Viral News: ತಾಯಿ-ಮಗು ರಕ್ಷಿಸಲು ಬಂದವರೇ ಸಿಲುಕಿದ್ರು ಅಪಾಯಕ್ಕೆ : ಪ್ರವಾಹಕ್ಕೆ ಮುಖಮಾಡಿ ಗೆದ್ದು ಬಂದಿದ್ದೇ ಬಲು ರೋಚಕ!

Mother and Child Rescued: ಜಲಪಾತದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತಾಯಿ ಮಗನನ್ನು ರಕ್ಷಿಸಿ,  ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಸಂದರ್ಭ ಬಂದರು ಪ್ರವಾಹಕ್ಕೆ ಮುಖಮಾಡಿ ಈಜಿ ಸಾವು ಗೆದ್ದು ಬಂದಿರುವ ಘಟನೆ ನಡೆದಿದೆ.

ತಾಯಿ-ಮಗುವನ್ನ ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ತಾಯಿ-ಮಗುವನ್ನ ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ

  • Share this:
Mother and Child Rescued: ಜಲಪಾತ(Waterfall)ದಲ್ಲಿ ಆಟ ಆಡುವಾಗ ಇದ್ದಕ್ಕಿದ್ದಂತೆ ಅಪಾಯ ಸಂಭವಿಸಿ ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದರೆ ಅದೃಷ್ಟ ಇದ್ದವರ ಪಾಲಿಗೆ ದೇವದೂತರಂತೆ ಕೆಲವರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ರಕ್ಷಣೆ(Rescue) ಮಾಡುತ್ತಾರೆ. ಅದೇ ರೀತಿ ಈಗ ತಮಿಳುನಾಡಿ(Tamilnadu)ನಲ್ಲಿ , ಜಲಪಾತದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತಾಯಿ- ಮಗ(Mother and Child)ನನ್ನು ರಕ್ಷಿಸಿ,  ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಸಂದರ್ಭ ಬಂದರು ಪ್ರವಾಹಕ್ಕೆ ಮುಖಮಾಡಿ ಈಜಿ(Swim) ಸಾವು ಗೆದ್ದು ಬಂದಿರುವ ಘಟನೆ ನಡೆದಿದೆ. ಈ ಸಂಪೂರ್ಣ ದೃಶ್ಯ ಮೊಬೈಲ್(Mobile)​ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್(Viral)​ ಆಗುತ್ತಿದೆ. ನೆಟ್ಟಿಗರು  ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಫುಲ್​  ಫಿದಾ ಆಗಿದ್ದಾರೆ. ತಮ್ಮ ಪ್ರಾಣವನ್ನು ಲೆಕ್ಕಿಸದೇ, ಭೋರ್ಗರೆಯುತ್ತಿದ್ದ ಜಲಪಾತಕ್ಕೆ ಎದೆಯೊಡ್ಡಿ ತಾಯಿ-ಮಗನನ್ನು ರಕ್ಷಣೆ ಮಾಡಿದ್ದಾರೆ.

ಭೋರ್ಗರೆಯುತ್ತಿದ್ದ ಜಲಪಾತದಲ್ಲಿ ಸಿಲುಕಿದ ತಾಯಿ-ಮಗು

ತಮಿಳುನಾಡಿನ ಸೇಲಂ ಜಿಲ್ಲೆಯ ಅತ್ತೂರ್ ಬಳಿಯ ಕಲ್ಲವರಾಯನ್‌ ಬೆಟ್ಟದಲ್ಲಿರುವ ಅನೈವಾರಿ ಮುಟ್ಟಲ್‌ ಜಲಪಾತಕ್ಕೆ ಕೋವಿಡ್ ಕಾರಣದಿಂದ ಪ್ರವಾಸಿಗರಿಗೆ ಪ್ರವೇಶ ನಿಷೇಧ ಮಾಡಲಾಗಿತ್ತು. ಆದರೆ ಕಳೆದ ಎರಡು ತಿಂಗಳ ಹಿಂದೆ ನಿರ್ಬಂಧ ಸಡಿಲಗೊಳಿಸಿ, ಪ್ರವಾಸಿಗರಿಗೆ ಜಲಪಾತದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಜಲಪಾತ ವೀಕ್ಷಣೆಗೆ ತಾಯಿ ಮಗು ಬಂದಿದ್ದಾರೆ. ತಾಯಿ-ಮಗು ಜಲಪಾತದಲ್ಲಿ ಆಟ ಆಡುವಾಗ ಇದ್ದಕ್ಕಿದ್ದಂತೆ ನೀರಿನ ಸೆಳೆತ ಹೆಚ್ಚಾಗಿದೆ. ನೀರಿನ ರಭಸ ಹೆಚ್ಚಾಗುತ್ತಿದ್ದಂತೆ ತಾಯಿ-ಮಗು ಜಲಪಾತದಲ್ಲಿ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಕೊಚ್ಚಿ ಹೋಗುತ್ತಿದ್ದ ತಾಯಿ ಹಾಗೂ ಮಗನ ರಕ್ಷಣೆಗೆ ಅಲ್ಲಿಯೇ ಇದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳು ರಕ್ಷಣೆಗೆ ಧಾವಿಸಿ ಬಂದಿದ್ದಾರೆ.

ಇದನ್ನು ಓದಿ : ಯಲ್ಲಿ ಸಿಲುಕಿದ್ದ ಆನೆ ರೆಸ್ಕ್ಯೂ ವೇಳೆ ಘೋರ ದುರಂತ; ಪತ್ರಕರ್ತ ಸಾವು, ರಕ್ಷಣಾ ಸಿಬ್ಬಂದಿ ನಾಪತ್ತೆ..

ರಕ್ಷಣೆಗೆ ಬಂದವರೇ ಅಪಾಯಕ್ಕೆ ಸಿಲುಕಿದ್ರು

ನೀರಿನ ಸೆಳತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ತಾಯಿ ಮಗನ ರಕ್ಷಣೆಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಗಳು, ಮೊದಲು ಮಗನನ್ನ ರಕ್ಷಣೆ ಮಾಡಿದ್ದಾರೆ. ಬಳಿಕ ಹಗ್ಗದ ಸಹಾಯದಿಂದ, ತಾಯಿಯನ್ನು ರಕ್ಷಣೆ ಮಾಡಿದ್ದಾರೆ.. ಆದರೆ ದುರಾದೃಷ್ಟ ಎನ್ನುವಂತೆ ರಕ್ಷಣೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿಗಳೇ, ನೀರಿನ ಒತ್ತಡಕ್ಕೆ ಸಿಲುಕಿ ಕೊಚ್ಚಿ ಹೋಗುವ ಪರಿಸ್ಥಿತಿ ಉಂಟಾಗಿದೆ. ಈ ವೇಳೆ ಧೃತಿಗೆಡದ ಅರಣ್ಯ ಇಲಾಖೆ ಸಿಬ್ಬಂದಿಗಳು ಭೋರ್ಗರೆಯುತ್ತಾ ರಭಸದಿಂದ ಹರಿಯುತ್ತಿದ್ದ ಜಲಪಾತದ ನೀರಿನಲ್ಲಿ ಈಜಿ ಸುರಕ್ಷಿತವಾಗಿ ದಡ ಸೇರಿದ್ದಾರೆ.

ತಾಯಿ-ಮಗು ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಸಿಎಂ ಶ್ಲಾಘನೆ

ಅನೈವಾರಿ ಮುಟ್ಟಲ್‌ ಜಲಪಾತದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತಾಯಿ ಮಗುವನ್ನು ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳ ಕಾರ್ಯಕ್ಕೆ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ತಾಯಿ ಮತ್ತು ಮಗುವನ್ನು ರಕ್ಷಿಸಿದವರ ಧೈರ್ಯದ ಈ ಕೆಲಸ ಬಹಳ ಶ್ಲಾಘನೀಯವಾಗಿದೆ. ಈ ಸಿಬ್ಬಂದಿಗೆ ನಮ್ಮ ಸರ್ಕಾರ ಧನ್ಯವಾದ ತಿಳಿಸುತ್ತಿದೆ. ಇತರರ ಪ್ರಾಣವನ್ನು ಉಳಿಸುವ ಮೂಲಕ ಅವರು ಧೈರ್ಯದ ಜೊತೆಗೆ ಮಾನವೀಯತೆ ಮೆರೆದಿದ್ದಾರೆ. ಸಾರ್ವಜನಿಕರು ವಿಪತ್ತುಗಳ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು’ ಎಂದು ಸಿಎಂ ಎಂಕೆ ಸ್ಟಾಲಿನ್ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನು ಓದಿ:  ಪ್ರವಾಹದಲ್ಲಿ ಸಿಲುಕಿ ಪರದಾಡಿದ ಕಾಡಾನೆ: ಕೊನೆಗೂ ಒಂಟಿಸಲಗ ಬಚಾವಾಗಿದ್ದೇ ಬಲು ರೋಚಕ!

ವಿಶೇಷ ತರಬೇತಿ ಪಡೆದಿದ್ದ ಸಿಬ್ಬಂದಿ

ಪ್ರತಿವರ್ಷ ಅನೈವಾರಿ ಮುಟ್ಟಲ್‌ ಜಲಪಾತದಲ್ಲಿ ಈ ರೀತಿಯ ಅವಘಡಗಳು ಸಂಭವಿಸುವುದು ಸರ್ವೇಸಾಮಾನ್ಯವಾಗಿದೆ. ಇನ್ನು ಹೀಗೆ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ಸಿಲುಕಿಕೊಂಡಾಗ ಇನ್ನೊಂದು ಬದಿಗೆ ಹೋಗಲು ದಾರಿ ಇಲ್ಲ. ಹಗ್ಗದ ಸಹಾಯದಿಂದಲೇ ಇವರು ಸುರಕ್ಷಿತ ಜಾಗಕ್ಕೆ ಬರಬೇಕಾಗುತ್ತದೆ. ಇಂತಹ ಸಂದರ್ಭವನ್ನು ನಿಭಾಯಿಸಲು ಅರಣ್ಯ ಇಲಾಖೆ ಸಿಬ್ಬಂದಿ ತರಬೇತಿ ಪಡೆದಿದ್ದರಿಂದ, ಅವರು ಸಾರ್ವಜನಿಕರನ್ನು ಸುರಕ್ಷಿತವಾಗಿ ರಕ್ಷಿಸಲು ಸಾಧ್ಯವಾಗಿತ್ತು.
Published by:Vasudeva M
First published: