ರಾಜಸ್ಥಾನ: ಮದುವೆ (Marriage) ಅಂದರೇನೇ ಎಲ್ಲರಿಗೂ ಸಂಭ್ರಮ. ಅದರಲ್ಲೂ ಮಗನ (Son) ಮದುವೆ ಅಂದರೆ ಕೇಳಬೇಕಾ? ಅಮ್ಮಂದಿರಿಗೆ (Mother) ಸ್ವಲ್ಪ ಜಾಸ್ತಿಯೇ ಎನಿಸುವಷ್ಟು ಸಂಭ್ರಮ. ರಾಜಸ್ಥಾನದಲ್ಲಿಯೂ (Rajasthan) ಹಾಗೇ, ಮಗನ ಮದುವೆ ಅಂತ ಅಮ್ಮ ಹೆಚ್ಚು ಹೆಚ್ಚು ಸಂಭ್ರಮದಲ್ಲೇ ಇದ್ದಳು. ದೇಹದಲ್ಲಿ (Body) ಏನೋ ಆಗುತ್ತಿದ್ದರೂ ಲೆಕ್ಕಿಸದೇ ಹುರುಪಿನಿಂದ ಓಡಾಡುತ್ತಲೇ ಇದ್ದಳು. ಮದುವೆ ಅಂತ ಡಿಜೆ (DJ) ಪಾರ್ಟಿ (Party) ಬೇರೆ ಇತ್ತು. ಅದರಲ್ಲೂ ಈ ಅಮ್ಮ ಭಾಗಿಯಾಗಿದ್ದಳು. ಮಗ ಹಾಗೂ ಸಂಬಂಧಿಕರೊಂದಿಗೆ ಹಾಡಿದಳು (Singing), ಕುಣಿದಳು (Dancing). ಕೊನೆಗೆ ಕುಣಿಯುತ್ತಲೇ ಕುಸಿದು ನೆಲಕ್ಕೆ ಬಿದ್ದಳು. ಆದರೆ ಆ ಅಮ್ಮ ಮತ್ತೆಂದೂ ಮೇಲೇಳಲೇ ಇಲ್ಲ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಎಲ್ಲಿ? ಸಂಭ್ರಮದಿಂದ ಕುಣಿಯುತ್ತಿದ್ದ ತಾಯಿಗೆ ಏನಾಯ್ತು? ಇಲ್ಲಿದೆ ಓದಿ ನಿಮ್ಮ ಹೃದಯ ಕಲಕುವ ಸ್ಟೋರಿ…
ರಾಜಸ್ಥಾನದಲ್ಲಿ ನಡೆಯಿತು ಹೃದಯ ವಿದ್ರಾವಕ ಘಟನೆ
ರಾಜಸ್ಥಾನ ರಾಜ್ಯದ ಅಲ್ವಾರ್ ಜಿಲ್ಲೆಯ ಪುಟ್ಟ ಪಟ್ಟಣವೊಂದರಲ್ಲಿ ಇಂಥದ್ದೊಂದು ಘಟನೆ ನಡೆದಿದೆ. 55 ವರ್ಷದ ನೀಲಂ ಎಂಬ ಮಹಿಳೆ ತನ್ನ ಮಗನ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಲೇ ಕುಸಿದು ಬಿದ್ದಿದ್ದಾರೆ. ಬಳಿಕ ಮಗನ ತೋಳಿನಲ್ಲೇ ಪ್ರಾಣ ಬಿಟ್ಟಿದ್ದಾರೆ.
ಡಿಜೆ ಮ್ಯೂಸಿಕ್ಗೆ ಕುಣಿಯುತ್ತಲೇ ಕುಸಿದು ಬಿದ್ದರು!
ನೀಲಂ ಅವರು ಡಿಜೆ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ನೀಲಂ ಅವರ ಮಗ ನೀರಜ್ ಎಂಬುವರ ಮದುವೆ ಇತ್ತು. ಹೀಗಾಗಿ ನೆಂಟರೆಲ್ಲ ಸೇರಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು.
ಮದುವೆ ಮೆರವಣಿಗೆ ಬರುತ್ತಿದ್ದ ವೇಳೆ ಡಿಜೆ ಸಾಂಗ್ ಹಾಕಿದ್ದರು. ಈ ಸಂಭ್ರಮದಲ್ಲಿ ವಧುವಿನ ತಾಯಿಯೂ ಕೂಡ ನರ್ತಿಸುತ್ತಿದ್ದರು. ಆದರೆ ನೀಲಂ ಅವರು ನೃತ್ಯ ಮಾಡುವಾಗ ಏಕಾಏಕಿ ಮಗನ ತೋಳುಗಳ ಮೇಲೆ ಕುಸಿದು ಬಿದ್ದಿದ್ದಾರೆ.
ಇದನ್ನೂ ಓದಿ: Tragedy: ಮಸಣವಾದ ಮದುವೆ ಮನೆ, ಆಕಸ್ಮಿಕವಾಗಿ ಬಾವಿಗೆ ಬಿದ್ದು 13 ಮಹಿಳೆಯರು ಸಾವು
ಮಗನ ತೋಳಿನಲ್ಲೇ ಪ್ರಾಣ ಬಿಟ್ಟ ತಾಯಿ
ನೀಲಂಗೆ ಏನೋ ಆದಂತಾಗಿ ಮಗನ ತೋಳನ್ನು ಆಸರೆಗಾಗಿ ಹಿಡಿದಿದ್ದಾರೆ. ಬಳಿಕ ಕೆಳಕ್ಕೆ ಕುಸಿದು, ನೆಲದ ಮೇಲೆ ಬಿದ್ದಿದ್ದಾರೆ. ಗಾಬರಿಗೊಂಡ ಮಗ ನೀರಜ್, ಅವರನ್ನು ಎತ್ತಿ ತಮ್ಮ ತೋಳುಗಳ ಮೇಲೆ ಮಲಗಿಸಿಕೊಂಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ನೀಲಂ ಕೊನೆಯುಸಿರೆಳೆದಿದ್ದರು ಎನ್ನಲಾಗಿದೆ.
ಸಾಮಾಜಿ ಜಾಲತಾಣಗಳಲ್ಲಿ ವಿಡಿಯೋ ವೈರಲ್
ಇದೇ ಫೆಬ್ರವರಿಯಲ್ಲಿ ಘಟನೆ ನಡೆದಿದೆ. ನೀರಜ್ ಅವರ ಮದುವೆಯ ಮೆರವಣಿಗೆಯು ಚಿಕಾನಿ ಎಂಬ ಗ್ರಾಮದಲ್ಲಿರುವ ಅವರ ಮನೆಯಿಂದ ಮರುದಿನ ಮದುವೆ ನಡೆಯಲಿರುವ ಅಲ್ವಾರ್ ಜಿಲ್ಲೆಯ ಕಿಶನ್ಗಢ್ ಬಾಸ್ ಪ್ರದೇಶದವರೆಗೆ ನಡೆಯುತ್ತಿತ್ತು. ಈ ವೇಳೆ ದುರ್ಘಟನೆ ಸಂಭವಿಸಿದೆ.
20 ಸೆಕೆಂಡ್ ಅಷ್ಟೇ ಡ್ಯಾನ್ಸ್ ಮಾಡಿದ್ದ ನೀಲಂ
ನೀಲಂ ಅವರು ಕೇವಲ 20 ಸೆಕೆಂಡುಗಳ ಕಾಲ ಅಷ್ಟೇ ಮಗನೊಂದಿಗೆ ನೃತ್ಯ ಮಾಡಿದ್ದಾರೆ. ಬಳಿಕ ಕುಸಿದು ಬಿದ್ದಿದ್ದಾರೆ. ಇಷ್ಟಾಗುತ್ತಿದ್ದಂತೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಷ್ಟರಲ್ಲಾಗಲೇ ನೀಲಂ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ವಿಡಿಯೋ ನೋಡಿ:
ನೀಲಂಗೆ ಮೊದಲೇ ಇತ್ತಾ ಹೃದಯ ಸಂಬಂಧಿ ಕಾಯಿಲೆ?
ನೀಲಂ ಅವರಿಗೆ ಮೊದಲೇ ಹೃದಯ ಸಂಬಂಘಧಿ ಕಾಯಿಲೆ ಇತ್ತು ಅಂತ ಎಲ್ಲರೂ ಹೇಳುತ್ತಿದ್ದಾರೆ. ಆದರೆ ಅದೇನು ಸೀರಿಯಸ್ ಆಗಿರಲಿಲ್ಲ. ಸಣ್ಣ ಪ್ರಮಾಣದಲ್ಲಿ ತೊಂದರೆ ಇದ್ದು, ಅದಕ್ಕೆ ಔಷಧಿ ತೆಗೆದುಕೊಳ್ಳುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: Shocking News: ಬಿಸಿ ಸಾಂಬಾರ್ ಪಾತ್ರೆಯಲ್ಲಿ ಬಿದ್ದ ಮಗು, Birthday ದಿನವೇ ಕಣ್ಮುಚ್ಚಿದ ಕಂದಮ್ಮ!
ಸಂಭ್ರಮವಿದ್ದ ಮನೆಯಲ್ಲಿ ಸೂತಕ
ತಾಯಿ ಸಾವಿನಿಂದ ಇಡೀ ಮನೆಯಲ್ಲಿ ಸೂತಕ ಆವರಿಸಿದೆ. ಸದ್ಯ ಮದುವೆಯನ್ನು ನಿಲ್ಲಿಸಲಾಗಿದೆ. ಮದುವೆ ಸಂಭ್ರಮದಲ್ಲಿದ್ದ ಮಗ ತಾಯಿಯ ಅಂತ್ಯಸಂಸ್ಕಾರ ಮಾಡಿದ್ದಾನೆ. ವಿಚಾರ ತಿಳಿದ ಸಂಬಂಧಿಕರು, ಗ್ರಾಮಸ್ಥರು, ವಿಡಿಯೋ ನೋಡಿದ ಜನರೆಲ್ಲ ಕಣ್ಣೀರಿಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ