Demolition: ಅತಿಕ್ರಮಣ ವಿರೋಧಿ ಅಭಿಯಾನದ ಭಾಗವಾಗಿ ದೆಹಲಿಯಲ್ಲಿ ಮಸೀದಿ, ದೇವಸ್ಥಾನ ನೆಲಸಮ

ಧಾರ್ಮಿಕ ಕಟ್ಟಡಗಳ ತೆರವು

ಧಾರ್ಮಿಕ ಕಟ್ಟಡಗಳ ತೆರವು

ದೆಹಲಿ ರಾಷ್ಟ್ರೀಯ ಹೆದ್ದಾರಿಗಾಗಿ ಅಕ್ಷರಧಾಮ ಜಂಕ್ಷನ್-ದೆಹಲಿ-ಉತ್ತರ ಪ್ರದೇಶ ಗಡಿಯ ದೆಹಲಿ ಭಾಗದಲ್ಲಿ ಇರುವ 23 ಧಾರ್ಮಿಕ ಕಟ್ಟಡಗಳ ಪೈಕಿ 9 ಅನಧಿಕೃತ ಕಟ್ಟಡವನ್ನು ತೆರವುಗೊಳಿಸುವ ಪ್ರಕ್ರಿಯೆಗೆ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿಕೆ ಸಕ್ಸೇನಾ ಅನುಮೋದನೆ ನೀಡಿದರು.

  • News18 Kannada
  • 3-MIN READ
  • Last Updated :
  • Delhi, India
  • Share this:

ನವದೆಹಲಿ: ಸಾರ್ವಜನಿಕ ರಸ್ತೆಯನ್ನು ಅಕ್ರಮವಾಗಿ ಕಬಳಿಸಿಕೊಂಡಿದ್ದ ಮಸೀದಿ (Mosque) ಮತ್ತು ದೇವಸ್ಥಾನವನ್ನು (Temple Demolition) ಅತಿಕ್ರಮಣ ವಿರೋಧಿ ಅಭಿಯಾನದ ಅಂಗವಾಗಿ ಹೈಕೋರ್ಟ್ (High Court) ಆದೇಶದ ಮೇರೆಗೆ ದೆಹಲಿಯ ಪಿಡಬ್ಲ್ಯೂಡಿ (PWD) ಅಧಿಕಾರಿಗಳು ನೆಲಸಮ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಾಗಿ ಅಕ್ಷರಧಾಮ ಜಂಕ್ಷನ್-ದೆಹಲಿ-ಉತ್ತರ ಪ್ರದೇಶ ಗಡಿಯ ದೆಹಲಿ ಭಾಗದಲ್ಲಿ ಇರುವ 23 ಧಾರ್ಮಿಕ ಕಟ್ಟಡಗಳ ಪೈಕಿ 9 ಅನಧಿಕೃತ ಕಟ್ಟಡವನ್ನು ತೆರವುಗೊಳಿಸುವ ಪ್ರಕ್ರಿಯೆಗೆ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿಕೆ ಸಕ್ಸೇನಾ ಅನುಮೋದನೆ ನೀಡಿದ್ದ, ಇದೀಗ ಕಾರ್ಯಾಚರಣೆ ಮುಂದುವರಿದಿದೆ.


ಇದಕ್ಕೂ ಮೊದಲು ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿಕೆ ಸಕ್ಸೇನಾ ಅವರು ದೆಹಲಿ-ಸಹರನ್‌ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ 9 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ನೆಲಸಮ ಮಾಡುವ ಸರ್ಕಾರದ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದರು. ಇದಕ್ಕೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಧಾರ್ಮಿಕ ಕಟ್ಟಡಗಳನ್ನು ಕೆಡಹುವುದನ್ನು ತಡೆಯಬೇಕು ಎಂದು ಲೆಫ್ಟಿನೆಂಟ್‌ ಗವರ್ನರ್‌ಗೆ ಅವರಿಗೆ ಮನವಿ ಮಾಡಿದರು.


ಇದನ್ನೂ ಓದಿ: Mayor Election: ಎರಡೂವರೆ ತಿಂಗಳ ಬಳಿಕ ಆಮ್ ಆದ್ಮಿಗೆ ಒಲಿದ ದೆಹಲಿ ಮೇಯರ್‌ ಪೀಠ; ಬಿಜೆಪಿಗೆ ತೀವ್ರ ಮುಖಭಂಗ


ಹೆದ್ದಾರಿಯಲ್ಲಿ ಇರುವ ಅನೇಕ ಧಾರ್ಮಿಕ ಕಟ್ಟಡಗಳಿಗೆ 40ರಿಂದ 90 ವರ್ಷಗಳ ಹಿನ್ನೆಲೆ ಇದೆ. ಹೀಗಾಗಿ ಇಂತಹ ಕಟ್ಟಡಗಳನ್ನು ತೆರವುಗೊಳಿಸುವ ಕ್ರಮದಿಂದ ಜನರ ಧಾರ್ಮಿಕ ಭಾವನೆಗೆ ಧಕ್ಕೆ ಆಗಿ ಕಾನೂನು-ಸುವ್ಯವಸ್ಥೆ ಪರಿಸ್ಥಿತಿಯನ್ನು ಪ್ರಚೋದಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ವರದಿಗಳಿವೆ. ವಿವಿಧ ಮೂಲ ಸೌಕರ್ಯ ಯೋಜನೆಗಳಿಗಾಗಿ ಧಾರ್ಮಿಕ ಕಟ್ಟಡಗಳನ್ನು ಕೆಡವಲು ನಿರ್ಧರಿಸಿರುವುದನ್ನು ತಡೆಯಬೇಕು ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮನವಿ ಮಾಡಿದರು.


ರಾಷ್ಟ್ರೀಯ ಹೆದ್ದಾರಿಗಾಗಿ ಅಕ್ಷರಧಾಮ ಜಂಕ್ಷನ್-ದೆಹಲಿ-ಉತ್ತರ ಪ್ರದೇಶ ಗಡಿಯ ದೆಹಲಿ ಭಾಗದಲ್ಲಿ ಇರುವ 23 ಧಾರ್ಮಿಕ ಕಟ್ಟಡಗಳ ಪೈಕಿ 9 ಅನಧಿಕೃತ ಕಟ್ಟಡವನ್ನು ತೆರವುಗೊಳಿಸುವ ಪ್ರಕ್ರಿಯೆಗೆ ವಿಕೆ ಸಕ್ಸೇನಾ ಅನುಮೋದನೆ ನೀಡಿದ ಬಳಿಕ, 'ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್‌ನ ಸ್ಪಷ್ಟ ನಿರ್ದೇಶನಗಳ ಹೊರತಾಗಿಯೂ ದೆಹಲಿಯಲ್ಲಿ ರಸ್ತೆಗಳ ದಟ್ಟಣೆಯನ್ನು ಕಡಿಮೆ ಮಾಡುವ ಮತ್ತು ವಸತಿ ಕಾಲೋನಿಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳನ್ನು ರಾಜಕೀಯ ಕಾರಣಗಳಿಗಾಗಿ ಕೈಗೆತ್ತಿಕೊಳ್ಳುತ್ತಿಲ್ಲ' ಎಂದು ಅಭಿಪ್ರಾಯಪಟ್ಟರು.


ಇದನ್ನೂ ಓದಿ: New Delhi: ದೆಹಲಿಯ ಲೀಲಾ ಪ್ಯಾಲೇಸ್‌ಗೆ 23 ಲಕ್ಷ ವಂಚಿಸಿದ್ದವ ಅಂದರ್, ಅಬುಧಾಬಿ ರಾಜಮನೆತನದ ಅಧಿಕಾರಿ ಎಂದಿದ್ದವ ಪುತ್ತೂರಲ್ಲಿ ಅರೆಸ್ಟ್!


ಇನ್ನು, ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ಬಗ್ಗೆ ಮಾತನಾಡಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರು, ಪಾದಚಾರಿ ಮಾರ್ಗದಲ್ಲಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಚಾಲನೆ ನೀಡಲಾಗುತ್ತಿದೆ, ಈ ಕುರಿತು ನ್ಯಾಯಾಲಯದ ಆದೇಶವಿದೆ. ದೆಹಲಿ ಸರ್ಕಾರದ ಲೋಕೋಪಯೋಗಿ ಇಲಾಖೆ, ಶನಿವಾರ ಅತಿಕ್ರಮಣ ವಿರೋಧಿ ಅಭಿಯಾನದ ಭಾಗವಾಗಿ ಮಧ್ಯ ದೆಹಲಿಯ ಫುಟ್‌ಪಾತ್‌ನಲ್ಲಿರುವ ಮಸೀದಿ ಮತ್ತು ದೇವಾಲಯ ಸೇರಿದಂತೆ ಧಾರ್ಮಿಕ ಕಟ್ಟಡಗಳನ್ನು ನೆಲಸಮಗೊಳಿಸಿದೆ. ವರದಿಗಳ ಪ್ರಕಾರ ಪಾದಚಾರಿ ಮಾರ್ಗದಲ್ಲಿ ಧಾರ್ಮಿಕ ರಚನೆಗಳನ್ನು ನಿರ್ಮಿಸಲಾಗಿದೆ ಮತ್ತು ಅವುಗಳನ್ನು ಕೆಡವಲು ನ್ಯಾಯಾಲಯ ಆದೇಶಿಸಿದೆ ಎಂದು ಅವರು ಹೇಳಿದ್ದಾರೆ.


ದೆಹಲಿ ನಗರದಾದ್ಯಂತ ಅತಿಕ್ರಮಣ ವಿರೋಧಿ ಕಾರ್ಯಾಚರಣೆಗಳ ಭಾಗವಾಗಿ, ಫೆಬ್ರವರಿ ತಿಂಗಳಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಮೆಹ್ರೌಲಿ ಪುರಾತತ್ವ ಉದ್ಯಾನವನದ ಲಾಧಾ ಸರಾಯ್ ಗ್ರಾಮದಲ್ಲಿರುವ ತನ್ನ ಭೂಮಿಯಿಂದ ಅತಿಕ್ರಮಣದ ವಿರುದ್ಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಇದು ಆ ಭಾಗದ ನಿವಾಸಿಗಳಿಂದ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ಅದಾಗ್ಯೂ ಅಧಿಕಾರಿಗಳು ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

Published by:Avinash K
First published: