Russia Ukraine: ಭಾರತೀಯರು ಕೇವಲ ವೈದ್ಯಕೀಯ ವ್ಯಾಸಂಗಕ್ಕಲ್ಲ ಈ ಕೆಲಸಕ್ಕಾಗಿಯೂ ಉಕ್ರೇನ್​ಗೆ ಹೋಗ್ತಾರಂತೆ..!

ಪಂಜಾಬ್ ಜನ ಉಕ್ರೇನ್ ಭಾಷೆಯ ತರಬೇತಿಗಾಗಿಯೂ ಉಕ್ರೇನ್ ಗೆ ತೆರಳಿದ್ದಾರೆಂಬ ವಿಷಯ ಈಗ ಹೊಸದಾಗಿ ತಿಳಿದುಬರುತ್ತಿದೆ. ಹೌದು, ಏಕೆಂದರೆ, ಉಕ್ರೇನ್ ಭಾಷೆಯನ್ನು ಕಲಿತವರಿಗೆ ಯುರೋಪ್ ಖಂಡದ ಇತರೆ ದೇಶಗಳಲ್ಲಿ ಹೋಗಿ ನೆಲೆಸಲು ಇದು ಹೆಬ್ಬಾಗಿಲಿನಂತೆ ಕಾರ್ಯನಿರ್ವಹಿಸುತ್ತಿದೆ ಎಂಬ ಒಂದೊಂದೆ ವಿಚಾರ ಬೆಳಕಿಗೆ ಬರುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈಗಾಗಲೇ ರಷ್ಯಾ-ಉಕ್ರೇನ್ (Russia Ukraine) ಮಧ್ಯೆ ಭೀಕರ ಯುದ್ಧ (War) ನಡೆಯುತ್ತಿದ್ದು ಅಲ್ಲಿ ಸಿಲುಕಿ ಹಾಕಿಂಡಿರುವ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿ ತರುವತ್ತ ಆಪರೇಷನ್ ಗಂಗಾದಡಿ ಭಾರತ ಯಶಸ್ವಿ ಪ್ರಯತ್ನ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ನಡುವೆ ಭಾರತೀಯ ಯುವಕರು ಉಕ್ರೇನ್ ದೇಶಕ್ಕೆ ವೈದ್ಯಕೀಯ (Medical) ವ್ಯಾಸಂಗಕ್ಕಾಗಿ ಹೆಚ್ಚಾಗಿ ತೆರಳಿದ್ಷರು ಎಂದು ತಿಳಿದುಬರುತ್ತದೆ. ಆದರೆ, ಪರಿಸ್ಥಿತಿ ಹೀಗಿಲ್ಲ ಎಂಬುದೆಂಬ ವಿಚಾರ ಈಗ ಬೆಳಕಿಗೆ ಬರುತ್ತಿದೆ. ಪಂಜಾಬ್ (Punjab) ರಾಜ್ಯದಿಂದ ಎಲ್ಲ ತರುಣರು ಕೇವಲ ವೈದ್ಯಕೀಯ ವ್ಯಾಸಂಗಕ್ಕೆಂದೇ ಉಕ್ರೇನ್ ಗೆ (Ukraine) ತೆರಳಿಲ್ಲ. ಹಲವಾರು ಜನ ಉಕ್ರೇನ್ ಭಾಷೆಯ ತರಬೇತಿಗಾಗಿಯೂ ಉಕ್ರೇನ್ ಗೆ ತೆರಳಿದ್ದಾರೆಂಬ ವಿಷಯ ಈಗ ಹೊಸದಾಗಿ ತಿಳಿದುಬರುತ್ತಿದೆ. ಹೌದು, ಏಕೆಂದರೆ, ಉಕ್ರೇನ್ ಭಾಷೆಯನ್ನು ಕಲಿತವರಿಗೆ ಯುರೋಪ್ ಖಂಡದ ಇತರೆ ದೇಶಗಳಲ್ಲಿ ಹೋಗಿ ನೆಲೆಸಲು ಇದು ಹೆಬ್ಬಾಗಿಲಿನಂತೆ ಕಾರ್ಯನಿರ್ವಹಿಸುತ್ತಿದೆ ಎಂಬ ಒಂದೊಂದೆ ವಿಚಾರ ಬೆಳಕಿಗೆ ಬರುತ್ತಿದೆ.

ಅಲ್ಲದೆ, ಉಕ್ರೇನ್ ದೇಶದಲ್ಲಿ ಉಕ್ರೇನಿ ಭಾಷೆ ಕಲಿಯಲು ಹೋಗಬೇಕಾದ ಸಂದರ್ಭದಲ್ಲಿ ಇಂಗ್ಲೀಷ್ ಲ್ಯಾಂಗ್ವೇಜ್ ಟೆಸ್ಟಿಂಗ್ ಸಿಸ್ಟಮ್ಸ್ (IELTS) ಪರೀಕ್ಷೆ ಎದುರಿಸುವ ಅವಶ್ಯಕತೆ ಇಲ್ಲದೆ ಇರುವುದು ಈ ನಿಟ್ಟಿನಲ್ಲಿ ಮತ್ತೊಂದು ವರದಾನವಾಗಿದೆ. ಹಾಗಾಗಿ ಹಲವು ಪಂಜಾಬಿ ಮೂಲದ ಯುವಕರಿಗೆ ಉಕ್ರೇನಿ ಭಾಷೆ ಕಲಿಯಲೆಂದು ಉಕ್ರೇನ್ ದೇಶಕ್ಕೆ ತೆರಳುವುದು ಉತ್ತಮ ಆಯ್ಕೆಯಾಗಿ ಹೊರಹೊಮ್ಮಿದೆ.

ಸದ್ಯ ಪೋಲ್ಯಾಂಡ್ ನಲ್ಲಿರುವ ಪಂಜಾಬ್ ಮೂಲದ ಮನಪ್ರೀತ್ ಸಿಂಗ್ (ಹೆಸರು ಬದಲಿಸಲಾಗಿದೆ) ಎಂಬುವವರು ಕಳೆದ ನವೆಂಬರ್ ನಲ್ಲಿ ಉಕ್ರೇನ್ ದೇಶಕ್ಕೆ ಉಕ್ರೇನಿ ಭಾಷೆ ಕಲಿಯಲೆಂದು ತೆರಳಿದ್ದರು. ಅವರಿಗೆ ಪಂಜಾಬ್ ನಲ್ಲಿ ಏಜೆಂಟ್ ಒಬ್ಬರು ಉಕ್ರೇನ್ ದೇಶಕ್ಕೆ ತೆರಳಿ ಉಕ್ರೇನಿ ಭಾಷೆ ಕಲಿಯುವಿಕೆ ತರಬೇತಿ ಪಡೆದ ನಂತರ ಅವರನ್ನು ಅಲ್ಲಿನ ಸ್ಥಳೀಯ ಏಜೆಂಟ್ ಗಳು ಪೋಲ್ಯಾಂಡ್ ಗೆ ಪ್ರವೇಶ ಒದಗಿಸುವ ಹಾಗೂ ಅನಂತರ ಪೋರ್ಚುಗಲ್ ಗೆ ತೆರಳಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರಂತೆ.

ಇದನ್ನೂ ಓದಿ: Shocking News: ಉಕ್ರೇನ್‌ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ರಾ ರಷ್ಯಾ ಸೈನಿಕರು?

ಗರಿಷ್ಠ ವಯೋಮಿತಿಯು 38:

ಉಕ್ರೇನಿ ಭಾಷೆ ಕಲಿಯಲು ಗರಿಷ್ಠ ವಯೋಮಿತಿಯು 38 ಆಗಿದ್ದು ಈ ಅಂಶ ಯುರೋಪ್ ಗೆ ಹೋಗಿ ಸೆಟಲ್ ಆಗಬಯಸುವ ಭಾರತೀಯರಿಗೆ ಮತ್ತೊಂದು ವರವಾಗಿದೆ ಎಂದು ಪ್ರಸ್ತುತ 32 ರ ಪ್ರಾಯದ ಮನಪ್ರೀತ್ ಸಿಂಗ್ ಹೆಳುತ್ತಾರೆ. ಇಲ್ಲಿ ಮತ್ತೊಂದು ವಿಷಯವೆಂದರೆ ಇತರೆ ದೇಶದವರು ಉಕ್ರೇನಿ ಭಾಷೆ ಕಲಿಯುವ ಸಂಬಂಧ ಉಕ್ರೇನ್ ದೇಶಕ್ಕೆ ತೆರಳಲು ವಿಸಾಗೆ ಅರ್ಜಿ ಸಲ್ಲಿಸಿದಾಗ ನೂರು ಪ್ರತಿಶತ ಖಚಿತವಾಗಿ ಉಕ್ರೇನಿ ವಿಸಾ ದೊರೆಯುತ್ತದೆ ಎಂದು ಹೇಳಲಾಗಿದೆ.

ಭಾಷೆ ಕಲಿಕೆಯಲ್ಲಿ ಪಂಜಾಬಿಗಳೇ ಹೆಚ್ಚು:

ಮನಪ್ರೀತ್ ಹೇಳುವಂತೆ ಬಹಳಷ್ಟು ಪಂಜಾಬಿ ಮೂಲದ ಜನರು ಇಲ್ಲಿಗೆ ಉತ್ತಮ ಹಣ ಸಂಪಾದಿಸಲು ಬರುತ್ತಾರಂತೆ. ತದನಂತರ ಇಲ್ಲಿಂದ ಬೇರೆ ಯುರೋಪ್ ದೇಶಗಳಲ್ಲಿ ಹೆಚ್ಚಿನ ಹಣ ಸಂಪಾದನೆ ಹಾಗೂ ಅವಕಾಶಗಳಿಗಾಗಿ ಯೋಜನೆ ಮಾಡಿ ಅದು ದೊರಕುವವರೆಗೆ ಸಿಗುವ ಸ್ವಲ್ಪ ಸಮಯವನ್ನು ಉಕ್ರೇನಿ ಭಾಷೆ ಕಲಿಯಲು ವಿನಿಯೋಗಿಸುತ್ತ ಇಲ್ಲಿಯೇ ಪಾರ್ಟ್ ಟೈಮ್ ದುಡಿಯುತ್ತಾರಂತೆ. ಈ ಸಂದರ್ಭದಲ್ಲಿ ಅವರು ಏನಿಲ್ಲವೆಂದರೂ ತಿಂಗಳಿಗೆ ಲಕ್ಷ ರೂಪಾಯಿಯವರೆಗೆ ಸಂಪಾದನೆ ಮಾಡುತ್ತಾರೆ ಎನ್ನುತ್ತಾರೆ ಮನಪ್ರೀತ್ ಸಿಂಗ್.

ಕಪುರ್ತಲಾ ಮೂಲದ ಇನ್ನೊಬ್ಬ ವಿದ್ಯಾರ್ಥಿ ಹೇಳುವಂತೆ ಅವನ ಹಿರಿಯ ವಿದ್ಯಾರ್ಥಿಗಳು ಉಕ್ರೇನ್ ದೇಶದಲ್ಲಿ ಉಕ್ರೇನಿ ಭಾಷೆ ಕಲಿಯುತ್ತ ಪೋರ್ಚುಗಲ್ ದೇಶದಲ್ಲಿ ಒಂದು ವರ್ಷಗಳ ಕಾಲ ದುಡಿಯಲು ಅವಕಾಶವಿರುವ ವ್ಯಾಲಿಡ್ ಪರ್ಮಿಟ್ ಅನ್ನು ಪಡೆದಿದ್ದಾರಂತೆ. ಒಂದೊಮ್ಮೆ ಈ ರೀತಿಯ ವರ್ಕ್ ಪರ್ಮಿಟ್ ಸಿಕ್ಕರೆ ಅವರು ಯುರೋಪಿನ 24 ದೇಶಗಳಲ್ಲಿ ಸುಲಭವಾಗಿ ಯಾವುದೇ ಅಡೆ-ತಡೆಗಳಿಲ್ಲದೆ ಕೆಲಸ ಮಾಡಬಹುದಾಗಿದ್ದು ಉತ್ತಮ ಸಂಪಾದನೆಯನ್ನೂ ಸಹ ಮಾಡಬಲ್ಲರು ಎಂದು ಸದ್ಯ ಉಕ್ರೇನಿನ ಕೀವ್ ಅಂತಾರಾಷ್ಟ್ರೀಯ ವಿದ್ಯಾಲಯದಲ್ಲಿ ಉಕ್ರೇನಿ ಭಾಷೆ ಕಲಿಯುತ್ತಿರುವ ಈ ಕಪುರ್ತಲಾ ಮೂಲದ ವಿದ್ಯಾರ್ಥಿ ಹೇಳುತ್ತಾನೆ.

ಉಕ್ರೇನ್ ಭಾಷೆ ಕಲಿಯಲು ಇದೇ ಕಾರಣ:

ಜಲಂಧರ್ ನಗರದಲ್ಲಿರುವ ಶೈಕ್ಷಣಿಕ ಸಲಹೆಗಾರರೊಬ್ಬರ ಪ್ರಕಾರ, ಪಂಜಾಬ್ ರಾಜ್ಯದಿಂದ ಹಲವಾರು ಯುವಕರು ಇಂಗ್ಲೀಷ್ ಪರೀಕ್ಷೆಯಲ್ಲಿ ತೇರ್ಗಡೆಯಾಗದ ಕಾರಣ ಕೆನಡಾ, ಆಸ್ಟ್ರೇಲಿಯಾ ಹಾಗೂ ಯುಕೆಗೆ ತೆರಳುವ ಅವಕಾಶಗಳಿಲ್ಲದೆ ಉಕ್ರೇನ್ ಭಾಷೆ ಅಧ್ಯಯನದ ಮೂಲಕ ಬೇರೆ ಐರೋಪ್ಯ ರಾಷ್ಟ್ರಗಳಲ್ಲಿ ಸೆಟಲ್ ಆಗಲೆಂದು ಹೆಚ್ಚು ಹೆಚ್ಚು ಉಕ್ರೇನ್ ಗೆ ತೆರಳುತ್ತಿದ್ದಾರೆಂದು ತಿಳಿಸುತ್ತಾರೆ. ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉಕ್ರೇನಿ ಭಾಷೆ ಕಲಿಯಲೆಂದು ಉಕ್ರೇನ್ ದೇಶಕ್ಕೆ ತೆರಳಿದ್ದಾರೆ. ಯಾರು ತಾನೆ ಉಕ್ರೇನ್ ಭಾಷೆ ಕಲಿಯಲು ಅಲ್ಲಿಗೆ ಹೋಗುತ್ತಾರೆ? ಎಂಬುದನ್ನು ಸಹ ಅವರು ಪ್ರಶ್ನಿಸುತ್ತಾರೆ.

ಇದ್ನನೂ ಓದಿ: Russia Ukraine War: ಆಪರೇಷನ್ ಗಂಗಾ ಅಡಿಯಲ್ಲಿ 4000 ಭಾರತೀಯರ ರಕ್ಷಣೆ

ಯುರೋಪಿನ ಬೇರೆ ದೇಶಗಳಿಗೆ ತೆರಳಲು ಇದೊಂದು ಮಾರ್ಗ:

ಕಪುರ್ತಲಾದ i-Can ಕನ್ಸೆಲ್ಟನ್ಸಿಯ ಗುರುಪ್ರೀತ್ ಸಿಂಗ್ ಅವರ ಪ್ರಕಾರ, ಉಕ್ರೇನ್ ಗೆ ತೆರಳುವ ಪ್ರಸಂಗಗಳು ಇತ್ತೀಚಿನ ಕೆಲ ಸಮಯದಿಂದ ಹೆಚ್ಚಾಗಿ ಕಂಡುಬರುತ್ತಿದ್ದು, ಕೆಲ ವಿದ್ಯಾರ್ಥಿಗಳು ಉಕ್ರೇನ್ ದೇಶಕ್ಕೆ ಉಕ್ರೇನ್ ಭಾಷೆ ಕಲಿಯಲೆಂದು ಹತ್ತು ಲಕ್ಷ ರೂಪಾಯಿಯವರೆಗೂ ಖರ್ಚು ಮಾಡಿದ್ದಾರೆಂದು ಹೇಳುತ್ತಾರೆ.

ಅವರ ಪ್ರಕಾರ, ಉಕ್ರೇನ್ ಗೆ ತೆರಳಿ ಮೂರು ತಿಂಗಳುಗಳ ಕಾಲ ಅಲ್ಲಿದ್ದು ಉಕ್ರೇನಿ ಭಾಷೆ ಕಲಿತು ಬರಲು ಎರಡೂ ಕಡೆಯ ವಿಮಾನ ಶುಲ್ಕ ಲೆಕ್ಕ ಹಾಕಿದರೆ 3 ಲಕ್ಷ ರೂ. ಸಹ ದಾಟುವುದಿಲ್ಲ. ಅಂಥದ್ದರಲ್ಲಿ ವಿದ್ಯಾರ್ಥಿಗಳು ಇಷ್ಟೊಂದು ಹಣ ವ್ಯಯಿಸಿ ಕೇವಲ ಉಕ್ರೇನಿ ಭಾಷೆ ಕಲಿಯಲೆಂದು ಹೋಗಲಾರರು ಎಂದು ವಿವರಿಸುತ್ತಾರೆ. ಬದಲಾಗಿ ಯುರೋಪಿನ ಇತರೆ ರಾಷ್ಟ್ರಗಳಿಗೆ ಪ್ರವೇಶ ಪಡೆಯಲು ಇದೊಂದು ಮಾರ್ಗವಾಗಿದ್ದು ಅದಕ್ಕಾಗಿಯೇ ಉಕ್ರೇನಿ ಭಾಷೆ ಅಧ್ಯಯನದ ಆಯ್ಕೆ ಮಾಡಿ ಉಕ್ರೇನ್ ಗೆ ಜನರು ತೆರಳುತ್ತಿರುವುದಾಗಿ ಅವರು ಹೇಳುತ್ತಾರೆ.

ಕಳೆದ ಆರೇಳು ತಿಂಗಳುಗಳಿಂದ ಪಂಜಾಬ್ ರಾಜ್ಯವೊಂದರಿಂದಲೇ ಪ್ರತಿ ತಿಂಗಳು 300-400 ಜನರು ಉಕ್ರೇನ್ ಗೆ ಭಾಷೆ ಕಲಿಯಲೆಂದು ತೆರಳಿದ್ದಾರೆಂದು ತಿಳಿದುಬಂದಿದ್ದು, ಒಟ್ಟಾರೆ ಇದು ಜನರಿಗೆ ಯುರೋಪಿನ ಬೇರೆ ದೇಶಗಳಿಗೆ ಪ್ರವೇಶ ಪಡೆಯಲು ಉತ್ತಮ ಮಾರ್ಗವಾಗಿ ಕಂಡುಬಂದಿದೆ ಎಂದು ಹೇಳಬಹುದಾಗಿದೆ.
Published by:shrikrishna bhat
First published: