ತಾಯಿಯ ಗರ್ಭ, ಸಮಾಧಿ ಎರಡೇ ಹೆಣ್ಮಕ್ಕಳಿಗೆ ಸುರಕ್ಷಿತ ತಾಣ; ಚೆನ್ನೈ ಅಪ್ರಾಪ್ತೆ ಸಾವಿಗೂ ಮುನ್ನ ಬರೆದ ಪತ್ರ

ಪ್ರತಿಯೊಬ್ಬ ಪೋಷಕರು ಮಗನಿಗೆ ಹುಡುಗಿಯರನ್ನು ಹೇಗೆ ಗೌರವಿಸಬೇಕು ಎಂದು ಹೇಳಿಕೊಡಬೇಕು. ನಿಮ್ಮ ಸಂಬಂಧಿಕರು ಅಥವಾ ಶಿಕ್ಷಕರನ್ನು ನಂಬಬೇಡಿ. ತಾಯಿ ಗರ್ಭ, ಸಮಾಧಿ ಹೊರತಾಗಿ ಮಹಿಳೆಗೆ ಯಾವುದೇ ಸ್ಥಳ ಸುರಕ್ಷಿತವಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಚೆನ್ನೈ (ಡಿ. 20): ತಮಿಳುನಾಡಿನ ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ ಲೈಂಗಿಕ ಕಿರುಕುಳವೇ (Sexual Harassment)  ಮುಖ್ಯ ಕಾರಣ ಎಂಬುದು ಆಕೆಯ ಡೆತ್​ನೋಟ್​ ಮೂಲಕ ಬೆಳಕಿಗೆ ಬಂದಿದೆ. ಕಳೆದ 8 ತಿಂಗಳಿನಿಂದ ಎದುರಿಸುತ್ತಿದ್ದ ಲೈಂಗಿಕ ದೌರ್ಜನ್ಯದಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್​​ ನೋಟ್​ನಲ್ಲಿ (Death Note) ಉಲ್ಲೇಖಿಸಿದ್ದಾಳೆ. ಒಂಟಿತನ ಹಾಗೂ ತನ್ನ ವಿರುದ್ದ ನಡೆದ ಲೈಂಕಿಗ ಕಿರುಕುಳದಿಂದ ಶನಿವಾರ ಚೆನ್ನೈನ ಪೂನಮಲ್ಲಿಯಲ್ಲಿ 11ನೇ ತರಗತಿ ವಿದ್ಯಾರ್ಥಿನಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಳು. ಸಾವಿಗೆ ಮುನ್ನ ಆಕೆ ಬರೆದಿರುವ ಪತ್ರದಲ್ಲಿ ಸಮಾಜ ಮಹಿಳೆಗೆ ಹೇಗೆ ಅಸುರಕ್ಷಿತವಾಗಿದೆ. ತಾಯಿಯ ಗರ್ಭದ (Womb) ಹೊರತಾಗಿ ಹುಡುಗಿಯರು, ಮಹಿಳೆಯರು ಸಮಾಜದಲ್ಲಿ ಸುರಕ್ಷಿತರಲ್ಲ. ಹೇಗೆ ತಾನು ಸಂಕಷ್ಟ ಅನುಭವಿಸಿದೆ ಎಂಬುದನ್ನು ಎಳೆ ಎಳೆಯಾಗಿ ಬರೆದಿದ್ದಾಳೆ.

  ಪ್ರಕರಣ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣ ಕುರಿತ ತನಿಖೆಗೆ ನಾಲ್ಕು ತಂಡ ರಚಿಸಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಹೋದುತ್ತಿದ್ದ ವಿದ್ಯಾರ್ಥಿನಿಯ ಡೆತ್​ ನೋಟ್​ ವಶಪಡಿಸಿಕೊಳ್ಳಲಾಗಿದೆ. ಡೆತ್​ನೋಟ್​ನಲ್ಲಿ ಬಾಲಿ ಲೈಂಗಿಕ ದೌರ್ಜನ್ಯ ನಿಲ್ಲಿಸಿ ಮತ್ತು ನನಗೆ ನ್ಯಾಯ ಕೊಡಿಸಿ ಎಂದು ಬರೆದಿದ್ದು, ಮೂರು ದೌರ್ಜನ್ಯ ನಡೆಸಿದವರ ಹೆಸರು ಉಲ್ಲೇಖಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.

  ಶಿಕ್ಷಕರಿಂದಲೇ ಕಿರುಕುಳ

  ಇನ್ನು ಬಾಲಕಿ ಪೋಷಕರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಬಾಲಕಿ 9ನೇ ತರಗತಿವರೆಗೆ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು. ಮಗನ ಶಿಕ್ಷಕರ ಮಗ ಆಕೆಗೆ ಕಿರುಕುಳ ನೀಡುತ್ತಿದ್ದ ಹಿನ್ನಲೆ ಆಕೆಯನ್ನು ಸರ್ಕಾರಿ ಶಾಲೆಗೆ ಸೇರಿಸಲಾಗಿತ್ತು ಎಂದಿದ್ದಾರೆ. ಪೊಲೀಸರು ಸದ್ಯ ಈ ಆಯಾಮದಲ್ಲೂ ತನಿಖೆ ಶುರು ಮಾಡಿದ್ದಾರೆ. ಬಾಲಕಿ ಶಾಲೆ ಬದಲಾಯಿಸಿದ ಬಳಿಕವೂ ಆಕೆ ವಿರುದ್ಧ ದೌರ್ಜನ್ಯ ನಿಂತಿರಲಿಲ್ಲ ಎಂಬುದು ತಿಳಿದು ಬಂದಿದೆ.

  ಯುವಕನ ಬಂಧನ
  ಪ್ರಕರಣ ಸಂಬಂಧ ಬಾಲಕಿಯ ಕಾಲೇಜಿನ ಯುವಕನನ್ನು ಪೊಲೀಸರು ಬಂಧಿಸಿದ್ದು, ಆತನ ಆಕೆಗೆ ದೌರ್ಜನ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಆತನ ವಿರುದ್ದ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಬಾಲಕಿ ಡೆತ್ ನೋಟ್​ ಆಧಾರದ ಮೇಲೆ ಇತರರಿಂದಲೂ ದೌರ್ಜನ್ಯಕ್ಕೆ ಒಳಗಾಗಿದ್ದಳಾ ಎಂಬ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

  ಇದನ್ನು ಓದಿ: 2021 ಕೋವಿಡ್​ ಮಾತ್ರವಲ್ಲ, ಜಗತ್ತನ್ನು ಕಾಡಿದ ಹವಾಮಾನ ವೈಪರೀತ್ಯಗಳಿವು

  ಡೆತ್​ನೋಟ್​ನಲ್ಲಿ ಬರೆದಿದ್ದೇನು?
  ತಾಯಿ ಯಾವುದೋ ಕಾರಣಕ್ಕೆ ಶನಿವಾರ ಮನೆಯಿಂದ ಹೋರ ಹೋಗುತ್ತಿದ್ದಂತೆ ಬಾಲಕಿ ಪೂರ್ವ ಯೋಚಿತದಂತೆ ನೇಣಿಗೆ ಶರಣಾಗಿದ್ದಾಳೆ. ಇದಕ್ಕೂ ಮುನ್ನ ಡೆತ್​ ನೋಟ್​ ಬರೆದಿಟ್ಟಿದ್ದಾಳೆ. ಪ್ರಾರಂಭದಲ್ಲಿ ಲೈಂಗಿಕ ದೌರ್ಜನ್ಯ ನಿಲ್ಲಿಸಿ ಎಂದು ತನ್ನ ಮಾತು ಆರಂಭಿಸಿದ್ದಾಳೆ. ಇದೇ ವೇಳೆ ತನ್ನ ಪೋಷಕರಿಗೆ ಮಗನಿಗೆ ಸಮಾಜದಲ್ಲಿ ಹೇಗೆ ಹುಡುಗಿಯರನ್ನು ಗೌರವಿಸಬೇಕು ಎಂದು ಹೇಳಿಕೊಡಿ ಎಂದು ಮನವಿ ಮಾಡಿದ್ದಾಳೆ.

  ಇದನ್ನು ಓದಿ: ಭೀತಿ ಹುಟ್ಟಿಸುತ್ತಿರುವ ಓಮೈಕ್ರಾನ್‌ನ ಕೆಲ 'ಅಸಹಜ’ ಲಕ್ಷಣಗಳು ಪತ್ತೆ

  ಪ್ರತಿಯೊಬ್ಬ ಪೋಷಕರು ಮಗನಿಗೆ ಹುಡುಗಿಯರನ್ನು ಹೇಗೆ ಗೌರವಿಸಬೇಕು ಎಂದು ಹೇಳಿಕೊಡಬೇಕು. ನಿಮ್ಮ ಸಂಬಂಧಿಕರು ಅಥವಾ ಶಿಕ್ಷಕರನ್ನು ನಂಬಬೇಡಿ. ತಾಯಿ ಗರ್ಭ, ಸಮಾಧಿ ಹೊರತಾಗಿ ಮಹಿಳೆಗೆ ಯಾವುದೇ ಸ್ಥಳ ಸುರಕ್ಷಿತವಲ್ಲ ಎಂದು ಉಲ್ಲೇಖಿಸಿದ್ದಾರೆ.
  ಬಾಲಕಿ ತಮ್ಮಿಂದ ದೂರ ಆಗಿದ್ದಳು ಎಂದು ಸಂತ್ರಸ್ತೆ ಸ್ನೇಹಿತರ ಪೊಲೀಸರಿಗೆ ತಿಳಿಸಿದ್ದಾರೆ. ಲೈಂಗಿಕ ಕಿರುಕುಳದಿಂದ ಆಕೆ ತುಂಬಾ ನೋವು ಅನುಭವಿಸಿದ್ದಳು. ಯಾರು ತನ್ನ ಸಾತ್ವಾಂನಕ್ಕೆ ಬರಲಿಲ್ಲ ಎಂದು ನೊಂದಿದ್ದಳು. ಇದರಿಂದ ಆಕೆ ಓದಿನಲ್ಲೂ ಗಮನ ಹರಿಸಲು ಸಾಧ್ಯವಾಗಲಿಲ್ಲ. ಇದರಿಂದ ನಿದ್ದೆಯಲ್ಲೂ ಹೇಗೆ ಬೆದರುತ್ತಿದ್ದೆ ಎಂಬುದನ್ನು ಪತ್ರದಲ್ಲಿ ತಿಳಿಸಿದ್ದಾಳೆ.

  ಪ್ರಕರಣ ತನಿಖೆಗೆ ಮುಂದಾಗಿರು ಪೊಲೀಸರು ಆಕೆಯ ಫೋನ್ ವಶಕ್ಕೆ ಪಡೆದಿದ್ದು, ಇತ್ತೀಚೆಗೆ ಆಕೆ ಕರೆ ಮಾಡಿದವರ ವಿಚಾರಣೆ ನಡೆಸಿದ್ದಾರೆ.

  ( ಈ ಸುದ್ದಿ  ಪ್ರಚೋದಿಸಬಹುದು. ನಿಮಗೆ ಅಥವಾ ನಿಮಗೆ ತಿಳಿದಿರುವ ಯಾರಿಗಾದರೂ ಸಹಾಯ ಬೇಕಾದರೆ, ಈ ಸಹಾಯವಾಣಿಗಳಲ್ಲಿ ಯಾವುದಾದರೂ ಒಂದಕ್ಕೆ ಕರೆ ಮಾಡಿ. ನಿಮ್ಹಾನ್ಸ್​ 080-46110007, ಮಹಿಳಾ ಸಾಂತ್ವನ ಕೇಂದ್ರ- 0836 235 6587, ಮಹಿಳೆಯರಿಗೆ ತುರ್ತು ನೆರವನ್ನು ನೀಡುವ ನಿಟ್ಟಿನಲ್ಲಿ ಸರ್ಕಾರ ಯೂನಿವರ್ಸಲೈಸೇಷನ್ ಆಫ್ ವುಮೆನ್ ಹೆಲ್ಫ್‌ ಲೈನ್‌ - 181 ಎಂಬ ಉಚಿತ ದೂರವಾಣಿ ಸೇವೆಯನ್ನು ದಿನದ 24*7 ಗಂಟೆಗಳು ರಾಜ್ಯಾದ್ಯಂತ ನೀಡುತ್ತಿದೆ)
  Published by:Seema R
  First published: