Organ Transplant: ಸಾವು-ಬದುಕಿನ ಮಧ್ಯೆ ವ್ಯಕ್ತಿಯ ಹೋರಾಟ, ಅಂಗಾಂಗ ದಾನ ಮಾಡಿ ಜೀವ ಉಳಿಸಿದ ಸಹೋದರಿ

ಏಳು ವರ್ಷ ವಯಸ್ಸಿನಿಂದಲೂ ಅಪರೂಪದ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ ಉತ್ತರಾಖಂಡದ 22 ವರ್ಷದ ವ್ಯಕ್ತಿಗೆ ತಾಯಿ ಮತ್ತು ಸಹೋದರಿ ಅಂಗಾಂಗಳನ್ನು ದಾನ ಮಾಡುವ ಮೂಲಕ ಹೊಸ ಜೀವನ ನೀಡಿದ್ದಾರೆ. ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ದಾನಿಗಳಿಂದ ಪಡೆದ ಎರಡು ಅಂಗಾಂಗಳನ್ನು ಕಸಿ ಮಾಡಿ, ಜೀವನದಲ್ಲಿ ಭರವಸೆಯನ್ನೇ ಕಳೆದುಕೊಂಡ ವ್ಯಕ್ತಿಗೆ ಆಶಾಕಿರಣವಾಗಿದ್ದಾರೆ. 

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:

ಏಳು ವರ್ಷ ವಯಸ್ಸಿನಿಂದಲೂ ಅಪರೂಪದ ಆನುವಂಶಿಕ ಕಾಯಿಲೆಯಿಂದ (Genetic disease) ಬಳಲುತ್ತಿದ್ದ ಉತ್ತರಾಖಂಡದ (Uttarakhand) 22 ವರ್ಷದ ವ್ಯಕ್ತಿಗೆ ತಾಯಿ ಮತ್ತು ಸಹೋದರಿ ಅಂಗಾಂಗಳನ್ನು ದಾನ ಮಾಡುವ ಮೂಲಕ ಹೊಸ ಜೀವನ ನೀಡಿದ್ದಾರೆ. ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ (Hospital) ವೈದ್ಯರು ದಾನಿಗಳಿಂದ ಪಡೆದ ಎರಡು ಅಂಗಾಂಗಳನ್ನು ಕಸಿ (Organ transplant) ಮಾಡಿ, ಜೀವನದಲ್ಲಿ ಭರವಸೆಯನ್ನೇ ಕಳೆದುಕೊಂಡ ವ್ಯಕ್ತಿಗೆ ಆಶಾಕಿರಣವಾಗಿದ್ದಾರೆ. 46 ವರ್ಷದ ತಾಯಿ (Mother) ಮತ್ತು 27 ವರ್ಷದ ಸಹೋದರಿ (Sister) 22 ವರ್ಷದ ವ್ಯಕ್ತಿಗೆ ಮೂತ್ರಪಿಂಡ ಮತ್ತು ಯಕೃತ್ತನ್ನು ದಾನ ಮಾಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 


ತಾಯಿ ಮತ್ತು ಸಹೋದರಿಯಿಂದ ಅಂಗಾಂಗ ದಾನ
ಮೂತ್ರಪಿಂಡದ ಮತ್ತು ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯು ತನ್ನ ಊರಿನಲ್ಲಿ ಪ್ರಾಥಮಿಕ ವೈದ್ಯಕೀಯ ಆರೈಕೆಯನ್ನು ಪಡೆಯುತ್ತಿದ್ದನು ಆದರೆ ನಂತರದ ಸ್ಥಿತಿಗಳಲ್ಲಿ ಆರೋಗ್ಯ ಸ್ಥಿತಿ ಹದಗೆಡಲು ಆರಂಭವಾಯಿತು.


ಇತ್ತೀಚೆಗಷ್ಟೇ ಹಿಮೋಡಯಾಲಿಸಿಸ್ ನಿಂದ ಸಹ ವ್ಯಕ್ತಿಯು ಬಳಲುತ್ತಿದ್ದರು. ಇದಾದ ಬಳಿಕ ಮೂತ್ರಪಿಂಡ ವೈಫಲ್ಯದ ಸ್ಥಿತಿ ಕೊನೆಯ ಹಂತಕ್ಕೆ ತಲುಪಿತ್ತು. ಬಳಿಕ ತಕ್ಷಣ ಅವರನ್ನು ಅಪೋಲೋ ಆಸ್ಪತ್ರೆಗೆ ಕರೆತರಲಾಯಿತು. ಆಸ್ಪತ್ರೆಯ ನೆಫ್ರಾಲಜಿ ಮತ್ತು ಬಹು ಅಂಗಾಂಗ ಕಸಿ ಘಟಕದ ಹಿರಿಯ ಸಲಹೆಗಾರ ಡಾ. ಕೈಲಾಶ್ ನಾಥ್ ಸಿಂಗ್ ಅವರ ರೋಗನಿರ್ಣಯ ಮತ್ತು ಸಮಾಲೋಚನೆಯ ಆಧಾರದ ಮೇಲೆ, ಯಕೃತ್ತು ತೊಡಕುಗಳನ್ನು ಉಂಟುಮಾಡುವ ಕಾರಣ ತಕ್ಷಣವೇ ಸಂಯೋಜಿತ ಮೂತ್ರಪಿಂಡ ಮತ್ತು ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಲಹೆ ನೀಡಿದರು. ವೈದ್ಯರ ಸಲಹೆ ಮೇರೆಗೆ ದಾನಿಗಳಾಗಿ ಸ್ವತಹಃ ವ್ಯಕ್ತಿಯ ತಾಯಿ ಮತ್ತು ಸಹೋದರಿಯೇ ಅಂಗಾಂಗಳನ್ನು ದಾನ ಮಾಡಿದರು.


16 ಗಂಟೆಗಳ ಕಾಲ ನಡೆದ ಕಸಿ
ಸಾಮಾನ್ಯ ಶಸ್ತ್ರಚಿಕಿತ್ಸೆ, ಜಿಐ ಶಸ್ತ್ರಚಿಕಿತ್ಸೆ ಮತ್ತು ಕಸಿ ಹಿರಿಯ ಸಲಹೆಗಾರ ಶಸ್ತ್ರಚಿಕಿತ್ಸಕ ಡಾ. ಸಂದೀಪ್ ಗುಲೇರಿಯಾ ಮತ್ತು ಯಕೃತ್ತಿನ ಹಿರಿಯ ಸಲಹೆಗಾರ ಡಾ. ನೀರವ್ ಗೋಯಲ್ ಅವರ ನಿರ್ದೇಶನದಲ್ಲಿ 16 ಗಂಟೆಗಳ ಏಕಕಾಲಿಕ ಮೂತ್ರಪಿಂಡ ಮತ್ತು ಯಕೃತ್ತಿನ ಕಸಿ ಪ್ರಕ್ರಿಯೆಯನ್ನು ನಡೆಸಲಾಯಿತು.


ಇದನ್ನೂ ಓದಿ: 18 Foetuses Found: ತ್ಯಾಜ್ಯ ಎಸೆಯುವ ಮೈದಾನದಲ್ಲಿ 18 ಭ್ರೂಣ ಪತ್ತೆ!

ಮೂತ್ರಪಿಂಡದ ಕಲ್ಲುಗಳ ಪರಿಣಾಮವಾಗಿ ಕೊನೆಯ ಹಂತದ ಮೂತ್ರಪಿಂಡದ ಕಾಯಿಲೆಯು ಬೆಳೆಯಬಹುದು ಮತ್ತು ಅಂತಹ ಪರಿಸ್ಥಿತಿಗಳಿಗೆ ಚಿಕಿತ್ಸೆ ನಿಧಾನವಾದರೆ ಅಪಾಯ ಹೆಚ್ಚು. ಹೀಗಾಗಿ, 22 ವರ್ಷ ವಯಸ್ಸಿನ ರೋಗಿಗೆ ಮೂತ್ರಪಿಂಡ ಮತ್ತು ಯಕೃತ್ತಿನ ಕಸಿ ಸಂಯೋಜನೆಯನ್ನು ತ್ವರಿತವಾಗಿ ಸಲಹೆ ಮಾಡಲಾಯಿತು ಎಂದು ಡಾ.ಗುಲೇರಿಯಾ ವಿವರಿಸಿದರು. ಎರಡೂ ಚಿಕಿತ್ಸೆಗಳನ್ನು ಏಕಕಾಲದಲ್ಲಿ ನಡೆಸಿದ ನಂತರದ 21 ದಿನಗಳ ಬಳಿಕ ರೋಗಿಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಯಿತು. ವೈದ್ಯಕೀಯ ಕಸಿ ಬಳಿಕ ವ್ಯಕ್ತಿಯು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.


22 ವರ್ಷದ ವ್ಯಕ್ತಿಯ ಆರೋಗ್ಯ ಸ್ಥಿತಿ ಏನಾಗಿತ್ತು?
ವೈದ್ಯಕೀಯ ವೃತ್ತಿಪರರ ಪ್ರಕಾರ, ಪ್ರಾಥಮಿಕ ಹೈಪರಾಕ್ಸಿಲುರಿಯಾ ಟೈಪ್ 1 ಎಂದು ಕರೆಯಲ್ಪಡುವ ಅಸ್ವಸ್ಥತೆಯು ಜೀನ್ ಅಸಮರ್ಪಕ ಕ್ರಿಯೆಯಿಂದ ಉಂಟಾಗುತ್ತದೆ, ಅಲ್ಲಿ ಜೀನ್ AGXT ಯಲ್ಲಿನ ರೂಪಾಂತರವು ದೇಹದ ಆಕ್ಸಲೇಟ್ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುವ ಕಿಣ್ವಗಳನ್ನು ಉತ್ಪಾದಿಸುವ ಯಕೃತ್ತಿನ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಈ ವಂಶವಾಹಿಯಲ್ಲಿನ ಕೊರತೆ ಅಥವಾ ಕೊರತೆಯಿಂದಾಗಿ ದೇಹದಲ್ಲಿ ಆಕ್ಸಲೇಟ್ ಅತಿಯಾಗಿ ಸಂಗ್ರಹಗೊಳ್ಳುತ್ತದೆ, ಇದು ಚಯಾಪಚಯಗೊಳ್ಳುವುದನ್ನು ತಡೆಯುತ್ತದೆ. ಇದೇ ರೀತಿಯ ಸಮಸ್ಯೆಯನ್ನು ಆ ವ್ಯಕ್ತಿ ಎದುರಿಸುತ್ತಿದ್ದರು ಎಂದು ವೈದ್ಯರು ಹೇಳಿದ್ದಾರೆ.


ಇದನ್ನೂ ಓದಿ:  Viral Photos: ಕಾಡಿನ ರಾಜನ ಪರಿಸ್ಥಿತಿ ಹೇಗಿದೆ ನೋಡಿ, ಈ ಸಿಂಹಗಳ ಸ್ಥಿತಿ ನೋಡಿದ್ರೆ ಅಯ್ಯೋ ಅನಿಸುತ್ತೆ!

ವೈದ್ಯರ ಪ್ರಕಾರ, ಇದು ಮೂತ್ರಪಿಂಡದಲ್ಲಿ ಕರಗದ ಕ್ಯಾಲ್ಸಿಯಂ ಆಕ್ಸಲೇಟ್ ಹರಳುಗಳ ರಚನೆಗೆ ಕಾರಣವಾಗುತ್ತದೆ (ಮೂತ್ರಪಿಂಡದ ಕಲ್ಲುಗಳು) ಮತ್ತು ಹೃದಯ, ಮೂಳೆಗಳು ಮತ್ತು ರಕ್ತನಾಳಗಳಂತಹ ಇತರ ಅಂಗಗಳು, ಇದು ಅಂಗ ವೈಫಲ್ಯಕ್ಕೆ ಕಾರಣವಾಗುತ್ತದೆ. ಅಂಗಾಂಗ ದಾನ ಒಬ್ಬರ ಜೀವ ಉಳಿಸುತ್ತದೆ ಎಂಬುವುದಕ್ಕೆ ಈ ಪ್ರಕರಣ ಮತ್ತೊಂದು ಜೀವಂತ ಸಾಕ್ಷಿಯಾಗಿದ್ದು, ಸಾವು ಬದುಕಿನೊಂದಿಗೆ ಹೋರಾಟ ನಡೆಸುತ್ತಿದ್ದವನ ಜೀವನಕ್ಕೆ ಸ್ವತಹಃ ತಾಯಿ, ಅಕ್ಕ ಬೆಳಕಾಗಿದ್ದಾರೆ.

Published by:Ashwini Prabhu
First published: