• Home
  • »
  • News
  • »
  • national-international
  • »
  • Tipu Express: ಟಿಪ್ಪು ಕಂಡ್ರೆ ಬಿಜೆಪಿಗೆ ಈಗಲೂ ಹೆದರಿಕೆ: ಓವೈಸಿ

Tipu Express: ಟಿಪ್ಪು ಕಂಡ್ರೆ ಬಿಜೆಪಿಗೆ ಈಗಲೂ ಹೆದರಿಕೆ: ಓವೈಸಿ

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ

ಟಿಪ್ಪು ಸುಲ್ತಾನ್ ಈಗಲೂ ಬ್ರಿಟಿಷ್ ಗುಲಾಮರನ್ನು ಹೆದರಿಸುತ್ತಾರೆ ಎಂದು ಸಂಸದ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ.

  • Share this:

ಹೈದರಾಬಾದ್: ಟಿಪ್ಪು ಸುಲ್ತಾನ್ ಪರಂಪರೆಯನ್ನು ಬಿಜೆಪಿ ಎಂದಿಗೂ ಅಳಿಸಲು ಸಾಧ್ಯವಿಲ್ಲ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಟಿಪ್ಪು ಎಕ್ಸ್‌ಪ್ರೆಸ್‌ನ್ನು (Tipu Express)  ಒಡೆಯರ್ ಎಕ್ಸ್‌ಪ್ರೆಸ್‌ ಆಗಿ (Wodeyar Express) ಹೆಸರು ಬದಲಾಯಿಸಿದ ನಂತರ ಅಸಾದುದ್ದೀನ್ ಓವೈಸಿ ಈ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಂದು ರೈಲನ್ನು ಆರಂಭಿಸಿ ಒಡೆಯರ್ ಹೆಸರಿಡಬಹುದಿತ್ತು. ಟಿಪ್ಪು ಸುಲ್ತಾನ್ ಅವರ ಪರಂಪರೆಯನ್ನು ಅಳಿಸಲು ಬಿಜೆಪಿಗೆ ಸಾಧ್ಯವಿಲ್ಲ. ಅವರು ಬದುಕಿರುವಾಗ ಬ್ರಿಟಿಷರನ್ನು (British) ಹೆದರಿಸಿದ್ದರು. ಜೊತೆಗೆ ಟಿಪ್ಪು ಸುಲ್ತಾನ್ ಈಗಲೂ ಬ್ರಿಟಿಷ್ ಗುಲಾಮರನ್ನು ಹೆದರಿಸುತ್ತಾರೆ ಎಂದು ಸಂಸದ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ.


ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಸ್ವಾಗತ
ಟಿಪ್ಪು ಎಕ್ಸ್​ಪ್ರೆಸ್ ರೈಲು ಈಗ ಒಡೆಯರ್ ಎಕ್ಸ್​ಪ್ರೆಸ್ ಆಗಿ ಬದಲಾಗಿದೆ. ಈಗಾಗಲೇ ರೈಲು ಬೋಗಿಗಳ ಮೇಲಿನ ಫಲಕ ಸಹ ಬದಲಾಗಿದೆ. ಈ ಮರುನಾಮಕಾರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಮರುನಾಮಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ (Yaduveer Krishnadatta Chamaraja Wadiyar) ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಎಡಪಂಥೀಯ ಚಿಂತಕರು, ಇದೊಂದು ರಾಜಕೀಯ ದ್ವೇಷ ಎಂದು ಕಟು ಪದಗಳಲ್ಲಿ ಟೀಕಿಸಿದ್ದಾರೆ.


ಟಿಪ್ಪು ಸುಲ್ತಾನ್  ಮರಿಮೊಮ್ಮಗ ಶೆಹಬಾಜದ್ ಮನ್ಸೂರ್ ಅಲಿ ಪ್ರತಿಕ್ರಿಯೆ
ಟಿಪ್ಪು ಎಕ್ಸ್​​ಪ್ರೆಸ್ ರೈಲಿನ ಮರುನಾಮಕರಣಕ್ಕೆ ಸಂಬಂಧಿಸಿದಂತೆ ಟಿಪ್ಪು ಸುಲ್ತಾನ್ ಅವರ ಮರಿಮೊಮ್ಮಗ ಶೆಹಬಾಜದ್ ಮನ್ಸೂರ್ ಅಲಿ (Sahebzada Mansoor Ali ,Great Great Grandson of Tipu Sultan) ಪ್ರತಿಕ್ರಿಯೆ ನೀಡಿದ್ದು ವಿಪಕ್ಷ ನಾಯಕರ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಸ್ಥಳೀಯ ಕಾಂಗ್ರೆಸ್ ನಾಯಕರು (Congress Leaders) ಈ ಬಗ್ಗೆ ಪ್ರಶ್ನಿಸದೇ ಮೌನವಾಗಿರೋದು ಏಕೆ ಎಂದು ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.


ಮರುನಾಮಕರಣಕ್ಕೆ ಯಾರೂ ಮನವಿ ಮಾಡಿರಲಿಲ್ಲ
ಟಿಪ್ಪು ಎಕ್ಸ್‌ಪ್ರೆಸ್ ಮರುನಾಮಕರಣದ ಕುರಿತು ನ್ಯೂಸ್ 18 ಜೊತೆ ಮಾತನಾಡಿದ ಶೆಹಬಾಜದ್ ಮನ್ಸೂರ್ ಅಲಿ, ಬಿಜೆಪಿ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದಾರೆ. ಟಿಪ್ಪು ಎಕ್ಸ್​ಪ್ರೆಸ್ ಹೆಸರು ಬದಲಿಸಲು ಮೈಸೂರಿನ ಜನರು ಅಥವಾ ಒಡೆಯರ್ ಕುಟುಂಬಸ್ಥರು ಹೇಳಿರಲಿಲ್ಲ. ಹೆಸರು ಬದಲಿಸುವಂತೆ ಯಾರೂ ಸಂಸದ ಪ್ರತಾಪ್ ಸಿಂಹ (MP Pratap Simha) ಅವರ ಬಳಿ ಮನವಿ ಸಹ ಮಾಡಿಕೊಂಡಿರಲಿಲ್ಲ.


ಇದನ್ನೂ ಓದಿ: Asaduddin Owaisi: ಭಾರತಕ್ಕೆ ದುರ್ಬಲ ಪ್ರಧಾನಿ ಸಿಗಲಿ ಎಂದ ಅಸಾದುದ್ದೀನ್ ಓವೈಸಿ


ಒಡೆಯರ್ ಹೆಸರು ಇರಿಸಿದ್ದಕ್ಕೆ ಆಕ್ಷೇಪ ಇಲ್ಲ
ಒಡೆಯರ್ ಹೆಸರಿಡಲು ಹಲವು ಹೊಸ ರೈಲುಗಳಿದ್ದವು, ಆದ್ರೆ ಉದ್ದೇಶಪೂರ್ವಕವಾಗಿ ಮಾನ್ಯ ಸಂಸದರಾಗಿರುವ ಪ್ರತಾಪ್ ಸಿಂಹ ಟಿಪ್ಪು ಎಕ್ಸ್​ಪ್ರೆಸ್ ರೈಲಿನ ಹೆಸರನ್ನು ಮರುನಾಮಕರಣಗೊಳಿಸಿದ್ದಾರೆ. ಒಡೆಯರ್ ಹೆಸರನ್ನು ಇರಿಸಿರೋದಕ್ಕೆ ನನ್ನ ಆಕ್ಷೇಪ ಇಲ್ಲ ಎಂದು ಸ್ಪಷ್ಟಪಡಿಸಿದರು.


ಮುಸ್ಲಿಂರಿಂದಲೇ ಹೆಚ್ಚು ಕಾಂಡೋಮ್ ಬಳಕೆ
ಮುಸ್ಲಿಂ ಧರ್ಮದ ಜನರೇ ಹೆಚ್ಚು ಕಾಂಡೋಮ್​ಗಳನ್ನು ಬಳಸುತ್ತಿದ್ದೇವೆ ಎಂದು ಹೈದರಾಬಾದ್ ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಹೇಳಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಖ್ಯಸ್ಥ ಮೋಹನ್ ಭಾಗವತ್ ಅವರ ಸಮುದಾಯ ಆಧಾರಿತ ಜನಸಂಖ್ಯೆಯ ಅಸಮತೋಲನದ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೀಗೆ ಪ್ರತಿಕ್ರಿಯಿಸಿದ್ದಾರೆ. ಮೋಹನ್ ಭಾಗವತ್ ಅವರೇ  ಚಿಂತಿಸಬೇಡಿ, ಮುಸ್ಲಿಂ ಜನಸಂಖ್ಯೆ  ಹೆಚ್ಚಾಗುತ್ತಿಲ್ಲ, ಬದಲಿಗೆ ಕುಸಿಯುತ್ತಿದೆ. ಮುಸ್ಲಿಮರ ಒಟ್ಟು ಫಲವತ್ತತೆ ದರವು ಕುಸಿದಿದೆ. ಕಾಂಡೋಮ್ ಅನ್ನು ಯಾರು ಹೆಚ್ಚು ಬಳಸುತ್ತಿದ್ದಾರೆ? ನಾವು. ಆದರೆ ಮೋಹನ್ ಭಾಗವತ್ ಈ ಬಗ್ಗೆ ಮಾತನಾಡುವುದಿಲ್ಲ ಎಂದು ಸಂಸದ ಅಸಾದುದ್ದೀನ್ ಓವೈಸಿ ಬಹಿರಂಗವಾಗಿ ಟೀಕಿಸಿದ್ದಾರೆ.


ಇದನ್ನೂ ಓದಿ: Babiya Crocodile: ಕಾಸರಗೋಡಿನ ದೇವರ ಮೊಸಳೆ ಬಬಿಯಾ ವಿಧಿವಶ; ಭಕ್ತರಲ್ಲಿ ಮಡುಗಟ್ಟಿದ ದುಃಖ


ಕುರಾನ್‌ನಿಂದ ಉಲ್ಲೇಖವನ್ನು ನೀಡುತ್ತಾ, "ನಾನು ನಿಮ್ಮನ್ನು ಖುರಾನ್ ಓದಲು ಆಹ್ವಾನಿಸುತ್ತೇನೆ. ಭ್ರೂಣವನ್ನು ಕೊಲ್ಲುವುದು ಬಹಳ ದೊಡ್ಡ ಪಾಪ ಎಂದು ಅಲ್ಲಾ ನಮಗೆ ಹೇಳುತ್ತಾನೆ. ಎರಡು ಗರ್ಭಧಾರಣೆಯ ನಡುವೆ ಮುಸ್ಲಿಮರು ಅಂತರ ಕಾಪಾಡುತ್ತಾರೆ. ಜೊತೆಗೆ ಕಾಂಡೋಮ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯಿಸಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: