ಮಧ್ಯಾಹ್ನದ ಬಿಸಿಯೂಟದಲ್ಲಿ ಇಲಿ; 9 ವಿದ್ಯಾರ್ಥಿಗಳು ಅಸ್ವಸ್ಥ

ಜನ ಕಲ್ಯಾಣ ಸಂಸ್ಥಾ ಸಮಿತಿ ಎಂಬ ಎನ್​ಜಿಒ ಇಲ್ಲಿನ ಸರ್ಕಾರ ಶಾಲೆಗೆ ಬಿಸಿಯೂಟ ಸರಬರಾಜು ಮಾಡಿದೆ. ದಾಲ್​ ತೆಗೆದುಕೊಳ್ಳುವಾಗ ನಮಗೆ ಇಲಿ ಕಾಣಿಸಿತು ಉದ್ದಿನ ಬೆಳೆಯ ಡಬ್ಬದ ತಳಭಾಗದಲ್ಲಿ ಇಲಿ ಇತ್ತು. ಇದೇ ಊಟವನ್ನು ಮಕ್ಕಳಿಗೆ ನೀಡಲಾಗಿದೆ ಎಂದು ಆರನೇ ತರಗತಿ ವಿದ್ಯಾರ್ಥಿ ತಿಳಿಸಿದ್ದಾರೆ.

Seema.R | news18-kannada
Updated:December 3, 2019, 3:56 PM IST
ಮಧ್ಯಾಹ್ನದ ಬಿಸಿಯೂಟದಲ್ಲಿ ಇಲಿ; 9 ವಿದ್ಯಾರ್ಥಿಗಳು ಅಸ್ವಸ್ಥ
ಊಟದಲ್ಲಿ ಸಿಕ್ಕ ಇಲಿ
  • Share this:
ಲಕ್ನೋ(ಡಿ.3): ಉತ್ತರ ಪ್ರದೇಶದ ಮಧ್ಯಾಹ್ನದ ಬಿಸಿಯೂಟ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ರೊಟ್ಟಿಯೊಂದಿಗೆ ಉಪ್ಪು, ಹಾಲಿಗೆ ನೀರು ಬೆರಸಿ ಸುದ್ದಿಯಾಗಿದ್ದ ಯೋಗಿ ಸರ್ಕಾರದ ಬಿಸಿಯೂಟ ಯೋಜನೆಯಲ್ಲಿನ ಯಡವಟ್ಟುಗಳು ಮುಂದುವರೆದಿದ್ದು, ಇದೀಗ ಬಿಸಿಯೂಟದಲ್ಲಿ ಸತ್ತ ಇಲಿ ಸಿಗುವ ಮೂಲಕ ಮತ್ತೆ ಸುದ್ದಿಯಾಗಿದೆ.

ಇಲ್ಲಿನ ಮುಜಾಫರ್​ನಗರದ ಸರ್ಕಾರಿ ಶಾಲೆಯಲ್ಲಿ ನೀಡಿದ ಊಟದಲ್ಲಿ ಸತ್ತ ಇಲಿಯನ್ನು ಸೇರಿಸಿ ಬೇಯಿಸಲಾಗಿದ್ದು, ಇದನ್ನು ಸೇವಿಸಿದ 9 ಜನ ಮಕ್ಕಳು ಹಾಗೂ ಶಿಕ್ಷಕರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ.

ಜನ ಕಲ್ಯಾಣ ಸಂಸ್ಥಾ ಸಮಿತಿ ಎಂಬ ಎನ್​ಜಿಒ ಇಲ್ಲಿನ ಸರ್ಕಾರ ಶಾಲೆಗೆ ಬಿಸಿಯೂಟ ಸರಬರಾಜು ಮಾಡಿದೆ. ದಾಲ್​ ತೆಗೆದುಕೊಳ್ಳುವಾಗ ನಮಗೆ ಇಲಿ ಕಾಣಿಸಿತು ಉದ್ದಿನ ಬೆಳೆಯ ಡಬ್ಬದ ತಳಭಾಗದಲ್ಲಿ ಇಲಿ ಇತ್ತು. ಇದೇ ಊಟವನ್ನು ಮಕ್ಕಳಿಗೆ ನೀಡಲಾಗಿದೆ ಎಂದು ಆರನೇ ತರಗತಿ ವಿದ್ಯಾರ್ಥಿ ಶಿವಾಂಗ ತಿಳಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಶಿಕ್ಷಣ ಅಧಿಕಾರಿ ರಾಮ್​ ಸಾಗರ್​ ತ್ರಿಪಾಠಿ ಆಘಾತ ವ್ಯಕ್ತಪಡಿಸಿದ್ದು, ಇದು ಸಂಪೂರ್ಣ ನಿರ್ಲಕ್ಷ್ಯದಿಂದ ಕೂಡಿದೆ. ಈ ಕುರಿತು ಎನ್​ಜಿಒ ಮೇಲೆ ತನಿಖೆಗೆ ಆದೇಶ ನೀಡಲಾಗಿದೆ ಎಂದಿದ್ದಾರೆ.

ಇದನ್ನು ಓದಿ: ಒಂದು ಲೀಟರ್ ಹಾಲಿಗೆ ಒಂದು ಬಕೆಟ್ ನೀರು; 81 ಮಕ್ಕಳಿಗೆ ನೀರ್​ಬೆರಕೆ ಹಾಲು; ಯೋಗಿ ಆಡಳಿತದಲ್ಲಿ ಮತ್ತೊಂದು ಬಿಸಿಯೂಟ ಕರ್ಮಕಾಂಡ ಬಯಲು

ಇನ್ನು ಕಳೆದವಾರವಷ್ಟೇ 1 ಲೀಟರ್​ ಹಾಲನ್ನು 81 ವಿದ್ಯಾರ್ಥಿಗಳಿಗೆ ಹಂಚಿ ಹೊಸ ವಿವಾದಕ್ಕೆ ಯೋಗಿ ಸರ್ಕಾರ ಗುರಿಯಾಗಿತ್ತು.ಈ ಘಟನೆ ಮಾಸುವ ಮೊದಲೇ ಮತ್ತೊಂದು ಯಡವಟ್ಟು ನಡೆದಿದೆ.
First published: December 3, 2019, 3:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading