ಹೈದರಾಬಾದ್: 2 ವರ್ಷದ ಹಿಂದೆ ಕೊರೊನಾ (Corona) ಮಹಾಮಾರಿಗೆ ನಲುಗಿ ಹೋಗಿದ್ದ ಭಾರತ (India) ದೇಶ ಇದೀಗ ಸಹಜಕ್ಕೆ ಬಂದಿದೆ. ಈ ನಡುವೆ 2 ವರ್ಷಗಳ ಹಿಂದೆ ಇಡೀ ಪ್ರಪಂಚಕ್ಕೆ ವಕ್ಕರಿಸಿದ ಕೊರೊನಾ ಭಾರತಕ್ಕೂ ಬೆಂಬಿಡದೇ ಕಾಡಿತ್ತು. ಇನ್ನೂ ಕೊರೊನಾದಿಂದ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡು. ದಿನಕ್ಕೆ ಸಾವಿರಾರು ಕೇಸ್ಗಳು ದಾಖಲಾಗಿತ್ತು. ಸ್ಮಶಾನಗಳಲ್ಲಿ ಮೃತದೇಹಗಳ ಮರಣ ಮೃದಂಗವೇ ನಡೆದಿತ್ತು. ಆಸ್ಪತ್ರೆಯಲ್ಲಿ (Hospital) ಬೆಡ್ (BED) ಸಿಗದೇ ಜನ ಕ್ಯೂನಲ್ಲಿ ನಿಂತಿದ್ದರು. ಆಕ್ಸಿಜನ್ (Oxygen) ಸಿಗದೇ ನಡು ರಸ್ತೆಯಲ್ಲಿಯೇ ಅದೆಷ್ಟೋ ಮಂದಿ ನರಳಿ, ನರಳಿ ಸತ್ತರು. ಎಷ್ಟೋ ಜನ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡು ಅನಾಥರಾದರು. ಚಿಕ್ಕವಯಸ್ಸಿನಲ್ಲಿಯೇ ಮಕ್ಕಳು ತಂದೆ, ತಾಯಿಯನ್ನು ಕಳೆದುಕೊಂಡು ಬೀದಿ ಪಾಲಾದರು. ಈ ಎಲ್ಲಾ ರೀತಿಯ ನರಕ ಸೃಷ್ಟಿಸಿದ ಕೊರೊನಾಗೆ ಹೆದರಿ ಕಳೆದ 2 ವರ್ಷಗಳಿಂದ ತಾಯಿ (Mother) ಮತ್ತು ಮಗಳು (Daughter) ಮನೆಯಲ್ಲಿಯೇ ಲಾಕ್ ಆಗಿರುವ ಘಟನೆಯೊಂದು ಹೈದರಾಬಾದ್ನಲ್ಲಿ (Hydrabad) ಬೆಳಕಿಗೆ ಬಂದಿದೆ.
2 ವರ್ಷದಿಂದ ರಸ್ತೆ ಮುಖ ನೋಡದ ತಾಯಿ-ಮಗಳು
ಹೌದು, ಕೊರೊನಾ ಸಮಯದಲ್ಲಿ ಸರ್ಕಾರ ಲಾಕ್ಡೌನ್ ಘೋಷಿಸಿ ಜನರನ್ನು ಮನೆಯಲ್ಲಿಯೇ ಇರಲು ಸೂಚಿಸಿತ್ತು. ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಈ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಆದರೆ ಕೊರೊನಾ ಮುಗಿದು ವರ್ಷವಾಗುತ್ತಿದೆ. ಜನ ಸಹಜ ಜೀವನದತ್ತ ಮರಳಿದ್ದಾರೆ. ಹೀಗಿದ್ದರೂ ಆಂಧ್ರ ಪ್ರದೇಶದಲ್ಲಿ 46 ವರ್ಷದ ತಾಯಿ ಮತ್ತು 21 ವರ್ಷದ ಮಗಳು ಮಾತ್ರ ಕೊರೊನಾಗೆ ಹೆದರಿ ಕಳೆದ 2 ವರ್ಷಗಳಿಂದ ರಸ್ತೆ ಮುಖ ನೋಡದೇ ಮನೆಯಲ್ಲಿಯೇ ವನವಾಸ ಅನುಭವಿಸುತ್ತಿದ್ದಾರೆ.
ಮನೆಯಲ್ಲೇ ಇರೋ ಮೂಲಕ ಮಾನಸಿಕವಾಗಿ ಕುಗ್ಗಿರುವ ಅಮ್ಮ-ಮಗಳು
ಕೊರೊನಾಗೂ ಮುನ್ನ ಈ ತಾಯಿ, ಮಗಳು ಇಬ್ಬರು ಎಲ್ಲರೊಂದಿಗೆ ಸಾಮಾನ್ಯವಾಗಿ ಬೆರೆಯುತ್ತಿದ್ದರು, ಮಾತನಾಡುತ್ತಿದ್ದರು ಮತ್ತು ಕೆಲಸಕ್ಕೆ ಸಹ ಹೋಗುತ್ತಿದ್ದರು. ಆದರೆ ಕೊರೊನಾ ಲಗ್ಗೆ ಇಟ್ಟಿದ್ದೆ ತಡ ಕೊರೊನಾಗೆ ಹೆದರಿ ಮನೆಯಲ್ಲಿಯೇ ಇರುವ ಮೂಲಕ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.
ಗಂಡ ಎಷ್ಟೇ ಬುದ್ಧಿ ಹೇಳಿದ್ರೂ ಕೇಳ್ತಿಲ್ಲ
2 ವರ್ಷದಿಂದ 4 ಗೋಡೆಯ ಮಧ್ಯೆಯೇ ಬಂಧಿಯಾಗಿದ್ದವರು ಮನೆಯಿಂದ ಹೊರಗೆ ಬರುತ್ತಲೇ ಇಲ್ಲ. ಕೊರೊನಾ ಹೋಗಿದೆ ಎಂದು ಅದೆಷ್ಟೇ ಬಾರಿ ಮಹಿಳೆಗೆ ಗಂಡ ಬುದ್ಧಿ ಹೇಳಿದ್ದರೂ. ಆತನ ಮಾತನ್ನು ಕೇಳುವ ಸ್ಥಿತಿಯಲ್ಲಿ ತಾಯಿ, ಮಗಳು ಇಬ್ಬರೂ ಇಲ್ಲ. ಕೊನೆಗೆ ಇದರಿಂದ ಬೇಸತ್ತ ವ್ಯಕ್ತಿ ಹೀಗೆ ಆದರೆ ಹೆಂಡತಿ ಮತ್ತು ಮಗಳು ಎಲ್ಲಿ ಕೈ ತಪ್ಪಿ ಹೋಗುತ್ತಾರೋ ಎಂದು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ:Avatar 2: ಆಂಧ್ರದಲ್ಲಿ ‘ಅವತಾರ್ 2’ ನೋಡುವಾಗ ವ್ಯಕ್ತಿ ಸಾವು
ನಡೆದಿದ್ದನ್ನೆಲ್ಲಾ ಪೊಲೀಸರ ಮುಂದೆ ವ್ಯಕ್ತಿ ವಿವರಿಸಿದ ನಂತರ, ಪೊಲೀಸರು ವೈದ್ಯರ ಜೊತೆಗೆ ಆತನ ಮನೆಗೆ ಭೇಟಿ ನೀಡಿದ್ದಾರೆ. ಬಳಿಕ ಇಬ್ಬರ ಹತ್ತಿರ ಮಾತನಾಡಿದ ವೈದ್ಯರು ಕೊರೊನಾದಿಂದ ತಾಯಿ ಮಗಳು ಇಬ್ಬರೂ ಖಿನ್ನತೆಗೆ ಒಳಗಾಗಿದ್ದಾರೆ. ಎಷ್ಟೇ ಬಾರಿ ತಿಳಿಸಿ ಹೇಳಿದರೂ, ಮನೆಯಿಂದ ಹೊರಗೆ ಬರಲು ಇಬ್ಬರು ಸಿದ್ಧರಿಲ್ಲ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆ ಇದೀಗ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತೆ ಚೀನಾದಲ್ಲಿ ಕೊರೊನಾ
ಇಷ್ಟು ದಿನ ಬಿಡುವು ನೀಡಿದ್ದ ಕೊರೊನಾ ಇದೀಗ ಮತ್ತೆ ಚೀನಾದಲ್ಲಿ ತನ್ನ ಅಬ್ಬರ ಶುರು ಮಾಡಿದೆ. ಚೀನಾದಲ್ಲಿ ಪ್ರತಿದಿನ ಸಾವಿರಾರು ಪ್ರಕರಣ ದಾಖಲಾಗಿತ್ತು. ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆ ಭಾರತದಲ್ಲಿಯೂ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸರ್ಕಾರ ಸೂಚಿಸಿದೆ. ಈಗಾಗಲೇ ದೇಶದಲ್ಲಿ ಓಮಿಕ್ರಾನ್ ಉಪ-ತಳಿಯ BF.7 ಮಾದರಿಯ ಸೋಂಕು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ