ತಾಯಿ-ಮಗಳ ಮೇಲೆ ಅತ್ಯಾಚಾರ ಎಸಗಿದ ಕುಡುಕರು; ವಿಡಿಯೋ ವೈರಲ್ ಆದ ಬೆನ್ನಲ್ಲೇ ಆರೋಪಿಗಳ ಬಂಧನ

ಬಂಧಿತ ಆರೋಪಿಗಳನ್ನು ವಾಜಿಪುರದ ಅಮಿತ್ ಮತ್ತು ಜಹಂಗಿರ್​ಪುರಿಯ ಸೋನು ಎಂದು ಗುರುತಿಸಲಾಗಿದೆ. ಇಷ್ಟೇ ಅಲ್ಲದೇ ಘಟನೆಯನ್ನು ವಿಡಿಯೋ ಮಾಡಿ ಹರಿಯಬಿಟ್ಟಿದ್ದ ವ್ಯಕ್ತಿಯನ್ನೂ ಸಹ ಹುಡುಕಿ ಬಂಧಿಸಲಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ನವದೆಹಲಿ(ಜ.04): ದೆಹಲಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಎಗ್ಗಿಲ್ಲದೇ ನಡೆಯುತ್ತಿವೆ. ಇಬ್ಬರು ಕುಡುಕರು ಬೀದಿಬದಿಯಲ್ಲಿ ಮಲಗಿದ್ದ ತಾಯಿ ಮತ್ತು ಮಗಳ ಮೇಲೆ ಅತ್ಯಾಚಾರ ಎಸಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಡಿಸೆಂಬರ್ 29 ಮತ್ತು 30ರ ಮಧ್ಯರಾತ್ರಿ ದೆಹಲಿಯ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಈ ವೇಳೆ ಸಂತ್ರಸ್ತೆಯರನ್ನು ಕಾಪಾಡುವ ಬದಲಿಗೆ ಸ್ಥಳೀಯರೊಬ್ಬರು ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ.

  ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ, ಎಚ್ಚೆತ್ತುಕೊಂಡ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಸೆರೆಹಿಡಿಯಲು ಮುಂದಾಗಿದ್ದಾರೆ. ಪೊಲೀಸರ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ವಾಜಿಪುರದ ಅಮಿತ್ ಮತ್ತು ಜಹಂಗಿರ್​ಪುರಿಯ ಸೋನು ಎಂದು ಗುರುತಿಸಲಾಗಿದೆ. ಇಷ್ಟೇ ಅಲ್ಲದೇ ಘಟನೆಯನ್ನು ವಿಡಿಯೋ ಮಾಡಿ ಹರಿಯಬಿಟ್ಟಿದ್ದ ವ್ಯಕ್ತಿಯನ್ನೂ ಸಹ ಹುಡುಕಿ ಬಂಧಿಸಲಾಗಿದೆ.

  ಕಲಬುರ್ಗಿ ಜೈಲಿನಲ್ಲಿ ಮಗು ಸಾವು ಪ್ರಕರಣ; ಪಿಎಸ್​ಐ ಅಮಾನತಿಗೆ ಒಪ್ಪಿದ ಬಳಿಕ ನೆರವೇರಿದ ಬಾಲಕಿಯ ಅಂತ್ಯಕ್ರಿಯೆ

  ಅತ್ಯಾಚಾರಕ್ಕೊಳಗಾದ ಮಹಿಳೆ ಮತ್ತು ಆಕೆಯ ಮಗಳ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದರು. ಹೀಗಾಗಿ ಸಿಸಿಟಿವಿ ದೃಶ್ಯಾವಳಿ, ಸ್ಥಳೀಯರ ಮಾಹಿತಿ, ಬಸ್​ ಸ್ಟಾಪ್ ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಅವರ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಕೊನೆಗೂ ಇಬ್ಬರು ಸಂತ್ರಸ್ತೆಯರು ಸಿಕ್ಕಿದ್ದು, ಸದ್ಯ ಪೊಲೀಸರ ವಶದಲ್ಲಿದ್ದಾರೆ. 35 ವರ್ಷದ ತಾಯಿ ಹಾಗೂ 18 ವರ್ಷದ ವಿಕಲಾಂಗ ಮಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇವರು ಚಿಂದಿ ಆಯ್ದು ಜೀವನ ಸಾಗಿಸುತ್ತಿದ್ದರು. ಕೊರೋನಾ ಲಾಕ್​ಡೌನ್​ ವೇಳೆ ಮಹಿಳೆಯ ಗಂಡ ಈಕೆಯನ್ನು ಬಿಟ್ಟು ತನ್ನ ಹಳ್ಳಿಗೆ ಹೋಗಿದ್ದಾನೆ ಎಂದು ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದೆ.

  ಡಿಸೆಂಬರ್ 29 ಮತ್ತು 30ರ ಮಧ್ಯರಾತ್ರಿ ಕಂಠಪೂರ್ತಿ ಕುಡಿದಿದ್ದ ಆರೋಪಿಗಳು ವಾರ್ಜಿಪುರ ಪ್ರದೇಶದ ಜೆಜೆ ಕಾಲೋನಿಯಲ್ಲಿ ರಸ್ತೆಬದಿ ಮಲಗಿದ್ದ ತಾಯಿ-ಮಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಇದನ್ನು ವಿರೋಧಿಸಿದ ಮಹಿಳೆಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ವೇಳೆ ಎಚ್ಚರಗೊಂಡ ಸ್ಥಳೀಯರೊಬ್ಬರು ತಾಯಿ-ಮಗಳನ್ನು ದುಷ್ಟರಿಂದ ರಕ್ಷಿಸುವ ಬದಲಿಗೆ, ಆ ದೃಶ್ಯವನ್ನು ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
  Published by:Latha CG
  First published: