ತೆಲಂಗಾಣ: ಸಾಮಾನ್ಯವಾಗಿ ಪೋಷಕರು (Parents) ತಮ್ಮ ಮಕ್ಕಳ ಆಸೆ, ಆಕಾಂಕ್ಷೆ, ಕನಸನ್ನು ನನಸು ಮಾಡಲು ತಮ್ಮ ಆಸೆ ಕನಸು ಎಲ್ಲವನ್ನು ಬಲಿಕೊಟ್ಟು ಕೊಂದು ಬಿಟ್ಟಿರುತ್ತಾರೆ. ಮಕ್ಕಳಿಗೆ (Children's) ಉತ್ತಮ ವಿದ್ಯಾಭ್ಯಾಸ (Education) ಕೊಡಿಸಲು ಹಗಲು ರಾತ್ರಿ ಕಷ್ಟಪಟ್ಟು ಬೆವರು ಸುರಿಸಿ ದುಡಿಯುವುದರಲ್ಲಿ ಬ್ಯುಸಿಯಾಗಿರುತ್ತಾರೆ. ಕೆಲವರು ಸಣ್ಣ ವಯಸ್ಸಿನಲ್ಲಿಯೇ ಬೇಗ ಮದುವೆಯಾಗಿ ಸಂಸಾರವೆಂಬ ಸಾಗರಕ್ಕೆ ಸಿಲುಕಿ ತಮ್ಮ ಸಾಧನೆ, ಗುರಿ ಎಲ್ಲವನ್ನು ತ್ಯಾಗ ಮಾಡಿ ಕುಟುಂಬಕ್ಕಾಗಿ ಬದುಕುತ್ತಿರುತ್ತಾರೆ. ಅದರಲ್ಲಿಯೂ ಹೆಚ್ಚಾಗಿ ಹೆಣ್ಣು ಮಕ್ಕಳೇ ಹೆಚ್ಚಾಗಿ ವಿದ್ಯಾಭ್ಯಾಸದಿಂದ ವಂಚಿತರಾಗಿರುತ್ತಾರೆ. ಆದರೂ ಛಲ ಬಿಡದೇ 38ರ ಹರೆಯದಲ್ಲಿ ತೆಲಂಗಾಣದ (Telangana) ಮಹಿಳೆಯೊಬ್ಬರು ತಮ್ಮ ಮಗಳೊಂದಿಗೆ ಪೊಲೀಸ್ ಫಿಟ್ನೆಸ್ ಪರೀಕ್ಷೆ (Police Fitness Exam) (ದೈಹಿಕ ಸಾಮರ್ಥ್ಯ ಪರೀಕ್ಷೆ) ಅಮ್ಮ (Mother), ಮಗಳು (Daughter) ಒಟ್ಟಿಗೆ ಉತ್ತೀರ್ಣರಾಗಿರುವ ಸ್ಪೂರ್ತಿದಾಯಕ ಕಥೆ ಇದೀಗ ಸಾಧಿಸುವವರಿಗೆ ಪ್ರೇರಣೆಯಾಗಿದೆ.
ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ತಾಯಿ ಮತ್ತು ಮಗಳು ಒಟ್ಟಿಗೆ ಪೊಲೀಸ್ ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಡಿಸೆಂಬರ್ 14ರ ಬುಧವಾರದಂದು ಪೊಲೀಸ್ ಪರೇಡ್ ಮೈದಾನದಲ್ಲಿ ಇದು ಬೆಳಕಿಗೆ ಬಂದಿದೆ.
38 ವರ್ಷದ ಮಹಿಳೆ - 21 ವರ್ಷದ ಮಗಳು
38 ವರ್ಷದ ಮಹಿಳಾ ಪೊಲೀಸ್ ಪೇದೆ ತೋಳ್ಳ ನಾಗಮಣಿ ಹಾಗೂ ಅವರ 21 ವರ್ಷದ ಮಗಳು ತೊಳ್ಳಾ ತ್ರಿಲೋಕಿನಿ ಈ ಅಪರೂಪದ ಸಾಧನೆ ಮಾಡಿದ್ದಾರೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ನಡೆಸಲಾಗುತ್ತಿರುವ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಇಬ್ಬರೂ ತೇರ್ಗಡೆಯಾಗಿದ್ದಾರೆ.
ಇದನ್ನೂ ಓದಿ: Dark Lip Remedy: ತುಟಿ ಕಪ್ಪಾಗಿ ಅಂದ ಹಾಳಾಗಿದ್ರೆ ಈ ಆಹಾರಗಳನ್ನು ತಿನ್ನಿ ಸಾಕು
ಪೊಲೀಸ್ ಕವಾಯತು ಮೈದಾನದಲ್ಲಿ ನಿನ್ನೆ ಪೊಲೀಸ್ ಸಬ್ ಇನ್ಸ್ಪೆಕ್ಟರ್/ಕಾನ್ಸ್ಟೇಬಲ್ ಹುದ್ದೆಗೆ ಸ್ಟೈಪೆಂಡಿಯರಿ ಕೆಡೆಟ್ ಟ್ರೈನಿ ಆಯ್ಕೆಗಾಗಿ ನಡೆಸಲಾಗುತ್ತಿದ್ದ ದೈಹಿಕ ದಕ್ಷತೆ ಪರೀಕ್ಷೆ/ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ತಾಯಿ-ಮಗಳು ಇಬ್ಬರೂ ಕೂಡ ಪಾಸ್ ಆಗಿದ್ದಾರೆ.
ಮಗಳ ಪರೀಕ್ಷೆ ದಿನವೇ ನಾನು ಪರೀಕ್ಷೆ ಬರೆದಿದ್ದೆ
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ತೋಳ್ಳ ನಾಗಮಣಿ ಅವರು, ತಮ್ಮ ಕುಟುಂಬಕ್ಕೆ ಇದು ನಿಜಕ್ಕೂ ಹೆಮ್ಮೆಯ ಮತ್ತು ಸಂತೋಷದ ವಿಚಾರ. ನನ್ನ ಮಗಳು ಕೂಡ ಇಂದು ನನ್ನ ಜೊತೆಗೆ ಆಯ್ಕೆಯಾಗಿದ್ದಾಳೆ. ನನ್ನ ಮಗಳು ಪರೀಕ್ಷೆ ಬರೆದ ದಿನವೇ ನಾನು ಕೂಡ ಪರೀಕ್ಷೆ ಬರೆದಿದ್ದೆ. ಈ ವಿಚಾರ ನನಗೆ ಬಹಳ ಹೆಮ್ಮೆ ಎನಿಸುತ್ತದೆ. ಇನ್ಮುಂದೆ ನಾವಿಬ್ಬರೂ ಪೊಲೀಸ್ ಅಧಿಕಾರಿಗಳಾಗಿ ಕೆಲಸ ಮಾಡುತ್ತೇವೆ. ನಾವು ಸಾಧನೆ ಮಾಡಿರುವ ಬಗ್ಗೆ ನಾನು ಬಹಳ ಖುಷಿ ಪಡುತ್ತೇನೆ ಮತ್ತು ಹೆಮ್ಮೆ ಪಡುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದಲ್ಲಿ ದ್ವಿತೀಯ ಪಿಯುಸಿ ಒಟ್ಟಿಗೆ ಪಾಸಾಗಿದ್ದ ಅಪ್ಪ-ಮಗ
ಈ ಹಿಂದೆ ಇದೇ ರೀತಿ ರಾಜ್ಯದ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಅಪ್ಪ-ಮಗ ಇಬ್ಬರು ಪಾಸ್ ಆಗಿದ್ದರು. ಇಪ್ಪತ್ತು ವರ್ಷಗಳ ಹಿಂದೆ ಪರೀಕ್ಷೆಯಲ್ಲಿ ಫೇಲಾಗಿದ್ದ ತಂದೆ ತಮ್ಮ ಮಗನೊಂದಿಗೆ ಅಭ್ಯಾಸ ಮಾಡಿ ಪರೀಕ್ಷೆ ಬರೆದಿದ್ದಲ್ಲದೇ ಪುತ್ರನಿಗಿಂತ ಹೆಚ್ಚು ಅಂಕ ಗಳಿಸಿ ಪಾಸಾಗಿದ್ದರು.
ಇದನ್ನೂ ಓದಿ: KARTET Result: ಶಿಕ್ಷಕರ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಹೀಗೆ ಮಾಡಿ
ಕೊಪ್ಪಳ ನಗರಸಭೆ ಮಾಜಿ ಸದಸ್ಯ ಪ್ರಾಣೇಶ ಮಹೇಂದ್ರಕರ್ ಎಂಬುವವರು 1999ರಲ್ಲಿ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಶಿಕ್ಷಣ ವಿಭಾಗದ ದ್ವಿತೀಯ ಪಿಯುಸಿ ಮುಗಿಸಿದ್ದರು. ಎಲ್ಲ ವಿಷಯಗಳಲ್ಲಿ ಪಾಸ್ ಆದರೂ, ಇಂಗ್ಲೀಷ್ನಲ್ಲಿ ಅನುತ್ತೀರ್ಣಗೊಂಡಿದ್ದರು.
2000ರಲ್ಲಿ ಮರು ಪರೀಕ್ಷೆ ಕಟ್ಟಿದರೂ ತೇರ್ಗಡೆಯಾಗಿರಲಿಲ್ಲ. ಅಲ್ಲಿಗೆ ಪ್ರಯತ್ನ ಕೈ ಬಿಟ್ಟಿದ್ದರು. ಆದರೆ 2022ರಲ್ಲಿ ಪುತ್ರ ವಿನಾಯಕ ಜೊತೆಗೆ ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ್ದಾರೆ. ಅಷ್ಟೇ ಅಲ್ಲದೇ ಇಂಗ್ಲೀಷ್ನಲ್ಲಿ 40 ಅಂಕ ಗಳಿಸಿದ್ದರು. ಒಟ್ಟಾರೆ 344 ಅಂಕ ಪಡೆಯುವ ಮೂಲಕ ಪಾಸ್ ಆಗಿದ್ದರು. ಇನ್ನೂ ಮಗ 333 ಅಂಕ ಪಡೆದಿದ್ದನು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ