ಮಧ್ಯಪ್ರದೇಶ: ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ (Relationship) ಬೆಲೆ ಇಲ್ಲದಂತಾಗುತ್ತಿದೆ. ಯಾರು ಯಾರನ್ನು ಪ್ರೀತಿಸುತ್ತಾರೋ, ಯಾರು ಯಾರೊಂದಿಗೆ ಓಡಿ ಹೋಗುತ್ತಾರೋ ಎಂಬುದು ಕೂಡ ಅರ್ಥವಾಗದ ಪರಿಸ್ಥಿತಿ. ಮನೋವಿಜ್ಞಾನ ಶಾಸ್ತ್ರದ (Psychology) ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ಲೈಂಗಿಕ ಭಾವನೆಗಳನ್ನು ಹೊಂದಿರುತ್ತಾನೆ. ಆದರೆ ಇವುಗಳನ್ನು ಅರ್ಥಮಾಡಿಕೊಂಡು ಹತೋಟಿಯಲ್ಲಿಟ್ಟುಕೊಳ್ಳುವವರು ಪ್ರಬುದ್ಧರೆನಿಸಿಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಂಡತಿ ಗಂಡನಿಗೆ (Wife-Husband) ಕೈ ಕೈಕೊಡುವುದು, ಗಂಡ ಹೆಂಡತಿಗೆ ಟೋಪಿ ಹಾಕುವ ಪ್ರಕರಣಗಳು ಸಮಾಜದಲ್ಲಿ ಹೆಚ್ಚಾಗುತ್ತಿದೆ. ಈ ಮೂಲಕ ತಮ್ಮ ಮಿತಿಯನ್ನು ಮೀರಿ ವರ್ತಿಸುತ್ತಿದ್ದಾರೆ. ತಾವೇ ಜನ್ಮ ನೀಡಿ, ಬೆಳೆಸಿದ ಮಕ್ಕಳ ಬಗ್ಗೆ ಯೋಚಿಸುವುದೂ ಇಲ್ಲ. ಇಲ್ಲೊಬ್ಬ ಮಹಿಳೆ ಮಗನ ವಯಸ್ಸಿನ ಸೋದರಳಿಯನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದು, ಕೆಲವು ವರ್ಷಗಳ ಕಾಲ ಅವನೊಂದಿಗೆ ಆನಂದಿಸಿದ್ದಾಳೆ. ಕೊನೆಗೆ ಸಮಯ ನೋಡಿ ಪ್ರೇಮಿಗಳ ದಿನವೇ ಇಬ್ಬರೂ ಪರಾರಿಯಾಗಿ ಸಂಬಂಧಗಳಿಗೆ ಮಸಿ ಬಳಿದಿದ್ದಾರೆ.
ಮಧ್ಯಪ್ರದೇಶದ (Madhya Pradesh) ಸಾಗರ್ ಜಿಲ್ಲೆಯಲ್ಲಿ ಈ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆರು ಮಕ್ಕಳ ತಾಯಿಯಾಗಿರುವ ಮಹಿಳೆ ತನ್ನ ಮಗನ ವಯಸ್ಸಿನ ಹುಡುಗನೊಂದಿಗೆ ಪರಾರಿಯಾಗಿದ್ದಾಳೆ. 50 ವಯಸ್ಸಿನಲ್ಲಿ ಆಕೆ ತನಗಿಂತ 20 ವರ್ಷ ಚಿಕ್ಕವನಾದ ತನ್ನ ಸೋದರಳಿಯನನ್ನು ಪ್ರೀತಿಸುತ್ತಿದ್ದಳು. ಇದೀಗ ಸಮಯ ನೋಡಿಕೊಂಡು ಪರಾರಿಯಾಗಿದ್ದಾರೆ.
60 ಸಾವಿರ ರೂಪಾಯಿಯೊಂದಿಗೆ ಪರಾರಿ
ಸೋದರಳಿಯನೊಂದಿಗೆ ಎಸ್ಕೇಪ್ ಆಗಿರುವ ಮಹಿಳೆ ಮನೆಯಲ್ಲಿದ್ದ 60 ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಗಂಡನ ಮನೆಯಿಂದ ಓಡಿ ಹೋಗಿದ್ದಾಳೆ. ಸಂತ್ರಸ್ತ ಪತಿ ಹಾಗೂ ಮಕ್ಕಳು ಮಹಿಳೆಯನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆ ಹಾಗೂ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ತಿಂಗಳಾದರೂ ಮಹಿಳೆ ಎಲ್ಲಿದ್ದಾಳೆ ಎಂಬುದು ಇಲ್ಲಿಯವರೆಗೂ ತಿಳಿದುಬಂದಿಲ್ಲ. ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ಪತಿ ತಿಳಿಸಿದ್ದಾರೆ.
ವ್ಯಾಲೆಂಟೈನ್ಸ್ ಡೇ ದಿನವೇ ಜಂಪ್
ಸಾಗರ್ ಜಿಲ್ಲೆಯ ದಿಯೋರಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿಮದಾನ ಗ್ರಾಮದ ಶ್ರವಣ್ ಕುಚ್ ಬಂದಿಯಾ ಎಂಬುವರು ತಮ್ಮ ಪತ್ನಿಯನ್ನು ಪತ್ತೆ ಮಾಡಿಕೊಡುವಂತೆ ಪೊಲೀಸ್ ದೂರು ದಾಖಲಿಸಿದ್ದಾರೆ. ಆತನ ಪತ್ನಿ ಹೆಲೆನಬಾಯಿ (50) ತನ್ನ ಸೋದರಳಿಯನೊಂದಿಗೆ ಮನೆಯಿಂದ ಓಡಿಹೋಗಿದ್ದಾಳೆ ಎಂದು ಶ್ರವಣ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿಶೇಷವೆಂದರೆ ಫೆಬ್ರವರಿ 14ರ ಪ್ರೇಮಿಗಳ ದಿನದ (Valentine's day) ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಇಬ್ಬರೂ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಒಂದು ತಿಂಗಳಾದರೂ ಪತ್ತೆಯಿಲ್ಲ
ಫೆಬ್ರವರಿ 14ರ ರಾತ್ರಿ 11:30ರ ವೇಳೆ ನನಗೆ ಏಕಾಏಕಿ ಎಚ್ಚರವಾದಾಗ ಹೆಲೆನ್ ಮನೆಯಲ್ಲಿ ಕಾಣಲಿಲ್ಲ. ಆಕೆಯ ಫೋನ್ಗೆ ಕರೆ ಮಾಡಿದಾಗ ಉತ್ತರ ಬರಲಿಲ್ಲ, ಮನೆಯ ಇತರ ಕೋಣೆಗಳಲ್ಲೂ ಕಾಣಲಿಲ್ಲ. ಮರುದಿನ ಆಕೆಯನ್ನು ಎಲ್ಲಾ ಕಡೆ ಹುಡುಕಿದರೂ ಸಿಗಲಿಲ್ಲ, ಸಂಬಂಧಿಕರಿಗೆ ಕರೆ ಮಾಡಿದರೂ ಯಾವುದೇ ಮಾಹಿತಿ ಸಿಗದ ಕಾರಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ಇನ್ನು ಹೆಲೆನ್ ಮನೆಯಿಂದ ಪರಾರಿಯಾಗಿ ಒಂದು ತಿಂಗಳು ಕಳೆದಿದೆ,. ಇನ್ನೂ ಅವಳ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಹಲವು ಬಾರಿ ಠಾಣೆಗೆ ಬಂದು ಸಿಎಂ ಸಹಾಯವಾಣಿಗೆ ದೂರು ನೀಡಿದರೂ, ಯಾರೂ ಹುಡುಕುವ ಕೆಲಸ ಮಾಡುತ್ತಿಲ್ಲ. ಪತ್ನಿ ಕಾಣೆಯಾದಾಗಿನಿಂದ ತನ್ನ ಸೋದರಳಿಯ ಸತೀಶ್ ಕಾಣುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ