Uttarakhand Gangrape: ಲಿಫ್ಟ್ ನೀಡುವುದಾಗಿ ತಾಯಿ, 6 ವರ್ಷದ ಮಗಳ ಮೇಲೆ ಚಲಿಸುವ ಕಾರಲ್ಲಿ ಗ್ಯಾಂಗ್​ರೇಪ್​​

ಸೋನು ಮತ್ತು ಆತನ ಸಹಚರರು ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಅತ್ಯಾಚಾರವೆಸಗಿದ್ದಾರೆ. ನಂತರ ಇಬ್ಬರನ್ನೂ ಕಾಲುವೆಯ ಬಳಿ ಎಸೆದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರೂರ್ಕಿ (ಉತ್ತರಾಖಂಡ): ದೆಹಲಿಯಲ್ಲಿ ಚಲಿಸುವ ಬಸ್​ನಲ್ಲಿ ನಡೆದ ನಿರ್ಭಯ (Nirbhaya Case) ಸಾಮೂಹಿಕ ಅತ್ಯಾಚಾರ (Gangrape) ಪ್ರಕರಣದ ಬಳಿಕ ದೇಶದಲ್ಲಿ ಕಠಿಣ ಕಾನೂನು ಜಾರಿಗೆ ಬಂತು. ಆದರೆ ಅಂತಹ ಘಟನೆಗಳು ಮರುಕಳಿಸುವುದು ಮಾತ್ರ ನಿಂತಿಲ್ಲ. ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಲೇ ಇದೆ. ಲಿಫ್ಟ್​ ನೀಡುವುದಾಗಿ ತಾಯಿ ಮತ್ತು ಆಕೆ ಮಗಳ ಮೇಲೆ ಚಲಿಸುವ ಕಾರಿನಲ್ಲೇ ಕಾಮುಕರು ಗ್ಯಾಂಗ್​ ರೇಪ್​ ಮಾಡಿದ್ದಾರೆ. ಮತ್ತೊಮ್ಮೆ ನಾಗರಿಕ ಸಮಾಜ ಬೆಚ್ಚಿ ಬೀಳುವ ಘಟನೆ ಉತ್ತರಾಖಂಡ ರಾಜ್ಯದಲ್ಲಿ ವರದಿಯಾಗಿದೆ. ಹರಿದ್ವಾರದ ರೂರ್ಕಿಯಲ್ಲಿ ಮಹಿಳೆ ಮತ್ತು ಆಕೆಯ ಆರು ವರ್ಷದ ಮಗಳನ್ನು ತನ್ನ ಕಾರಿನಲ್ಲಿ ಲಿಫ್ಟ್ ನೀಡಿದ ನಂತರ ವ್ಯಕ್ತಿ ಮತ್ತು ಅವನ ಸ್ನೇಹಿತರು ಚಲಿಸುವ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಮಹಿಳೆ ತನ್ನ ಆರು ವರ್ಷದ ಮಗಳೊಂದಿಗೆ ಮುಸ್ಲಿಂ ಧಾರ್ಮಿಕ ಸ್ಥಳವಾದ ಪಿರಾನ್ ಕಲಿಯಾರ್‌ನಿಂದ ಮನೆಗೆ ಹೋಗುತ್ತಿದ್ದಾಗ, ಸೋನು ಎಂಬ ವ್ಯಕ್ತಿ ಲಿಫ್ಟ್ ಅನ್ನು ನೀಡಿದ್ದಾನೆ. ನಂತರ ಆತ ಗೆಳೆಯರೊಂದಿಗೆ ಸೇರಿಕೊಂಡು ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾಲುವೆ ಬಳಿ ಎಸೆದು ಹೋಗಿರುವ ಕಾಮುಕರು

ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಪ್ರಮೇಂದ್ರ ದೋವಲ್ ಮಾತನಾಡಿ, ವ್ಯಕ್ತಿಯ ಕೆಲವು ಸ್ನೇಹಿತರು ಈಗಾಗಲೇ ಕಾರಿನಲ್ಲಿದ್ದರು. ದೂರಿನ ಪ್ರಕಾರ, ಸೋನು ಮತ್ತು ಆತನ ಸಹಚರರು ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಅತ್ಯಾಚಾರವೆಸಗಿದ್ದಾರೆ. ನಂತರ ಇಬ್ಬರನ್ನೂ ಕಾಲುವೆಯ ಬಳಿ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆ ಮಧ್ಯರಾತ್ರಿ ಪೊಲೀಸ್ ಠಾಣೆಗೆ ತಲುಪಿ ಪೊಲೀಸರಿಗೆ ಘಟನೆಯನ್ನು ವಿವರಿಸಿದರು ಎಂದು ತಿಳಿಸಿದರು.

ಇದನ್ನೂ ಓದಿ: Lover Suicide: 40 ಸಲ ಕಾಲ್ ಮಾಡಿದ್ರೂ ರಿಸೀವ್ ಮಾಡದ ಲವರ್; ಯುವತಿಯಿಂದ ನಡೆದೇ ಹೋಯ್ತು ಅನಾಹುತ

ರೇಪ್​ ನಡೆದಿರುವುದು ದೃಢ

ಪೊಲೀಸರ ಪ್ರಕಾರ, ಕಾರಿನಲ್ಲಿ ಎಷ್ಟು ಪುರುಷರು ಇದ್ದರು ಎಂದು ಮಹಿಳೆ ನಿಖರವಾಗಿ ಹೇಳಲು ಸಾಧ್ಯವಾಗಲಿಲ್ಲ, ಆದರೆ ಅದನ್ನು ಓಡಿಸುವ ವ್ಯಕ್ತಿಯ ಹೆಸರು ಸೋನು ಎಂದು ಹೇಳಿದರು. ಇಬ್ಬರನ್ನು ರೂರ್ಕಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದು, ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ವಾನದ ಮೇಲೂ ಅತ್ಯಾಚಾರ

ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಮತ್ತೊಂದು ದಾರುಣ ಘಟನೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಈ ದುಷ್ಕೃತ್ಯ ನಡೆದಿದೆ. ವ್ಯಕ್ತಿಯೊಬ್ಬ ನಾಯಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕಳೆದ ಎರಡು ವರ್ಷಗಳಿಂದ ಈ ದುಷ್ಕೃತ್ಯ ನಡೆದಿದೆ. ನಾಯಿಯೊಂದಿಗೆ ಅಸ್ವಾಭಾವಿಕ ಸಂಭೋಗ ನಡೆಸುತ್ತಿದ್ದಾಗ ಕೆಲ ಸ್ಥಳೀಯ ಮಕ್ಕಳು ವಿಡಿಯೋ ಮಾಡಿದ್ದಾರೆ. ಆಗ ಈ ವಿಷಯ ಬೆಳಕಿಗೆ ಬಂದಿದೆ.  ಕಲ್ಯಾಣ್ ಪೂರ್ವದ ಹನುಮಾನ್ ನಗರ ಪ್ರದೇಶದ ಶಿರ್ ಸಾಗರ್ (60 ವರ್ಷ) ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ. ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಈತ ಮನೆಯಲ್ಲಿ ನಾಯಿಗಳನ್ನು ಸಾಕುತ್ತಾರೆ. ಹಾಗಾಗಿ ಕೆಲ ವರ್ಷಗಳಿಂದ ಅವುಗಳೊಂದಿಗೆ ಅಸಹಜ ಸಂಭೋಗ ನಡೆಸುತ್ತಿದ್ದ.

ಕೆಲವು ಸ್ಥಳೀಯರು ಇತ್ತೀಚೆಗೆ ನಾಯಿಯ ಮೇಲೆ ಲೈಂಗಿಕ ದೌರ್ಜನ್ಯವನ್ನು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹಾಗಾಗಿ ರೇಖಾ ರೆಡ್ಕರ್ ಎಂಬ ಪ್ರಾಣಿಪ್ರೇಮಿಯ ಗಮನಕ್ಕೆ ಬಂದಿತ್ತು. ವಿಡಿಯೋ ನೋಡಿ ಶಾಕ್ ಆದ ಅವರು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ.
Published by:Kavya V
First published: