Crime News: ಗೋಡೆ ಮೇಲೆ ಸತ್ತು ಅಂಟಿದ್ದ ಸೊಳ್ಳೆಯಿಂದ ಸಿಕ್ಕಿಬಿದ್ದ ಕಳ್ಳ! ಈ ಪೊಲೀಸ್​ ಸ್ಟೋರಿ ಸಖತ್ತಾಗಿದೆ

ಇಲ್ಲೊಬ್ಬ ಅಪಾರ್ಟ್​ಮೆಂಟ್​ಗೆ (Apartment) ನುಗ್ಗಿದ ಕಳ್ಳನನ್ನು ಪೊಲೀಸರು (Police) ಹಿಡಿದಿದ್ದಾರೆ. ಆದರೆ ಇದರಲ್ಲೇನು ಅಚ್ಚರಿ ಎಂದು ನೀವಂದುಕೊಂಡಿದ್ದರೆ, ಆತ ಸಾಯಿಸಿದ ಸೊಳ್ಳೆಯಿಂದಲೇ ಸಿಕ್ಕಿಬಿದ್ದಿದ್ದಾನೆ!.

ಗೋಡೆ ಮೇಲೆ ಸತ್ತು ಅಂಟಿರುವ ಸೊಳ್ಳೆ

ಗೋಡೆ ಮೇಲೆ ಸತ್ತು ಅಂಟಿರುವ ಸೊಳ್ಳೆ

  • Share this:
    ಹಿಂದೆಲ್ಲಾ ಕಳ್ಳತನವಾದರೆ ಕಳ್ಳನನ್ನು (Burgular) ಹಿಡಿಯಲು ವರ್ಷಾನುಗಟ್ಟಲೆ ಸಮಯ ಬೇಕಾಗುತ್ತಿತ್ತು. ಆದರೆ ಈಗ ಹಾಗಲ್ಲ, ತಂತ್ರಜ್ಞಾನ (Technology) ಬೆಳೆದಿದೆ. ಸಿಸಿ ಕ್ಯಾಮೆರಾದ (CC Camera) ಮೂಲಕ, ಆತ ಓಡಾಡಲು ಬಳಸುತ್ತಿದ್ದ ವಾಹನದಿಂದಾದರೂ ಕಳ್ಳನನ್ನು ಒಂದು ವಾರದ ಒಳಗೆ ಪೊಲೀಸರು ಹಿಡಿಯುತ್ತಾರೆ. ಆದರೆ ಇಲ್ಲೊಂದು ಅಚ್ಚರಿ ಸಂಗತಿ ಇದೆ. ಅದೇನೆಂದರೆ ಇಲ್ಲೊಬ್ಬ ಅಪಾರ್ಟ್​ಮೆಂಟ್​ಗೆ (Apartment) ನುಗ್ಗಿದ ಕಳ್ಳನನ್ನು ಪೊಲೀಸರು (Police) ಹಿಡಿದಿದ್ದಾರೆ. ಆದರೆ ಇದರಲ್ಲೇನು ಅಚ್ಚರಿ ಎಂದು ನೀವಂದುಕೊಂಡಿದ್ದರೆ, ಆತ ಸಾಯಿಸಿದ ಸೊಳ್ಳೆಯಿಂದಲೇ ಸಿಕ್ಕಿಬಿದ್ದಿದ್ದಾನೆ!. ಕೇಳಲು ತಮಾಷೆ ಅನಿಸಿದರೂ ಪೊಲೀಸರು ಆ ಕಳ್ಳ (Theif)ನನ್ನು ಹಿಡಿಯಲು ಏನೆಲ್ಲಾ ಸರ್ಕಸ್​ ಮಾಡಿದ್ದಾರೆ ಗೊತ್ತಾ? ಈ ಸ್ಟೋರಿ ಓದಿ.

    ಚೀನಾದ ಫುಜಿಯಾನ್​ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಕೋಣೆಯೊಂದರ ಗೋಡೆಯಲ್ಲಿ ಸತ್ತಿದ್ದ ಸೊಳ್ಳೆಯಿಂದ ಆ ಕಳ್ಳ ಸಿಕ್ಕಿಬಿದ್ದಿದ್ದಾನೆ ಎಂದರೆ ನಿಜವಾಗಲೂ ಅಚ್ಚರಿಯ ಸಂಗತಿಯಾಗಿದೆ. ಅಂದಹಾಗೆಯೇ, ಸತ್ತ ಸೊಳ್ಳೆಯಿಂದ ತನಿಖಾಧಿಕಾರಿಗಳು ಈ ಪ್ರಕರಣವನ್ನು ಹೇಗೆ ಜಯಿಸಿದರು ಎಂಬುದನ್ನು ತಿಳಿದುಕೊಳ್ಳಲೇಬೇಕು.

    ಪೂರ್ವ ಚೀನಾದ ಫುಜಿಯಾನ್ ಪ್ರಾಂತ್ಯದ ಫುಝೌನಲ್ಲಿನ ಅಪಾರ್ಟ್​ಮೆಂಟ್​ವೊಂದಕ್ಕೆ ಕಳ್ಳನು ನುಗ್ಗುತ್ತಾನೆ. ಆದರೆ ಕಳ್ಳತನವಾಗಿರುವುದು ನಿಜವಾದರೂ ಕಳ್ಳನ ಒಂದೇ ಒಂದು ಸುಳಿವು ಪೊಲೀಸರಿಗೆ ಸಿಕ್ಕಿರುವುದಿಲ್ಲ. ಆದರೆ ಪೊಲೀಸರ ಅನುಮಾನದಂತೆ ಕಳ್ಳ ರಾತ್ರಿ ಆ ಕೋಣೆಯಲ್ಲೇ ತಂಗಿದ್ದಾನೆ. ಬಾಲ್ಕನಿ ಮತ್ತು ಮನೆಯ ಕೋಣೆಯೊಳಗಡೆ ಸುತ್ತಾಡಿದ್ದಾನೆ. ಆದರೆ ರಾತ್ರಿ ವೇಳೆ ಕೋಣೆಯಲ್ಲಿ ಸೊಳ್ಳೆಯ ಉಪಟಳವಿತ್ತು. ಹಾಗಾಗಿ ಕಳ್ಳ ಕಚ್ಚಿದ ಸೊಳ್ಳೆಯನ್ನು ಕೊಂದಿದ್ದಾನೆ. ಹೀಗೆ ಗೋಡೆಯ ಬಳಿ ಬಂದ ಸೊಳ್ಳೆಯನ್ನು ಕಳ್ಳ ಕೊಂದಿದ್ದಾನೆ. ಹಾಗಾಗಿ ಸೊಳ್ಳೆ ಗೋಡೆಯಲ್ಲೇ ಅಂಟಿಕೊಟ್ಟಿತ್ತು. ಮಾತ್ರವಲ್ಲದೆ, ರಕ್ತದ ಕಲೆಯೂ ಗೋಡೆಯಲ್ಲಿ ಅಂಟಿತ್ತು.

    ಗೋಡೆಗೆ ಅಂಟಿದ್ದ ರಕ್ತದ ಕಲೆಯು ತನಿಖಾಧಿಕಾರಿಗಳ ಕಣ್ಣಿಗೆ ಬಿತ್ತು. ಇದರ ಮೂಲಕ ಡಿಎನ್ಎಗಾಗಿ ರಕ್ತವನ್ನು ಪರೀಕ್ಷಿಸಲು ನಿರ್ಧರಿಸಿದರು.

    ಇದನ್ನೂ ಓದಿ: Video: ವಿಶ್ವದ ವಿಷಕಾರಿ ಪಕ್ಷಿ ಇದು! ಭಾರತದಲ್ಲಿದೆಯಾ ಈ ಡೇಂಜರಸ್​ ಹಕ್ಕಿ?

    ಗ್ಲೋಬಲ್ ಟೈಮ್ಸ್ ಪ್ರಕಾರ, ತನಿಖಾಧಿಕಾರಿ ಕೋಣೆಯನ್ನೆಲ್ಲಾ ಪರಿಶೀಲಿಸಿದ್ದಾರೆ. ಕಳ್ಳ ಅಡುಗೆಮನೆಯಲ್ಲಿ ಉಳಿದ ನೂಡಲ್ಸ್ ಮತ್ತು ಬೇಯಿಸಿದ ಮೊಟ್ಟೆಗಳನ್ನು ಸೇವಿಸಿದ್ದಾನೆ, ಬೆಡ್​ಶೀಟ್​ ಮತ್ತು ದಿಂಬುಗಳನ್ನು ವಾಡ್​ರೂಬ್​ನಿಂದ ತೆಗೆದುಕೊಂಡಿದ್ದಾನೆ, ಮಾತ್ರವಲ್ಲದೆ ಹಾಸಿಗೆಯ ಮೇಲೆ ಮಲಗಿದ್ದಾನೆ ಎಂದು ವಿಚಾರಣೆ ವೇಳೆ ಗೊತ್ತಾಗಿದೆ.



    ಇದನ್ನೂ ಓದಿ: Weight Loss: ಗ್ರೀನ್ ಟೀ ಕುಡಿಯಿರಿ, ತೂಕ ಇಳಿಸಿಕೊಳ್ಳಿ! ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ?

    ಅದರ ಜೊತೆಗೆ ಕಳ್ಳ ಧೂಪದ ತುಂಡುಗಳನ್ನು ಸುಟ್ಟುಹಾಕಿದ್ದಾನೆ. ಆದರೆ ತನಿಖಾಧಿಕಾರಿಗಳು ಮಾತ್ರ ಸತ್ತ ಸೊಳ್ಳೆ ಮತ್ತು ಗೋಡೆಯೊಂದರ ಮೇಲಿರುವ ರಕ್ತದ ಕಲೆಗಳನ್ನು ನೋಡಿದಾಗ, ಇದರ ಮೂಲಕ ಕಳ್ಳನನ್ನು ಹಿಡಿಯಬಹುದು ಎಂದು ನಿರ್ಧರಿಸುತ್ತಾರೆ.

    ರಕ್ತವನ್ನು ಡಿಎನ್‌ಎ ಪರೀಕ್ಷೆ ಒಳಪಡಿಸಿದ ನಂತರ. ರಕ್ತವು ಚಾಯ್ ಎಂಬ ವ್ಯಕ್ತಿಗೆ ಸೇರಿದೆ ಎಂದು ತಿಳಿದುಬರುತ್ತದೆ, ಆತ ಸಾಕಷ್ಟು ಕ್ರಿಮಿನಲ್ ಕೇಸ್​ಗಳನ್ನು ಹೊಂದಿದ್ದನು. ಕಳ್ಳತನವಾದ 19 ದಿನಗಳ ನಂತರ ಚಾಯ್​ ಸಿಕ್ಕಿಬಿದ್ದಿದ್ದಾನೆ, ಬಳಿಕ ಚಾಯ್‌ನನ್ನು ವಿಚಾರಣೆ ನಡೆಸಲಾಯಿತು ಮತ್ತು ಕಳ್ಳತನವನ್ನು ತಾನೇ ಮಾಡಿರುವುದಾಗಿ ಒಪ್ಪಿಕೊಳ್ಳುತ್ತಾನೆ.

    ಮೊದಲೇ ಹೇಳಿದಂತೆ, ಈಗಂತೂ ತಂತ್ರಜ್ಞಾನ ಬೆಳೆದಿದೆ. ವೇಗವಾಗಿ ಕಳ್ಳನನ್ನು ಹಿಡಿಯಬಹುದಾಗಿದೆ. ಆದರೆ ಕಾನೂನು, ಶಿಕ್ಷೆ, ತಂತ್ರಜ್ಞಾನ ಇವುಗಳನ್ನು ನೋಡಿದ ಮೇಲೂ ಕಳ್ಳತನ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ದಿನಕ್ಕೊಂದರಂತೆ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಕಾನೂನು, ಶಿಕ್ಷೆಯನ್ನು ಎಷ್ಟೇ ಬಿಗಿಗೊಳಿಸಿದರು ಇಂತಹ ಪ್ರಕರಣಗಳು ಕಾಣಿಸುತ್ತಲೇ ಇವೆ.
    Published by:Harshith AS
    First published: