ಅಪಹರಣಕಾರರಿಂದ ಮಗುವನ್ನು ಸಿನಿಮೀಯ ಶೈಲಿಯಲ್ಲಿ ರಕ್ಷಿಸಿದ ತಾಯಿ; ವಿಡಿಯೋ ವೈರಲ್

ಮಂಗಳವಾರ ದೆಹಲಿಯಲ್ಲಿ ಈ ಘಟನೆ ನಡೆದಿದೆ. ಬಾಲಕಿಯ ಮಾವ ಉಪೇಂದ್ರ ಈ ಅಪಹರಣದ ಪ್ರಮುಖ ರುವಾರಿ. ಬಾಲಕಿಯನ್ನು ಅಪಹರಿಸಿ, ಆಕೆಯ ಪಾಲಕರಿಂದ ಹಣಕ್ಕೆ ಬೇಡಿಕೆ ಇಡಬಹುದು ಎಂದು ಉಪೇಂದ್ರ ಸಿನಿಮೀಯ ಶೈಲಿಯಲ್ಲಿ ಯೋಚನೆ ಮಾಡಿದ್ದ.

ಅಪಹರಣದ ದೃಶ್ಯ

ಅಪಹರಣದ ದೃಶ್ಯ

 • Share this:
  ನವ ದೆಹಲಿ (ಜು.23): ಮಕ್ಕಳ ರಕ್ಷಣೆ ವಿಚಾರ ಬಂದಾಗ ತಾಯಿ ಏನನ್ನು ಮಾಡಲೂ ಸಿದ್ಧರಿರುತ್ತಾಳೆ ಎಂಬುದು ಈಗ ಮತ್ತೊಮ್ಮೆ ಸಾಬೀತಾಗಿದೆ. ತನ್ನ ಮಗಳನ್ನು ಅಪರಹರಿಸಲು ಬಂದ ಇಬ್ಬರ ಜೊತೆ ಹೋರಾಡಿ ತಾಯಿ 4 ವರ್ಷದ ಕಂದಮ್ಮನ್ನು ರಕ್ಷಣೆ ಮಾಡಲಿದ್ದಾಳೆ. ಈ ದೃಶ್ಯ ನೋಡಲು ದಿಟ್ಟೋ ಸಿನಿಮೀಯ ಶೈಲಿಯಲ್ಲೇ ಇತ್ತು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

  ಮಂಗಳವಾರ ದೆಹಲಿಯಲ್ಲಿ ಈ ಘಟನೆ ನಡೆದಿದೆ. ಬಾಲಕಿಯ ಮಾವ ಉಪೇಂದ್ರ ಈ ಅಪಹರಣದ ಪ್ರಮುಖ ರುವಾರಿ. ಬಾಲಕಿಯನ್ನು ಅಪಹರಿಸಿ, ಆಕೆಯ ಪಾಲಕರಿಂದ ಹಣಕ್ಕೆ ಬೇಡಿಕೆ ಇಡಬಹುದು ಎಂದು ಉಪೇಂದ್ರ ಸಿನಿಮೀಯ ಶೈಲಿಯಲ್ಲಿ ಯೋಚನೆ ಮಾಡಿದ್ದ. ಬಾಲಕಿ ಕಿಡ್ನ್ಯಾಪ್​ ಮಾಡಲು ಇಬ್ಬರನ್ನು ರೆಡಿ ಮಾಡಿದ್ದ.

  ಉಪೇಂದ್ರನಿಂದ ನೇಮಿಸಲ್ಪಟ್ಟ ಇಬ್ಬರು ಮುಖವಾಡ ಧರಿಸಿ, ಬೈಕ್​ ಏರಿ ಹೊರಟಿದ್ದರು. ಆಗತಾನೇ ಬಾಲಕಿ ಹಾಗೂ ಬಾಲಕಿಯ ತಾಯಿ ಅಂಗಡಿಯಿಂದ ಮರಳುತ್ತಿದ್ದರು. ಮುಸುಕುಧಾರಿಗಳನ್ನು ನೋಡಿ ಬಾಲಕಿ ತಾಯಿಗೆ ಭಯವಾಗಿತ್ತು. ನೋಡ ನೋಡುತ್ತಿದ್ದಂತೆ ಬಾಲಕಿಯನ್ನು ಎಳೆದು ಬೈಕ್​ನಲ್ಲಿ ತುಂಬಿಕೊಳ್ಳಲು ಮುಸುಕುಧಾರಿಗಳು ಮುಂದಾಗಿದ್ದರು.

  ಈ ವೇಳೆ ಎಚ್ಚೆತ್ತುಕೊಂಡ ತಾಯಿ ಬೈಕ್​ಅನ್ನೇ ದೂಡಿ ಹಾಕಿದ್ದಾಳೆ. ಓರ್ವ ಓಡಿ ಹೋದರೆ, ಮತ್ತೋರ್ವ ಬೈಕ್​ ಎತ್ತಿಕೊಂಡು ಪರಾರಿಯಾಗಿದ್ದ. ಈ ವೇಳೆ ಓರ್ವ ವ್ಯಕ್ತಿ ಬೈಕ್​ ಅಡ್ಡ ಹಾಕಿ ಆತನನ್ನು ಹಿಡಿಯಲು ಮುಂದಾಗಿದ್ದರೂ ಅದು ಸಾಧ್ಯವಾಗಿಲ್ಲ.  ಬೈಕ್​ ನಂಬರ್​ ಹಾಗೂ ಅವರ ಬ್ಯಾಗ್​ನಲ್ಲಿದ್ದ ವಸ್ತುಗಳನ್ನು ಆಧರಿಸಿ ಅಪಹರಣ ಕಾರರನ್ನು ಹಿಡಿಯಲಾಗಿದೆ. ಈ ವೇಳೆ ಅವರು ಬಾಲಕಿಯ ಮಾವ ಉಪೇಂದ್ರನ ಹೆಸರನ್ನು ಬಾಯ್ಬಿಟ್ಟಿದ್ದಾರೆ. ಉಪೇಂದ್ರನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಅಪಹರಣ ಮಾಡಲು ಪ್ರಯತ್ನಿಸಿದವರಿಗೆ ಒಂದು ಲಕ್ಷ ರೂಪಾಯಿ ಹಣ ನೀಡುವುದಾಗಿ ಉಪೇಂದ್ರ ನಂಬಿಸಿದ್ದ ಎನ್ನಲಾಗಿದೆ.  ಇದನ್ನೂ ಓದಿ: ಕಾಸರಗೋಡಿನಲ್ಲಿ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿ, ಸಮುದ್ರಕ್ಕೆ ಹಾರಿ ಆರೋಪಿ ಪರಾರಿ!

  ಉಪೇಂದ್ರ ಮಗುವಿನ ತಾಯಿಯ ತಮ್ಮ. ಈ ಮೊದಲಿನಿಂದಲೂ ಆತನನ್ನು ಕಂಡರೆ ಆಕೆಗೆ ಆಗುತ್ತಿರಲಿಲ್ಲ. ಈತನಿಗೆ ತುರ್ತಾಗಿ ಹಣ ಬೇಕಿತ್ತು. ಹೀಗಾಗಿ ಬೇರೆ ದಾರಿ ಕಾಣದೆ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ. ಇನ್ನು, ತಾಯಿಯ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಗುವಿನ ರಕ್ಷಣೆಗೆ ತಾಯಿ ಏನನ್ನು ಮಾಡಲೂ ಸಿದ್ಧರಿರುತ್ತಾಳೆ ಎಂಬುದು ಸಾಬೀತಾಗಿದೆ ಎಂದು ಬರೆದುಕೊಂಡಿದ್ದಾರೆ.
  Published by:Rajesh Duggumane
  First published: