PSC Exam: ಸಾರ್ವಜನಿಕ ಸೇವಾ ಆಯೋಗ ಪರೀಕ್ಷೆಯಲ್ಲಿ ಒಟ್ಟಿಗೆ ಉತ್ತೀರ್ಣರಾದ ತಾಯಿ, ಮಗ!

ಕೇರಳದ ಮಲಪ್ಪುರಂನಲ್ಲಿ 42 ವರ್ಷದ ತಾಯಿ ತನ್ನ 24 ವರ್ಷದ ಮಗನೊಂದಿಗೆ ಅಧ್ಯಯನ ಮಾಡಿ, ಈಗ ಇಬ್ಬರೂ ಒಟ್ಟಿಗೆ PSC ಪರೀಕ್ಷೆ ತೇರ್ಗಯಲ್ಲಿ ತೇರ್ಗಡೆ ಹೊಂದಿದ್ದಾರೆ.

PSC ಪರೀಕ್ಷೆಯಲ್ಲಿ ಒಟ್ಟಿಗೆ ಉತ್ತೀರ್ಣರಾದ 42 ವರ್ಷದ ತಾಯಿ, 24 ವರ್ಷದ ಮಗ

PSC ಪರೀಕ್ಷೆಯಲ್ಲಿ ಒಟ್ಟಿಗೆ ಉತ್ತೀರ್ಣರಾದ 42 ವರ್ಷದ ತಾಯಿ, 24 ವರ್ಷದ ಮಗ

  • Share this:
ಮಲಪ್ಪುರಂ(ಆ.10):  ಕೇರಳದಲ್ಲಿ (Kerala) ಎಲ್ಲ ಅಡೆ ತಡೆಗಳನ್ನು ಮುರಿದು ತಾಯಿಯೊಬ್ಬರು ಅದ್ಭುತ ದಾಖಲೆ ನಿರ್ಮಿಸಿದ್ದಾರೆ. 42 ವರ್ಷದ ತಾಯಿ ತನ್ನ 24 ವರ್ಷದ ಮಗನೊಂದಿಗೆ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯನ್ನು (Public Service Commission Exam) ಬರೆದು ಏಕಕಾಲದಲ್ಲಿ ಉತ್ತೀರ್ಣರಾಗಿದ್ದಾರೆ. ಮೊದಲು ತಾಯಿ ಮತ್ತು ಮಗ ಇಬ್ಬರೂ ಒಟ್ಟಿಗೆ ಓದಲು ಪ್ರಾರಂಭಿಸಿದ್ದರು. ಈಗ ಪಿಎಸ್‌ಸಿಯಲ್ಲಿ (PSC) ಒಟ್ಟಿಗೆ ತೇರ್ಡೆಯಾಗಿದ್ದು, ಯಶಸ್ವಿಯಾದ ಖುಷಿ ಅವರ ಮುಖದಲ್ಲಿ ಕಂಡು ಬಂದಿದೆ.

ತಾಯಿ ಮತ್ತು ಮಗ ಇಬ್ಬರೂ ಕೇರಳದ ಮಲಪ್ಪುರಂ ನಿವಾಸಿಗಳು ಎಂದು ಹೇಳಲಾಗುತ್ತಿದೆ. ತಾಯಿಯ ಹೆಸರು ಬಿಂದು ಮತ್ತು ಮಗನ ಹೆಸರು ವಿವೇಕ್. ಈ ಸಾಧನೆ ಕುರಿತು ಮಾಧ್ಯಮದವರೊಂದಿಗೆ ತಮ್ಮ ಅನುಭವ ಹಂಚಿಕೊಂಡ ವಿವೇಕ್, ‘ನಾವು ಒಟ್ಟಿಗೆ ಕೋಚಿಂಗ್ ಕ್ಲಾಸ್ ತೆಗೆದುಕೊಂಡೆವು. ನನ್ನ ತಾಯಿ ಮತ್ತು ನನ್ನ ತಂದೆ ಬೇಕಾದ ಸೌಲಭ್ಯ ಏರ್ಪಡಿಸಿದ ಕಾರಣ ಇದು ಸಾಧ್ಯವಾಯಿತು. ನಮ್ಮ ಶಿಕ್ಷಕರಿಂದ ನಮಗೆ ಸಾಕಷ್ಟು ಸ್ಫೂರ್ತಿ ಸಿಕ್ಕಿದೆ. ನಾವು ಒಟ್ಟಿಗೆ ಓದಿದ್ದೇವೆ ಆದರೆ ನಾವು ಒಟ್ಟಿಗೆ ಯಶಸ್ವಿಯಾಗುತ್ತೇವೆ ಎಂದು ಎಂದಿಗೂ ಯೋಚಿಸಿರಲಿಲ್ಲ. ನಾವಿಬ್ಬರೂ ತುಂಬಾ ಸಂತೋಷವಾಗಿದ್ದೇವೆ ” ಎಂದಿದ್ದಾರೆ.

ಇದನ್ನೂ ಓದಿ: Kerala Coronavirus: ಕೇರಳದಲ್ಲಿ ಒಂದೇ ದಿನಕ್ಕೆ ದಿಢೀರ್ ಏರಿಕೆಯಾದ ಕೊರೋನಾ ಸಾವಿನ ಸಂಖ್ಯೆ..! ಕಾರಣವೇನು?

ವರದಿಗಳ ಪ್ರಕಾರ, ತಾಯಿ ಬಿಂದು ಮಗ ವಿವೇಕ್‌ನನ್ನು ಅಧ್ಯಯನ ಮಾಡಲು ಪ್ರೋತ್ಸಾಹಿಸುವ ವಿಶಿಷ್ಟ ಮಾರ್ಗವನ್ನು ಕಂಡುಹಿಡಿದರು. ವಿವೇಕ್ ಹತ್ತು ವರ್ಷದವನಿದ್ದಾಗ, ಬಿಂದು ಪುಸ್ತಕಗಳನ್ನು ಓದಲು ಪ್ರಾರಂಭಿಸಿದ್ದರು, ಈ ಮೂಲಕ ಅವರೂ ಓದಲು ಪ್ರಾರಂಭಿಸಿದ್ದರು. ಇವರ ಈ ಓದುವ ಅಭ್ಯಾಸ ಎಲ್ಲಿಗೆ ತಲುಪಿತ್ತೆಂದರೆ ಮಗನ ಜೊತೆಗೆ ಬಿಂದು ಕೂಡಾ ವ್ಯಾಸಂಗ ಆರಂಭಿಸಿ ಇಬ್ಬರೂ ಕೊನೆಗೂ ಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.

ಈ ಹುದ್ದೆಗಳ ಪರೀಕ್ಷೆಯಲ್ಲಿ ತಾಯಿ-ಮಗ ಉತ್ತೀರ್ಣ

ಮಾಹಿತಿ ಪ್ರಕಾರ, ಬಿಂದು ಲೋವರ್ ಡಿವಿಜನಲ್ ಕ್ಲರ್ಕ್ ಪರೀಕ್ಷೆಯಲ್ಲಿ 38 ನೇ ರ್ಯಾಂಕ್‌ನೊಂದಿಗೆ ಉತ್ತೀರ್ಣರಾಗಿದ್ದರೆ, ಅವರ ಮಗ ವಿವೇಕ್ ಕೊನೆಯ ದರ್ಜೆಯ ಸರ್ವೆಂಟ್ ಪರೀಕ್ಷೆಯಲ್ಲಿ 92 ನೇ ರ್ಯಾಂಕ್‌ನೊಂದಿಗೆ ಉತ್ತೀರ್ಣರಾಗಿದ್ದಾರೆ. ಬಿಂದು ಈ ಹಿಂದೆ ಮೂರು ಪ್ರಯತ್ನಗಳನ್ನು ನೀಡಿದ್ದರು, ಎರಡು LGS ಪರೀಕ್ಷೆಗೆ ಮತ್ತು ಒಂದು LDC ಗೆ, ಅಂತಿಮವಾಗಿ ನಾಲ್ಕನೇ ಬಾರಿಗೆ ಯಶಸ್ಸನ್ನು ಪಡೆದಿದ್ದಾರೆ. ಹತ್ತಿರದ ಸಂಬಂಧಿಕರು ಹೇಳುವ ಪ್ರಕಾರ, ಬಿಂದು 10 ವರ್ಷಗಳಿಂದ ಅಂಗನವಾಡಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಇದನ್ನೂ ಓದಿ:  Kerala Lottery: ಕಾಯ್ದಿರಿಸಿದ್ದಷ್ಟೇ, ಖರೀದಿಯೇ ಮಾಡದ ಲಾಟರಿಗೆ ಸಿಕ್ತು 75 ಲಕ್ಷ! ಕೇರಳ ಮಹಿಳೆಗೆ ಬಂಪರ್


ಕೇರಳದಲ್ಲಿ ಈ ಹುದ್ದೆಗಳಿಗೆ ವಯಸ್ಸಿನ ಮಿತಿ ಎಷ್ಟು?

ಕೇರಳದಲ್ಲಿ ಈ ಹುದ್ದೆಗಳಿಗೆ ವಯೋಮಿತಿ 40 ವರ್ಷಗಳು ಆದರೆ ವಿಶೇಷ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇದೆ. ಒಬಿಸಿ ವರ್ಗಕ್ಕೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಇದ್ದರೆ SC/ST ಮತ್ತು ವಿಧವೆ ಅಭ್ಯರ್ಥಿಗಳಿಗೆ ಐದು ವರ್ಷಗಳ ಸಡಿಲಿಕೆಯ ಅವಕಾಶವಿದೆ. ಅದೇ ಸಮಯದಲ್ಲಿ, ಕಿವುಡ ಮತ್ತು ಅಂಧರಿಗೆ ಈ ಹುದ್ದೆಗಳಿಗೆ 15 ವರ್ಷ ಮತ್ತು ಅಂಗವಿಕಲರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ.
Published by:Precilla Olivia Dias
First published: