• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಮಧ್ಯ ಪ್ರದೇಶ ವಿಧಾನಸಭೆಯಲ್ಲಿ ಇನ್ನು ಮುಂದೆ ’ಪಪ್ಪು’ ಪದ ಬಳಸುವಂತಿಲ್ಲ: ಪುಸ್ತಕ ಬಿಡುಗಡೆ ಮಾಡಿದ ಮಧ್ಯಪ್ರದೇಶ ಸಿಎಂ

ಮಧ್ಯ ಪ್ರದೇಶ ವಿಧಾನಸಭೆಯಲ್ಲಿ ಇನ್ನು ಮುಂದೆ ’ಪಪ್ಪು’ ಪದ ಬಳಸುವಂತಿಲ್ಲ: ಪುಸ್ತಕ ಬಿಡುಗಡೆ ಮಾಡಿದ ಮಧ್ಯಪ್ರದೇಶ ಸಿಎಂ

ರಾಹುಲ್ ಗಾಂಧಿ

ರಾಹುಲ್ ಗಾಂಧಿ

ರಾಜ್ಯ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಎಪಿ ಸಿಂಗ್ ಮಾತನಾಡಿ, 1990 ರಿಂದ 2014 ರ ನಡುವಿನ ದಾಖಲೆಗಳು ಕೆಲವು ಕಾರಣಗಳಿಂದ ಲಭ್ಯವಿಲ್ಲ, ಆದ್ದರಿಂದ ಇದನ್ನು ಈ ಪ್ರಕಟಣೆಯಲ್ಲಿ ಸೇರಿಸಲಾಗಿಲ್ಲ ಎಂದು ಹೇಳಿದರು. ಇನ್ನು ಪ್ರತಿ ಕಲಾಪ ನಡೆದಾಗಲು ಸಹ ಪ್ರಕಟಣೆಯ ಎರಡನೇ ಆವೃತ್ತಿಯಲ್ಲಿ ಬಿಡುಗಡೆ ಮಾಡಲಾಗುವುದು

ಮುಂದೆ ಓದಿ ...
  • Share this:

ಇನ್ನುಮುಂದೆ, ಮಧ್ಯಪ್ರದೇಶ ವಿಧಾನಸಭೆಯಲ್ಲಿ ಸದಸ್ಯರು ಏನೇ ಮಾತನಾಡಲು ನಿಂತಾಗ, ಇನ್ನು ಮುಂದೆ ಸುಲಭವಾಗಿ ಬುಕ್‌ಲೆಟ್ ಅನ್ನು ನೋಡಿಕೊಂಡು ಮಾತನಾಡಬಹುದು.  ಅರೆ! ಏನಿದು ಈ ಬುಕ್​ಲೆಟ್​.  ಸದನದ ಕಲಾಪದ ವೇಳೆ ಒಂದಷ್ಟು ಅಸಂವಿಧಾನಿಕ ಪದಗಳನ್ನು ಬಳಸಿ ಮುಜುಗರಕ್ಕೆ ಈಡಾಗುವುದನ್ನು ತಪ್ಪಿಸಲು ಈ ರೀತಿಯ ಹೊಸ ಪದಕೋಶವನ್ನು ಪರಿಚಯಿಸಲಾಗಿದೆ.

ನಾಲ್ಕು ದಿನಗಳ ಸುದೀರ್ಘ ಮುಂಗಾರು ಅಧಿವೇಶನದ ಮುನ್ನಾದಿನದಂದು, ರಾಜ್ಯ ಅಸೆಂಬ್ಲಿಯು ಭಾನುವಾರ 38 ಪುಟಗಳ ಕಿರುಪುಸ್ತಕವನ್ನು ಬಿಡುಗಡೆ ಮಾಡಿದೆ, ಈ ಕಿರುಪುಸ್ತಕದಲ್ಲಿ ಹಲವಾರು ಅಸಂವಿಧಾನಿಕ ಪದಗಳು, ನುಡಿಗಟ್ಟುಗಳು ಮತ್ತು ವಾಕ್ಯಗಳನ್ನು ಪಟ್ಟಿಮಾಡಲಾಗಿದೆ. ಹೆಚ್ಚಾಗಿ ಈ ಪದಗಳು ಹಿಂದಿಯಲ್ಲಿವೆ.


ಈ ಸಂಗ್ರಹವು ಒಟ್ಟು 1,161 ಪದಗಳು ಮತ್ತು ವಾಕ್ಯಗಳನ್ನು ಹೊಂದಿದೆ, ಅದು 1954 ರಿಂದ ವಿಧಾನ ಸಭೆಯ ದಾಖಲೆಗಳಿಂದ ಅಳಿಸಿದ ಎಲ್ಲಾ ಅಸಂವಿಧಾನಿಕ ಪದಗಳನ್ನು ಇಲ್ಲಿ ಪಟ್ಟಿ ಮಾಡಿ ಕೊಡಲಾಗಿದೆ. ಪಟ್ಟಿಯ ಪ್ರಕಾರ,  ಪಪ್ಪು ಮತ್ತು ಶ್ರೀ ಬಂತಧರ ಅಂತಹ ಪದಗಳನ್ನು ಸದಸ್ಯರು ಬಳಸಬಾರದು.


ಬಿಜೆಪಿ ಬೆಂಬಲಿಗರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಅಪಹಾಸ್ಯ ಮಾಡಲು "ಪಪ್ಪು" ಎಂಬ ಪದವನ್ನು ಬಳಸುತ್ತಾರೆ,  ಮಿಸ್ಟರ್​ ಬಂತಧರ್ ಪದವನ್ನು ಹಿರಿಯ ಕಾಂಗ್ರೆಸ್ಸಿಗ ಮತ್ತು ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಅವರಿಗೆ ಬಳಸಿದ ಪದವಾಗಿದೆ.


ಅದಲ್ಲದೆ, ಇದು ಡೋಂಗಿ (ಕಪಟಿ), ನಿಕಮ್ಮ (ನಿಷ್ಪ್ರಯೋಜಕ), ಚೋರ್ (ಕಳ್ಳ), ಭ್ರಷ್ಟ್ (ಭ್ರಷ್ಟ), ತನಶಾ (ಸರ್ವಾಧಿಕಾರಿ), ಗುಂಡೆ (ಗೂಂಡಾಗಳು) ಮತ್ತು ಜೂತ್ ಬೋಲ್ನಾ (ಸುಳ್ಳು ಹೇಳಲು), ವ್ಯಾಭಿಚಾರ್ ಕರನಾ (ವ್ಯಭಿಚಾರಕ್ಕೆ ಪ್ರೇರೇಪಿಸಲು) ಮುಂತಾದ ಪದಗಳನ್ನು ಪಟ್ಟಿ ಮಾಡಲಾಗಿದೆ. ಇದು ಸಸುರ್ (ಮಾವ) ಎಂಬ ಪದವನ್ನು ಉಲ್ಲೇಖಿಸುತ್ತದೆ, ಇದನ್ನು ಸೆಪ್ಟೆಂಬರ್ 9, 1954 ರಂದು ಸದನದಲ್ಲಿ ಬಳಸಲಾಯಿತು ಮತ್ತು ಅದನ್ನು ದಾಖಲೆಗಳಿಂದ ಹೊರಹಾಕಲಾಯಿತು.

1990 ಮತ್ತು 2014 ರ ನಡುವಿನ ಅವಧಿಯನ್ನು ಹೊರತುಪಡಿಸಿ 1954 ರಿಂದ 2021 ರವರೆಗೆ ವಿಧಾನಸಭೆ ಕಡತದಿಂದ ಅಳಿಸಿ ಹಾಕಿದ ಪದಗಳು ಮತ್ತು ವಾಕ್ಯಗಳನ್ನು ಈ ಪುಸ್ತಕವು ನಿರ್ದಿಷ್ಟಪಡಿಸುತ್ತದೆ. ಇದನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್, ಸಂಸದೀಯ ವ್ಯವಹಾರಗಳ ಸಚಿವಾಲಯದಿಂದ ಭಾನುವಾರ ವಿಧಾನ ಸಭಾ ಭವನದಲ್ಲಿ ಬಿಡುಗಡೆ ಮಾಡಲಾಯಿತು. ಸಚಿವ ನರೋತ್ತಮ್ ಮಿಶ್ರಾ ಮತ್ತು ವಿಧಾನಸಭಾ ಸ್ಪೀಕರ್ ಗಿರೀಶ್ ಗೌತಮ್  ಇದ್ದರು.


"ಸದನದಲ್ಲಿ ಉಂಟಾಗುವ ಮುಜುಗರವನ್ನು ತಪ್ಪಿಸುವುದನ್ನು ಕಡಿಮೆ ಮಾಡಲು ಅಧಿವೇಶನ ಆರಂಭವಾಗುವ ಮುನ್ನ ಸೋಮವಾರ ವಿಧಾನಸಭಾ ಸದಸ್ಯರಿಗೆ ಬುಕ್ಲೆಟ್ ಅನ್ನು ನೀಡಲಾಗುವುದು" ಎಂದು ವಿಧಾನಸಭೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಚೌಹಾಣ್ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿನ ಉನ್ನತ ಮಟ್ಟದ ಚರ್ಚೆಗಳನ್ನು ನೆನಪಿಸಿಕೊಂಡರು, ಮತ್ತು ಈ ಮನೆಗಳಲ್ಲಿ ಮಾತನಾಡುವ ವ್ಯಕ್ತಿಯು ನಿರ್ದಿಷ್ಟ ಅಸಂಸದೀಯ ಪದಗಳನ್ನು ಬಳಸದಿರುವ ಬಗ್ಗೆ ಮರೆತುಬಿಡುತ್ತಾರೆ ಎಂದು ಅವರು ಹೇಳಿದರು. ಈ ಪುಸ್ತಕವನ್ನು ಹೊರತಂದಿದ್ದಕ್ಕಾಗಿ, ಸದಸ್ಯರಿಗೆ ಸಮಸ್ಯೆಯನ್ನು ಉತ್ತಮ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ಹೇಳಿದರು.

ಒಮ್ಮೆ ವಿಧಾನಸೌಧಕ್ಕೆ ಭೇಟಿ ನೀಡಲು ಬಂದ ವಿದ್ಯಾರ್ಥಿಗಳ ಗುಂಪೊಂದು, ಸದನದ ಕಲಾಪಗಳನ್ನು ವೀಕ್ಷಿಸಿದ ನಂತರ ಅವರಿಗೆ ಗದ್ದಲದ ದೃಶ್ಯಗಳು ಮೀನು ಮಾರುಕಟ್ಟೆಯಲ್ಲಿ ನಿಂತಂತೆ ಭಾಸವಾಗುತ್ತಿದೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು ಎಂದು ಮುಖ್ಯಮಂತ್ರಿ ನೆನಪಿಸಿಕೊಂಡರು. ಲೋಕಸಭೆ ಮತ್ತು ವಿಧಾನಸಭೆ ಎರಡನ್ನೂ ಪ್ರಜಾಪ್ರಭುತ್ವದ ದೇವಾಲಯಗಳೆಂದು ಪರಿಗಣಿಸಲಾಗಿದೆ ಎಂದು ಕಮಲ್ ನಾಥ್ ಹೇಳಿದರು. ಅಸಂವಿಧಾನಿಕ ಪದಗಳು ಮತ್ತು ವಾಕ್ಯಗಳ ಪುಸ್ತಕವನ್ನು ಬಿಡುಗಡೆ ಮಾಡುವ ಅವಶ್ಯಕತೆ ಇಂದು ಉದ್ಬವಿಸಿದೆ ಎಂದು ಸಹ ವಿಷಾಧ ವ್ಯಕ್ತಪಡಿಸಿದರು.


ಸ್ಪೀಕರ್ ಗಿರೀಶ್ ಗೌತಮ್ ಅವರು ಮಾತನಾಡಿ, ಆರಂಭದಿಂದಲೂ ಹೊರಹಾಕಲಾದ ಎಲ್ಲಾ ಪದಗಳು ಅಥವಾ ವಾಕ್ಯಗಳನ್ನು ಸದಸ್ಯರ ಜ್ಞಾನಕ್ಕಾಗಿ ಪ್ರಕಟಣೆಯಲ್ಲಿ ಸೇರಿಸಲಾಗಿದೆ ಎಂದು ಹೇಳಿದರು. ನಟರು ಸುಲಭವಾಗಿ ರಿಟೇಕ್​ ತೆಗೆದುಕೊಳ್ಳಬಹುದು ಆದರೆ ಸಾರ್ವಜನಿಕ ಜೀವನದಲ್ಲಿ ನಾಯಕರು ಹೀಗೆ ಇರಲು ಸಾಧ್ಯವಿಲ್ಲ, ಅವರು ಸಾರ್ವಜನಿಕ ವೇದಿಕೆಗಳಲ್ಲಿ ಎಚ್ಚರಿಕೆಯಿಂದ ಮಾತನಾಡ ಬೇಕು ಎಂದು ಸಲಹೆ ನೀಡಿದರು.


ಇದನ್ನೂ ಓದಿ: ನೀವು ಕೊರೋನಾ ವ್ಯಾಕ್ಸಿನ್​ ಪಡೆದಿದ್ದೀರಾ? ಹಾಗಾದರೆ ವಾಟ್ಸಪ್​ ಮೂಲಕವೂ ಪಡೆಯಬಹುದು ಪ್ರಮಾಣ ಪತ್ರ

 ರಾಜ್ಯ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಎಪಿ ಸಿಂಗ್ ಮಾತನಾಡಿ, 1990 ರಿಂದ 2014 ರ ನಡುವಿನ ದಾಖಲೆಗಳು ಕೆಲವು ಕಾರಣಗಳಿಂದ ಲಭ್ಯವಿಲ್ಲ, ಆದ್ದರಿಂದ ಇದನ್ನು ಈ ಪ್ರಕಟಣೆಯಲ್ಲಿ ಸೇರಿಸಲಾಗಿಲ್ಲ ಎಂದು ಹೇಳಿದರು. ಇನ್ನು ಪ್ರತಿ ಕಲಾಪ ನಡೆದಾಗಲು ಸಹ ಪ್ರಕಟಣೆಯ ಎರಡನೇ ಆವೃತ್ತಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು. 1993 ಮತ್ತು 2003 ರ ನಡುವೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ, 2003 ರಿಂದ 2018 ರವರೆಗೆ ಬಿಜೆಪಿ ರಾಜ್ಯದಲ್ಲಿ ಆಡಳಿತ ನಡೆಸಿತು.




ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

First published: