Mosque  In Water: ನೀರಿನಿಂದ ಮೇಲೆದ್ದ ಮಸೀದಿ! ಕುತೂಹಲದಲ್ಲಿ ಮುಸ್ಲಿಂ ಸಮುದಾಯ

ನೀರಿನಲ್ಲಿ ಮುಳುಗಿದ್ದ ಈ ಮಸೀದಿ ನೀರಿನಿಂದ ಹೊರಬಂದು ಸಂಪೂರ್ಣ ಕಾಣುತ್ತಿದ್ದಂತೆ ಅನೇಕ ಮುಸ್ಲಿಂ ಯುವಕರು ಕೈಯಲ್ಲಿ ಗುದ್ದಲಿ ಹಿಡಿದು ಕೆಸರು ಪ್ರವೇಶಿಸಿ ಮಸೀದಿ ಬಳಿ ತಲುಪಿದ್ದಾರೆ.

ಮಸೀದಿ

ಮಸೀದಿ

  • Share this:
    ಪಾಟ್ನಾ: ಹಲವು ವರ್ಷಗಳಿಂದ ನೀರಿನಲ್ಲಿ ಮುಳುಗಿದ್ದ ಬಿಹಾರದ ಚಿರೈಲಾ ಗ್ರಾಮದ ಮಸೀದಿಯೊಂದು ಇದೀಗ ಸಂಪೂರ್ಣ ಗೋಚರಿಸಿದೆ. ಈ ಸುದ್ದಿ ಶುಕ್ರವಾರ ಇಡೀ ಪ್ರದೇಶದಲ್ಲಿ ಹಬ್ಬಿದ್ದು, ಜನರಲ್ಲಿ ಕುತೂಹಲಕ್ಕೆ ಕಾರಣವಾಗಿದೆ. 120 ವರ್ಷಗಳಷ್ಟು ಹಳೆಯದು ಎಂದು ಹೇಳಲಾದ ಈ ಮಸೀದಿಯು ಬಿಹಾರದ (Bihar) ನವಾಡ ಜಿಲ್ಲೆಯ ರಜೌಲಿ ಬ್ಲಾಕ್‌ನ ಫುಲ್ವಾರಿಯಾ ಅಣೆಕಟ್ಟಿನ ದಕ್ಷಿಣ ಭಾಗದಲ್ಲಿ ಪತ್ತೆಯಾಗಿದೆ. ಈ ಮಸೀದಿಯು (Mosque  In Water) ಮೂರು ದಶಕಗಳ ಕಾಲ ಸಂಪೂರ್ಣ ನೀರಿನಲ್ಲಿ (Submerged Mosque Reappears In Bihar) ಮುಳುಗಿದ್ದು, ಬಳಿಕವೂ ಕಿಂಚಿತ್ತೂ ಹಾನಿಯಾಗಿಲ್ಲ ಎಂಬುದು ಆಶ್ಚರ್ಯಕ್ಕೆ ಕಾರಣವಾಗಿದೆ. ಅಲ್ಲದೇ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. 

    ನೀರಿನಲ್ಲಿ ಮುಳುಗಿದ್ದ ಈ ಮಸೀದಿ ನೀರಿನಿಂದ ಹೊರಬಂದು ಸಂಪೂರ್ಣ ಕಾಣುತ್ತಿದ್ದಂತೆ ಅನೇಕ ಮುಸ್ಲಿಂ ಯುವಕರು ಕೈಯಲ್ಲಿ ಗುದ್ದಲಿ ಹಿಡಿದು ಕೆಸರು ಪ್ರವೇಶಿಸಿ ಮಸೀದಿ ಬಳಿ ತಲುಪಿದ್ದಾರೆ. ಅನೇಕ ಮುಸ್ಲಿಂ ಕುಟುಂಬಗಳ ಮಹಿಳೆಯರು ಸಹ ಮಸೀದಿಯನ್ನು ನೋಡಲು ಕುತೂಹಲದಿಂದ ಸ್ಥಳಕ್ಕೆ ಆಗಮಿಸಿದ್ದಾರೆ. ಮಸೀದಿಯ ಬಳಿ ತೆರಳಲು ಪ್ರಯತ್ನಿಸಿದರೂ ಕೆಸರು ಮತ್ತು ನೀರಿನಿಂದ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ.

    ಈ ಮುನ್ನ ಗುಮ್ಮಟದ ಒಂದು ಭಾಗ ಪಾತ್ರ ಕಾಣುತ್ತಿತ್ತು
    ಫುಲ್ವಾರಿಯಾ ಅಣೆಕಟ್ಟನ್ನು 1984 ರಲ್ಲಿ ನಿರ್ಮಿಸಲಾಗಿದೆ. ಅದಕ್ಕೂ ಮೊದಲು ಈ ಸ್ಥಳವು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿತ್ತು. ಅಣೆಕಟ್ಟು ನಿರ್ಮಾಣಕ್ಕಾಗಿ ಈ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು.

    ಇದನ್ನೂ ಓದಿ: Survivor Of Amazon Tribe: ಹೆಸರೇ ಇಲ್ಲದ, ಹೊರಜಗತ್ತಿನ ಸಂಪರ್ಕ ಇರದ ವ್ಯಕ್ತಿ ನಿಧನ

    ನಂತರ ಈ ಸ್ಥಳಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲಾಗಿದ್ದು ಅವರೆಲ್ಲರೂ ಸಮೀಪದ ಹಾರ್ದಿಯಾ ಎಮಬ ಪ್ರದೇಶದಲ್ಲಿ ನೆಲೆಸಿದ್ದಾರೆ. ಅಣೆಕಟ್ಟು ಕಟ್ಟಿದ ನಂತರ ಮಸೀದಿಯನ್ನು ಹಾಗೆಯೇ ಬಿಡಲಾಗಿತ್ತು. ಈ ಹಿಂದೆ ನೀರಿನ ಮಟ್ಟ ಕಡಿಮೆಯಾದಾಗ, ಮಸೀದಿಯ ಮೇಲಿನ ಗುಮ್ಮಟದ ಒಂದು ಭಾಗ ಮಾತ್ರ ಗೋಚರಿಸುತ್ತಿತ್ತು. ಆದರೆ ಈ ಬಾರಿ ಇಡೀ ಮಸೀದಿಯೇ ಕಾಣುತ್ತಿರುವುದು ಸ್ಥಳೀಯರ ಕುತೂಹಲ ಕೆರಳಿಸಿದೆ.

    ಸುಮಾರು 30 ಅಡಿ ಎತ್ತರದ ಮಸೀದಿ
    ಜನರು ಈ ಮಸೀದಿಯ ಬಗ್ಗೆ ಏನೂ ಮಾಡಲು ಸಾಧ್ಯವಾಗಿರಲಿಲ್ಲ. ಈಗ ನೀರು ಇಳಿದಿದ್ದು ಮಸೀದಿಯು ಸಂಪೂರ್ಣವಾಗಿ ಗೋಚರಿಸಿದೆ. ಹೀಗಾಗಿ ಮಸೀದಿಯನ್ನು ಸಂಪೂರ್ಣವಾಗಿ ನೋಡಲು ಮತ್ತು ಈ ಕಟ್ಟಡದ ವಾಸ್ತುಶಿಲ್ಪವನ್ನು ವೀಕ್ಷಿಸಬಹುದಾಗಿದೆ.  ನೆಲದಿಂದ ಮೇಲಿನ ಗುಮ್ಮಟದವರೆಗೆ ಮಸೀದಿಯ ಎತ್ತರ ಸುಮಾರು 30 ಅಡಿ ಎಂದು ಹೇಳಲಾಗಿದೆ.

    ಹೆಸರೇ ಇಲ್ಲದ, ಹೊರಜಗತ್ತಿನ ಸಂಪರ್ಕ ಇರದ ವ್ಯಕ್ತಿ ನಿಧನ
    ಹೊರಜಗತ್ತಿನ ಜೊತೆ ಯಾವುದೇ ಸಂಪರ್ಕವನ್ನೂ ಇಟ್ಟುಕೊಳ್ಳದಿದ್ದ ಅಮೆಜಾನ್ ಬುಡಕಟ್ಟು ಜನಾಂಗವೊಂದರಲ್ಲಿ  ಬದುಕಿದ್ದ ಕೊನೆಯ ವ್ಯಕ್ತಿಯೂ ಮೃತಪಟ್ಟಿದ್ದಾರೆ. ಈ ವ್ಯಕ್ತಿ 20 ವರ್ಷಗಳಿಗೂ ಹೆಚ್ಚು ಕಾಲ ಅಮೆಜಾನ್‌ ಕಾಡಿನಲ್ಲಿ ಹಣ್ಣು, ಬೀಜಗಳನ್ನು ಸೇವಿಸುತ್ತಾ ಏಕಾಂಗಿಯಾಗಿ ಬದುಕಿದ್ದರಂತೆ. ಹೊರಜಗತ್ತಿನ ಜೊತೆ ಯಾವುದೇ ಸಂಪರ್ಕವನ್ನೂ ಇಟ್ಟುಕೊಳ್ಳದಿದ್ದ ಬುಡಕಟ್ಟು ಜನಾಂಗದ ಕೊನೆಯ ವ್ಯಕ್ತಿಯ ಹೆಸರು ಸಹ ಯಾರಿಗೂ ತಿಳಿದಿರಲಿಲ್ಲ. ಹೀಗಾಗಿ ಅವರ ನಿಧನವು ಇದೀಗ ಜಗತ್ತಿನಾದ್ಯಂತ ಸುದ್ದಿ ಮಾಡುತ್ತಿದೆ. ಈ ವ್ಯಕ್ತಿ ಮಳೆಕಾಡಿನಲ್ಲಿ ಪ್ರತ್ಯೇಕವಾಗಿ ವಾಸಿಸುವ ಸ್ಥಳೀಯ ಜನರ ಹೋರಾಟದ ಸಂಕೇತ ಎಂದೇ ವ್ಯಾಖ್ಯಾನಿಸಲ್ಪಟ್ಟಿದ್ದರು. ಈ ವ್ಯಕ್ತಿಯ ಚಿತ್ರವೊಂದನ್ನು ಬ್ರೆಜಿಲ್‌ನ ನ್ಯಾಷನಲ್ ಇಂಡಿಯನ್ ಫೌಂಡೇಶನ್‌ ಮಾರ್ಚ್ 2011 ರಲ್ಲಿ ಚಿತ್ರಿಸಿತ್ತು.

    ಇದನ್ನೂ ಓದಿ: Rajnath Singh: ರಾಜನಾಥ್ ಸಿಂಗ್​ಗೆ ಮಂಗೋಲಿಯಾ ಕುದುರೆ ಉಡುಗೊರೆ! ಏನಿದರ ವಿಶೇಷತೆ?

    ಪ್ರಾಚೀನ ಅಮೆಜಾನ್ ಕಾಡನ್ನು ಆಕ್ರಮಿಸಲು ಹಲವರು ನಡೆಸಿದ ಆಕ್ರಮಣಗಳನ್ನು ಇವರು ಮುಖತಃ ನೋಡಿದ್ದರು. ಅನುಭವಿಸಿದ್ದರು. ತಮ್ಮ ಜೀವನದಲ್ಲಿ ಹಲವು ಹತ್ಯಾಕಾಂಡಗಳನ್ನು ನೋಡಿದ್ದರು ಎಂದು ವರದಿಯಾಗಿದೆ.
    Published by:guruganesh bhat
    First published: