• Home
  • »
  • News
  • »
  • national-international
  • »
  • Asaduddin Owaisi: ಮುಸ್ಲಿಮರೇ ಕಾಂಡೋಮ್ ಬಳಸೋದು ಹೆಚ್ಚು: ಸಂಸದ ಓವೈಸಿ

Asaduddin Owaisi: ಮುಸ್ಲಿಮರೇ ಕಾಂಡೋಮ್ ಬಳಸೋದು ಹೆಚ್ಚು: ಸಂಸದ ಓವೈಸಿ

ಮೋಹನ್ ಭಾಗವತ್ ಮತ್ತು ಅಸಾದುದ್ದೀನ್ ಓವೈಸಿ

ಮೋಹನ್ ಭಾಗವತ್ ಮತ್ತು ಅಸಾದುದ್ದೀನ್ ಓವೈಸಿ

ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಅವರ ಜನಸಂಖ್ಯೆಯ ಅಸಮತೋಲನದ ಟೀಕೆಗೆ ತೀಕ್ಷ್ಣವಾದ ಪ್ರತಿಕ್ರಿಯಿಸಿದ ಎಐಎಂಐಎಂ ಮುಖ್ಯಸ್ಥ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ದಾಖಲೆಗಳ ಪ್ರಕಾರ ಮುಸ್ಲಿಮರ ಒಟ್ಟು ಫಲವತ್ತತೆಯ ಪ್ರಮಾಣವು ಶೇಕಡಾ 2 ಕ್ಕೆ ಇಳಿದಿದೆ ಎಂದಿದ್ದಾರೆ.

  • Share this:

ಹೈದರಾಬಾದ್: ಮುಸ್ಲಿಂ ಧರ್ಮದ ಜನರೇ ಹೆಚ್ಚು ಕಾಂಡೋಮ್​ಗಳನ್ನು ಬಳಸುತ್ತಿದ್ದೇವೆ ಎಂದು ಹೈದರಾಬಾದ್ ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (MP Asaduddin Owaisi) ಹೇಳಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರ ಸಮುದಾಯ ಆಧಾರಿತ ಜನಸಂಖ್ಯೆಯ ಅಸಮತೋಲನದ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೀಗೆ ಪ್ರತಿಕ್ರಿಯಿಸಿದ್ದಾರೆ. ಮೋಹನ್ ಭಾಗವತ್ ಅವರೇ (RSS Chief Mohan Bhagwat), ಚಿಂತಿಸಬೇಡಿ, ಮುಸ್ಲಿಂ ಜನಸಂಖ್ಯೆ (Muslims Population) ಹೆಚ್ಚಾಗುತ್ತಿಲ್ಲ, ಬದಲಿಗೆ ಕುಸಿಯುತ್ತಿದೆ. ಮುಸ್ಲಿಮರ ಒಟ್ಟು ಫಲವತ್ತತೆ ದರವು ಕುಸಿದಿದೆ. ಕಾಂಡೋಮ್ ಅನ್ನು ಯಾರು ಹೆಚ್ಚು ಬಳಸುತ್ತಿದ್ದಾರೆ? ನಾವು. ಆದರೆ ಮೋಹನ್ ಭಾಗವತ್ ಈ ಬಗ್ಗೆ ಮಾತನಾಡುವುದಿಲ್ಲ ಎಂದು ಸಂಸದ ಅಸಾದುದ್ದೀನ್ ಓವೈಸಿ ಬಹಿರಂಗವಾಗಿ ಟೀಕಿಸಿದ್ದಾರೆ.


ಕುರಾನ್‌ನಿಂದ ಉಲ್ಲೇಖವನ್ನು ನೀಡುತ್ತಾ, "ನಾನು ನಿಮ್ಮನ್ನು ಖುರಾನ್ ಓದಲು ಆಹ್ವಾನಿಸುತ್ತೇನೆ. ಭ್ರೂಣವನ್ನು ಕೊಲ್ಲುವುದು ಬಹಳ ದೊಡ್ಡ ಪಾಪ ಎಂದು ಅಲ್ಲಾ ನಮಗೆ ಹೇಳುತ್ತಾನೆ. ಎರಡು ಗರ್ಭಧಾರಣೆಯ ನಡುವೆ ಮುಸ್ಲಿಮರು ಅಂತರ ಕಾಪಾಡುತ್ತಾರೆ. ಜೊತೆಗೆ ಕಾಂಡೋಮ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯಿಸಿದ್ದಾರೆ.



ಮುಸ್ಲಿಮರ ಒಟ್ಟು ಫಲವತ್ತತೆಯ ಪ್ರಮಾಣವು ಶೇಕಡಾ 2 ಕ್ಕೆ ಇಳಿದಿದೆ
ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಅವರ ಜನಸಂಖ್ಯೆಯ ಅಸಮತೋಲನದ ಟೀಕೆಗೆ ತೀಕ್ಷ್ಣವಾದ ಪ್ರತಿಕ್ರಿಯಿಸಿದ ಎಐಎಂಐಎಂ ಮುಖ್ಯಸ್ಥ, "ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ದಾಖಲೆಗಳ ಪ್ರಕಾರ ಮುಸ್ಲಿಮರ ಒಟ್ಟು ಫಲವತ್ತತೆಯ ಪ್ರಮಾಣವು ಶೇಕಡಾ 2 ಕ್ಕೆ ಇಳಿದಿದೆ. ನೀವು ಇತಿಹಾಸವನ್ನು ತಪ್ಪಾಗಿ ಪ್ರತಿನಿಧಿಸಿದರೆ ಅದು ನಿಮ್ಮ ತಪ್ಪು."ಎಂದು ಟೀಕಿಸಿದ್ದಾರೆ.


ಭಾರತದ ಜನಸಂಖ್ಯೆ ನಿಯಂತ್ರಣಕ್ಕೆ ಪ್ರತ್ಯೇಕ ನೀತಿ; ಮೋಹನ್ ಭಾಗವತ್
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇಂದು ಭಾರತಕ್ಕೆ ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರದ ನೀತಿಯ ಅಗತ್ಯವಿದೆ ಎಂದು ವ್ಯಾಖ್ಯಾನಿಸಿದ್ದಾರೆ. ಆರ್​ಎಸ್​ಎಸ್​ ಸಂಸ್ಥಾಪನಾ ದಿನದ ನಿಮಿತ್ತ ನಾಗಪುರದಲ್ಲಿ ನಡೆದ ವಿಜಯದಶಮಿ ಹಬ್ಬದ ಉತ್ಸವದಲ್ಲಿ ಮಾತನಾಡಿದ ಅವರು, ಭಾರತದ ಜನಸಂಖ್ಯೆ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ದೇಶ ಒಡೆಯುವ ಭೀತಿ ಹೆಚ್ಚಾಗುವ ಕುರಿತು ಉಲ್ಲೇಖಿಸಿದ್ದಾರೆ. ಅಲ್ಲದೇ ಜನಸಂಖ್ಯೆ ಹೆಚ್ಚಳ ನಿಯಂತ್ರಿಸಲು "ಧರ್ಮ ಆಧಾರಿತ ಅಸಮತೋಲನ" ಮತ್ತು "ಬಲವಂತದ ಮತಾಂತರ" ವನ್ನು ಉಲ್ಲೇಖಿಸಿದ್ದಾರೆ. ಈ ವ್ಯಾಖ್ಯಾನಕ್ಕೆ ದಕ್ಷಿಣ ಸುಡಾನ್ ದೇಶದ ಜನಸಂಖ್ಯೆಯಲ್ಲಿನ ಧರ್ಮಗಳ ನಡುವಿನ ಅಸಮತೋಲನದ ಕಾರಣದಿಂದ ಹೊರಹೊಮ್ಮಿದ ಹೊಸ ದೇಶಗಳ ಉದಾಹರಣೆಗಳನ್ನು ಉಲ್ಲೇಖಿಸಿದ್ದಾರೆ.


ಇದನ್ನೂ ಓದಿ: Bengaluru News: ರೈಲ್ವೆ ಇಲಾಖೆಯಿಂದ ಬಂಪರ್ ಘೋಷಣೆ! ಈ ಮಾರ್ಗಗಳಲ್ಲಿ ಸ್ಪೆಷಲ್ ರೈಲು ಘೋಷಣೆ


ದೇಶದ ಜನಸಂಖ್ಯೆ ನಿಯಂತ್ರಣದ ಜೊತೆಗೆ ಧಾರ್ಮಿಕ ಆಧಾರದ ಮೇಲೆ ಜನಸಂಖ್ಯೆಯ ಸಮತೋಲನವು ಸಹ ಪ್ರಾಮುಖ್ಯತೆಯ ವಿಷಯವಾಗಿದೆ. ಅದನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಮೋಹನ್ ಭಾಗವತ್ ತಮ್ಮ ಭಾಷಣದಲ್ಲಿ ಹೇಳಿದರು.


ಜನಸಂಖ್ಯೆಯಿಂದ ಲಾಭವೂ ಆಗಬಹುದು
ಜನಸಂಖ್ಯೆಗೆ ಸಂಪನ್ಮೂಲಗಳು ಬೇಕಾಗುತ್ತವೆ. ಸಂಪನ್ಮೂಲಗಳನ್ನು ನಿರ್ಮಿಸದೆ ಜನಸಂಖ್ಯೆ ಬೆಳೆದರೆ ಅದು ಹೊರೆಯಾಗುತ್ತದೆ ಎಂದು ಮೋಹನ್ ಭಾಗವತ್ ವ್ಯಾಖ್ಯಾನಿಸಿದ್ದಾರೆ. ಜನಸಂಖ್ಯೆಯನ್ನು ಆಸ್ತಿ ಎಂದು ಪರಿಗಣಿಸುವ ಇನ್ನೊಂದು ದೃಷ್ಟಿಕೋನವಿದೆ. ಎರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವು ಜನಸಂಖ್ಯೆಯ ನೀತಿಯಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ: Shiv Sena: ಬಿಲ್ಲೂ ಬೇಡ, ಬಾಣವೂ ಬೇಡ! ಶಿವಸೇನೆ ಚಿಹ್ನೆ ಬಳಸದಂತೆ ಉದ್ಧವ್-ಶಿಂಧೆ ಬಣಕ್ಕೆ ಚುನಾವಣಾ ಆಯೋಗ ಸೂಚನೆ


ಮತಾಂತರಗಳಿಗೆ ಕಾರಣವಾಗಬಹುದು ಎಂದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಜನಸಂಖ್ಯೆಯ ಅಸಮತೋಲನವು ಭೌಗೋಳಿಕ ಗಡಿಗಳಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ. ಜನನ ದರದಲ್ಲಿನ ವ್ಯತ್ಯಾಸಗಳ ಜೊತೆಗೆ, ಬಲ, ಆಮಿಷ ಅಥವಾ ದುರಾಸೆ ಮತ್ತು ಧಾರ್ಮಿಕ ಒಳನುಸುಳುವಿಕೆಯಿಂದ ಮತಾಂತರಗಳು ಸಹ ದೊಡ್ಡ ಕಾರಣವಾಗುತ್ತವೆ ಎಂದು ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: