ಪಾಟ್ನಾ: ಬಿಹಾರದ (Bihar) ಸಿವಾನ್ ಜಿಲ್ಲೆಯಲ್ಲಿ ಸಮಾಜ ತಲೆ ತಗ್ಗಿಸುವಂತಹ ಆಘಾತಕಾರಿ ಘಟನೆಯೊಂದು (Shocking incident) ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು (Woman) ಸಾಲ (Loan) ತೀರಿಸದ ಕಾರಣ 40 ವರ್ಷದ ವ್ಯಕ್ತಿಯೊಬ್ಬ ಆಕೆಯ 11 ವರ್ಷದ ಬಾಲಕಿಯನ್ನು ಮದುವೆಯಾಗಿದ್ದಾನೆ (Marriage) ಎನ್ನಲಾಗಿದೆ. ಮಹೇಂದ್ರ ಪಾಂಡೆ ಎಂಬ ವ್ಯಕ್ತಿ ಅಪ್ರಾಪ್ತ ಬಾಲಕಿಯನ್ನು (Minor Girl) ವಿವಾಹವಾಗಿರುವುದು, ದೊಡ್ಡ ಚರ್ಚೆಗೀಡು ಮಾಡಿದೆ.
2 ಲಕ್ಷ ರೂಪಾಯಿ ಸಾಲ ಹಿಂತಿರುಗಿಸದ್ದಕ್ಕೆ ವಿವಾಹ
ಮೈರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಚೆನಿ ಛಾಪರ್ ಗ್ರಾಮದ ನಿವಾಸಿ 40 ವರ್ಷದ ಮಹೇಂದ್ರ ಪಾಂಡೆ ಎಂಬಾತ ಬಾಲಕಿಯ ತಾಯಿಗೆ 2 ಲಕ್ಷ ರೂಪಾಯಿ ಸಾಲ ನೀಡಿದ್ದ ಎನ್ನಲಾಗಿದೆ. ಮಹೇಂದ್ರ ಕೆಲವು ದಿನಗಳಿಂದ ಬಾಲಕಿಯ ತಾಯಿಗೆ ತನ್ನ ಹಣ ವಾಪಸ್ ನೀಡುವಂತೆ ಒತ್ತಾಯಿಸುತ್ತಿದ್ದ. ಬಾಲಕಿಯ ತಾಯಿ ಬಡವಳಾಗಿದ್ದು, ಕಾರಣಾಂತರಗಳಿಂದ ಸಾಲವನ್ನು ನಿಗಧಿತ ಸಮಯದಲ್ಲಿ ಮರುಪಾವತಿಸಲು ಸಾಧ್ಯವಾಗಲಿಲ್ಲ. ಇದರಿಂದ ಸಾಲ ಕೊಟ್ಟ ಮಹೇಂದ್ರ ಪಾಂಡೆ ಆಕೆಯ 11 ವರ್ಷದ ಮಗಳ ಮದುವೆ ಮಾಡಿಕೊಂಡು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Viral News: ಪೊಲೀಸರನ್ನು ಕಂಡು ಭಯದಿಂದ ಐದನೇ ಮಹಡಿಯಿಂದ ಹಾರಿದ ವ್ಯಕ್ತಿ ಸಾವು!
ಶಿಕ್ಷಣ ಕೊಡಿಸುತ್ತೇನೆಂದು ಹೇಳಿ ವಿವಾಹ ಮಾಡಿಕೊಂಡ ಆರೋಪ
ಈ ಬಗ್ಗೆ ಮಾತನಾಡಿರುವ ಸಂತ್ರಸ್ತ ಬಾಲಕಿಯ ತಾಯಿ ಮಾತನಾಡಿದ್ದು, ಲಕ್ಷ್ಮೀಪುರ ಗ್ರಾಮದಲ್ಲಿ ನಮಗೆ ಸಂಬಂಧಿಕರಿದ್ದು ನನ್ನ ಮಗಳು ಅಲ್ಲಿಗೆ ಆಗಾಗ್ಗೆ ಹೋಗುತ್ತಿದ್ದಳು. ಅದೇ ಗ್ರಾಮದ ಮಹೇಂದ್ರ ಪಾಂಡೆ ಎಂಬುವರು ನಿಮ್ಮ ಮಗಳನ್ನು ನನ್ನ ಮನೆಯಲ್ಲಿಯೇ ಇಟ್ಟುಕೊಂಡು ಶಿಕ್ಷಣ ಕೊಡಿಸುತ್ತೇನೆ ಎಂದು ಹೇಳಿದ್ದರು. ಆದರೆ ಈಗ ಮಹೇಂದ್ರ ಆಕೆಯನ್ನು ಮದುವೆಯಾಗಿ, ತನ್ನ ಬಳಿಯೇ ಇಟ್ಟುಕೊಂಡಿದ್ದಾನೆ ನನ್ನ ಮಗಳನ್ನು ನನಗೆ ವಾಪಸ್ ಕೊಡಿಸಿ ಎಂದು ವಿನಂತಿಸಿಕೊಂಡಿದ್ದಾಳೆ.
ಉಲ್ಟಾ ಹೊಡೆದ ಮಹೇಂದ್ರ ಪಾಂಡೆ
ಆರೋಪಿ ಮಹೇಂದ್ರ ಪಾಂಡೆ ಈ ಆರೋಪಕ್ಕೆ ಪ್ರತಿಕ್ರಿಯಿಸಿ ವಿಭಿನ್ನ ಹೇಳಿಕೆ ನೀಡಿ ಗೊಂದಲ ಮೂಡಿಸಿದ್ದಾನೆ. ಒಮ್ಮೊಮ್ಮೆ ನಾನು ತಪ್ಪು ಮಾಡಿದ್ದೇನೆ, ಯಾವ ಶಿಕ್ಷೆಯಾದರೂ ಅನುಭವಿಸುತ್ತೇನೆ ಎನ್ನುತ್ತಾನೆ. ಕೆಲವೊಮ್ಮೆ ನಾನು ಬಾಲಕಿಯನ್ನು ನನ್ನ ಮಗಳಂತೆ ಭಾವಿಸಿ ಮನೆಗೆ ತಂದಿದ್ದೇನೆ. ಅವಳು ಎಲ್ಲಿ ಬೇಕಾದರೂ ಹೋಗಬಹುದು ಎಂದು ಹೇಳುತ್ತಿದ್ದಾನೆ.
ತಾಯಿಗೆ ಕರೆ ಮಾಡಿ ಬೆದರಿಕೆ
ತನ್ನ 11 ವರ್ಷದ ಮಗಳನ್ನು ಸಾಲ ತೀರಿಸದ ಕಾರಣಕ್ಕೆ ವಿವಾಹವಾಗಿದ್ದಾನೆ ಎಂದು ಮಹಿಳೆ ಆರೋಪಿಸಿರುವುದಕ್ಕೆ ಸಾಲಗಾರ ಆಕೆಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಈ ಸುದ್ದಿ ಹಬ್ಬಿಸಿದರೆ ಆಕೆಯನ್ನು ಕೊಲ್ಲುವುದಾಗಿ ಹೇಳಿದ್ದಾನೆ. ಈ ಘಟನೆ ಬೆಳಕಿಗೆ ಬಂದಂತರ ಇಡೀ ಪ್ರದೇಶದಲ್ಲಿ ಹಲವು ಚರ್ಚೆಗಳು ನಡೆಯುತ್ತಿವೆ. ಮಹೇಂದ್ರ ಪಾಂಡೆಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಎನ್ನಲಾಗಿದೆ.
ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಅಪ್ರಾಪ್ತ ಬಾಲಕಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ. ಮಹೇಂದ್ರ ಪಾಂಡೆ ನನ್ನ ತಾಯಿಗೆ ಸಾಲ ನೀಡಿದ್ದಾನೆ. ಸಾಲದ ನಿಖರವಾದ ಮೊತ್ತ ನನಗೆ ತಿಳಿದಿಲ್ಲ. ಆದರೆ ತಾಯಿ ಇಲ್ಲಿಗೆ ಬಂದು ನನ್ನನ್ನು ಪಾಂಡೆಯೊಂದಿಗೆ ಬಿಟ್ಟುಹೋದರು ಎಂದಿದ್ದಾಳೆ. ಮತ್ತೊಂದೆಡೆ, ಬಾಲಕಿ ತಾಯಿ ಪಾಂಡೆ ತನ್ನ ಮಗಳನ್ನು ಮದುವೆಯಾಗಿದ್ದಾನೆ ಎಂದು ಆರೋಪಿಸಿದ್ದಾಳೆ.
ಪೊಲೀಸರೊಂದಿಗೆ ಸಂಪರ್ಕವಿಲ್ಲ
ಸಾಲ ಮರುಪಾವತಿಸಲು ಸಾಧ್ಯವಾಗದ ಕಾರಣ 40 ವರ್ಷದ ವ್ಯಕ್ತಿಯೊಬ್ಬ 11 ವರ್ಷದ ಬಾಲಕಿಯನ್ನು ಮದುವೆಯಾಗಿರುವ ಸುದ್ದಿಗೆ ಸಂಬಂಧಿಸಿದಂತೆ ಮಾಧ್ಯಮದವರು ಮೈರ್ವಾ ಥಾಣೆ ಪೊಲೀಸರನ್ನು ಸಂಪರ್ಕಿಸಿದರಾದರೂ, ಆ ನಂಬರ್ ಸ್ವಿಚ್ ಆಫ್ ಬಂದಿದೆ. ಸಿವಾನ್ ಎಸ್ಪಿ ಶೈಲೇಶ್ ಕುಮಾರ್ ಸಿನ್ಹಾಗೆ ಕರೆ ಮಾಡಿದರೆ, ಅವರು, ಕರೆ ಸ್ವೀಕರಿಸಲಿಲ್ಲ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ