Suicide Case: ಸೊಸೆಯ ಪ್ರತಿಭಟನೆಗೆ ಬೇಸತ್ತು ನೇಣಿಗೆ ಶರಣಾದ ಅತ್ತೆ, ಮುಂದಾಗಿದ್ದೇನು?

ಸೊಸೆಯ ಪ್ರತಿಭಟನೆಯಿಂದ ಅವಮಾನಗೊಂಡ ಅತ್ತೆಯ ಪ್ರಾಣತ್ಯಾಗ

ಸೊಸೆಯ ಪ್ರತಿಭಟನೆಯಿಂದ ಅವಮಾನಗೊಂಡ ಅತ್ತೆಯ ಪ್ರಾಣತ್ಯಾಗ

ಸುಜಿತ್ ಪಾಂಡಾ ಹಾಗೂ ತನ್ಮಯಿ ಪಾಂಡಾ ಅವರ ವೈವಾಹಿಕ ಭಿನ್ನಾಭಿಪ್ರಾಯವು ತಾರಕಕ್ಕೇರಿದ್ದು ಪ್ರಸ್ತುತ ನ್ಯಾಯಾಲಯದ ಆಧೀನದಲ್ಲಿದೆ. ಇದರ ನಡುವೆ ವಧು ತನ್ನ ತವರು ಮನೆಯಲ್ಲಿ ಹೆತ್ತವರೊಂದಿಗೆ ವಾಸಿಸುತ್ತಿದ್ದಳು. ಅದಾಗ್ಯೂ ತನ್ಮಯಿ ತನ್ನ ಅತ್ತೆ ಮನೆಯ ಮುಂದೆ ಹತ್ತು ಗಂಟೆಗಳ ಕಾಲ ಸತ್ಯಾಗ್ರಹ ನಡೆಸಿದರು. ಇದರಿಂದ ಅವಮಾನಿತಗೊಂಡು ಅತ್ತೆ ನೇಣಿಗೆ ಶರಣಾಗಿದ್ದಾರೆ.

ಮುಂದೆ ಓದಿ ...
  • Share this:

ತಪಸ್ವಿನಿ ದಾಸ್ ಹಾಗೂ ಆಕೆಯ ಪತಿ (Husband) ಸುಮಿತ್ ಸಾಹು ನಡುವಿನ ವೈವಾಹಿಕ ಭಿನ್ನಾಭಿಪ್ರಾಯವು ಬೆಹರಾಮ್‌ಪುರದಲ್ಲಿ (Behrampur) ತಾರಕಕ್ಕೇರಿದ್ದು ನ್ಯಾಯಕ್ಕಾಗಿ ತಪಸ್ವಿನಿ ತನ್ನ ಅತ್ತೆಯ ಮುಂದೆ ಕೆಲವು ದಿನಗಳ ಕಾಲ ಧರಣಿ ನಡೆಸಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾರೆ. ಇದೇ ರೀತಿ ಪತಿಯ ಮನೆಯವರಿಂದ ಅನ್ಯಾಯಕ್ಕೊಳಗಾದ (Injustice) ಹಾಗೂ ‍ಶೋಷಣೆಗೆ ಒಳಗಾದ ಒಡಿಸ್ಸಾದ ಇತರ ವಿವಾಹಿತ ಮಹಿಳೆಯರಿಗೆ ಈ ಘಟನೆ ಪ್ರೇರೇಪಣೆ ನೀಡಿದ್ದಂತೂ ಸುಳ್ಳಲ್ಲ. ತಪಸ್ವಿನಿ-ಸುಮಿತ್ ವೈವಾಹಿಕ ಭಿನ್ನಾಭಿಪ್ರಾಯದ ಘಟನೆಯ ನಂತರ, ಒಡಿಸ್ಸಾದಾದ್ಯಂತ (Odisha), ವಿಶೇಷವಾಗಿ ಗಂಜಾಂ ಜಿಲ್ಲೆಯಲ್ಲಿ ಇಂತಹುದೇ ಹಲವಾರು ರೀತಿಯ ಘಟನೆಗಳು ಬೆಳಕಿಗೆ ಬಂದಿವೆ.


ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಶರಣಾದ ಅತ್ತೆ 
ನ್ಯಾಯಕ್ಕಾಗಿ ಅನೇಕ ಮಹಿಳೆಯರು ತಮ್ಮ ಅತ್ತೆಯ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಿದ್ದಾರೆ. ಅದಾಗ್ಯೂ ಪ್ರತಿಭಟನೆ ನಡೆಸುತ್ತಿದ್ದ ವಧುವಿನ (ತಪಸ್ವಿನಿ) ಅತ್ತೆ ಸುಷಮಾ ಪಾಂಡ ಆ್ಯಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಈ ಘಟನೆ ವಿಕೋಪಕ್ಕೆ ತಿರುಗಿತು. ಗಂಜಾಂ ನ್ಯಾಕ್ ಸೆಂಟ್ರಲ್ ನಲ್ಲಿ ಈ ಘಟನೆ ನಡೆದಿದೆ.


ಸುಜಿತ್ ಪಾಂಡಾ ಹಾಗೂ ತನ್ಮಯಿ ಪಾಂಡಾ ಅವರ ವೈವಾಹಿಕ ಭಿನ್ನಾಭಿಪ್ರಾಯವು ತಾರಕಕ್ಕೇರಿದ್ದು ಪ್ರಸ್ತುತ ನ್ಯಾಯಾಲಯದ ಆಧೀನದಲ್ಲಿದೆ. ಇದರ ನಡುವೆ ವಧು ತನ್ನ ತವರು ಮನೆಯಲ್ಲಿ ಹೆತ್ತವರೊಂದಿಗೆ ವಾಸಿಸುತ್ತಿದ್ದಳು. ಅದಾಗ್ಯೂ ತನ್ಮಯಿ ತನ್ನ ಅತ್ತೆ ಮನೆಯ ಮುಂದೆ ಹತ್ತು ಗಂಟೆಗಳ ಕಾಲ ಸತ್ಯಾಗ್ರಹ ನಡೆಸಿದರು. ವಿವಾಹ ಸಂದರ್ಭದಲ್ಲಿ ನೀಡಿದ್ದ 200 ಗ್ರಾಂ ತೂಕದ ಚಿನ್ನಾಭರಣ ಹಾಗೂ ವರದಕ್ಷಿಣೆ ಮೊತ್ತವನ್ನು ಹಿಂತಿರುಗಿಸುವಂತೆ ಆಗ್ರಹಿಸಿ ತನ್ಮಯಿ ಪ್ರತಿಭಟನೆ ನಡೆಸಿದ್ದರು. ಹತ್ತು ಗಂಟೆಗಳ ಕಾಲ ಪ್ರತಿಭಟನೆ ನಡೆಸಿ ತನ್ಮಯಿ ಹಿಂತಿರುಗಿದ್ದಾರೆ ಆದರೆ ಪ್ರತಿಭಟನೆಯಿಂದ ಅವಮಾನಿತರಾದ ಸುಷಾಮಾ ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಕುಟುಂಬದವರು ದೂರಿದ್ದಾರೆ.


ಮಾನಸಿಕವಾಗಿ ನೊಂದಿದ್ದ ಸುಷಾಮಾ ಆತ್ಮಹತ್ಯೆಗೆ ನಿರ್ಧಾರ
ಪ್ರತಿಭಟನೆಯಿಂದ ಮಾನಸಿಕವಾಗಿ ನೊಂದಿದ್ದ ಸುಷಾಮಾ ಒತ್ತಡಕ್ಕೆ ಒಳಗಾಗಿದ್ದರು ತಾನು ಸೊಸೆಯಾಗಿ ತಂದಿದ್ದ ವಧುವೇ ನನ್ನನ್ನು ಇಂದು ದೈಹಿಕವಾಗಿ ಅವಮಾನಿಸಿದ್ದಾಳೆ. ಆಕೆ ನೋವು ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಜಿತ್ ಹೇಳಿದ್ದಾರೆ. ಆತ್ಮಹತ್ಯೆಯಂತಹ ಕೃತ್ಯವೆಸಗುವ ಮುನ್ನ ಇಂತಹ ಅಪಮಾನಕ್ಕೊಳಗಾದ ಮೇಲೆ ತಾನು ಬದುಕಿರುವುದು ವ್ಯರ್ಥ ಎಂದು ಆಕೆ ತುಂಬಾ ಅಳುತ್ತಿದ್ದರು ಎಂದು ಸುಜಿತ್ ಹೇಳಿದ್ದಾರೆ.


ಇದನ್ನೂ ಓದಿ: Office Event: ಈತನಿಗಾದ ನಷ್ಟಕ್ಕೆ ಆಫೀಸ್ ಈವೆಂಟ್ ಕಾರಣವಂತೆ! ಸಂಸ್ಥೆಯ ಮೇಲೆಯೇ ಮೊಕದ್ದಮೆ ಹೂಡಿದ ಉದ್ಯೋಗಿ

ಸುಜಿತ್ ಹಾಗೂ ತನ್ಮಯಿ ಡಿಸೆಂಬರ್ 2020 ರಲ್ಲಿ ವಿವಾಹಿತರಾದರು ಹಾಗೂ ಇದು ಪ್ರೇಮ ವಿವಾಹವಾಗಿತ್ತು. ತನ್ಮಯಿಯನ್ನು ಖುಷಿಯಿಂದಲೇ ಆಕೆಯ ಪತಿಯ ಮನೆಯವರು ಬರಮಾಡಿಕೊಂಡಿದ್ದರು. ಆದರೆ ಎರಡು ತಿಂಗಳಲ್ಲಿ ತನ್ಮಯಿ ಮುನಿಸಿಕೊಂಡು ತವರು ಮನೆಗೆ ಹೋದಳು.


ಸುಷಾಮಾ ಸಾವನ್ನಪ್ಪಿರುವ ಹಿನ್ನಲೆಯಲ್ಲಿ ಸುಜಿತ್ ಹೇಳಿಕೆಯನ್ನು ಆಧರಿಸಿ ಎಫ್‌ಐಆರ್ ಅನ್ನು ದಾಖಲಿಸಿಕೊಂಡಿರುವ ಗಂಜಮ್ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಪೊಲೀಸರು ಕೇಸ್ ಅನ್ನು ದಾಖಲಿಸಿಕೊಂಡಿದ್ದು ತನಿಖಾ ತಂಡದವರ ವರದಿಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಗಂಜಮ್‌ನ ಎಸಿಪಿ ಪ್ರದೀಪ್ ಕುಮಾರ್ ದಲಾಯ್ ತಿಳಿಸಿದ್ದಾರೆ.


ಇಂತದ್ದೇ ಮತ್ತಷ್ಟು ಪ್ರಕರಣಗಳು ಬೆಳಕಿಗೆ 
ಘಟನೆಗೆ ಸಂಬಂಧಿಸಿದಂತೆ ತನ್ಮಯಿಯ ಕುಟುಂಬಸ್ಥರ ಪ್ರತಿಕ್ರಿಯೆಯನ್ನು ಪಡೆದುಕೊಳ್ಳಲಾಗಲಿಲ್ಲ. ಇಂತಹುದೇ ಘಟನೆಗಳು ಇದೀಗ ಬೆಳಕಿಗೆ ಬಂದಿದ್ದು ಮಹಿಳೆಯರು/ವಧು ತಮ್ಮ ಅತ್ತೆಯ ವಿರುದ್ಧ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದು ಅವರ ವಿರುದ್ಧ ಪ್ರತಿಭಟನೆಗಳನ್ನು ಕೈಗೊಂಡಿದ್ದಾರೆ. ನ್ಯಾಯ ದೊರಕಿಸಿಕೊಡಲು ವಿಳಂಬವಾಗುತ್ತಿರುವುದು ಇದಕ್ಕೆ ಕಾರಣವೇ ಅಥವಾ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದೇ ಇರುವುದರಿಂದ ಖುದ್ದು ಶೋಷಿತ ಮಹಿಳೆಯರೇ ನ್ಯಾಯಕ್ಕಾಗಿ ಹೋರಾಡುವುದಕ್ಕೆ ಹಾಗೂ ಪ್ರತಿಭಟನೆ ನಡೆಸುವುದಕ್ಕೆ ಕಾರಣವೇ ಎಂಬುದು ತಿಳಿದು ಬಂದಿಲ್ಲ.


ಇದನ್ನೂ ಓದಿ:  Amitabh Bachchan: ಅಮಿತಾಭ್‌ ಬಚ್ಚನ್ ಇವರಿಗೆ ದೇವರಂತೆ, ಅಭಿಮಾನಿ ಮನೆಯಲ್ಲಿ ಬಿಗ್ ಬಿ ಪ್ರತಿಮೆ!

ಈ ಕುರಿತು ಸಾಮಾಜಿಕ ಕಾರ್ಯಕರ್ತೆಯಾಗಿರುವ ಜಯಶ್ರೀ ಹೇಳುವಂತೆ ನೀವು ಸಾಕ್ಷ್ಯಾಧಾರಗಳನ್ನು ಹೊಂದಿದ್ದರೆ ಪುರುಷರ ಮೇಲೆ ಕೇಸು ದಾಖಲಿಸಿ. ಪತಿ ಪತ್ನಿಯರ ಕಲಹದ ಅರಿವೇ ಇಲ್ಲದ ಪೋಷಕರ ಮನೆಯ ಮುಂದೆ ಪ್ರತಿಭಟನೆ ನಡೆಸುವುದೂ ಹಾಗೂ ಅವರನ್ನು ದೋಷಿಗಳೆಂದು ಜರೆಯುವುದು ಸಮರ್ಥನೀಯವಲ್ಲ ಎಂದು ತಿಳಿಹೇಳಿದ್ದಾರೆ.

top videos
    First published: