• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Verdict: ಸೊಸೆಗೆ ಮನೆ ಕೆಲಸ ಚೆನ್ನಾಗಿ ತಿಳಿದಿರಬೇಕು ಎಂದು ಅತ್ತೆ ಹೇಳಿದ್ರೆ ಅದು ಕ್ರೌರ್ಯವಲ್ಲ: ಆಂಧ್ರ ಹೈಕೋರ್ಟ್​

Verdict: ಸೊಸೆಗೆ ಮನೆ ಕೆಲಸ ಚೆನ್ನಾಗಿ ತಿಳಿದಿರಬೇಕು ಎಂದು ಅತ್ತೆ ಹೇಳಿದ್ರೆ ಅದು ಕ್ರೌರ್ಯವಲ್ಲ: ಆಂಧ್ರ ಹೈಕೋರ್ಟ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಮ್ಮೊಮ್ಮೆ ಅತ್ತೆ ಸೊಸೆ ನಡುವೆ ನಡೆಯುವ ಜಗಳಗಳು ಕೋರ್ಟ್ ಮೆಟ್ಟಲೇರಿ ಕೊನೆಗೆ ಆ ವೈವಾಹಿಕ ಜೀವನವೇ ಮುರಿದು ಬೀಳುವ ಅದೆಷ್ಟೋ ಘಟನೆಗಳಿವೆ. ಇದೀಗ ಅದಕ್ಕೆ ಸಂಬಂಧ ಪಟ್ಟ ಹಾಗೆ ಕೋರ್ಟ್​ ಒಂದು ಆದೇಶ ನೀಡಿದೆ.

  • Share this:
  • published by :

ಅತ್ತೆ ಸೊಸೆ ಬಾಂಧವ್ಯವೆಂದರೆ ತಾಯಿ ಮಗಳ (Mother-Daughter)  ಅನುಬಂಧದಂತೆ ಎಂಬುದಾಗಿ ಕಾಣಲಾಗುತ್ತದೆ. ತನ್ನವರನ್ನು ಬಿಟ್ಟು ಪರ ಮನೆಯನ್ನು ಅಂದರೆ ಪತಿಯ ಮನೆಯನ್ನು ಪ್ರವೇಶಿಸುವ ಸ್ತ್ರೀ ಮನೆಯಲ್ಲಿರುವ ಅತ್ತೆಯನ್ನು ತಾಯಿ ಸ್ವರೂಪದಂತೆ ಕಾಣಬೇಕು. ಅಂತೆಯೇ ಅತ್ತೆ ಅಂದರೆ ಪತಿಯ ತಾಯಿ ತನ್ನ ಸೊಸೆಯನ್ನು ಮಗಳಂತೆಯೇ ಪ್ರೀತಿಯಿಂದ ಬರಮಾಡಿಕೊಳ್ಳಬೇಕು ಎಂಬುದು ಶಾಸ್ತ್ರಗಳಲ್ಲಿಯೂ ಉಲ್ಲೇಖವಾಗಿದೆ. ಆದರೆ ಒಮ್ಮೊಮ್ಮೆ ಅತ್ತೆ ಸೊಸೆ ನಡುವೆ ನಡೆಯುವ ಜಗಳಗಳು ಕೋರ್ಟ್ (Court) ಮೆಟ್ಟಲೇರಿ ಕೊನೆಗೆ ಆ ವೈವಾಹಿಕ ಜೀವನವೇ ಮುರಿದು ಬೀಳುವ ಅದೆಷ್ಟೋ ಘಟನೆಗಳಿವೆ.


ಮನೆಗೆಲಸ ಸರಿಯಾಗಿ ಮಾಡಬೇಕು ಎಂದು ಹೇಳುವುದು ಕ್ರೌರ್ಯವಲ್ಲ


ಇದೇ ರೀತಿ ಆಂಧ್ರಪ್ರದೇಶದ ಹೈಕೋರ್ಟ್‌ನಲ್ಲಿ ಇತ್ಯರ್ಥಗೊಂಡಿರುವ ಪ್ರಕರಣದಲ್ಲಿ ಕೂಡ ನ್ಯಾಯಾಧೀಶರು ತೀರ್ಪು ನೀಡಿದ್ದು, ಮನೆಯ ಕೆಲಸ ಕಾರ್ಯಗಳಲ್ಲಿ ಸೊಸೆಯು ಪರಿಪೂರ್ಣಳಾಗಿರಬೇಕು ಅಥವಾ ಗೃಹಕೃತ್ಯಗಳನ್ನು ಸೂಕ್ತವಾಗಿ ಮಾಡಬೇಕು ಎಂದು ಅತ್ತೆ ಹೇಳುವುದು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498 ಎ ಅಡಿಯಲ್ಲಿ ಕ್ರೌರ್ಯವಾಗುವುದಿಲ್ಲ ಎಂದು ತಿಳಿಸಿದೆ.


ಮೇಲ್ಮನವಿದಾರರ ಪತಿ ಹಾಗೂ ಆತನ ತಾಯಿ ಮೃತಳಾದ ಮಹಿಳೆ ಅಂದರೆ ಸೊಸೆಯೊಂದಿಗೆ ಕ್ರೂರವಾಗಿ ನಡೆದುಕೊಂಡಿದ್ದು, ಮನೆಗೆಲಸದಲ್ಲಿ ಆಕೆ ಪರಿಪೂರ್ಣತೆಯನ್ನು ಪ್ರದರ್ಶಿಸಬೇಕೆಂದು ಆಗಾಗ್ಗೆ ಒತ್ತಡ ಹೇರುತ್ತಿದ್ದರು ಎಂಬ ವಾದವನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ.


ಹೊಗಳಿಕೆ ತೆಗಳಿಕೆ ಮನೆಗಳಲ್ಲಿ ಇದ್ದೇ ಇರುತ್ತದೆ


ಸೊಸೆಗೆ ಅತ್ತೆಯಾದವರು ಸರಿಯಾಗಿ ಮನೆಗೆಲಸ ಮಾಡಬೇಕು ಎಂದು ಹೇಳುವುದು ಕ್ರೌರ್ಯ ಅಥವಾ ನಿಂದನೀಯ ಘಟನೆಯಲ್ಲ ಎಂದು ತಿಳಿಸಿರುವ ನ್ಯಾಯಾಲಯ, ಮಾಡುವ ಕೆಲಸದ ಮೇಲೆ ಹೊಗಳಿಕೆ ಹಾಗೂ ತೆಗಳಿಕೆ ಯಾವುದೇ ಮನೆಗಳಲ್ಲಿ ಸಾಮಾನ್ಯವಾಗಿ ನಡೆಯುವ ಘಟನೆಯಾಗಿದೆ ಎಂದು ತಿಳಿಸಿದೆ.


ಇದನ್ನೂ ಓದಿ: ಫ್ಲೈಟ್‌ನಲ್ಲಿ ಹಾರೋ ಕನಸು ನನಸಾಗಿಲ್ಲ, ಅದಕ್ಕಾಗಿ ವಿಮಾನವನ್ನೇ ಮನೆ ಮಾಡ್ಕೊಂಡ! ಈಗ ಈತನಿಗೆ ಸಖತ್ ದುಡ್ಡು ಸಿಗ್ತಿದೆ!


ಮನೆಗೆಲಸಗಳನ್ನು ಅಚ್ಚುಕಟ್ಟಾಗಿ ಮಾಡದೇ ಇರುವುದಕ್ಕೆ ಆಕೆಯನ್ನು ನಿಂದಿಸಲಾಗಿದೆ ಅಥವಾ ದೈಹಿಕವಾಗಿ ಥಳಿಸಲಾಯಿತು ಎಂಬುದಕ್ಕೆ ಹೆಚ್ಚಿನ ಸಾಕ್ಷ್ಯಗಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.


ಮಗಳ ಸಾವಿಗೆ ಅಳಿಯ ಹಾಗೂ ಆತನ ತಾಯಿ ಕಾರಣ


ಏಪ್ರಿಲ್ 2008 ರಲ್ಲಿ ವಿವಾಹವಾಗಿ ಎಂಟು ತಿಂಗಳೊಳಗೆ ಮರಣಹೊಂದಿದ ಸೊಸೆಯ ವರದಕ್ಷಿಣೆ ಸಾವಿನ ಆರೋಪದಡಿಯಲ್ಲಿ ಶಿಕ್ಷೆಗೊಳಗಾದ ತಾಯಿ ಮತ್ತು ಆಕೆಯ ಮಗ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದ್ದು ಅರ್ಜಿದಾರರೊಂದಿಗೆ ವಿವಾಹವಾಗಿ ಎಂಟು ತಿಂಗಳಲ್ಲೇ ತಮ್ಮ ಮಗಳು ಕ್ರೌರ್ಯಕ್ಕೆ ಒಳಗಾಗಿ ಸಾವನ್ನಪ್ಪಿದ್ದಾಳೆ ಎಂದು ದೂರುದಾರರು ಆರೋಪಿಸಿದ್ದಾರೆ.


ತಾಯಿ ಮಗ ಇಬ್ಬರೂ ತಮ್ಮ ಮಗಳನ್ನು ಮೂದಲಿಸುತ್ತಿದ್ದರು ಹಾಗೂ ಕುಟುಂಬದ ಇತರ ಪುತ್ರರ ವಿವಾಹ ಕಾರ್ಯಗಳೊಂದಿಗೆ ವಿವಾಹ ಸಮಾರಂಭ ಮತ್ತು ವಧುವಿನ ಕುಟುಂಬದವರು ಮಾಡಿದ ವ್ಯವಸ್ಥೆಗಳನ್ನು ಹೋಲಿಸಿ ಚುಚ್ಚುಮಾತುಗಳನ್ನಾಡುತ್ತಿದ್ದರು ಎಂದು ದೂರುದಾರರು ತಿಳಿಸಿದ್ದಾರೆ.


ವರದಕ್ಷಿಣೆ ಮತ್ತು ಕ್ರೌರ್ಯಕ್ಕೆ ಸಂಬಂಧಿಸಿದ್ದಲ್ಲ


ಆದರೆ ಈ ವಾದವನ್ನು ತಳ್ಳಿಹಾಕಿದ ನ್ಯಾಯಾಧೀಶರು, ಕುಟುಂಬದ ಇತರ ವಿವಾಹಗಳೊಂದಿಗೆ ನಿಮ್ಮ ಮಗಳ ವಿವಾಹ ಕಾರ್ಯಗಳನ್ನು ಹೋಲಿಸುವುದು ಅಥವಾ ಹೊಸದಾಗಿ ಮದುವೆಯಾಗಿ ಬಂದ ಹುಡುಗಿಗೆ ಮನೆಗೆಲಸಗಳನ್ನು ಪರಿಪೂರ್ಣವಾಗಿ ಮಾಡಬೇಕೆಂಬ ಆದೇಶ ನೀಡುವುದು ಇದ್ಯಾವುದೂ ವರದಕ್ಷಿಣೆ ಮತ್ತು ಕ್ರೌರ್ಯಕ್ಕೆ ಯಾವುದೇ ರೀತಿಯಲ್ಲಿ ಸಂಬಂಧಿತವಾಗಿಲ್ಲ ಅಂತೆಯೇ ಸೆಕ್ಷನ್ 304-ಬಿ ಭಾರತೀಯ ದಂಡ ಸಂಹಿತೆ (IPC) ನಲ್ಲಿ ಇದೇ ರೀತಿ ಉಲ್ಲೇಖಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.


ಸಾಕ್ಷ್ಯಾಧಾರಗಳ ಕೊರತೆ ಇದೆ


ಈ ಎಲ್ಲಾ ಕಾರಣಗಳನ್ನು ವರದಕ್ಷಿಣೆ ಕಿರುಕುಳ ಎಂದು ವ್ಯಾಖ್ಯಾನಿಸಲಾಗುವುದಿಲ್ಲ ಎಂದು ತಿಳಿಸಿರುವ ನ್ಯಾಯಾಲಯ ವರದಕ್ಷಿಣೆ ಮರಣದ ಆರೋಪದಡಿಯಲ್ಲಿ ಮೇಲ್ಮನವಿದಾರರನ್ನು ಶಿಕ್ಷಿಸಲು ದಾಖಲೆಯಲ್ಲಿ ಇರಿಸಲಾದ ಸಾಕ್ಷ್ಯಾಧಾರಗಳು ಕಡಿಮೆಯಾಗಿದೆ ಎಂದು ಪೀಠ ತಿಳಿಸಿದೆ.


ಇದನ್ನೂ ಓದಿ: ಪ್ರೀತ್ಸೆ ಅಂತ ವಿವಾಹಿತೆ ಹಿಂದೆ ಬಿದ್ದ ನಾಲ್ಕು ಮಕ್ಕಳ ತಂದೆ, ಮದುವೆ ಆಗಲ್ಲ ಅಂದಿದ್ದಕ್ಕೆ ಮಾಡಿದ್ದೇನು ಆ ಪಾಪಿ?


ಮೃತ ಮಹಿಳೆ ತನ್ನ ಪತಿ ಹಾಗೂ ಅತ್ತೆಯಿಂದ ದೈಹಿಕ ಹಿಂಸೆಗೆ ಒಳಗಾಗಿದ್ದರೆ, ಆಕೆ ಖಂಡಿತ ಇದನ್ನು ತನ್ನ ನೆರೆಹೊರೆಯವರೊಂದಿಗೆ ಹಂಚಿಕೊಳ್ಳುತ್ತಿದ್ದಳು ಆದರೆ ಇದ್ಯಾವುದನ್ನೂ ಆಕೆ ಮಾಡಲಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.


top videos



    ಆರೋಪಿಗಳು ಮೃತ ಮಹಿಳೆಯನ್ನು ಮನೆಯಿಂದ ಹೊರಗೆ ಹಾಕಿಲ್ಲ, ಅದಲ್ಲದೆ ಮಹಿಳೆ ಆರೋಪಿಗಳಿಂದ ತನಗೆ ತೊಂದರೆಯಾಗಿದೆ ಎಂದು ಸಹೋದರ ಹಾಗೂ ತಾಯಿಯ ಬಳಿ ಯಾವುದೇ ದೂರು ನೀಡಿಲ್ಲ ಎಂಬುದಾಗಿ ನ್ಯಾಯಾಲಯ ತಿಳಿಸಿದೆ.

    First published: