Missing Story: 20 ವರ್ಷಗಳಿಂದ ಕಾಣೆಯಾಗಿದ್ದ ತಾಯಿ ಪಾಕ್​​ನಲ್ಲಿ ಪ್ರತ್ಯಕ್ಷ! ಮುಂಬೈನಲ್ಲಿರುವ ಮಗಳಿಗೆ ಶಾಕ್

ನನ್ನ ತಾಯಿ 2-4 ವರ್ಷಗಳ ಅವಧಿಗೆ ಆಗಾಗ್ಗೆ ಕತಾರ್‌ಗೆ ಹೋಗುತ್ತಿದ್ದರು. ಆದರೆ ಈ ಬಾರಿ ಆಕೆ ಏಜೆಂಟರ ಸಹಾಯದಿಂದ ಹೋಗಿದ್ದರು, ಹಿಂತಿರುಗಲಿಲ್ಲ. ನಾವು ಆಕೆಯನ್ನು ಹುಡುಕಲು ಪ್ರಯತ್ನಿಸಿದ್ದೇವೆ ಆದರೆ ನಮಗೆ ದೂರು ನೀಡಲು ಸಾಧ್ಯವಾಗದ ಕಾರಣ ಎಲ್ಲಾ ಪ್ರಯತ್ನಗಳು ವ್ಯರ್ಥವಾಯಿತು.

ಕಾಣೆಯಾಗಿದ್ದ ತಾಯಿ

ಕಾಣೆಯಾಗಿದ್ದ ತಾಯಿ

  • Share this:
ಮುಂಬೈ: ಸೋಷಿಯಲ್​ ಮೀಡಿಯಾ (Social Media) ನಿಜಕ್ಕೂ ಕೆಲವೊಮ್ಮೆ ಚಮತ್ಕಾರಗಳನ್ನು ಮಾಡಿಬಿಡುತ್ತೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ. 20 ವರ್ಷಗಳಿಂದ ನಾಪತ್ತೆಯಾಗಿದ್ದ (Missing) ತಾಯಿಯನ್ನು (Mother) ಹುಡುಕಲು ಮುಂಬೈನ ಮಹಿಳೆಗೆ ಸಾಮಾಜಿಕ ಜಾಲತಾಣ ಸಹಾಯ ಮಾಡಿದೆ. 20 ವರ್ಷಗಳಿಂದ ಕಾಣೆಯಾಗಿದ್ದ ತಾಯಿ ಪಾಕಿಸ್ತಾನದ ಸೋಷಿಯಲ್​ ಮೀಡಿಯಾದಲ್ಲಿ ಕಾಣಿಸಿದ್ದು, ಮಗಳ ಅಚ್ಚರಿ, ಸಂತೋಷಕ್ಕೆ ಪಾರವೇ ಇಲ್ಲದಂತೆ ಆಗಿದೆ. ತನ್ನ ತಾಯಿ ಸಿಕ್ಕ ಬಗ್ಗೆ ಮಾತನಾಡಿರುವ ಮುಂಬೈನ ನಿವಾಸಿ ಯಾಸ್ಮಿನ್ ಶೇಖ್, ತನ್ನ ತಾಯಿ ಅಡುಗೆ ಕೆಲಸಕ್ಕಾಗಿ ದುಬೈಗೆ ಹೋಗಿದ್ದರು. ಆದರೆ ಆಕೆ ಹಿಂತಿರುಗಲಿಲ್ಲ. 20 ವರ್ಷಗಳ ನಂತರ ನನ್ನ ತಾಯಿಯ ಬಗ್ಗೆ ಪಾಕಿಸ್ತಾನ ಮೂಲದ ಸೋಷಿಯಲ್​ ಮೀಡಿಯಾ ಅಕೌಂಟ್​​ ಮೂಲಕ ನನಗೆ ತಿಳಿಯಿತು. ಆ ಅಕೌಂಟ್​ನಿಂದ ಪೋಸ್ಟ್​ ಆಗಿದ್ದ ವೀಡಿಯೊದಲ್ಲಿ ನಮ್ಮ ತಾಯಿ ಇದ್ದರು ಎಂದು ಯಾಸ್ಮಿನ್ ಶೇಖ್ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.

ದುಬೈಗೆ ಹೋದವರು ಹಿಂತಿರುಗಿರಲಿಲ್ಲ

ನನ್ನ ತಾಯಿ 2-4 ವರ್ಷಗಳ ಅವಧಿಗೆ ಆಗಾಗ್ಗೆ ಕತಾರ್‌ಗೆ ಹೋಗುತ್ತಿದ್ದರು. ಆದರೆ ಈ ಬಾರಿ ಆಕೆ ಏಜೆಂಟರ ಸಹಾಯದಿಂದ ಹೋಗಿದ್ದರು, ಹಿಂತಿರುಗಲಿಲ್ಲ. ನಾವು ಆಕೆಯನ್ನು ಹುಡುಕಲು ಪ್ರಯತ್ನಿಸಿದ್ದೇವೆ ಆದರೆ ನಮಗೆ ದೂರು ನೀಡಲು ಸಾಧ್ಯವಾಗದ ಕಾರಣ ಎಲ್ಲಾ ಪ್ರಯತ್ನಗಳು ವ್ಯರ್ಥವಾಯಿತು. ನಮ್ಮ ಬಳಿ ಯಾವುದೇ ಪುರಾವೆಗಳಿಲ್ಲದ ಕಾರಣ ಹುಡುಕಲು ಸಾಧ್ಯವಾಗಲಿಲ್ಲ . ತನ್ನ ತಾಯಿ ಹಮೀದಾ ಬಾನು ದುಬೈಗೆ ಅಡುಗೆ ಕೆಲಸ ಮಾಡಲು ಹೋದವರು ಮತ್ತೆ ಕುಟುಂಬವನ್ನು ಸಂಪರ್ಕಿಸಲಿಲ್ಲ ಎಂದು ಶೇಖ್ ಹೇಳಿದರು.

ಸುಳ್ಳು ಹೇಳಿದ್ದ ಏಜೆಂಟ್​

ನನ್ನ ತಾಯಿ ಇರುವಿಕೆಯ ಬಗ್ಗೆ ತಿಳಿದುಕೊಳ್ಳಲು ನಾವು ಏಜೆಂಟ್ ಅನ್ನು ಭೇಟಿ ಮಾಡಲು ಹೋದಾಗ, (ಏಜೆಂಟ್) ನನ್ನ ತಾಯಿ ನಮ್ಮನ್ನು ಭೇಟಿಯಾಗಲು ಅಥವಾ ಮಾತನಾಡಲು ಬಯಸುವುದಿಲ್ಲ ಎಂದು ಹೇಳುತ್ತಿದ್ದರು. ಅವರು ಚೆನ್ನಾಗಿದ್ದಾರೆ ಎಂದು ನಮಗೆ ಭರವಸೆ ನೀಡಿದ್ದರು. ಆದರೆ ತಾನು ಎಲ್ಲಿದ್ದೇನೆ ಎಂದು ಎಲ್ಲಿಯೂ ಬಾಯ್ಬಿಡದಂತೆ ತನ್ನ ತಾಯಿಗೆ ಏಜೆಂಟ್​ ಬೆದರಿಸಿದ್ದರು ಎಂದು ನಮಗೆ ಈಗ ತಿಳಿದು ಬಂದಿದೆ ಎಂದು ಮಗಳು ಹೇಳಿದ್ದಾರೆ.

ಇದನ್ನೂ ಓದಿ: Love Marriage: ಯುದ್ಧ ಪೀಡಿತ ರಾಷ್ಟ್ರದಲ್ಲಿ ಪ್ರೀತಿ ಅರಳಿತು! ಭಾರತಕ್ಕೆ ಬಂದು ಸಪ್ತಪದಿ ತುಳಿದ ಜೋಡಿ

ಗುರುತನ್ನು ಹೇಳಿರುವ ತಾಯಿ

ವೀಡಿಯೊ ನಮ್ಮ ಗಮನಕ್ಕೆ ಬಂದ ನಂತರವೇ ನಮ್ಮ ತಾಯಿ ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಬಗ್ಗೆ ನಮಗೆ ತಿಳಿದುಬಂದಿತು. ಇಲ್ಲದಿದ್ದರೆ  ಆಕೆ ದುಬೈ, ಸೌದಿ ಅಥವಾ ಬೇರೆಡೆ ಇದ್ದಾಳೆ ಎಂದು ಭಾವಿಸಿದ್ದಿರಿ ಎಂದು ಅವರು ಹೇಳಿದರು. ತಾವು ಕಂಡ ವೀಡಿಯೋವನ್ನು ಬಹಿರಂಗಪಡಿಸಿದ ಶ್ರೀಮತಿ ಬಾನು ಅವರ ಸಹೋದರಿ ಶಾಹಿದಾ ಅವರು ತಮ್ಮ ಪತಿ, ಒಡಹುಟ್ಟಿದವರ ಹೆಸರು ಮತ್ತು ನಿವಾಸವನ್ನು ಸರಿಯಾಗಿ ಹೇಳಿದ ನಂತರ ಅವರು ಅವಳನ್ನು ಗುರುತಿಸಿದ್ದಾರೆ ಎಂದು ಹೇಳಿದರು.

ಭಾರತಕ್ಕೆ ಕರೆತರಲು ಸರ್ಕಾರಕ್ಕೆ ಮನವಿ 

ಶೇಖ್ ಅವರ ಸಹೋದರಿ ಮತ್ತು ಮಗಳು ಹಲವು ವರ್ಷಗಳ ನಂತರ ಅವರನ್ನು ಭೇಟಿಯಾಗಿರುವುದು ಪವಾಡವೆಂದು ಭಾವಿಸಿದ್ದಾರೆ. ಸಾಧ್ಯವಾದಷ್ಟು ಬೇಗ ಅವರನ್ನು ಮರಳಿ ಕರೆತರಲು ಸರ್ಕಾರ ಸಹಾಯ ಮಾಡುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮಾನವೀಯತೆ ಮರೆತ ಮನುಜ, ಮಗನ ಶವ ಹೊತ್ತುಕೊಂಡು 25 ಕಿಲೋ ಮೀಟರ್ ಸಾಗಿದ ಅಪ್ಪ, ಅಮ್ಮ!

ಮತ್ತೊಂದು ಕರುಳು ಹಿಂಡುವ ಕಥೆ 

ಉತ್ತರ ಪ್ರದೇಶದ  ಸಂಗಮ್ ನಗರ ಎಂದೇ ಹೆಸರಾಗಿರುವ ಪ್ರಯಾಗ್‌ರಾಜ್‌ನಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ತಂದೆ ತನ್ನ 14 ವರ್ಷದ ಮಗನ ಶವವನ್ನು ಹೆಗಲ ಮೇಲೆ ಹೊತ್ತಿರುವ ಈ ಚಿತ್ರ ಯುಪಿಯ ಆರೋಗ್ಯ ವ್ಯವಸ್ಥೆ ಎಷ್ಟು ಕಳಪೆ ಎಂಬುವುದನ್ನು ಬಹಿರಂಗಪಡಿಸುತ್ತದೆ. ವಾಸ್ತವವಾಗಿ ಹೇಳಬೇಕೆಂದರೆ ಆಸ್ಪತ್ರೆ ಆಡಳಿತ ಅಧಿಕಾರಿಗಳು ಅದೆಷ್ಟು ಅಮಾನವೀಯರೆಂದರೆ, ಅಸಹಾಯಕ ತಂದೆಯೊಬ್ಬ ತನ್ನ ಮಗನ ಶವವನ್ನು ಹೆಗಲ ಮೇಲೆ ಹೊತ್ತು ಬರೋಬ್ಬರಿ 25 ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಸಾಗಿದ್ದಾನೆ. ಈ ವೇಳೆ ದಾರಿಹೋಕರು ಪ್ರೇಕ್ಷಕರಾಗಿಯೇ ಉಳಿದಿದ್ದಾರೆ.
Published by:Kavya V
First published: