Business Ideas: ಕೆಲಸವಿಲ್ಲದೇ ಮನೆಯಲ್ಲಿ ಕುಳಿತಿದ್ದೀರಾ?; ಗ್ರಾಮೀಣ ಭಾಗದ ಯುವಕರಿಗೆ ಕೆಲವೊಂದು ಬ್ಯುಸಿನೆಸ್​ ಟಿಪ್ಸ್​​

ಯುವಕರು ಹಳ್ಳಿಗಳಲ್ಲಿ ಇದ್ದುಕೊಂಡೇ ಕಡಿಮೆ ಬಂಡವಾಳ ಹೂಡಿ ದುಪ್ಪಟ್ಟು ಲಾಭ ಪಡೆಯಬಹುದಾಗಿದೆ. ಅದರಲ್ಲೂ ಕೊರೋನಾ ಮತ್ತು ಲಾಕ್​ಡೌನ್​ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ.

news18-kannada
Updated:September 24, 2020, 12:41 PM IST
Business Ideas: ಕೆಲಸವಿಲ್ಲದೇ ಮನೆಯಲ್ಲಿ ಕುಳಿತಿದ್ದೀರಾ?; ಗ್ರಾಮೀಣ ಭಾಗದ ಯುವಕರಿಗೆ ಕೆಲವೊಂದು ಬ್ಯುಸಿನೆಸ್​ ಟಿಪ್ಸ್​​
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರಿನಂತಹ ಬೃಹತ್ ನಗರಿಗಳಲ್ಲಿ ಕೆಲಸ ಮಾಡುತ್ತಿದ್ದ ಅದೆಷ್ಟೋ ಜನರು ಕೊರೋನಾ ಮತ್ತು ಲಾಕ್​ಡೌನ್​ಗಳಿಂದಾಗಿ ತಮ್ಮ-ತಮ್ಮ ಊರುಗಳಿಗೆ ಮರಳಿದ್ದಾರೆ. ಒಂದೆಡೆ ಕೈ ತುಂಬಾ ಸಂಬಳ ಬರುತ್ತಿದ್ದವರು ಕೆಲಸ ಬಿಟ್ಟು ನೆಮ್ಮದಿಯಾಗಿ ತಮ್ಮ ಊರಲ್ಲಿ ಇರಲು ಬಯಸಿದರೆ, ಇನ್ನೊಂದೆಡೆ ಲಾಕ್​ಡೌನ್​ ಕಾರಣದಿಂದಾಗಿ ಇದ್ದ ಕೆಲಸವನ್ನು ಕಳೆದುಕೊಂಡು ಬರಿಗೈಯಲ್ಲಿ ಊರುಗಳಿಗೆ ಮರಳಿದ್ದಾರೆ. ಅದರಲ್ಲೂ ಎಷ್ಟೋ ಯುವಕರ ಪಾಡು ಇದೇ ರೀತಿಯದ್ದಾಗಿದೆ. ಇನ್ನೂ ಸಹ ವಾಪಸ್​ ನಗರಗಳಿಗೆ ಹೋಗಿ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗಿಲ್ಲ. ಇಂತಹ ಸಮಯದಲ್ಲಿ ಯುವಕರು ಹಳ್ಳಿಗಳಲ್ಲಿ ಇದ್ದುಕೊಂಡೇ ಕಡಿಮೆ ಬಂಡವಾಳ ಹೂಡಿ ದುಪ್ಪಟ್ಟು ಲಾಭ ಪಡೆಯಬಹುದಾಗಿದೆ. ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ. ನಗರಗಳಲ್ಲಿ ಇನ್ನೊಬ್ಬರ ಕೈ ಕೆಳಗೆ ದುಡಿಯಲು ಇಚ್ಛಿಸದ ಯುವಕರು ಗ್ರಾಮಗಳಲ್ಲಿ ಸ್ವಂತ ಉದ್ಯೋಗ ಮಾಡಬಹುದಾಗಿದೆ. ಅದರಲ್ಲೂ ಕೊರೋನಾ ಮತ್ತು ಲಾಕ್​ಡೌನ್​ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ. ಕಡಿಮೆ ಬಂಡವಾಳ, ಕಡಿಮೆ ಸಮಯ ಮತ್ತು ಹೆಚ್ಚು ಲಾಭ- ಇವು ಯಶಸ್ವಿ ಉದ್ಯಮದ ಅಂಶಗಳು.

Rockline Sudhakar Passes Away: ಶೂಟಿಂಗ್ ವೇಳೆ ಹೃದಯಾಘಾತ; ಹಿರಿಯ ನಟ ರಾಕ್​ಲೈನ್ ಸುಧಾಕರ್ ನಿಧನ

1.ತರಕಾರಿ ಮತ್ತು ಹಣ್ಣಿನ ವ್ಯಾಪಾರ

ಸಿಟಿಗಳಿಂದ ಹಳ್ಳಿಗಳಿಗೆ ಬಂದಿರುವ ಯುವಕರು ತಮ್ಮ ಗ್ರಾಮಗಳಲ್ಲೇ ಹಣ್ಣು ಮತ್ತು ತರಕಾರಿ ಶಾಪ್​​ಗಳನ್ನು ಇಡಲು ಮಾಡಬಹುದಾಗಿದೆ. ಈ ಉದ್ಯಮ ಹೆಚ್ಚು ಸಂಪಾದನೆ ತಂದುಕೊಡುತ್ತದೆ. ನೀವು ಒಂದು ಉತ್ತಮ ಬ್ಯುಸಿನೆಸ್ ಮಾಡುವ ಉದ್ದೇಶ ಹೊಂದಿದ್ದರೆ ಈ ಐಡಿಯಾ ಸಹಕಾರಿಯಾಗಲಿದೆ. ಈ ಕೆಲಸ ಮಾಡಲು ಯಾವುದೇ ಕೌಶಲ್ಯದ ಅಗತ್ಯತೆ ಬೇಕಿಲ್ಲ. ಕೇವಲ ಸ್ಥಳದ ಅವಶ್ಯಕತೆ ಇರುತ್ತದೆ. ಜೊತೆಗೆ ಗ್ರಾಹರಕನ್ನು ತಮ್ಮತ್ತ ಸೆಳೆಯುವ ಕೌಶಲ್ಯ ಬೇಕಷ್ಟೇ.ಇಷ್ಟು ಮಾತ್ರವಲ್ಲದೇ ನೀವು ಮಾರಾಟ ಮಾಡಲು ಬಯಸುವ ತರಕಾರಿ ಮತ್ತು ಹಣ್ಣುಗಳು ಉತ್ತಮ ಮತ್ತು ತಾಜಾ ಆಗಿರಬೇಕು.

2.ಪ್ರಾಣಿಗಳ ಆಹಾರ ಮಾರಾಟ

ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಪಶುಸಂಗೋಪನೆ, ಹೈನುಗಾರಿಕೆ ಮತ್ತಿತರ ಚಟುವಟಿಕೆಗಳು ಹೆಚ್ಚಾಗಿರುತ್ತವೆ. ಹೀಗಾಗಿ ಇಲ್ಲಿ ಪ್ರಾಣಿಗಳಿಗೆ ಅಗತ್ಯವಿರುವ ಆಹಾರಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ. ಯುವಕರು ಪ್ರಾಣಿಗಳ ಆಹಾರವನ್ನು ಮಾರಾಟ ಮಾಡುವ ಬ್ಯುಸಿನೆಸ್​ ಶುರುಮಾಡಬಹುದಾಗಿದೆ. ಕೋಳಿ ಸಾಕುವ ಮತ್ತು ಹಸುಗಳನ್ನು ಸಾಕುವ ರೈತರಿಗೆ ಸಹಕಾರಿಯಾಗಲಿದೆ.
3.ಕೂಲ್​ಡ್ರಿಂಕ್ಸ್​ ಮತ್ತು ವಾಟರ್​ ಬಾಟಲ್ ಬ್ಯುಸಿನೆಸ್​​​​​​​​​

ನಗರಗಳಿಂದ ಹಳ್ಳಿಗೆ ಬಂದು ಕುಳಿತಿರುವ ಯುವಕರು ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ಕೈಯಲ್ಲಿ ಸ್ವಲ್ಪ ಬಂಡವಾಳ ಇದ್ದರೆ ಸಾಕು, ದುಪ್ಪಟ್ಟು ಲಾಭ ಕೈ ಸೇರುತ್ತದೆ. ನಾವೆಲ್ಲರೂ ಕೂಲ್​ಡ್ರಿಂಕ್​ ಮತ್ತು ನೀರಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ. ಇದನ್ನೇ ಬ್ಯುಸಿನೆಸ್​​​ ಆಗಿ ಪರಿವರ್ತಿಸಿದರೆ ಹೇಗಿರುತ್ತದೆ? ಹೌದು, ಗ್ರಾಮೀಣ ಭಾಗದಲ್ಲಿ ಇದೊಂದು ಒಳ್ಳೆಯ ಉದ್ಯಮವಾಗಿದೆ. ಚಳಿಗಾಲದಲ್ಲಿ ಟೀ ಶಾಪ್​​ಗಳಿಗೆ ಹೆಚ್ಚು ಗ್ರಾಹಕರು ಬರುತ್ತಾರೆ. ಒಳ್ಳೆಯ ಲಾಭವೂ ಆಗುತ್ತದೆ. ಅಂತೆಯೇ ಬೇಸಿಗೆ ಕಾಲದಲ್ಲಿ ಕೂಲ್​ ಡ್ರಿಂಕ್ಸ್​ ಮತ್ತು ನೀರಿಗೆ ಹೆಚ್ಚಿನ ಬೇಡಿಕೆ ಇರುವುದು ಸಹಜ. ಇಂತಹ ಸಮಯದಲ್ಲಿ ಬೇಡಿಕೆಗೆ ತಕ್ಕಂತೆ ಬ್ಯುಸಿನೆಸ್​ ಮಾಡಿದರೆ ಉತ್ತಮ ಲಾಭ ಗಳಿಸಬಹುದಾಗಿದೆ.
Published by: Latha CG
First published: September 24, 2020, 12:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading