Morning Digest: ನಿಜವಾಗುತ್ತಾ ಬಬಲಾದಿ ಮುತ್ಯಾ ಭವಿಷ್ಯ? ಏರಿಕೆಯಾದ ಚಿನ್ನದ ಬೆಲೆ, ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Gold And Silver Price: ಇಂದು ಬಂಗಾರ ಬಲು ಭಾರ! ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರದಲ್ಲಿ ಏರಿಕೆ

Gold And Silver Rate on March 5, 2022: ಇತ್ತೀಚೆಗೆ ದೇಶದಲ್ಲಿ ಬಂಗಾರ (Gold), ಬೆಳ್ಳಿ (Silver) ದರದಲ್ಲಿ (Price) ಭಾರಿ ಏರುಪೇರು ಉಂಟಾಗುತ್ತಿದೆ. ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವಿನ ಯುದ್ಧದ (War) ಪರಿಣಾಮ, ಭಾರತದ ಷೇರುಪೇಟೆಯಲ್ಲಿ (Share Market) ಅಲ್ಲೋಲ ಕಲ್ಲೋಲ - ಮುಂತಾದ ಕಾರಣಗಳಿಂದ ಈ ವ್ಯತ್ಯಾಸಗಳಾಗುತ್ತಿದೆ ಎನ್ನಲಾಗುತ್ತಿದೆ. ಇದೇ ರೀತಿ ದೇಶದಲ್ಲಿಂದು ಚಿನ್ನದ ಬೆಲೆಯಲ್ಲಿ (Gold Price) ಏರಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಸಹ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,300 ರೂ. ಇದ್ದದ್ದು ಇಂದು 47,700 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,600 ರೂ. ಇದ್ದದ್ದು 52,040 ರೂ. ಆಗಿದೆ. ಬೆಳ್ಳಿಯ ದರದಲ್ಲೂ ಇಂದು ವ್ಯತ್ಯಾಸವಾಗಿದೆ.

2.Vijayapura: "ಕೈ ಬಳೆ ಒಡೆದಾವು, ಕಣ್ಣೀರು ಹರಿದಾವು" ಎಂದ ಬಬಲಾದಿ ಮುತ್ಯಾ! ಮತ್ತೆ ಯುದ್ಧವೋ? ಅನಾಹುತವೋ?

ವಿಜಯಪುರ: ಇಲ್ಲಿನ ಬಬಲೇಶ್ವರ (Babaleshwara) ತಾಲೂಕಿನ ಪ್ರಸಿದ್ಧ ಕ್ಷೇತ್ರವಾದ ಬಬಲಾದಿಯಲ್ಲಿ ದೈವೀಪುರುಷ ಸದಾಶಿವ ಮುತ್ಯಾ ಮತ್ತೆ ಭವಿಷ್ಯ ವಾಣಿ ನುಡಿದಿದ್ದಾರೆ. ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವಿನ ಯುದ್ಧ (War), ಪ್ರಕೃತಿ ವಿಕೋಪಗಳು (Natural Disasters), ಮಳೆ (Rain) ಇತ್ಯಾದಿಗಳ ಕುರಿತಂತೆ ನಿಗೂಢ ಭವಿಷ್ಯ ಹೇಳಿದ್ದಾರೆ. ಬಬಲಾದಿ ಸದಾಶಿವ ಮುತ್ಯಾಮಠದ ಪೀಠಾಧಿಪತಿ ಸಿದ್ದು ಮುತ್ಯಾ ಸ್ವಾಮೀಜಿಯವರು ಕಾಲಜ್ಞಾನದ ಭವಿಷ್ಯವಾಣಿ ನುಡಿದಿದ್ದಾರೆ. ಸದಾಶಿವ ಮುತ್ಯಾನ ಜಾತ್ರೆ ಹಿನ್ನೆಲೆಯಲ್ಲಿ ಭವಿಷ್ಯ ನುಡಿದಿದ್ದು, ಈ ನಿಗೂಢ ಮಾತಿನ ಭವಿಷ್ಯ ಇದೀಗ ವೈರಲ್ (Viral) ಆಗಿದೆ. ಜನರೆಲ್ಲರೂ ಮುತ್ಯಾನ ನಿಗೂಢ ಭವಿಷ್ಯದ ಬಗ್ಗೆ ಚರ್ಚೆ ಆರಂಭಿಸಿದ್ದಾರೆ. ಕೈಬಳೆ ಒಡೆದಾವು, ಕಣ್ಣೀರು ಹರಿದಾವು”. ಹೌದು, ಈ ರೀತಿಯ ನಿಗೂಢ ಭವಿಷ್ಯ ವಾಣಿಯನ್ನು ಬಬಲಾದಿ ಮಠದ ಪೀಠಾಧಿಪತಿ ಸಿದ್ರಾಮಯ್ಯ ಹೊಳಿಮಠ ಸ್ವಾಮೀಜಿ ನುಡಿದಿದ್ದಾರೆ. ಮುಂಗಾರಿ ಮಳೆ ಫಲವಾಗಿ ಬೆಳೆ ಜಾಸ್ತಿ. ಹಿಂಗಾರಿ ಮಧ್ಯಮ ಫಲ. ಕಂಪ್ಲಿ ದೇಶಕ್ಕೆ ಬರ, ದೇಶದೊಳಗೆ ಆಹಾಕಾರ, ಕೆಟ್ಟ ಪರಿಣಾಮ. ಕೈ ಬಳೆ‌ ಒಡೆದಾವು, ಕಣ್ಣೀರ ಹರಿದಾವು ಎಂದು ಸ್ವಾಮೀಜಿ ಗೂಢಾರ್ಥದ ವಾಣಿ ನುಡಿದಿದ್ದಾರೆ.

3.Digital University: ಶೀಘ್ರದಲ್ಲೇ ಡಿಜಿಟಲ್ ಯೂನಿವರ್ಸಿಟಿ ಸ್ಥಾಪನೆ, ಯಾರ್ಯಾರಿಗೆ ಪ್ರವೇಶ? ಇಲ್ಲಿದೆ ಮಾಹಿತಿ

2022ರ ಕೇಂದ್ರ ಬಜೆಟ್‌ನಲ್ಲಿ(Union Budget 2022) ಘೋಷಿಸಲಾದ 'ಡಿಜಿಟಲ್ ವಿಶ್ವವಿದ್ಯಾಲಯ'ವನ್ನು(Digital University) ಈ ವರ್ಷದ ಆಗಸ್ಟ್‌ನೊಳಗೆ ಸ್ಥಾಪಿಸಲು ಶಿಕ್ಷಣ ಸಚಿವಾಲಯ(Education Ministry) ಮತ್ತು ವಿವಿಧ ಇಲಾಖೆ ಪ್ರಸ್ತಾವನೆ ಕುರಿತು ಕೆಲಸ ಮಾಡುತ್ತಿದ್ದಾರೆ. ಇನ್ನೂ ಆರಂಭಿಕ ಹಂತದಲ್ಲಿರುವ ಈ ಕಲ್ಪನೆಯು ಪ್ರಧಾನಿ ನರೇಂದ್ರ ಮೋದಿಯವರ(PM Narendra Modi) ಬೆಂಬಲ ಮತ್ತು ಸಾರಥ್ಯವನ್ನು ಹೊಂದಿದೆ. 2022ರ ಕೇಂದ್ರ ಬಜೆಟ್‌ನಲ್ಲಿ ಮಾಡಲಾದ ಘೋಷಣೆಗಳ ಅನುಷ್ಠಾನದ(Establishment) ಕುರಿತ ವೆಬಿನಾರ್‌ನಲ್ಲಿ ಮೋದಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ತೊಡಗಿಸಿಕೊಂಡಿರುವ ಮಧ್ಯಸ್ಥಗಾರರ ಜೊತೆ ಚರ್ಚೆ ನಡೆಸಿದರು. ಡಿಜಿಟಲ್ ವಿಶ್ವವಿದ್ಯಾಲಯ ನಿರ್ಮಾಣ "ಸೀಟುಗಳ ಸಮಸ್ಯೆಯನ್ನು ಪರಿಹರಿಸುತ್ತದೆ" (Seat Problem)ಎಂದು ಸಭೆಯಲ್ಲಿ ಹೇಳಿದ್ದಾರೆ.

4.UP Elections: ಇಂದು ಬಹಿರಂಗ ಪ್ರಚಾರಕ್ಕೆ ತೆರೆ, ಮಾರ್ಚ್ 7ಕ್ಕೆ ಕೊನೆಯ ಹಂತದ ಮತದಾನ

ನವದೆಹಲಿ, ಮಾ. 5: ದೇಶಾದ್ಯಂತ ಭಾರೀ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ (Uttar Pradesh Assembly Elections) ಏಳನೇ ಮತ್ತು ಕೊನೆಯ ಹಂತದ ಮತದಾನ ಮುಗಿಯುವ ದಿನ‌ ಹತ್ತಿರವಾಗಿದ್ದು ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. 2024ರ ಲೋಕಸಭಾ ಚುನಾವಣೆ (Lokasabha Elections 2024) ದೃಷ್ಟಿಯಲ್ಲಿ ಉತ್ತರ ಪ್ರದೇಶ ಚುನಾವಣೆ ಅತ್ಯಂತ ಕುತೂಹಲ ಮೂಡಿಸಿದೆ.‌ ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendara Modi) ಮತ್ತು ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Uttar Pradesh Congress Incharge and AICC General Secretary Priyanka Gandhi) ಅವರು ಇಂದು ಭರ್ಜರಿ ಪ್ರಚಾರ ನಡೆಸಲಿದ್ದಾರೆ.

5.Viral Video: ಭಾರತೀಯ ವಿದ್ಯಾರ್ಥಿಗಳನ್ನು ಕರೆತಂದ ಸ್ಪೈಸ್ ಜೆಟ್; ಪೈಲೆಟ್‍ನ ಹೃದಯಸ್ಪರ್ಶಿ ಮಾತು ವೈರಲ್

ರಷ್ಯಾವು ಉಕ್ರೇನ್ (Ukraine) ಮೇಲೆ ಆಕ್ರಮಣ ಮಾಡಿರುವ ಈ ಸಂದರ್ಭದಲ್ಲಿ, ಸಾವಿರಾರು ಭಾರತೀಯರು ಕೂಡ ಉಕ್ರೇನ್‍ನಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಭಾರತ ಸರಕಾರವು ಆಪರೇಶನ್ ಗಂಗಾ (Operation Ganga) ಅಡಿಯಲ್ಲಿ, ಅವರೆಲ್ಲರ ರಕ್ಷಣೆಗೆ ವಿಮಾನಗಳನ್ನು ಕಳುಹಿಸುವ ಮೂಲಕ ತನ್ನ ಪ್ರಯತ್ನವನ್ನು ಮುಂದುವರೆಸಿದೆ. ಉಕ್ರೇನ್‍ನಲ್ಲಿ ಜೀವ ಸಂಕಟದಲ್ಲಿ ಸಿಲುಕಿದ್ದ ಭಾರತೀಯರ ಗುಂಪೊಂದನ್ನು ಸ್ಪೈಸ್ ಜೆಟ್ (SpiceJet) ವಿಮಾನವೊಂದು ಸ್ಥಳಾಂತರಿಸಿತು. ಉಕ್ರೇನ್ ಭಾರತೀಯರ ಸ್ಥಳಾಂತರಕ್ಕಾಗಿ ನಿಗದಿ ಪಡಿಸಲಾಗಿದ್ದ ಈ ವಿಶೇಷ ವಿಮಾನವು, ಹಂಗೇರಿಯ ಬುಡಾಪೆಸ್ಟ್‌ನಿಂದ (Budapest) ಹೊಸ ದೆಹಲಿಗೆ ಪ್ರಯಾಣ ಬೆಳೆಸಿತ್ತು. ಆ ವಿಮಾನವು ನಿರ್ಗಮಿಸುವ ಮುನ್ನ, ವಿಮಾನದ ಪೈಲೆಟ್, ವಿಮಾನದಲ್ಲಿದ್ದ ಪ್ರಯಾಣಿಕರನ್ನು ಉದ್ದೇಶಿಸಿ, ಹೃದಯಸ್ಪರ್ಶಿ ಘೋಷಣೆಯೊಂದನ್ನು ಮಾಡಿದ್ದರು. ವಿಮಾನದ ಒಳಗೆ ಪೈಲೆಟ್ ಘೋಷಣೆ (Pilot Announcement) ಮಾಡುತ್ತಿದ್ದ ಆ ದೃಶ್ಯ ಈಗ ವೈರಲ್ ಆಗಿದ್ದು, ಲಕ್ಷಾಂತರ ಮಂದಿಯ ಹೃದಯವನ್ನು ಗೆದ್ದಿದೆ.
Published by:Latha CG
First published: