Samose Pe Charcha?: ಕೊನೆಗೂ ಇಂದು Good Friend ಪ್ರಧಾನಿ ಮೋದಿ ಭೇಟಿಯಾಗುತ್ತಿರುವ ಮಾರಿಸನ್!

ಆಸ್ಟ್ರೇಲಿಯಾದ ಪ್ರಧಾನಿ ಇಂದು ಅಂತಿಮವಾಗಿ ಪಿಎಂ ಮೋದಿಯನ್ನು ವೈಯಕ್ತಿಕವಾಗಿ ಭೇಟಿಯಾಗುತ್ತಿದ್ದಾರೆ. ಈ ಬೇಟಿಯ ವೇಳೆ ಭಾರತದ ಪ್ರಧಾನಮಂತ್ರಿ  ಮೋದಿ ಅವರು ಮಾರಿಸನ್ ಅವರಿಗೆ 'ಸ್ಕೋಮೋಸಾಸ್' ಬದಲಿಗೆ ದೇಸಿ ಸಮೋಸಾ ಆತಿಥ್ಯ ನೀಡಲಿದ್ದಾರೆ.

ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮಾರಿಸನ್ ಹಾಗೂ ಪ್ರಧಾನಿ ಮೋದಿ ಅವರು ಸೆಲ್ಫಿಗೆ ಪೋಸ್​ ಕೊಟ್ಟಿರುವುದು.

ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮಾರಿಸನ್ ಹಾಗೂ ಪ್ರಧಾನಿ ಮೋದಿ ಅವರು ಸೆಲ್ಫಿಗೆ ಪೋಸ್​ ಕೊಟ್ಟಿರುವುದು.

  • Share this:
    ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಇಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ (Australian PM Scott Morrison) ಜೊತೆ ಸೇರಿದಂತೆ ಎಂಟು ಸಭೆಗಳನ್ನು ನಡೆಸಲಿದ್ದಾರೆ. ಕೊರೋನಾ ವೈರಸ್ ಸಾಂಕ್ರಾಮಿಕ ರೋಗವು 2020 ರಲ್ಲಿ ಆರಂಭವಾದ ನಂತರ ಇಬ್ಬರು ಪ್ರಧಾನಿಗಳು ವೈಯಕ್ತಿಕವಾಗಿ ಭೇಟಿಯಾಗುತ್ತಿರುವುದು ಇದೇ ಮೊದಲು. ಕಳೆದ ಬಾರಿ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಅವರು 2020 ಮೇ ನಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದರು.

    ಮೇ 31, 2020 ರಂದು ಟ್ವೀಟ್‌ನಲ್ಲಿ, ಆಸ್ಟ್ರೇಲಿಯಾದ ಪ್ರಧಾನಿ ಅವರು ತಮ್ಮ ಸಸ್ಯಾಹಾರಿ ಖಾದ್ಯವಾದ ಸ್ಕೋಮೋಸಾಸ್ ಅನ್ನು (ScoMosas) ಮಾವಿನ ಚಟ್ನಿಯೊಂದಿಗೆ ಭಾರತದ ಪ್ರಧಾನಿಯೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತಿದ್ದರು ಎಂದು ಹೇಳಿದ್ದರು. ಅವರು ಸಮೋಸಾಗಳನ್ನು "ಸ್ಕೋಮೋಸಾಸ್" ಎಂದು ಅಡ್ಡ ಹೆಸರಿನಿಂದ ಕರೆದಿದ್ದರು.

    "ಈ ವಾರ @narendramodi ಅವರೊಂದಿಗಿನ ನನ್ನ ಭೇಟಿಯು ವಿಡಿಯೋ ಲಿಂಕ್ ಮೂಲಕ ನಡೆಯಲಿದೆ. ಅವರು ಸಸ್ಯಾಹಾರಿಗಳು, ನಾನು ಇದನ್ನು ಅವರೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ "ಎಂದು ಸ್ಕಾಟ್ ಮಾರಿಸನ್ ಟ್ವಿಟರ್‌ನಲ್ಲಿ ಕಳೆದ ವರ್ಷ ಮೇ 31ರಂದು  ಬರೆದುಕೊಂಡಿದ್ದರು.



    ಆಸ್ಟ್ರೇಲಿಯಾದ ನಾಯಕ ಟ್ವೀಟ್ ನಲ್ಲಿ ಪಿಎಂ ಮೋದಿಯನ್ನು ಟ್ಯಾಗ್ ಮಾಡಿದ್ದರು ಮತ್ತು ಭಾರತೀಯ ನಾಯಕನೊಂದಿಗೆ ಜನಪ್ರಿಯ ತಿಂಡಿಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು. ಪ್ರಧಾನಿ ಮೋದಿ ಅವರು ಸ್ಕಾಟ್ ಮಾರಿಸನ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿ, ಎರಡು ದೇಶಗಳು "ಹಿಂದೂ ಮಹಾಸಾಗರದಿಂದ ಸಂಪರ್ಕ ಹೊಂದಿವೆ" ಮತ್ತು "ಭಾರತೀಯ ಸಮೋಸದಿಂದ ಒಂದಾಗಿವೆ" ಎಂದು ಹೇಳಿದ್ದರು.

    ಒಮ್ಮೆ ನಾವು ಕೋವಿಡ್ -19 ಸಾಂಕ್ರಾಮಿಕ ಯುದ್ಧದ ವಿರುದ್ಧ ನಿರ್ಣಾಯಕ ಗೆಲುವನ್ನು ಸಾಧಿಸಿದರೆ, ನಾವು ಒಟ್ಟಿಗೆ ಸಮೋಸಾ ರುಚಿ ಆನಂದಿಸುತ್ತೇವೆ "ಎಂದು ಪ್ರಧಾನಿ ಮೋದಿ ಹೇಳಿದ್ದರು.



    ಮೋದಿ ಮತ್ತು ಮಾರಿಸನ್ ಅವರು ಹಾಸ್ಯದ, ವಿಡಂಬನೆಯ ಟ್ವಿಟ್​ಗಳನ್ನು ಹಂಚಿಕೊಳ್ಳುತ್ತಿರುವುದು ಇದೇ ಮೊದಲಲ್ಲ. 2019 ರಲ್ಲಿ ಒಸಾಕಾದಲ್ಲಿ ನಡೆದ ಜಿ -20 ಶೃಂಗಸಭೆಯಲ್ಲಿ, ಇಬ್ಬರೂ ಸೆಲ್ಫಿಯಲ್ಲಿ ಸ್ಕ್ರೀನ್ ಸ್ಪೇಸ್ ಅನ್ನು ಹಂಚಿಕೊಂಡರು, ಮಾರಿಸನ್ ಅವರು ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ, "ಕಿತನಾ ಆಚಾ ಹೇ ಮೋದಿ!" (ಮೋದಿ ಎಷ್ಟು ಒಳ್ಳೆಯವರು). ಎಂದು ಟ್ಯಾಗ್ ಲೈನ್ ಸಹ ನೀಡಿದ್ದರು.

    ಆಸ್ಟ್ರೇಲಿಯಾದ ಪ್ರಧಾನಿ ಇಂದು ಅಂತಿಮವಾಗಿ ಪಿಎಂ ಮೋದಿಯನ್ನು ವೈಯಕ್ತಿಕವಾಗಿ ಭೇಟಿಯಾಗುತ್ತಿದ್ದಾರೆ. ಈ ಬೇಟಿಯ ವೇಳೆ ಭಾರತದ ಪ್ರಧಾನಮಂತ್ರಿ  ಮೋದಿ ಅವರು ಮಾರಿಸನ್ ಅವರಿಗೆ 'ಸ್ಕೋಮೋಸಾಸ್' ಬದಲಿಗೆ ದೇಸಿ ಸಮೋಸಾ ಆತಿಥ್ಯ ನೀಡಲಿದ್ದಾರೆ.

    ಈ ಹಿಂದೆ ಇಬ್ಬರು ನಾಯಕರು ಹಲವಾರು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. AUKUS ಮೈತ್ರಿಕೂಟದೊಂದಿಗೆ ಮುಂದುವರಿಯಲು ಯೋಜಿಸುವುದರ ಬಗ್ಗೆ ಮಾರಿಸನ್ ಇತ್ತೀಚೆಗೆ ಮೋದಿಗೆ ಕರೆ ಮಾಡಿದ್ದರು. 21 ನೇ ಶತಮಾನದ ಜಾಗತಿಕ ಬೆದರಿಕೆಗಳನ್ನು ಎದುರಿಸುವುದು ಮತ್ತು ಚೀನಾವನ್ನು ಎದುರಿಸಲು ಆಸ್ಟ್ರೇಲಿಯಾ ಪರಮಾಣು-ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಸೇರಿದಂತೆ ಹೆಚ್ಚಿನ ರಕ್ಷಣಾ ಸಾಮರ್ಥ್ಯಗಳನ್ನು ಹಂಚಿಕೊಳ್ಳಲು ಯುಎಸ್, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಕಳೆದ ವಾರ ಇಂಡೋ-ಪೆಸಿಫಿಕ್ AUKUS ಒಕ್ಕೂಟವನ್ನು ಘೋಷಿಸಿತು.

    ಇದನ್ನು ಓದಿ: Narendra Modi in US| ವಾಷಿಂಗ್ಟನ್​ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ; ಅನಿವಾಸಿ ಭಾರತೀಯರಿಂದ ಅದ್ದೂರಿ ಸ್ವಾಗತ

    ಕಳೆದ ವರ್ಷ ಜನವರಿಯಲ್ಲಿ ಮಾರಿಸನ್ ಭಾರತಕ್ಕೆ ಭೇಟಿ ನೀಡಬೇಕಿತ್ತು. ಆದರೆ, ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಭಾರೀ ಅಗ್ನಿ ದುರಂತದಿಂದಾಗಿ ಅದನ್ನು ಮುಂದೂಡಬೇಕಾಯಿತು. ಕೋವಿಡ್ -19 ಪರಿಸ್ಥಿತಿಯಿಂದಾಗಿ ಮೇ ತಿಂಗಳಲ್ಲಿ ಭಾರತಕ್ಕೆ ಮತ್ತೊಂದು ಪ್ರವಾಸವನ್ನು ಮುಂದೂಡಬೇಕಾಯಿತು. ಇದೀಗ ಅಮೆರಿಕದಲ್ಲಿ ಮೋದಿ ಅವರು ಮಾರಿಸನ್ ಅವರನ್ನು ಭೇಟಿ ಮಾಡಲಿದ್ದಾರೆ. ಈ ಭೇಟಿಯ ಬಳಿಕ ಮೋದಿ ಅವರು ಭಾರತೀಯ ಮೂಲದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ವೈಟ್ ಹೌಸ್‌ನಲ್ಲಿ ಭೇಟಿಯಾಗಲಿದ್ದಾರೆ. ಉಭಯ ನಾಯಕರ ನಡುವಿನ ಚೊಚ್ಚಲ ಭೇಟಿಯನ್ನು ಒಂದು ಗಂಟೆ ನಿಗದಿಪಡಿಸಲಾಗಿದೆ.
    Published by:HR Ramesh
    First published: