HOME » NEWS » National-international » MOTHER FEARS SHE CANT GO BACK TO PERSONAL TRAINER AFTER PICTURE BLUNDER KVD

ಸಣ್ಣಗಾದ ಖುಷಿಯಲ್ಲಿ ಬೆತ್ತಲೆ ಫೋಟೋ ಕಳುಹಿಸಿದ ಮಹಿಳೆ.. ಟ್ರೈನರ್ ಪಾಡು ಫುಲ್ ಕಾಮಿಡಿ!

ನೀವು ಫೋಟೋ ಕಳುಹಿಸಿದ ವೇಳೆ ನಾನು ನನ್ನ ಗರ್ಲ್​​ಫ್ರೆಂಡ್​ ಜೊತೆ ಹೋಟೆಲ್​ನಲ್ಲಿದೆ. ನಿಮ್ಮ ಬೆತ್ತಲೆ ಫೋಟೋಗಳನ್ನು ನೋಡಿ ನನಗೆ ತರಾಟೆಗೆ ತೆಗೆದುಕೊಂಡಿದ್ದಾಳೆ.

Kavya V | news18-kannada
Updated:May 31, 2021, 5:26 PM IST
ಸಣ್ಣಗಾದ ಖುಷಿಯಲ್ಲಿ ಬೆತ್ತಲೆ ಫೋಟೋ ಕಳುಹಿಸಿದ ಮಹಿಳೆ.. ಟ್ರೈನರ್ ಪಾಡು ಫುಲ್ ಕಾಮಿಡಿ!
ಸಾಂದರ್ಭಿಕ ಚಿತ್ರ
  • Share this:
ತೆಳ್ಳಗೆ, ಫಿಟ್​​ & ಫೈನ್​ ಆಗಿ ಕಾಣುವುದು ಈಗ ಯುವಕ-ಯುವತಿಯರ ಆದ್ಯತೆ ಮಾತ್ರ ಆಗಿಲ್ಲ. ಹೆಚ್ಚಿನ ಸಂಖ್ಯೆಯ ಗೃಹಿಣಿಯರು ಸಹ ಜಿಮ್​​ನತ್ತ ಮುಖ ಮಾಡುತ್ತಿದ್ದಾರೆ. ಅದರಲ್ಲೂ ಬಿಫೋರ್​-ಆಫ್​ಟರ್​ ಹುಚ್ಚು ಎಲ್ಲರಲ್ಲೂ ಹೆಚ್ಚಾಗಿದೆ. ಮೊದಲು ಹೇಗಿದ್ದೆ, ಈಗ ಎಷ್ಟು ಚನ್ನಾಗಿ ಆಗಿದ್ದೇನೆ ಎಂಬ ಕಾನ್ಸೆಪ್ಟ್​​​ ಕ್ರೇಜ್​​ ವೈರಲ್​ ಆಗ್ತಿದೆ. Before-After ಫೋಟೋಗಳು, ವಿಡಿಯೋ ರೀಲ್​ಗಳೇ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ತೂಕ ಇಳಿಸಿಕೊಂಡು ಇಲ್ಲವೇ ವ್ಯಾಯಾಮ ಮಾಡುವುದರಿಂದ ಆರೋಗ್ಯ ಲಾಭಗಳಿದ್ದು ಯಾರೂ ಈ ಬಗ್ಗೆ ವ್ಯಂಗ್ಯವಾಡುವ ಅಗತ್ಯವೂ ಇಲ್ಲ. ಕೊರೋನಾ ಬಂದ ಮೇಲಂತೂ ಆರೋಗ್ಯಕ್ಕಿಂತ ದೊಡ್ಡ ಆಸ್ತಿ ಇಲ್ಲ ಅನ್ನೋದು ಎಲ್ಲರಿಗೂ ಮನವರಿಕೆ ಆಗಿದೆ.

ಇಲ್ಲೊಬ್ಬರು ಮಹಿಳೆ ದೇಹ ತೂಕ ಇಳಿಸಿಕೊಂಡು ಫಿಟ್​ ಆಗಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾರೆ. ತನ್ನ ತಾಯಿ ಮಾಡಿಕೊಂಡಿರುವ ಎಡವಟ್ಟನ್ನು ಹರೆಯದ ಮಗಳು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ನಮ್ಮ ಅಮ್ಮ ಮತ್ತೆ ಜೀಮ್​ಗೆ ಹೋಗಲು, ತನ್ನ ಪರ್ಸನಲ್​ ಟ್ರೈನರ್​ನ ಮೀಟ್​ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಬರೆದುಕೊಂಡಿರುವ ಮಗಳು ಕಾಮಿಡಿ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ಇವರ ತಾಯಿ ಕಳೆದ ಕೆಲ ತಿಂಗಳುಗಳಿಂದ ಜಿಮ್​ಗೆ ಸೇರಿಕೊಂಡಿದ್ದಾರಂತೆ. ಮಧ್ಯ ವಯಸ್ಕರಾಗಿರುವ ಮಹಿಳೆ ತೂಕ ಇಳಿಸಿಕೊಂಡು ಫಿಟ್​ ಆಗಿ ಕಾಣುವ ಬಯಕೆ ಹೊಂದಿದ್ದರು. ಇದಕ್ಕಾಗಿ ಜಿಮ್​ಗೆ ಸೇರಿಕೊಂಡು ಪರ್ಸನಲ್​​ ಟ್ರೈನರ್​ನ ಕೂಡ ನೇಮಿಸಿಕೊಂಡಿದ್ದರು. ನಿಯಮಿತವಾಗಿ ವ್ಯಾಯಾಮ, ಡಯೆಟ್​ನಿಂದ ತೂಕವನ್ನು ಇಳಿಸಿಕೊಂಡಿದ್ದರು. ಮೊನ್ನೆ ಬೆಳಗ್ಗೆ ಎದ್ದ ಕೂಡಲೇ ತೂಕ ನೋಡಿಕೊಂಡ ತಾಯಿಗೆ ಅಚ್ಚರಿ ಕಾದಿತ್ತು. ಅಂದುಕೊಂಡಿದ್ದಕ್ಕಿಂತ ಹೆಚ್ಚು ಕೆಜಿಗಳಷ್ಟು ತೂಕವನ್ನು ಇಳಿಸಿಕೊಂಡಿದ್ದರು. ಖುಷಿಯಿಂದ ಕೂಡಲೇ ತಮ್ಮ ಜಿಮ್​ ಟ್ರೈನರ್​ಗೆ ಮೆಸೇಜ್​ ಮಾಡಿದ್ದಾರೆ.

ತೂಕ ಇಳಿಸಿಕೊಂಡ ಮಹಿಳೆಯನ್ನು ಪ್ರಶಂಸಿಸಿದ ಜಿಮ್​ ಟ್ರೈನರ್​​ ಎಷ್ಟು ಇಂಚು ತೂಕ ಕಡಿಮೆ ಆಗಿದೆ ಎಂಬ ಬಗ್ಗೆ ಫೋಟೋ ತೆಗೆದುಕೊಳ್ಳಿ. ಮೊದಲು ಎಷ್ಟು ತೂಕವಿದ್ದಿರಿ,ಈಗ ತೂಕ ಕಳೆದುಕೊಂಡು ಹೇಗೆ ಕಾಣುತ್ತಿದ್ದೀರಿ ಎಂಬುದು ಗೊತ್ತಾಗುತ್ತೆ ಎಂದು ಟ್ರೈನರ್​​​ ತಿಳಿಸಿದ್ದಾರೆ. ಸಣ್ಣಗಾದ ಖುಷಿಯಲ್ಲಿದ್ದ ಮಹಿಳೆ ಬಟ್ಟೆ ತೆಗೆದು ಒಳ ಉಡುಪಲ್ಲಿರುವ ಫೋಟೋಗಳನ್ನು ತೆಗೆದು ಕೂಡಲೇ ಟ್ರೈನರ್​ಗೆ ಕಳುಹಿಸಿದ್ದಾರೆ.

ಇದನ್ನೂ ಓದಿ: ದಪ್ಪಗಾಗಿದ್ದೀಯ ಅಂತೇಳಿ ಬೆಸ್ಟ್ ಫ್ರೆಂಡ್​​ನ ಮದುವೆ ಪಾರ್ಟಿಯಿಂದ ದೂರವಿಟ್ಟ ವಧು.. ನೆಟ್ಟಿಗರಿಂದ ಛೀಮಾರಿ!

ಮಹಿಳೆಯ ಬೆತ್ತಲೆ ಫೋಟೋಗಳನ್ನು ನೋಡುತ್ತಲೇ ಟ್ರೈನರ್​ ಬೆಚ್ಚಿ ಬಿದ್ದಿದ್ದಾನೆ. ಅಯ್ಯೋ ಮೇಡಂ, ಫೋಟೋ ತೆಗೆದುಕೊಳ್ಳಿ ಎಂದು ತಿಳಿಸಿದೆ. ಒಳ ಉಡುಪಿನಲ್ಲಿರುವ ಫೋಟೋಗಳನ್ನು ನನಗೆ ಕಳುಹಿಸಿ ಎಂದು ಕೇಳಿಲ್ಲ. ನಾನು ಟ್ರೈನ್​​ ಮಾಡುವ ಯಾವ ವ್ಯಕ್ತಿಗೂ ಬೆತ್ತಲೆ ಫೋಟೋ ಕಳುಹಿಸಿ ಎಂದು ನಾನು ಕೇಳಲ್ಲ. ಅದು ನನ್ನ ವೃತ್ತಿಪರತೆ. ಫೋಟೋ ತೆಗೆದುಕೊಂಡು ನೀವೇ ಪರೀಕ್ಷಿಸಿಕೊಳ್ಳಿ ಎಂದಷ್ಟೇ ನಾನು ಸಲಹೆ ನೀಡಿದೆ ಎಂದು ಮಹಿಳೆಗೆ ಪ್ರತಿಕ್ರಿಯಿಸಿದ್ದಾರೆ.

ಟ್ರೈನರ್​ ರಿಪ್ಲೈ ನೋಡಿದ ಮಹಿಳೆ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಅಯ್ಯೋ ತಾನೇನು ಮಾಡಿದೆ ಎಂದು ಪೆಚ್ಚಾಗಿದ್ದಾರೆ. ಇಷ್ಟೇ ಅಲ್ಲದೇ ಟ್ರೈನರ್​ ಮತ್ತೆ ಮೆಸೇಜ್​ ಕಳುಹಿಸಿದ್ದಾನೆ. ನೀವು ಫೋಟೋ ಕಳುಹಿಸಿದ ವೇಳೆ ನಾನು ನನ್ನ ಗರ್ಲ್​​ಫ್ರೆಂಡ್​ ಜೊತೆ ಹೋಟೆಲ್​ನಲ್ಲಿದೆ. ನಿಮ್ಮ ಬೆತ್ತಲೆ ಫೋಟೋಗಳನ್ನು ನೋಡಿ ನನಗೆ ತರಾಟೆಗೆ ತೆಗೆದುಕೊಂಡಿದ್ದಾಳೆ. ಯಾರು ಆಕೆ, ನೀನಗೇಕೆ ನ್ಯೂಡ್​ ಫೋಟೋ ಕಳುಹಿಸಿದ್ದಾಳೆ. ಜಿಮ್​ ಟ್ರೈನರ್​ಗೆ ಎಲ್ಲರೂ ಹೀಗೆ ಬೆತ್ತಲೆ ಫೋಟೋ ಕಳಹಿಸಿತ್ತಾರಾ ಎಂದು ನನ್ನ ಗರ್ಲ್​ಫ್ರೆಂಡ್​ ಜಗಳ ಆಡುತ್ತಿದ್ದಾಳೆ ಎಂದು ತಿಳಿಸಿದ್ದಾನೆ.ತನ್ನ ಯಡವಟ್ಟಿನಿಂದ ಇಷ್ಟೆಲ್ಲಾ ಆಗಿದಕ್ಕೆ ಮಹಿಳೆ ಕಕ್ಕಾಬಿಕ್ಕಿಯಾಗಿದ್ದಾರೆ. ಮತ್ತೆ ಜಿಮ್​ಗೆ ಹೋಗಲು ಮುಜುಗರವಾಗುತ್ತಿದೆ. ಮತ್ತೆ ನನ್ನ ಟ್ರೈನರ್​ ಜೊತೆ ಮಾತನಾಡಲು ಆಗುತ್ತಿಲ್ಲ ಎಂದು ಮಗಳ ಬಳಿ ಎಲ್ಲವನ್ನೂ ಮಹಿಳೆ ಹೇಳಿಕೊಂಡಿದ್ದಾರೆ. ಅಮ್ಮನ ಜಿಮ್​ ಕಥೆ ಹೇಳಿದ ಮಗಳು ತಮಾಷೆಯ ಸಂಗತಿಯನ್ನು ಎಲ್ಲರೊಂದಿಗೂ ಹಂಚಿಕೊಂಡಿದ್ದಾಳೆ.
Published by: Kavya V
First published: May 31, 2021, 5:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories