Morning Digest: ಇಂದು ಬಹುನಿರೀಕ್ಷಿತ ರಾಜ್ಯ ಬಜೆಟ್ ಮಂಡನೆ, ಚಿನ್ನದ ಬೆಲೆ ಇಳಿಕೆ; ಬೆಳಗಿನ ಟಾಪ್​ ನ್ಯೂಸ್​​

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.UP Elections: ಇಂದು ವಾರಣಾಸಿಯಲ್ಲಿ ಪ್ರಧಾನಿ ಮೋದಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪ್ರಚಾರ

ನವದೆಹಲಿ(ಮಾ. 4): ದೇಶಾದ್ಯಂತ ಭಾರೀ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh Assembly Elections) ಐದು ಹಂತದ ಮತದಾನ ಮುಗಿದಿದ್ದು ಚುನಾವಣಾ ಕಣ ಈಗ ಇನ್ನಷ್ಟು ಬಿಸಿ‌ಯಾಗಿದೆ. ಇತರೆ ರಾಜ್ಯಗಳ ಚುನಾವಣಾ ಕೆಲಸ ಮುಗಿದಿದ್ದು ಘಟಾನುಘಟಿ ನಾಯಕರು ಉತ್ತರ ಪ್ರದೇಶದ ಕಡೆ ಸಂಪೂರ್ಣವಾಗಿ ಗಮನ ಹರಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendara Modi) ಕೂಡ ತಮ್ಮ ಸ್ವಕ್ಷೇತ್ರ ವಾರಣಾಸಿಯಲ್ಲಿ (Varanasi) ಇಂದು ಬಿರುಸಿನ ಪ್ರಚಾರ ನಡೆಸಲಿದ್ದಾರೆ. ಇದೇ ವಾರಣಾಸಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi) ಮತ್ತು ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Uttar Pradesh Congress In charge and AICC General Secretary Priyanka Gandhi) ಅವರು ಕೂಡ ಪ್ರಚಾರ ನಡೆಸಲಿದ್ದಾರೆ.

2. Virat Kohli: ವಿರಾಟ್ ಕೊಹ್ಲಿಯ 100ನೇ ಟೆಸ್ಟ್ ಪಂದ್ಯಕ್ಕೆ ಶುಭ ಹಾರೈಸಿದ ಕ್ರಿಕೆಟ್ ದಿಗ್ಗಜರು

ಟೆಸ್ಟ್ ಕ್ರಿಕೆಟ್ (Test Cricket) ಯಾರು ನೋಡುತ್ತಾರೆ ಎನ್ನುವ ಕಾಲದಲ್ಲಿ ಭಾರತದಲ್ಲಿ(India) ಟೆಸ್ಟ್ ಕ್ರಿಕೆಟ್ಗೆ ಹೊಸ ಭಾಷ್ಯ ಬರೆದವರು ವಿರಾಟ್ ಕೊಹ್ಲಿ(Virat Kohli).. ಟೆಸ್ಟ್ ಕ್ರಿಕೆಟ್ ಇಷ್ಟಪಡದವರೂ ಜನರು ಇಷ್ಟಪಟ್ಟು ಟೆಸ್ಟ್ ಕ್ರಿಕೆಟ್ ನೋಡುವಂತೆ ಮಾಡಿದ್ದು ಕಿಂಗ್ ಕೊಹ್ಲಿ(King Kohli).. ಟೆಸ್ಟ್ ಕ್ರಿಕೆಟ್ ನಲ್ಲಿ ಹಲವು ದಾಖಲೆಗಳನ್ನು ಮಾಡಿ ಭಾರತ ತಂಡವನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸಿ ಮುಂದಿನ ಪೀಳಿಗೆಗೆ ಹೊಸ ರೂಪು ಕೊಟ್ಟವರು ವಿರಾಟ್ ಕೊಹ್ಲಿ. ಇಂದು ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ 100ನೇ ಟೆಸ್ಟ್(100th Test) ಪಂದ್ಯವನ್ನು ಆಡುತ್ತಿದ್ದಾರೆ.ಈ ಮೂಲಕ ವಿಶ್ವದಲ್ಲಿ(World) 100 ಟೆಸ್ಟ್ ಪಂದ್ಯ ಆಡಿದ ಕೆಲವೇ ಕೆಲವು ದಿಗ್ಗಜ ಆಟಗಾರರ ಸಾಲಿಗೆ ವಿರಾಟ್ ಸೇರ್ಪಡೆಯಾಗುತ್ತಿದ್ದಾರೆ.ಹೀಗಾಗಿ ವಿರಾಟ್ ಕೊಹ್ಲಿ ಅವರ ಅದ್ಭುತ ಸಾಧನೆಯ ಬಗ್ಗೆ ವಿಶ್ವದ ಕ್ರಿಕೆಟ್ ದಿಗ್ಗಜರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

3.Karnataka Budget 2022: ಸಿಎಂ ಬೊಮ್ಮಾಯಿ ಬಜೆಟ್ ಮೇಲೆ ಭಾರೀ ನಿರೀಕ್ಷೆ, ಜನಪ್ರಿಯ ಆಯವ್ಯಯ ಮಂಡನೆ ಸಾಧ್ಯತೆ

ಬೆಂಗಳೂರು (ಮಾ.4): ಇಂದು ಸಿಎಂ ಬಸವರಾಜ್​ ಬೊಮ್ಮಾಯಿ (Basavaraj Bommai ) ಚೊಚ್ಚಲ ಬಜೆಟ್ (Karnataka Budget 2022)​ ಮಂಡಿಸಲಿದ್ದಾರೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ (Assembly elections) ಇರುವ ಹಿನ್ನೆಲೆ ಜನಪ್ರಿಯ ಬಜೆಟ್​ ಮಂಡನೆಯಾಗೋ ಸಾಧ್ಯತೆ ಇದೆ. ಸತತ ಮೂರು ವರ್ಷಗಳ ಕೊರೊನಾ ಸಂಕಷ್ಟದಿಂದ ರಾಜ್ಯದ ಅರ್ಥಿಕ ಪರಿಸ್ಥಿತಿ ಕೂಡ ಹದಗೆಟ್ಟಿದೆ. ಆದ್ರೆ ಚುನಾವಣೆಗೆ ಒಂದೇ ವರ್ಷವಿರುವುದರಿಂದ ಬಜೆಟ್​ನಲ್ಲಿ ಕೆಲವೊಂದು ಜನಪ್ರಿಯ ಯೋಜನೆಗಳು ಘೋಷಣೆಯಾಗೋ ಸಾಧ್ಯತೆ ಹೆಚ್ಚಾಗಿದ್ದು, ರಾಜ್ಯದ ಮೇಲೆ ಸಾಲದ ಹೊರೆಯು ಹೆಚ್ಚಾಗಲಿದೆ. ಈ ಬಾರಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಿಎಂ ಬಸವರಾಜ ಬೊಮ್ಮಾಯಿ ವಿಶೇಷ ಪ್ಯಾಕೇಜ್​ ಘೋಷಿಸೋ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಕಳೆದ ಬಜೆಟ್‌ನಲ್ಲಿ ಘೋಷಣೆಯಾಗಿ ಉಳಿದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜತೆ ಜತೆಗೆ ಹೊಸ ಯೋಜನೆಗಳನ್ನು ಘೋಷಿಸಲಿದ್ದಾರೆ.

4.Gold Price Today: ಶುಭ ಶುಕ್ರವಾರದಂದು ಇಳಿಕೆಯಾಯ್ತು ಬಂಗಾರದ ಬೆಲೆ, ಆಭರಣ ಕೊಳ್ಳೋಕೆ ಇದೇ ಸರಿಯಾದ ಸಮಯ!

Gold Rate on March 4th, 2022: ಇತ್ತೀಚೆಗೆ ದೇಶದಲ್ಲಿ ಬಂಗಾರ, ಬೆಳ್ಳಿ ದರದಲ್ಲಿ ಭಾರಿ ಏರುಪೇರು ಉಂಟಾಗುತ್ತಿದೆ. ರಷ್ಯಾ - ಉಕ್ರೇನ್ ಯುದ್ಧ ಪರಿಣಾಮ, ಭಾರತದ ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲ - ಮುಂತಾದ ಕಾರಣಗಳಿಂದ ಈ ವ್ಯತ್ಯಾಸಗಳಾಗುತ್ತಿದೆ ಎನ್ನಲಾಗುತ್ತಿದೆ. ಇದೇ ರೀತಿ ದೇಶದಲ್ಲಿಂದು ಚಿನ್ನದ ಬೆಲೆಯಲ್ಲಿ (Gold Price) ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಸಹ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,700 ರೂ. ಇತ್ತು. ಇಂದು 400 ರೂ. ಕಡಿಮೆಯಾಗಿ 47,300 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 52,040 ರೂ. ಇತ್ತು. ಇಂದು 440 ರೂ. ಇಳಿಕೆಯಾಗಿ 51,600 ರೂ. ಆಗಿದೆ.

5.Anand Mahindra: ಭಾರತೀಯ ವಿದ್ಯಾರ್ಥಿಗಳಿಗೆ ಮೆಡಿಕಲ್ ಕಾಲೇಜು ಪ್ರಾರಂಭಿಸುತ್ತಾರಂತೆ ಆನಂದ್ ಮಹೀಂದ್ರಾ..!

ತಮ್ಮ ಸಾಮಾಜಿಕ ಮಾಧ್ಯಮಗಳ (Social Media) ಮೂಲಕ ಯಾವಾಗಲೂ ಜನರಿಗೆ ಹಿತವೆನಿಸುವ ಮತ್ತು ಸಕರಾತ್ಮಕ ಚಿಂತನೆಯನ್ನು (Positive Thoughts) ಮೈಗೂಡಿಸಿಕೊಳ್ಳಲು ಪ್ರೇರೇಪಿಸುವ ಸಂದೇಶಗಳನ್ನು ಪೋಸ್ಟ್ ಮಾಡುವುದರಲ್ಲಿ ಮಹೀಂದ್ರಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಆನಂದ್ ಮಹೀಂದ್ರಾ (Anand Mahindra) ಅವರು ಸದಾ ಮುಂಚೂಣಿಯಲ್ಲಿರುವ ವ್ಯಕ್ತಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಮತ್ತೊಮ್ಮೆ ಅನೇಕ ಭಾರತೀಯ ವಿದ್ಯಾರ್ಥಿಗಳು (Indian Students) ತಮ್ಮ ವೈದ್ಯಕೀಯ ಶಿಕ್ಷಣಕ್ಕಾಗಿ (Medical Education)ನಮ್ಮ ದೇಶವಲ್ಲದೆ, ಬೇರೆ ಬೇರೆ ದೇಶಗಳಿಗೆ ಹೋಗಿ ಅಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಅನೇಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಟ್ವೀಟ್ ಒಂದನ್ನು ಮಾಡಿದ್ದಾರೆ ನೋಡಿ. ಆನಂದ್‌ ಮಹೀಂದ್ರಾ ಅವರು ತಮ್ಮ ಮಹೀಂದ್ರಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಒಂದು ವೈದ್ಯಕೀಯ ಕಾಲೇಜೊಂದನ್ನು ಕಟ್ಟಿಸಲು ಬಯಸುತ್ತಿದ್ದಾರಂತೆ ಎಂದು ತಿಳಿದು ಬಂದಿದೆ. ಸುದ್ದಿ ಮಾಧ್ಯಮವೊಂದರಲ್ಲಿ ಪ್ರಕಟವಾದ ವರದಿಯನ್ನು ನೋಡಿ ಇವರು ಭಾರತೀಯ ವಿದ್ಯಾರ್ಥಿಗಳಿಗಾಗಿ ಒಂದು ಒಳ್ಳೆಯ ವೈದ್ಯಕೀಯ ಕಾಲೇಜನ್ನು ನಿರ್ಮಿಸುವ ಯೋಚನೆ ಮಾಡುತ್ತಿದ್ದಾರಂತೆ ಎಂದು ಹೇಳಲಾಗುತ್ತಿದೆ.
Published by:Latha CG
First published: