10th Board Examination: ಮನಸ್ಸಿದ್ದರೆ ಮಾರ್ಗ ಅನ್ನೋದಕ್ಕೆ ಇವರೇ ಸಾಕ್ಷಿ, ಮೂರು ಮಕ್ಕಳಿದ್ರೂ SSLC ಪಾಸಾದ ಮಹಾತಾಯಿ!

Board Exam: 20 ವರ್ಷ ವಯಸ್ಸಿನ ಮೂವರು ಮಕ್ಕಳ ತಾಯಿಯಾದ ಸಬ್ರೀನಾ ಖಾಲಿಕ್ ಈ ವರ್ಷದ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಕಾಶ್ಮೀರದಲ್ಲಿ ಶೇಕಡಾ 93 ಅಂಕಗಳನ್ನು ಪಡೆಯುವುದರೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ತಮ್ಮ ಮೂರು ಮಕ್ಕಳೊಂದಿಗೆ ಸಬ್ರೀನಾ

ತಮ್ಮ ಮೂರು ಮಕ್ಕಳೊಂದಿಗೆ ಸಬ್ರೀನಾ

  • Share this:
ಕೆಲವರಿಗೆ ನಾನು ಚೆನ್ನಾಗಿ ಓದಬೇಕು, ಪರೀಕ್ಷೆಯಲ್ಲಿ (Exam) ಒಳ್ಳೆಯ ಅಂಕಗಳನ್ನು ಗಳಿಸಬೇಕು ಮತ್ತು ತರಗತಿಯಲ್ಲಿ ಎಲ್ಲರಿಗಿಂತಲೂ ಮುಂದೆ ಇರಬೇಕು ಅನ್ನೋ ತುಡಿತ ತುಂಬಾನೇ ಇರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ತುಡಿತ ಇದ್ದವರಿಗೆ ಜೀವನದಲ್ಲಿ(Life) ಏನೇ ಅಡೆ-ತಡೆಗಳು ಬಂದರೂ ಅವರು ತಮ್ಮ ಗುರಿಯ (Goal) ಮೇಲಿರುವ ಗಮನವನ್ನು ಸ್ವಲ್ಪವೂ ಆ ಕಡೆ ಈ ಕಡೆ ಆಗಲು ಬಿಡುವುದಿಲ್ಲ ಅಂತ ಹೇಳಬಹುದು. ಇಲ್ಲೊಬ್ಬ ಮಹಿಳೆ (women) ತನ್ನ ವೈವಾಹಿಕ ಜೀವನದ ಒಂಬತ್ತು ವರ್ಷಗಳ ನಂತರ ಅವಳು ತನ್ನ ಮನೆ ಮತ್ತು ಮಕ್ಕಳನ್ನು (Children) ನೋಡಿಕೊಳ್ಳುತ್ತಾ ಮತ್ತೆ ತನ್ನ ಶಾಲಾ ಪುಸ್ತಕಗಳನ್ನು ಹಿಡಿಯಲು ನಿರ್ಧರಿಸಿದಳು ಮತ್ತು ಎಲ್ಲರಿಗೂ ಆಶ್ಚರ್ಯವಾಗುವಂತೆ 10ನೇ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ (Topper) ಸಹ ಆಗಿದ್ದಾರೆ ನೋಡಿ.

20 ವರ್ಷ ವಯಸ್ಸಿನ ಮೂವರು ಮಕ್ಕಳ ತಾಯಿಯಾದ ಸಬ್ರೀನಾ ಖಾಲಿಕ್ ಈ ವರ್ಷದ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಕಾಶ್ಮೀರದಲ್ಲಿ ಶೇಕಡಾ 93 ಅಂಕಗಳನ್ನು ಪಡೆಯುವುದರೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಗಡಿ ಜಿಲ್ಲೆ ಕುಪ್ವಾರದ ನಿವಾಸಿಯಾದ ಸಬ್ರೀನಾ ಅವರು 2013 ರಲ್ಲಿ ಹದಿಹರೆಯದಲ್ಲಿ ಮದುವೆಯಾಗಿದ್ದರಿಂದ ಅವರು ತಮ್ಮ ಅಧ್ಯಯನವನ್ನು ಅರ್ಧಕ್ಕೆ ಬಿಡಬೇಕಾಯಿತು ಎಂದು ಹೇಳಿದರು. "ನಾನು ಬೇಗನೇ ಮದುವೆಯಾದೆ ಮತ್ತು ಅದು ನನ್ನ ನಿರ್ಧಾರವಾಗಿತ್ತು. ನಂತರ ನಾನು ಮನೆಯನ್ನು ನೋಡಿಕೊಳ್ಳಲು ಪ್ರಾರಂಭಿಸಿದೆ ಮತ್ತು ನನ್ನ ಅಧ್ಯಯನದ ಮೇಲೆ ಗಮನ ಹರಿಸಲು ಸಾಧ್ಯವಾಗಲಿಲ್ಲ. ಮಕ್ಕಳು ಹುಟ್ಟಿದ ನಂತರ, ನನಗೆ ಮನೆ ಕೆಲಸ ಜಾಸ್ತಿಯಾಯಿತು" ಎಂದು ಅವರು ಹೇಳಿದರು.

ಕುಟುಂಬದ ಸಹಕಾರ

ಅವರ ಪತಿ ಎಂಎಸ್‌ಸಿ, ಐಟಿ ಮಾಡಿದ್ದಾರೆ ಮತ್ತು ಶ್ರೀನಗರದ ಕಾಲೇಜೊಂದರಲ್ಲಿ ಬೋಧಕರಾಗಿ ಕೆಲಸ ಮಾಡುತ್ತಿದ್ದಾರೆ. "ನಾನು  ನನ್ನ ಅಧ್ಯಯನವನ್ನು ಪುನರಾರಂಭಿಸುವ ಬಗ್ಗೆ ಯೋಚಿಸುತ್ತಿದ್ದೆ ಆದರೆ ಸಂಸಾರದ ಜವಾಬ್ದಾರಿಗಳಿಂದಾಗಿ ಮತ್ತೆ ಓದನ್ನು ಶುರು ಮಾಡುವುದು ಕಷ್ಟಕರವಾಗಿತ್ತು ಎಂದು ಅವರು ಹೇಳಿದರು. ತನ್ನ ಮಕ್ಕಳು ಸ್ವಲ್ಪ ಬೆಳೆದು ಶಾಲೆಗೆ ಹೋಗಲು ಪ್ರಾರಂಭಿಸುತ್ತಿದ್ದಂತೆ ಮತ್ತೆ ಓದನ್ನು ಪ್ರಾರಂಭಿಸುವ ಸಮಯ ಬಂದಿದೆ ಎಂದು ಅವರು ಭಾವಿಸಿದರು. ಅವರ ಹಿರಿಯ ಮಗಳಿಗೆ ಈಗ ಎಂಟು ವರ್ಷ, ಮಧ್ಯದವನಿಗೆ ಆರು ವರ್ಷ ಮತ್ತು ಕಿರಿಯನಿಗೆ ಮೂರು ವರ್ಷ ವಯಸ್ಸು. ಅತ್ತೆ ಮತ್ತು ಮಾವ ಕೂಡ ತುಂಬಾ ಸಹಕರಿಸಿದ್ದಾರೆ. ನನಗಿಂತ ಹೆಚ್ಚು ಉತ್ಸುಕರಾಗಿ ಅವರಿದ್ದರು ಎಂದು ಅವರು ಹೇಳಿದ್ದಾರೆ.

500 ಕ್ಕೆ 467 ಅಂಕಗಳಿಸಿದ ಸಬ್ರಿನಾ

ಸಬ್ರೀನಾ ಅವರು 500 ಕ್ಕೆ 467 ಅಂಕಗಳನ್ನು ಪಡೆದಿದ್ದಾರೆ ಮತ್ತು ಪರೀಕ್ಷೆಗೆ ದಾಖಲಾದ 25,078 ಅಭ್ಯರ್ಥಿಗಳಲ್ಲಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ 8,934 ಅಭ್ಯರ್ಥಿಗಳಲ್ಲಿ A1 ಗ್ರೇಡ್ ಪಡೆದ ಇಬ್ಬರು ಅಭ್ಯರ್ಥಿಗಳಲ್ಲಿ ಇವರು ಒಬ್ಬರಾಗಿದ್ದಾರೆ.

ಸಬ್ರೀನಾ ಅವರು ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸಿದಾಗ ಅಥವಾ ಸಂಜೆ ತನ್ನ ಮನೆಕೆಲಸಗಳನ್ನು ಮುಗಿಸಿಕೊಂಡು ಅಧ್ಯಯನ ಮಾಡುತ್ತಿದ್ದರು. ಯಾವುದೇ ಟ್ಯೂಷನ್ ತೆಗೆದುಕೊಳ್ಳದೆ, ಅವಳ ಸಹೋದರಿ, ಪದವೀಧರರಾಗಿದ್ದ ಮೂವರು ಅತ್ತಿಗೆಯಂದಿರು ಮತ್ತು ಗಂಡನ ಸಹಾಯವನ್ನು ಪಡೆದಿದ್ದರು. "ಎಲ್ಲರೂ ತುಂಬಾ ಬೆಂಬಲ ನೀಡಿದರು. ಆರಂಭದಲ್ಲಿ, ಇದು ಕಷ್ಟವೆಂದು ಅನಿಸುತ್ತಿತ್ತು ಆದರೆ ನಂತರ ನಾನು ದೃಢ ನಿಶ್ಚಯ ಮಾಡಿದೆ" ಎಂದು ಅವರು ಹೇಳಿದರು.

ಇದನ್ನೂ ಓದಿ : 440 ಮೃತದೇಹ ಒಂದೇ ಕಡೆ ಪತ್ತೆ! ರಷ್ಯಾದ ಕ್ರೌರ್ಯಕ್ಕೆ ಇದೇ ಸಾಕ್ಷಿ ಎಂದ ಉಕ್ರೇನ್

"ಮಂಗಳವಾರ ಫಲಿತಾಂಶ ಪ್ರಕಟವಾದ ಒಂದು ದಿನದ ನಂತರ ನಾನು ಪ್ರಥಮ ಸ್ತಾನ ಪಡೆದಿದ್ದೇನೆ ಎಂದು ನನಗೆ ತಿಳಿಯಿತು" ಎಂದು ಅವರು ಹೇಳಿದರು. ಮಹಿಳೆಯರು ತಮ್ಮ ಕನಸುಗಳನ್ನು ನನಸು ಮಾಡುವವರೆಗೂ ನಿಲ್ಲಬಾರದು ಎಂದು ಅವರು ಹೇಳಿದರು. "ನಾನು ಈಗ 11ನೇ ತರಗತಿ ಓದುತ್ತೇನೆ ಮತ್ತು 12ನೇ ತರಗತಿಯ ನಂತರ, ಯಾವ ವಿಷಯವನ್ನು ತೆಗೆದುಕೊಳ್ಳಬೇಕು ಅಂತ ಆಯ್ಕೆ ಮಾಡುತ್ತೇನೆ" ಎಂದು ಹೇಳಿದರು.

ಇದನ್ನೂ ಓದಿ: ಮುಸ್ಲಿಂ ವ್ಯಕ್ತಿಯ ಮನೆ ಅಗೆದಾಗ ಶಂಖ-ತ್ರಿಶೂಲ, ಮೂಳೆ ಪತ್ತೆ: ಮೌಲ್ವಿ ಆಜ್ಞೆ ಪಾಲಿಸಿದವರಿಗೆ ಶಾಕ್!

ಅತ್ತೆಯ ಸಹಕಾರ

ಸಬ್ರೀನಾ ಅವರ ಅತ್ತೆ ರಫೀಕಾ ಬೇಗಂ ಅವರು "ನಾವು ಅವಳಿಗೆ ಅಧ್ಯಯನ ಮಾಡಲು ಹೇಳಿದೆವು ಮತ್ತು ಮನೆಕೆಲಸಗಳಲ್ಲಿ ಅವಳಿಗೆ ಸಹಾಯ ಮಾಡಿದೆವು. ಯಾವುದೇ ಮಹಿಳೆ ಹೆಚ್ಚಿನ ಅಧ್ಯಯನ ಮಾಡಲು ಮತ್ತು ಮದುವೆಯ ನಂತರ ತನ್ನ ಜೀವನವನ್ನು ರೂಪಿಸಲು ಬಯಸಿದರೆ ಅವಳಿಗೆ ನಾವು ಬೆಂಬಲ ನೀಡಬೇಕು" ಎಂದು ಅವರು ಹೇಳಿದರು.
First published: