Crime News: ಹೆತ್ತ ಕಂದನನ್ನು 10 ದಿನ ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ, ಕೊಲೆಯ ರಹಸ್ಯ ಬೇಧಿಸಿದ್ದು Google!

Baby Killed by Her Mother: ಮಧ್ಯಪ್ರದೇಶದ ಉಜ್ಜಯಿನಿಯ ಕಚ್ರೋಡ್​ನಲ್ಲಿ ತಾಯಿಯೊಬ್ಬಳು ತನ್ನ 3 ತಿಂಗಳ ಮಗಳನ್ನು ಹತ್ಯೆ ಮಾಡಿದ್ದಾಳೆ. ಅಕ್ಟೋಬರ್​ 12 ರಂದು ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ. ಬಳಿಕ ಮಗು ಕಾಣೆಯಾಗಿದೆ ಎಂದು ಮನೆಯವರಿಗೆ ತಿಳಿಸಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Baby Killed by Her Mother:  ಜಗದೊಳಗೆ ಮೊದಲು ಜನಿಸಿದಳು.. ಹುಡುಕಿದರೇ ಮೂಲ ಸಿಗದಯ್ಯ.. ಹೌದು, ತಾಯಿ(Mother) ಅಂದರೆ ದೇವರು. ಆಕೆಯ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರಪಂಚ(World)ದಲ್ಲಿ ಕೆಟ್ಟ ಮಕ್ಕಳಿರುತ್ತಾರೆ ಹೊರತು ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಆದರೆ ಕೆಲವು ಘಟನೆಗಳನ್ನ ನೋಡಿದರೆ ನಿಜಕ್ಕೂ ತಾಯಿಯಾಕೆ ಇಷ್ಟು ಕ್ರೂರಿಯಾಗಿದ್ದಾರೆ ಅನ್ನುವ ಪ್ರಶ್ನೆ ಕಾಡಲಿದೆ.  ಪದಗಳಿಗೆ ಸಿಗದ ಗುಣದವಳು..ಬರೆಯುವುದು ಹೇಗೆ ಇತಿಹಾಸ.. ಬದುಕುವುದಾ ಕಲಿಸೋ ಗುರು ಇವಳು ಎಂಬ ಹಾಡ(Song)ನ್ನು ಕೇಳಿದ್ದೇವೆ. ಆದರೆ ಕೆಲವು ಘಟನೆಗಳಲ್ಲಿ ಮಕ್ಕಳ(Children) ಬದುಕನ್ನೇ ಮುಗಿಸಿಬಿಟ್ಟಿದ್ದಾರೆ. ಇಂತಹದ್ದೊಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ತನ್ನ ಮೂರು ತಿಂಗಳ ಕಂದಮ್ಮ(Baby)ನನ್ನು ತಾಯಿಯೇ ಕೊಂದು ಹಾಕಿದ್ದಾಳೆ. ಏನು ತಿಳಿಯದ ಹಸುಗೂಸು ಈ ಪ್ರಪಂಚವನ್ನೇ ಬಿಟ್ಟು ಹೋಗಿದೆ. ಆಕೆ ಮಗುವನ್ನ ಕೊಲ್ಲಲ್ಲು ಮಾಡಿದ್ದೇನು ಎಂದು ತಿಳಿದರೆ ನಿಮ್ಮ ರಕ್ತ(Blood) ಕುದಿಯುತ್ತದೆ. ನಿಜಕ್ಕೂ ತಾಯಂದಿರು ಇಷ್ಟು ಕ್ರೂರಿಯಾಗಲು ಸಾಧ್ಯನಾ ಎಂಬ ಪ್ರಶ್ನೆ(Question) ಕೂಡ ಮೂಡುತ್ತೆ.

ಮಗುವನ್ನು ಕೊಂದು 10 ದಿನ ನಾಟಕವಾಡಿದ್ದ ತಾಯಿ

ಮಧ್ಯಪ್ರದೇಶದ ಉಜ್ಜಯಿನಿಯ ಕಚ್ರೋಡ್​ನಲ್ಲಿ ತಾಯಿಯೊಬ್ಬಳು ತನ್ನ 3 ತಿಂಗಳ ಮಗಳನ್ನು ಹತ್ಯೆ ಮಾಡಿದ್ದಾಳೆ. ಅಕ್ಟೋಬರ್​ 12 ರಂದು ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ. ಬಳಿಕ ಮಗು ಕಾಣೆಯಾಗಿದೆ ಎಂದು ಮನೆಯವರಿಗೆ ತಿಳಿಸಿದ್ದಾಳೆ. ಮನೆಯವರೆಲ್ಲ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಮಗು ಸಿಗದೇ ಇದ್ದಾಗ ಪೊಲೀಸ್​ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪಕ್ರರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರುಮಾಡಿದ್ದರು. 10 ದಿನಗಳ ಕಾಲ ಪ್ರತಿದಿನ ತಾಯಿ ಠಾಣೆಗೆ ತೆರಳಿ ಮಗು ಹುಡುಕಿಕೊಂಡುವಂತೆ ಕಣ್ಣೀರು ಹಾಕುತ್ತಾ ನಾಟಕವಾಡಿದ್ದಾಳೆ. ನನ್ನ ಮಗು ಸಿಗದೇ ಇದ್ದರೆ ನಾನು ಸತ್ತು ಹೋಗುತ್ತೇನೆ ಎಂದು ನಾಟಕವಾಡಿದ್ದಾಳೆ.

ಇದನ್ನು ಓದಿ :20 ರೂ. ಕದ್ದ ಆರೋಪ; 7 ವರ್ಷದ ಬಾಲಕಿಯನ್ನು ತಳ್ಳುವ ಗಾಡಿಗೆ ಕಟ್ಟಿ ಎಳೆದೊಯ್ದು ಚಿತ್ರಹಿಂಸೆ!

ಮನೆಯ ಮೂರನೇ ಅಂತಸ್ತಿನ ಟ್ಯಾಂಕರ್​ನಲ್ಲಿ ಮಗು ಶವ ಪತ್ತೆ

ಪೊಲೀಸರು ಮಗುವಿಗಾಗಿ ಎಲ್ಲ ಕಡೆ ಹುಡುಕಿದ್ದಾರೆ. ಮನೆಯವರ ಮೇಲೆ ಇರುವ ಅನುಮಾನದಿಂದ ಬಂದು ಮನೆ ಸರ್ಚ್​ ಮಾಡಿದ್ದಾರೆ. ಈ ವೇಳೆ ಮೂರನೇ ಅಂತಸ್ತಿನಲ್ಲಿರುವ ನೀರಿನ ಟ್ಯಾಂಕರ್​ನಲ್ಲಿ 3 ತಿಂಗಳ ಹೆಣ್ಣು ಮಗುವಿನ ಮೃತ ದೇಹ ಪತ್ತೆಯಾಗಿದೆ. ಆದರೆ ಕೊಲೆ ಮಾಡಿದ್ದು ಯಾರು ಎಂಬುಂದು ಪೊಲೀಸರಗೆ ತಲೆ ನೋವಾಗಿತ್ತು. ಯಾಕಂದರೆ ಮನೆಯಲ್ಲಿ ಒಟ್ಟು 4 ಮಂದಿ ಜೊತೆಯಾಗಿ ವಾಸವಿದ್ದರು, ಮಹಿಳೆ ಹಾಗೂ ಆಕೆತ ಪತಿ, ಗಂಡನ ಅಪ್ಪ-ಅಪ್ಪಇವರೆಲ್ಲರೂ ಒಟ್ಟಿಗೆ ಇದ್ದರು. ಹೀಗಾಗಿ ಪೊಲೀಸರಿಗೆ ಎಲ್ಲರ ಮೇಲೆ ಅನುಮಾನ ಮೂಡಿತ್ತು.

ಗೂಗಲ್​ ಕೊಟ್ಟಿತ್ತು ಕೊಲೆಗಾರ್ತಿಯ ಸುಳಿವು

ಎಲ್ಲರನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ  ತಾಯಿ ಸ್ವಾತಿ ಎಂಬುವವರನ್ನ ಪೊಲೀಸರು ಪ್ರಶ್ನೆಗಳನ್ನ ಕೇಳಿದ್ದಾರೆ. ಇದೇ ವೇಳೆ ಆಕೆಯ ಫೋನ್​ ಚೆಕ್​ ಮಾಡಿದ್ದಾರೆ. ಗೂಗಲ್​ ಹಾಗೂ ಯೂಟ್ಯೂಬ್​​ನಲ್ಲಿ ಮಗುವನ್ನು ಕೊಲ್ಲುವುದು ಹೇಗೆ ಎಂಬುದನ್ನು ತಾಯಿ ಸ್ವಾತಿ ಸರ್ಚ್​ ಮಾಡಿದ್ದಾಳೆ. ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸುತ್ತಿದ್ದಂತೆ ನಡೆದ ಘಟನೆಯನ್ನೆಲ್ಲ ತಾಯಿ ಸ್ವಾತಿ ಹೇಳಿದ್ದಾಳೆ. ಪೊಲೀಸರ ಒಂದು ಕ್ಷಣ ದಂಗಾಗಿಹೋಗಿದ್ದಾರೆ. ಇಷ್ಟು ಕ್ರೂರವಾಗಿ ಮಗುವನ್ನು ಸಾಯಿಸಲು ಹೇಗೆ ಮನಸ್ಸು ಬಂತು ಎಂದು ತಾಯಿಯನ್ನು ಬೈದಿದ್ದಾರೆ.

ಇದನ್ನು ಓದಿ : ಅಪ್ರಾಪ್ತ ಹುಡುಗರ ನೀಲಿ ಚಿತ್ರದ ಚಟಕ್ಕೆ ಬಲಿಯಾದ 6 ವರ್ಷದ ಬಾಲಕಿ

ಮಗು ಕೊಲ್ಲಲು ಕಾರಣವೇನು?

ಏನು ಅರಿಯದ ಆ ಪುಟ್ಟ ಕಂದಮ್ಮನನ್ನು ಕೊಲ್ಲಲು ಕಾರಣ ಕೇಳಿದರೆ, ಆಕೆ ನಾನು ನನ್ನ ಗಂಡ ಸಪರೇಟ್​​ ಆಗಿ ಸಂಸಾರ ಮಾಡುವ ಕನಸು ಕಂಡಿದ್ದೇ, ತುಂಬಾ ಸಲ ಗಂಡನ ಬಳಿ ಬೇರೆ ಮನೆ ಮಾಡುವಂತೆ ಹೇಳಿದ್ದೆ. ಆದರೆ ಗಂಡ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ ಹೀಗಾಗಿ ಈ ರೀತಿಯ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ
Published by:Vasudeva M
First published: