HOME » NEWS » National-international » MP CONGRESS LEADER SAJJAN SINGH VARMA CONTROVERSIAL STATEMENT IN GIRLS MARRIAGEABLE AGE SESR

ಹುಡುಗಿಯರು 15 ವರ್ಷಕ್ಕೆ ಮಕ್ಕಳನ್ನು ಹೆರುವಾಗ ಮದುವೆ ವಯಸ್ಸಿನ ಏರಿಕೆ ಯಾಕೆ; ಕಾಂಗ್ರೆಸ್​ ನಾಯಕನ ವಿವಾದಾತ್ಮಕ ಹೇಳಿಕೆ

ಹುಡುಗಿಯರೆಲ್ಲಾ 15ನೇ ವರ್ಷಕ್ಕೆ ಸಂತೋನೋತ್ಪತ್ತಿ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇದು ನನ್ನ ಅಧ್ಯಯನವಲ್ಲ. ವೈದ್ಯರೇ ಈ ಕುರಿತು ತಿಳಿಸಿದ್ದಾರೆ.

news18-kannada
Updated:January 13, 2021, 10:53 PM IST
ಹುಡುಗಿಯರು 15 ವರ್ಷಕ್ಕೆ ಮಕ್ಕಳನ್ನು ಹೆರುವಾಗ ಮದುವೆ ವಯಸ್ಸಿನ ಏರಿಕೆ ಯಾಕೆ; ಕಾಂಗ್ರೆಸ್​ ನಾಯಕನ ವಿವಾದಾತ್ಮಕ ಹೇಳಿಕೆ
ಸಜ್ಜನ್​ ಸಿಂಗ್​ ವರ್ಮಾ
  • Share this:
ಮಧ್ಯಪ್ರದೇಶ (ಜ. 13): ಹುಡುಗಿಯರು 15ನೇ ವರ್ಷಕ್ಕೆ ಮಕ್ಕಳನ್ನು ಹೆರುವ ಸಾಮರ್ಥ್ಯ ಹೊಂದಿದಾಗ ಅವರ ಮದುವೆಯ ವಯಸ್ಸನ್ನು ಯಾಕೆ 18 ವರ್ಷದಿಂದ 21 ವರ್ಷಕ್ಕೆ ಏರಿಸುವ ಚಿಂತನೆ ನಡೆಸಲಾಗಿದೆ ಎಂದು ಮಧ್ಯಪ್ರದೇಶ ಮಾಜಿ ಸಚಿವ, ಹಿರಿಯ ಕಾಂಗ್ರೆಸ್​ ನಾಯಕ ಸಜ್ಜನ್​ ಸಿಂಗ್​ ವರ್ಮಾ ಪ್ರಶ್ನಿಸಿದ್ದಾರೆ. ಇವರ ಈ ಹೇಳಿಕೆ ಹಲವು ವಿವಾದಗಳಿಗೆ ಕಾರಣವಾಗಿದ್ದು, ಟೀಕೆಗಳಿಗೆ ಗುರಿಯಾಗಿದೆ. ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಣ್​ ಹುಡುಗಿಯರ ಮದುವೆಯ ವಯಸ್ಸನ್ನು 18 ರಿಂದ 21ಕ್ಕೆ ಏರಿಕೆ ಮಾಡುವತ್ತ ಕೇಂದ್ರ ಚಿಂತನೆ ನಡೆಸಬೇಕು ಎಂದಿದ್ದರು. ಈ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಕಮಲನಾಥ್​ ಆಪ್ತರಾಗಿರುವ ವರ್ಮಾ ಈ ವಿವಾದಿತ ಹೇಳಿಕೆ ನೀಡುವ ಮೂಲಕ ಸುದ್ದಿಯಲಿದ್ದಾರೆ.

ಹುಡುಗಿಯರೆಲ್ಲಾ 15ನೇ ವರ್ಷಕ್ಕೆ ಸಂತೋನೋತ್ಪತ್ತಿ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇದು ನನ್ನ ಅಧ್ಯಯನವಲ್ಲ. ವೈದ್ಯರೇ ಈ ಕುರಿತು ತಿಳಿಸಿದ್ದಾರೆ. ಹುಡುಗಿಯರು 15ನೇ ವಯಸ್ಸಿನಲ್ಲಿ ಮಕ್ಕಳನ್ನು ಹೋದಲು ಅರ್ಹವಾಗಿರುತ್ತಾರೆ. ಇದೇ ಕಾರಣದಿಂದ ಹುಡುಗಿಯರು 18 ವರ್ಷಕ್ಕೆ ಮದುವೆಯಾಗಲು ಪ್ರಬುದ್ಧರಾಗುತ್ತಾರೆ. ಅಷ್ಟೇ ಅಲ್ಲದೇ ಹುಡುಗಿಯರು ತಮ್ಮ ಮದುವೆಯಾದ ಗಂಡನ ಮನೆಗೆ ಹೋಗಿ. 18 ವರ್ಷ ತುಂಬಿದ ಬಳಿಕ ಅಲ್ಲಿ ಸುಖ ಸಂತೋಷದಿಂದ ಇರಬೇಕು ಎಂದಿದ್ದಾರೆ.

ಇದನ್ನು ಓದಿ: ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎಚ್​ ನಾಗೇಶ್​​ಗೆ ಅಂಬೇಡ್ಕರ್​ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ

ಇನ್ನು ಸಿಎಂ ಶಿವರಾಜ್​ ಸಿಂಗ್​ ವಿರುದ್ಧ ಟೀಕೆ ಮಾಡಿರುವ ಅವರು, ಹುಡುಗಿರಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ 21ಕ್ಕೆ ಏರಿಸಲು ಅವರೇನು ವಿಜ್ಞಾನಿಯಾ ಅಥವಾ ಮಹಾನ್​ ವೈದ್ಯನಾ ಎಂದು ಟೀಕಿಸಿದ್ದಾರೆ.

ಹುಡುಗಿಯರ ಬಗ್ಗೆ ಈ ರೀತಿ ಟೀಕೆ ಮಾಡುವ ಮೂಲಕ ಸಜ್ಜನ್​ ಸಿಂಗ್​ ಎಂತಹ ಸಜ್ಜನಾ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಅವರ ಹೇಳಿಕೆ ಮೂಲಕ ದೇಶದ ಹೆಣ್ಣು ಮಕ್ಕಳನ್ನು ಅವಮಾನಿಸಿದ್ದಾರೆ. ತಮ್ಮ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಇಬ್ಬರು ಹೆಣ್ಣು ಮಕ್ಕಳು ಎಂಬುದನ್ನು ವರ್ಮಾ ಮರೆತಿದ್ದಾರೆ. ಅವರ ಹೇಳಿಕೆಗೆ ಅವರು ಸಾರ್ವಜನಿಕವಾಗಿ ಹುಡುಗಿಯರಿಂದ ಕ್ಷಮೆಯಾಚಿಸಬೇಕು ಎಂದು ರಾಜ್ಯ ಬಿಜೆಪಿ ವಕ್ತಾರ ನೇಹಾ ಬಗ್ಗಾ ಆಗ್ರಹಿಸಿದ್ದಾರೆ.
Published by: Seema R
First published: January 13, 2021, 10:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories