HOME » NEWS » National-international » MOTHER IN LAW ANNOUNCES HER PREGNANCY AT WEDDING OF HER SON STG SKTV

ಮಗನ ಮದುವೆಯಲ್ಲಿ ನಾನು ಗರ್ಭಿಣಿ ಎಂದು ಅನೌನ್ಸ್ ಮಾಡಿದ ತಾಯಿ ! ಹೊಸಾ ಸೊಸೆ ಶಾಕ್​ನಿಂದ ಮೂರ್ಛೆ ಹೋಗೋದೊಂದು ಬಾಕಿ !

ಮದುವೆಯ ದಿನ ವಧು ತಾನು ಪ್ರೆಗ್ನೆಂಟ್ ಎನ್ನುವ ವಿಷಯವನ್ನು ಮದುವೆಗೆ ಬಂದಿದ್ದ ಅತಿಥಿಗಳ ಜೊತೆಗೆ ಹಂಚಿಕೊಳ್ಳಲು ಬಯಸಿದ್ದರು. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ ಅಲ್ಲಿ ನಡೆದದ್ದೇ ಬೇರೆ. ವಧು ತಾನು ಗರ್ಭಿಣಿ ಎಂದು ತಿಳಿಸಲು ತಮ್ಮ ಆರತಕ್ಷತೆಗೆ ಕೆಲವೇ ಕೆಲವು ಆತ್ಮೀಯರನ್ನು ಕರೆದಿದ್ದರು.

news18-kannada
Updated:May 1, 2021, 3:06 PM IST
ಮಗನ ಮದುವೆಯಲ್ಲಿ ನಾನು ಗರ್ಭಿಣಿ ಎಂದು ಅನೌನ್ಸ್ ಮಾಡಿದ ತಾಯಿ ! ಹೊಸಾ ಸೊಸೆ ಶಾಕ್​ನಿಂದ ಮೂರ್ಛೆ ಹೋಗೋದೊಂದು ಬಾಕಿ !
ಸಾಂದರ್ಭಿಕ ಚಿತ್ರ
  • Share this:
Trending Desk: ಮದುವೆ ಅನ್ನೋದು ಪ್ರತಿ ವಧುವಿಗೂ ಅವಳ ಜೀವನದಲ್ಲಿ ವಿಶೇಷವಾದ ದಿನ. ಪ್ರತಿಯೊಬ್ಬರ ಗಮನವೂ ಅವಳ ಮೇಲೆಯೇ ಇರುತ್ತದೆ. ಅಲ್ಲಿರುವ ಪ್ರತಿಯೊಬ್ಬರು ಆಕೆಯನ್ನು ಮುದ್ದುಗರೆಯುವುದು ಆಕೆಗೆ ಇನ್ನಷ್ಟು ಪುಳಕ ನೀಡುತ್ತದೆ. ಅವಳ ಉಡುಗೆಯಿಂದ ನಡಿಗೆಯವರೆಗೂ ಪ್ರತಿಯೊಬ್ಬರ ದೃಷ್ಟಿಯೂ ಆಕೆಯ ಕಡೆಗೆ ಇರುತ್ತದೆ. ಆದರೆ ಇದೇ ಸಮಯದಲ್ಲಿ ಅತ್ತೆ ಏನಾದರೂ ಈ ಎಲ್ಲಾ ಅವಕಾಶವನ್ನು ತನ್ನದಾಗಿಸಿಕೊಂಡ್ರೆ ವಧುವಿನ ಕತೆ ಹೇಗಿರಬೇಡ? ಈಗ ಇಂತಹದ್ದೇ ಒಂದು ಘಟನೆ ನಡೆದಿದೆ.

ಮದುವೆಯ ದಿನ ವಧು ತಾನು ಪ್ರೆಗ್ನೆಂಟ್ ಎನ್ನುವ ವಿಷಯವನ್ನು ಮದುವೆಗೆ ಬಂದಿದ್ದ ಅತಿಥಿಗಳ ಜೊತೆಗೆ ಹಂಚಿಕೊಳ್ಳಲು ಬಯಸಿದ್ದರು. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ ಅಲ್ಲಿ ನಡೆದದ್ದೇ ಬೇರೆ. ವಧು ತಾನು ಗರ್ಭಿಣಿ ಎಂದು ತಿಳಿಸಲು ತಮ್ಮ ಆರತಕ್ಷತೆಗೆ ಕೆಲವೇ ಕೆಲವು ಆತ್ಮೀಯರನ್ನು ಕರೆದಿದ್ದರು. ಈ ಸಮಯದಲ್ಲಿ ಬಹಳ ಖುಷಿಯಿಂದ ವಿಷಯವನ್ನು ಹಂಚಿಕೊಳ್ಳಲು ಮುಂದಾಗಿದ್ದರು. ಆದರೆ ಅದೇ ಸಂದರ್ಭದಲ್ಲಿ ಅತ್ತೆ ತಾನು ಗರ್ಭಿಣಿಯಾಗಿರುವ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ವಿಷಯ ಕೇಳಿ ವಧುವಿಗೆ ಶಾಕ್ ಆಗಿರೋದಷ್ಟೇ ಅಲ್ಲ ನಖ ಶಿಖಾಂತ ಸಿಟ್ಟು ಬಂದಿದೆ.

ವಧು ಮತ್ತು ಆಕೆಯ ಸ್ನೇಹ ವರ್ಗ ಸಾಂಪ್ರಾದಾಯಿಕ ಅನಿಸಿಕೆ ಹಂಚಿಕೊಳ್ಳುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಮಯದಲ್ಲಿ ವರ ಮತ್ತು ವಧು ಊಟಕ್ಕೆ ಕುಳಿತಿದ್ದರು. ಅತ್ತೆ ಇದೇ ಸಂದರ್ಭದಲ್ಲಿ ಮಾತಿಗೆ ನಿಂತಿದ್ದಾರೆ. ಅತ್ತೆ ಏನು ಮಾತನಾಡಬಹುದು ಎನ್ನುವ ಕುತೂಹಲ ಜೊತೆಗೆ ಅದರ ಬಗ್ಗೆ ಸ್ವಲ್ಪವೂ ಸುಳಿವು ಇರಲಿಲ್ಲ. ಈ ಬಗ್ಗೆ ಅತ್ತೆಯೂ ಸೊಸೆಯ ಬಳಿಯಾಗಲಿ, ಮಗನ ಬಳಿಯಾಗಲಿ ಚರ್ಚೆ ನಡೆಸಿರಲಿಲ್ಲ. ಇನ್ನು ಇವರ ಮದುವೆಯಲ್ಲಿ ಅತ್ತೆ ತಾವು ಗರ್ಭಿಣಿಯಾಗಿರುವುದರ ಬಗ್ಗೆ ಈ ಸಂದರ್ಭದಲ್ಲಿ ಹಂಚಿಕೊಳ್ಳುತ್ತಾರೆ ಎನ್ನುವ ಸ್ಪಷ್ಟ ಸಂದೇಶವೂ ಇರಲಿಲ್ಲ.

ಇದನ್ನೂ ಓದಿhttps://kannada.news18.com/photogallery/lifestyle/why-women-get-more-sleepier-than-men-hg-559075.html

ಯಾವಾಗ ಅತ್ತೆ ತಾವು ಗರ್ಭಿಣಿಯಾಗಿರುವುದರ ಬಗ್ಗೆ ಹಂಚಿಕೊಂಡರೋ, ವಧುವಿಗೆ ಬೇಸರ ಮತ್ತು ಸಿಟ್ಟು ಎರಡೂ ಒಟ್ಟಿಗೆ ಬಂದಿದೆ. ಕಡೆಗೆ ವಧು ಗರ್ಭಿಣಿ ಎನ್ನುವ ವಿಷಯವನ್ನು ಹಂಚಿಕೊಳ್ಳಲು ಆಯೋಜಿಸಿದ್ದ ವೇದಿಕೆಯಲ್ಲಿ ವಧು ಗರ್ಭಿಣಿ ಎನ್ನುವ ವಿಚಾರವನ್ನು ಆಕೆ ಹಂಚಿಕೊಳ್ಳಲೇ ಇಲ್ಲ. ಇನ್ನು ಇದೇ ಸಿಟ್ಟಿನಿಂದ ಅತ್ತೆಯ ಜೊತೆಗೆ ಕೆಲವು ದಿನಗಳ ಕಾಲ ಮಾತನಾಡಲಿಲ್ಲವೆಂದು ಹೇಳಿದ್ದಾರೆ. ಅಲ್ಲದೇ ಈ ಘಟನೆಗೆ ಸ್ವಲ್ಪ ಹೆಚ್ಚು ಒತ್ತುಕೊಟ್ಟು, ಅತಿಯಾಗಿ ಪ್ರತಿಕ್ರಿಯಿಸಿ ತಾನೇ ಆ ಸುಂದರ ಘಳಿಗೆಗಳನ್ನು ಹಾಳು ಮಾಡಿಕೊಂಡೆ ಎಂದು ವಧು ಈ ಸಂಪೂರ್ಣ ಘಟನೆಯನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಮದುವೆ ದಿನ ವಧುವಿನ ಜೊತೆಗೆ ಅತ್ತೆಯೂ ಬಿಳಿ ಗೌನ್ ಧರಿಸಿದ್ದರು. ಇದು ಸೊಸೆಗೆ ಕೊಂಚವೂ ಇಷ್ಟವಿರಲಿಲ್ಲ. ಈ ಸಮಯದಲ್ಲಿ ಅಡುಗೆ ಬಡಿಸುವವರೊಬ್ಬರು ಅತ್ತೆಯ ವಸ್ತ್ರದ ಮೇಲೆ ಅಕಸ್ಮಾತ್ ಆಗಿ ಅಡುಗೆ ಚೆಲ್ಲಿ ಅತ್ತೆಯ ಗೌನ್ ಹಾಳಾಯಿತು. ಈ ಕಾರಣಕ್ಕೆ ಸೊಸೆ ಅವರಿಗೆ ಟಿಪ್ಸ್ ಆಗಿ ದೊಡ್ಡ ಮೊತ್ತವನ್ನು ನೀಡಿದ್ದ ಘಟನೆ ಸುದ್ದಿಯಾಗಿತ್ತು.
Published by: Soumya KN
First published: May 1, 2021, 3:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories