ನೀರಿನಲ್ಲಿ ಮಳುಗಿತು ಮಸೀದಿ : ಮುಸ್ಲೀಮರ ನಮಾಜ್​ಗೆ ಅವಕಾಶ ಮಾಡಿಕೊಟ್ಟ ದೇವಸ್ಥಾನ..!

news18
Updated:August 23, 2018, 6:56 PM IST
ನೀರಿನಲ್ಲಿ ಮಳುಗಿತು ಮಸೀದಿ : ಮುಸ್ಲೀಮರ ನಮಾಜ್​ಗೆ ಅವಕಾಶ ಮಾಡಿಕೊಟ್ಟ ದೇವಸ್ಥಾನ..!
news18
Updated: August 23, 2018, 6:56 PM IST
 ನ್ಯೂಸ್ 18 ಕನ್ನಡ 

ತ್ರಿಶ್ಶೂರ್ ( ಆಗಸ್ಟ್ 23) :  ಕೇರಳದ ತ್ರಿಶ್ಶೂರ್​ ಜಿಲ್ಲೆಯ ಮಾಲ ಸಮೀಪದ ಇರುವತ್ತೂರಿನಲ್ಲಿರುವ ಪುರಪ್ಪಿಲ್ಲಿಕ್ಕಾವು ರಕ್ತೇಶ್ವರಿ ದೇವಾಲಯದಲ್ಲಿ ಮೊನ್ನೆ ಬಕ್ರೀದ್​ ದಿನ ನೆರೆ ಸಂತ್ರಸ್ತ ಮುಸ್ಲಿಮ್​ ಸಮುದಾಯದವರೆಲ್ಲಾ ಪ್ರಾರ್ಥನೆ ಸಲ್ಲಿಸಿದ ಚಿತ್ರವಿದು.

ನಮ್ಮ ಕರಾವಳಿಯಲ್ಲೂ ಆರಾಧಿಸುತ್ತಿರುವ ದೈವ ರಕ್ತೇಶ್ವರಿಯ ಭಕ್ತಿ ಗಾನ ಕೇಳಿಸುತ್ತಿದ್ದ ಮೈಕ್​ನಲ್ಲಿ ಅಂದು ಕೊಚ್ಚುಕಡವ್ ಮಹಲ್​ ಮಸೀದಿಯ ಉಸ್ತಾದ್​ ಜಸೀರ್​ ದಾರಿಮಿಯವರ ನೇತೃತ್ವದಲ್ಲಿ ಈದುಲ್​ ಅಝ್​ಹಾ ಪ್ರಾರ್ಥನೆ ಕೇಳಿಸಿತು.

ಗರ್ಭಗುಡಿಯೊಳಗಿದ್ದ ರಕ್ತೇಶ್ವರಿ ಬೆನ್ನ ಮೇಲಿನ ಅಣಿಯನ್ನು ಅಲ್ಲಾಡಿಸಿತ್ತು! ಭೀಕರ ನೆರೆಗೆ ತ್ರಿಶ್ಯೂರ್​ ಜಿಲ್ಲೆಯಲ್ಲೇ 3 ಸಾವಿರ ಜನ ಬೀದಿಗೆ ಬಂದಿದ್ದಾರೆ.. ಈ ಸಲ ಕೊಚ್ಚುಕಡವ್​ ಮಸೀದಿಯಲ್ಲಿ ನೆರೆ ನೀರು ನಿಂತಿದ್ದರಿಂದ ಬಕ್ರೀದ್ ಆಚರಿಸಲಾಗಲ್ಲ ಎಂದೇ ತೀರ್ಮಾನಿಸಿದ್ದರಂತೆ.

ಇವರ ನೋವನ್ನು ಅರಿತ ಪರಿಹಾರ ಕಾರ್ಯಗಳಲ್ಲಿ ಸಂಪೂರ್ಣ ತೊಡಗಿಕೊಂಡಿದ್ದ ರಕ್ತೇಶ್ವರಿ ಗುಡಿಯ ಆಡಳಿತ ಮಂಡಳಿಯವರು ತಮ್ಮ ದೇವಾಲಯದೊಳಗಿನ ಅಗ್ರಹಾರದಲ್ಲೇ ನಮಾಜು ಮಾಡಿ ಎಂದು ಆಹ್ವಾನಿಸಿದರಂತೆ. ಅಂದು 300 ಜನ ಅಲ್ಲಿ ನಮಾಜು ಮಾಡಿದ್ದರು.
First published:August 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...