ಗಲ್ಲು ಶಿಕ್ಷೆ ಮುಂದೂಡಿದ ಕೋರ್ಟ್​; ಕಣ್ಣೀರಿಟ್ಟ ನಿರ್ಭಯಾ ತಾಯಿ

ಫೆ.1ರಂದು ಅಂದರೆ ನಾಳೆ ಬೆಳಗ್ಗೆ 6ಕ್ಕೆ ನಿರ್ಭಯಾ ಅತ್ಯಾಚಾರಿಗಳಿಗೆ ನಿಗದಿಯಾಗಿದ್ದ ಗಲ್ಲು ಶಿಕ್ಷೆಯನ್ನು ಪಟಿಯಾಲ ಕೋರ್ಟ್​ ತಡೆ ನೀಡಿದೆ. ನ್ಯಾಯಾಲಯದ ತೀರ್ಪಿನ್ನು ಆಲಿಸುತ್ತಿದ್ದಂತೆ ನಿರ್ಭಯಾ ತಾಯಿ ಆಶಾದೇವಿ ಕುಸಿದು ಬಿದ್ದಿದ್ದು, ಕಣ್ಣಿರಿಟ್ಟಿದ್ದಾರೆ

ನಿರ್ಭಯಾ ತಾಯಿ ಆಶಾ ದೇವಿ

ನಿರ್ಭಯಾ ತಾಯಿ ಆಶಾ ದೇವಿ

 • Share this:
  ನಿರ್ಭಯಾ ಹಂತಕರ ಗಲ್ಲಿಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇದೆ ಎನ್ನುವಾಗ ಈ ಶಿಕ್ಷೆಯನ್ನು ಮುಂದೂಡಿ ಪಟಿಯಾಲ ನ್ಯಾಯಾಲಯ ತೀರ್ಪು ನೀಡಿದೆ. ಇದರಿಂದ  ಸತತ ಏಳು ವರ್ಷಗಳ ಹೋರಾಟದ ಬಳಿಕ ಇನ್ನೇನು ತನ್ನ ಮಗಳಿಗೆ ಜಯ ಸಿಗಲಿದೆ ಎಂಬ ಆಶಾಭಾವನೆಯಲ್ಲಿದ್ದ ನಿರ್ಭಯಾ ತಾಯಿ ಆಘಾತಕ್ಕೆ ಒಳಗಾಗಿದ್ದಾರೆ.

  ಫೆ.1ರಂದು ಅಂದರೆ ನಾಳೆ ಬೆಳಗ್ಗೆ 6ಕ್ಕೆ ನಿರ್ಭಯಾ ಅತ್ಯಾಚಾರಿಗಳಿಗೆ ನಿಗದಿಯಾಗಿದ್ದ ಗಲ್ಲು ಶಿಕ್ಷೆಯನ್ನು ಪಟಿಯಾಲ ಕೋರ್ಟ್​ ತಡೆ ನೀಡಿದೆ. ನ್ಯಾಯಾಲಯದ ತೀರ್ಪಿನ್ನು ಆಲಿಸುತ್ತಿದ್ದಂತೆ ನಿರ್ಭಯಾ ತಾಯಿ ಆಶಾದೇವಿ ಕುಸಿದು ಬಿದ್ದಿದ್ದು, ಕಣ್ಣಿರಿಟ್ಟಿದ್ದಾರೆ

  ಎರಡನೇ ಬಾರಿ ಅತ್ಯಾಚಾರಿಗಳಿಗೆ ಈ ಶಿಕ್ಷೆಯನ್ನು ಮುಂದೂಡಲಾಗಿದೆ. ದೋಷಿಗಳಿಗೆ ಗಲ್ಲು ಶಿಕ್ಷೆಯಾಗುವುದಿಲ್ಲ ಎಂದು ಬಿಕ್ಕಿದ್ದಾರೆ. ದೋಷಿಗಳ ಪರ ವಕೀ ಎಪಿ ಸಿಂಗ್​, ದೋಷಿಗಳಿಗೆ ಗಲ್ಲು ಶಿಕ್ಷೆಯಾಗುವುದಿಲ್ಲ ಎಂದು ನನಗೆ ಸವಾಲು ಹಾಕಿದ್ದರು. ಆದರೆ, ನಾನು ಸುಮ್ಮನಿರುವುದಿಲ್ಲ. ನ್ಯಾಯಕ್ಕಾಗಿ ನನ್ನ ಹೋರಾಟವನ್ನು ಮುಂದುವರೆಸುತ್ತೇವೆ ಎಂದಿದ್ದಾರೆ.

  ಇದನ್ನು ಓದಿ: ನಿರ್ಭಯಾ ಪ್ರಕರಣ: ನಾಳೆಯೂ ಅಪರಾಧಿಗಳ ನೇಣುಶಿಕ್ಷೆ ಜಾರಿ ಇಲ್ಲ - ಕೋರ್ಟ್ ಆದೇಶ

  ಗಲ್ಲು ಶಿಕ್ಷೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇದೆ ಎನ್ನುವ ಸಂದರ್ಭದಲ್ಲಿ ನಾಲ್ವರು ದೋಷಿಗಳು ಕೊನೆ ಕ್ಷಣದಲ್ಲಿ ಈ ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ. ಗಲ್ಲು ಶಿಕ್ಷೆಗೆ ತಡೆ ನೀಡಿರುವ ಕೋರ್ಟ್​ ಗಲ್ಲು ಶಿಕ್ಷೆಗೆ ಹೊಸ ದಿನಾಂಕ ನಿಗದಿ ಮಾಡುವುದಾಗಿ ತಿಳಿಸಿದೆ.

  ಇನ್ನು ಇವರಿಗೆ ನೇಣಿಗೇರಿಸಲು ಹ್ಯಾಗ್​ಮ್ಯಾನ್​ ಪವನ್​ ಜಲಾದ್​ ಕೂಡ ತಿಹಾರ್​ ಜೈಲಿಗೆ ಆಗಮಿಸಿದ್ದು, ನಾಳೆ ನೇಣಿಗೆರಿಸಲಿ ಸಿರ್ದಧತೆ ನಡೆಸಿದ್ದರು. ಅಲ್ಲದೇ ಇಂದು ಮಧ್ಯಾಹ್ನ ಕೂಡ ನೇಣಿಗೇರಿಸುವ ಅಣುಕು ಕಾರ್ಯ ಕೂಡ ನಡೆಸಲಾಗಿತ್ತು.

   
  First published: