ್ದು, ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಶೀಘ್ರವೇ ವಿಶ್ವಾಸಮತ ಯಾಚನೆ ಆಗದಿದ್ದರೆ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆ ಇದೆ. ಹೀಗಾಗಿ ವಿಶ್ವಾಸಮತ ಯಾಚನೆಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದರು. ಬಿಜೆಪಿ ಶಾಸಕರ ಮನವಿ ಹಿನ್ನೆಲೆಯಲ್ಲಿ ಮಂಗಳವಾರವೇ ವಿಶ್ವಾಸಮತ ಸಾಬೀತು ಪಡಿಸುವಂತೆ ಸಿಎಂ ಕಮಲನಾಥ್ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.

ಅಲ್ಪಮತಕ್ಕೆ ಕುಸಿದಿರುವ ಕಮಲನಾಥ್ ಸರ್ಕಾರ ಇಂದು ಸದನದಲ್ಲಿ ವಿಶ್ವಾಸ ಮತ ಯಾಚಿಸಲಿದೆಯೋ ಅಥವಾ ಈ ಬೆಳವಣಿಗೆ ಮತ್ತೊಂದು ರಾಜಕೀಯ ತಿರುವು ಪಡೆದುಕೊಳ್ಳುತ್ತದೆಯೋ ಎಂಬ ಕುತೂಹಲ ಮೂಡಿದೆ. ಏತನ್ಮಧ್ಯೆ, ಬೆಂಗಳೂರಿನ ಪ್ರೆಸ್ಟಿಜ್​ ಗಾಲ್ಫ್​ಶೆರ್ ರೆಸಾರ್ಟ್​ನಲ್ಲಿ ಬೀಡುಬಿಟ್ಟಿದ್ದ ಬಂಡಾಯ ಶಾಸಕರು ಸಿಂಗನಾಯಕನಹಳ್ಳಿ ಬಳಿಯ ರಣಮ ರೆಸಾರ್ಟ್​ಗೆ ವಾಸ್ತವ್ಯ ಬದಲಿಸಿದ್ದಾರೆ.

ಇದನ್ನು ಓದಿ: ವಿಶ್ವಾಸಮತ ಯಾಚನೆಯಲ್ಲಿ ಕಮಲನಾಥ್ ಸರ್ಕಾರ ವಿಫಲವಾಗುವುದು ಖಚಿತ; ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್

ಪಕ್ಷಗಳ ಬಲಾಬಲ ಹೀಗಿದೆ?

ಮಧ್ಯಪ್ರದೇಶ ವಿಧಾನಸಭೆ ಒಟ್ಟು 230 ಸದಸ್ಯ ಬಲ ಹೊಂದಿದೆ. ಅದರಲ್ಲಿ ಎರಡು ಸ್ಥಾನಗಳು ತೆರವಾಗಿವೆ. ಹೀಗಾಗಿ ಈಗಿರುವ ಸದಸ್ಯರ ಸಂಖ್ಯೆ ಒಟ್ಟು 228. ಈ ಪೈಕಿ ಕಾಂಗ್ರೆಸ್​ನ 22 ಶಾಸಕರು ಬಂಡಾಯ ಎದ್ದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರಲ್ಲಿ ಆರು ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಊರ್ಜಿತಗೊಳಿಸಿದ್ದಾರೆ. ಪ್ರಸ್ತುತ ವಿಧಾನಸಭೆ ಸಂಖ್ಯಾಬಲ 222ಕ್ಕೆ ಕುಸಿದಿದೆ. ಮೊದಲು 114 ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್​ನಲ್ಲಿ ಈಗ 92 ಶಾಸಕರಿದ್ದಾರೆ. ಸರಳ ಬಹುಮತಕ್ಕೆ 112 ಸದಸ್ಯರ ಬೆಂಬಲ ಅಗತ್ಯವಿದೆ. ಬಿಜೆಪಿ 107 ಶಾಸಕರನ್ನು ಹೊಂದಿದ್ದರೆ, ಪಕ್ಷೇತರರು ನಾಲ್ಕ ಶಾಸಕರು, ಬಿಎಸ್​ಪಿ-2, ಹಾಗೂ ಎಸ್​ಪಿ ಒರ್ವ ಶಾಸಕರನ್ನು ಹೊಂದಿದೆ.

 
First published: