• Home
  • »
  • News
  • »
  • national-international
  • »
  • Covid Alert: ಈ ದೇಶಗಳಲ್ಲಿ ಹೆಚ್ಚುತ್ತಿವೆ ಕೊರೊನಾ ಪ್ರಕರಣಗಳು: ಇಲ್ಲಿಗೆ ಹೋಗದೆ ಇರೋದೆ ಒಳ್ಳೆಯದು

Covid Alert: ಈ ದೇಶಗಳಲ್ಲಿ ಹೆಚ್ಚುತ್ತಿವೆ ಕೊರೊನಾ ಪ್ರಕರಣಗಳು: ಇಲ್ಲಿಗೆ ಹೋಗದೆ ಇರೋದೆ ಒಳ್ಳೆಯದು

ಕೊರೊನಾ ಟೆಸ್ಟ್

ಕೊರೊನಾ ಟೆಸ್ಟ್

ಚೀನಾದಲ್ಲಿ ಕೋವಿಡ್ ಪ್ರಕರಣಗಳು ಸ್ಫೋಟಗೊಳ್ಳುತ್ತಿರುವುದರಿಂದ, ಇತರ ದೇಶಗಳು ತಮ್ಮ ಕೋವಿಡ್ ಟೆಸ್ಟ್​ಗಳನ್ನು ಮತ್ತು ಅದರ ವಿರುದ್ಧ ಹೋರಾಡಲು ಬೇಕಾದ ಎಲ್ಲಾ ಅವಶ್ಯಕತೆಗಳನ್ನು ಹೆಚ್ಚಿಸುವತ್ತ ಗಮನ ಹರಿಸಿವೆ ಅಂತ ಹೇಳಬಹುದು.

  • Share this:

ಎರಡೂವರೆ ವರ್ಷದಿಂದ (Years) ಈ ಕೋವಿಡ್-19 ಸಾಂಕ್ರಾಮಿಕ ರೋಗವು ಈವಾಗ ಕಡಿಮೆ ಆಗಬಹುದು, ನಂತರ ಕಡಿಮೆ ಆಗಬಹುದು ಅನ್ನೋ ವಿಷಯದ ಬಗ್ಗೆ ಜನರು ಮತ್ತು ತಜ್ಞರು ಮಾಡಿದ ಎಲ್ಲಾ ಊಹೆಗಳು (Predictions) ತಲೆ ಕೆಳಗಾಗುತ್ತಿವೆ ಅಂತಾನೆ ಹೇಳಬಹುದು. ಏಕೆಂದರೆ ಕೋವಿಡ್-19 ಸಾಂಕ್ರಾಮಿಕ ರೋಗವು ಇನ್ನೂ ತನ್ನ ಅಟ್ಟಹಾಸವನ್ನು ಸಂಪೂರ್ಣವಾಗಿ ನಿಲ್ಲಿಸಿಲ್ಲ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಕಳೆದ ಒಂದು ವರ್ಷದಿಂದ ಕಡಿಮೆ (Less) ಆಗಿದ್ದ ಕೋವಿಡ್-19 (Covid 19) ಪ್ರಕರಣಗಳು ಇದೀಗ ಮತ್ತೆ ಕೆಲವು ದೇಶಗಳಲ್ಲಿ ಹೆಚ್ಚಾಗಲು ಶುರುವಾಗಿರುವುದು ಮತ್ತೆ ಜನರಲ್ಲಿ ಆತಂಕವನ್ನು ಹುಟ್ಟಿಸಿದೆ ಅಂತಾನೆ ಹೇಳಬಹುದು.


ಚೀನಾದಲ್ಲಿ ಕೋವಿಡ್ ಪ್ರಕರಣಗಳು ಸ್ಫೋಟಗೊಳ್ಳುತ್ತಿರುವುದರಿಂದ, ಇತರ ದೇಶಗಳು ತಮ್ಮ ಕೋವಿಡ್ ಟೆಸ್ಟ್ ಗಳನ್ನು ಮತ್ತು ಅದರ ವಿರುದ್ಧ ಹೋರಾಡಲು ಬೇಕಾದ ಎಲ್ಲಾ ಅವಶ್ಯಕತೆಗಳನ್ನು ಹೆಚ್ಚಿಸುವತ್ತ ಗಮನ ಹರಿಸಿವೆ ಅಂತ ಹೇಳಬಹುದು.


ಹೀಗೆ ಕೋವಿಡ್-19 ಪ್ರಕರಣಗಳು ಮುಂಬರುವ ದಿನಗಳಲ್ಲಿ ಹೆಚ್ಚಾದಲ್ಲಿ ಮತ್ತೆ ವಿದೇಶ ಪ್ರಯಾಣ ನಿರ್ಬಂಧಗಳನ್ನು ವಿಧಿಸಲು ಸರ್ಕಾರ ಮುಂದಾಗಬಹುದೇನೋ ಎಂಬ ಆತಂಕ ಜನರಲ್ಲಿ ಶುರುವಾಗಿದೆ. ಕೋವಿಡ್ ಪ್ರಕರಣಗಳಲ್ಲಿ ಹಠಾತ್ ಏರಿಕೆ ಕಂಡ ಕೆಲವು ದೇಶಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ. ನೀವು ಸದ್ಯಕ್ಕೆ ಈ ದೇಶಗಳಿಗೆ ಪ್ರಯಾಣಿಸದೇ ಇರುವುದು ಒಳ್ಳೆಯದು.


1. ಜಪಾನ್


ಕೋವಿಡ್-19 ಸಾಂಕ್ರಾಮಿಕ ರೋಗದ ಹೊಸ ಅಲೆಯೊಂದು ಶುರುವಾಗಿದ್ದು, ಇದೀಗ ಜಪಾನ್ ಪ್ರತಿದಿನ 2 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ದಾಖಲಿಸುತ್ತಿದೆ, ಇದು ಆಗಸ್ಟ್ 25 ರಿಂದ ಒಂದೇ ದಿನದಲ್ಲಿ ಈ ಸಂಖ್ಯೆ 2 ಲಕ್ಷದ ಗಡಿ ದಾಟಿರುವುದು ಇದೇ ಮೊದಲು. ಇದನ್ನು ಇತ್ತೀಚೆಗೆ ದೇಶದ ಆರೋಗ್ಯ ಅಧಿಕಾರಿಗಳು ವರದಿ ಮಾಡಿದ್ದಾರೆ.


2. ಯುನೈಟೆಡ್ ಸ್ಟೇಟ್ಸ್ (ಅಮೆರಿಕ)


ಯುನೈಟೆಡ್ ಸ್ಟೇಟ್ಸ್ ಕೂಡ ಕೋವಿಡ್ ಪ್ರಕರಣಗಳಲ್ಲಿ ಹಠಾತ್ ಏರಿಕೆಯನ್ನು ಕಾಣುತ್ತಿದೆ ಅಂತ ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಕಳೆದ 28 ದಿನಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದೆ. ಅದರಂತೆ, 2020 ರಿಂದ ದೇಶದಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ ಡಿಸೆಂಬರ್ 21 ರಂದು 100 ಮಿಲಿಯನ್ ದಾಟಿದೆ.


3. ದಕ್ಷಿಣ ಕೊರಿಯಾ


ದಕ್ಷಿಣ ಕೊರಿಯಾದಲ್ಲಿ ಇಂದು 68 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ವಿದೇಶದಿಂದ ಬಂದ 95 ಪ್ರಕರಣಗಳು ಸೇರಿವೆ. ಇಂದಿನ ಎಣಿಕೆಯು ಒಂದು ವಾರದ ಹಿಂದಿನದಕ್ಕಿಂತ ಸುಮಾರು 1200 ರಷ್ಟು ಹೆಚ್ಚಾಗಿದೆ. ವರದಿಯ ಪ್ರಕಾರ, ಚಳಿಗಾಲದ ಅಲೆಯ ನಡುವೆ ಕಳೆದ ಹಲವಾರು ವಾರಗಳಿಂದ ದೈನಂದಿನ ಪ್ರಕರಣಗಳು ಸ್ಥಿರವಾದ ಬೆಳವಣಿಗೆಯನ್ನು ದಾಖಲಿಸುತ್ತಿವೆ.


ಇದನ್ನೂ ಓದಿ: Mann Ki Baat: ಮೋದಿ ಮನ್ ಕಿ ಬಾತ್‌ನಲ್ಲಿ ಕೊರೊನಾ ಬಗ್ಗೆ ಜಾಗೃತಿ, ಶಿವಮೊಗ್ಗ ದಂಪತಿ ಬಗ್ಗೆ ಪ್ರಧಾನಿ ಮೆಚ್ಚುಗೆ!


4. ಚೀನಾ


ಚೀನಾವು ವಯಸ್ಸಾದವರನ್ನು ತೀವ್ರವಾಗಿ ಬಾಧಿಸಿದ ಸೋಂಕುಗಳ ಕೆಟ್ಟ ಅಲೆಯ ವಿರುದ್ಧ ಹೋರಾಡುತ್ತಿದೆ. ಇದು 2019 ರಲ್ಲಿ ಚೀನಾದಲ್ಲಿ ಪ್ರಾರಂಭವಾಯಿತು ಮತ್ತು ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದ ಮತ್ತೊಮ್ಮೆ ಚೀನಾ ರಾಷ್ಟ್ರವು ಪೀಡಿತವಾಗಿದೆ. ಇದು ವಿಶ್ವದ ಇತರ ಭಾಗಗಳನ್ನು ಸಹ ಚಿಂತೆಗೀಡು ಮಾಡಿದೆ, ಅವರು ಕಠಿಣ ಪ್ರಯಾಣ ನಿರ್ಬಂಧಗಳನ್ನು ವಿಧಿಸಲು ಮತ್ತು ಆಕ್ರಮಣಕಾರಿ ಪರೀಕ್ಷಾ ಮಾನದಂಡಗಳನ್ನು ಪರಿಚಯಿಸಲು ಸಜ್ಜಾಗುತ್ತಿದ್ದಾರೆ.


5. ಬ್ರೆಜಿಲ್


ಬ್ರೆಜಿಲ್ ನಲ್ಲಿ ಇತ್ತೀಚಿನ ವಾರಗಳಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಹೊಸ ಪ್ರಕರಣಗಳು ಈಗ ಇರುವ ಓಮಿಕ್ರಾನ್ ಉಪ-ರೂಪಾಂತರಗಳೊಂದಿಗೆ ಸಂಬಂಧ ಹೊಂದಿವೆಯೇ ಎಂದು ನಿರ್ಧರಿಸಲು ಇನ್ನೂ ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.


6. ಜರ್ಮನಿ


ದಾಖಲೆಗಳ ಪ್ರಕಾರ, ಜರ್ಮನಿ ಕಳೆದ ಕೆಲವು ದಿನಗಳಿಂದ 40 ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳನ್ನು ದಾಖಲಿಸುತ್ತಿದೆ. ಆದ್ದರಿಂದ ಈ ದೇಶವು ಈ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಕಂಡುಕೊಳ್ಳುತ್ತದೆ, ಇಲ್ಲಿಗೆ ಸದ್ಯಕ್ಕೆ ಪ್ರಯಾಣ ಬೆಳೆಸುವುದು ಒಳ್ಳೆಯದಲ್ಲ ಎಂದು ತಜ್ಞರು ಸಲಹೆ ನೀಡಿದ್ದಾರೆ.


7. ಫ್ರಾನ್ಸ್


ವರದಿಗಳ ಪ್ರಕಾರ, ಫ್ರಾನ್ಸ್ ಕಳೆದ 28 ದಿನಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದೆ, ಮತ್ತು ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ದೇಶಗಳಲ್ಲಿ ಇದು ಸಹ ಒಂದಾಗಿದೆ. ಸದ್ಯಕ್ಕೆ ನೀವು ಈ ದೇಶಕ್ಕೆ ಹೋಗದೆ ಇರುವುದು ಒಳ್ಳೆಯದು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು