ಲಡಾಖ್‌ ಗಡಿಯಲ್ಲಿ ಭಾರತ 1962ರ ನಂತರ ಅತ್ಯಂತ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ; ಎಸ್‌. ಜೈಶಂಕರ್‌

ಗಡಿ ಪ್ರದೇಶಗಳಲ್ಲಿನ ಶಾಂತಿ ಮತ್ತು ನೆಮ್ಮದಿ ಎರಡು ನೆರೆಹೊರೆಯವರ ನಡುವಿನ ಸಂಬಂಧಕ್ಕೆ ಆಧಾರವಾಗಿದೆ ಎಂದು ಭಾರತವು ಚೀನಾಕ್ಕೆ ’ಸ್ಪಷ್ಟವಾಗಿ’ ತಿಳಿಸಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್‌ ಹೇಳಿದ್ದಾರೆ.

ಎಸ್‌. ಜೈಶಂಕರ್‌.

ಎಸ್‌. ಜೈಶಂಕರ್‌.

  • Share this:
ನವದೆಹಲಿ: ಪೂರ್ವ ಲಡಾಕ್‌ನಲ್ಲಿ ಚೀನಾ ದೇಶದ ನಿಲುವು ಖಂಡಿತವಾಗಿಯೂ 1962 ರ ನಂತರದ ಅತ್ಯಂತ ಗಂಭೀರ ಪರಿಸ್ಥಿತಿಗೆ ತಲುಪಿದೆ ಎಂದು ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ 1962 ರ ಇಂಡೋ-ಚೀನಾ ಯುದ್ಧವನ್ನು ಉಲ್ಲೇಖಿಸಿ ಹೇಳಿದ್ದಾರೆ.

ಈ ಕುರಿತು ಕಳವಳ ವ್ಯಕ್ತಪಡಿಸಿರುವ ಅವರು, "ಇದು ಖಂಡಿತವಾಗಿಯೂ 1962 ರ ನಂತರದ ಅತ್ಯಂತ ಗಂಭೀರ ಪರಿಸ್ಥಿತಿ. ವಾಸ್ತವವಾಗಿ ಕಳೆದ 45 ವರ್ಷಗಳ ನಂತರ ಈ ಗಡಿಯಲ್ಲಿ ನಾವು ಮಿಲಿಟರಿ ಸಾವುನೋವುಗಳನ್ನು ಅನುಭವಿಸಿದ್ದೇವೆ. ಪ್ರಸ್ತುತ ಎಲ್ಎಸಿಯಲ್ಲಿ ಎರಡೂ ಕಡೆಯಿಂದ ನಿಯೋಜಿಸಲಾಗಿರುವ ಪಡೆಗಳ ಪ್ರಮಾಣವೂ ಅಧಿಕವಾಗಿದೆ" ಎಂದು ಜೈಶಂಕರ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

"ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ಹಲವಾರು ಸುತ್ತಿನ ಮಿಲಿಟರಿ ಮತ್ತು ರಾಜತಾಂತ್ರಿಕ ಸಭೆಗಳನ್ನು ನಡೆಸಿವೆ. ಆದರೂ, ಪೂರ್ವ ಲಡಾಖ್‌ನ ಕೆಲವು ಭಾಗಗಳಲ್ಲಿ ಮಾತ್ರ ಎರಡೂ ದೇಶಗಳು ಸೀಮಿತ ನಿಷ್ಕ್ರಿಯತೆಯನ್ನು ಪಾಲಿಸಿವೆ.

ಗಡಿ ಪ್ರದೇಶಗಳಲ್ಲಿನ ಶಾಂತಿ ಮತ್ತು ನೆಮ್ಮದಿ ಎರಡು ನೆರೆಹೊರೆಯವರ ನಡುವಿನ ಸಂಬಂಧಕ್ಕೆ ಆಧಾರವಾಗಿದೆ ಎಂದು ಭಾರತವು ಚೀನಾಕ್ಕೆ ’ಸ್ಪಷ್ಟವಾಗಿ’ ತಿಳಿಸಿದೆ" ಎಂದು ವಿದೇಶಾಂಗ ಸಚಿವ ಜೈಶಂಕರ್‌ ಹೇಳಿದ್ದಾರೆ.

"ಈ ಹಿಂದೆ ಗಡಿ ಸಮಸ್ಯೆಗಳನ್ನು ರಾಜತಾಂತ್ರಿಕತೆಯ ಮೂಲಕ ಪರಿಹರಿಸಲಾಗಿದೆ. ನೀವು ಕಳೆದ ಒಂದು ದಶಕದಲ್ಲಿ ಹಿಂತಿರುಗಿ ನೋಡಿದರೆ, ಹಲವಾರು ಗಡಿ ಸಮಸ್ಯೆಗಳು ತಲೆದೋರಿವೆ. ಡೆಪ್ಸಾಂಗ್, ಚುಮಾರ್ ಮತ್ತು ಡೋಕ್ಲಾಮ್ ಅಂತಹ ಸಮಸ್ಯೆಗಳಲ್ಲಿ ಒಂದು. ಒಂದರ್ಥದಲ್ಲಿ, ಪ್ರತಿಯೊಂದೂ ವಿಭಿನ್ನವಾಗಿತ್ತು.

ಆದರೆ, ಪ್ರಸ್ತುತ ಈಗಿನ ಪರಿಸ್ಥಿತಿ ಭಿನ್ನವಾಗಿದೆ. ಆದರೂ, ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸದೆ ಎಲ್ಲಾ ಒಪ್ಪಂದಗಳು ಮತ್ತು ತಿಳುವಳಿಕೆಗಳನ್ನು ಗೌರವಿಸುವ ಬಗ್ಗೆ ಚೀನಾದೊಂದಿಗಿನ ನಿಲುವಿಗೆ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ” ಎಂದು ಅವರು ತಿಳಿಸಿದ್ದಾರೆ.

ಹಲವು ವರ್ಷಗಳಲ್ಲಿ ಹಲವಾರು ಸುತ್ತಿನ ಮಾತುಕತೆಗಳ ಹೊರತಾಗಿಯೂ, ಪಶ್ಚಿಮ ವಲಯದ ಲಡಾಖ್ನ ಹಿಮ ಮರುಭೂಮಿಗಳಿಂದ ಹಿಡಿದು ಪೂರ್ವದಲ್ಲಿ ದಟ್ಟವಾದ ಕಾಡು ಮತ್ತು ಪರ್ವತಗಳವರೆಗೆ ಸಾಗುವ 3,488 ಕಿ.ಮೀ ಉದ್ದದ ಗಡಿಯಲ್ಲಿ ಭಾರತ ಮತ್ತು ಚೀನಾ ಈಗಲೂ ಹಲವಾರು ಗಡಿ ತಕರಾರನ್ನು ಹೊಂದಿದೆ.

ಇದನ್ನೂ ಓದಿ : ಟಿಕ್‌ಟಾಕ್; ಸಿಇಒ ಹುದ್ದೆ ತ್ಯಜಿಸಿದ ಕೆವಿನ್ ಮೇಯರ್, ಸಿಬ್ಬಂದಿಗಳಿಗೆ ಪತ್ರ ಬರೆದು ವಿಷಾಧ

ಇನ್ನೂ ಭಾರತ ಮತ್ತು ಚೀನಾದ ಪಡೆಗಳನ್ನು ಕಳೆದ ಮೇ ತಿಂಗಳಿನಿಂದಲೂ ಉದ್ವಿಗ್ನ ಸ್ಥಿತಿಯಲ್ಲೇ ಇವೆ. ಜೂನ್ 15 ರಂದು ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ 20 ಭಾರತೀಯ ಸೈನಿಕರು ಚೀನಾದ ಸೈನಿಕರೊಂದಿಗಿನ ಘೋರ ಸಂಘರ್ಷದಲ್ಲಿ ಸಾವನ್ನಪ್ಪಿದ್ದರು. ಈ ಘಟನೆ ಸಾಮಾನ್ಯವಾಗಿ ಚೀನಾ ವಿರುದ್ಧದ ಸಿಟ್ಟಿಗೆ ಕಾರಣವಾಗಿತ್ತು.

ಈ ಘರ್ಷಣೆಯಿಂದ ಉಂಟಾಗಿದ್ದ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಸಲುವಾಗಿ ಎರಡೂ ದೇಶದ ಅಧಿಕಾರಿಗಳು ವಾರಗಳ ಕಾಲ ಮಾತುಕತೆ ನಡೆಸಿದ್ದರು. ಆದರೂ ಇದರಿಂದ ಯಾವುದೇ ಫಲ ಸಿಕ್ಕಂತೆ ಕಾಣುತ್ತಿಲ್ಲ.
Published by:MAshok Kumar
First published: