Morning Digest: ಇಂದು ಬೆಂಗಳೂರಿನ ಈ ಏರಿಯಾಗಳಲ್ಲಿ ಕಾವೇರಿ ನೀರು ಬರಲ್ಲ, ಮೋದಿ-ಪುಟಿನ್ ಮಾತುಕತೆ, ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1. Gold Price Today: ದಿನೇ ದಿನೇ ಜಾಸ್ತಿಯಾಗ್ತಿದೆ ಚಿನ್ನದ ರೇಟ್, ಖರೀದಿಸಲು ತಡ ಮಾಡಿದ್ರೆ ಇನ್ನೂ ಹೆಚ್ಚಾಗುತ್ತೆ!

Gold Rate on March 3rd, 2022: ರಷ್ಯಾ vs ಉಕ್ರೇನ್‌ ಯುದ್ಧ ಪರಿಣಾಮದಿಂದ ಭಾರತದ ಷೇರುಪೇಟೆ ಹಾಗೂ ಚಿನಿವಾರಪೇಟೆಯಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದೆ. ಈ ಕಾರಣದಿಂದ ಪ್ರತಿದಿನ ಬಂಗಾರ, ಬೆಳ್ಳಿ ಮೌಲ್ಯದಲ್ಲಿ ಭಾರಿ ವ್ಯತ್ಯಾಸವಾಗುತ್ತಿದ್ದು, ಇದೇ ರೀತಿ ದೇಶದಲ್ಲಿಂದು ಚಿನ್ನದ ಬೆಲೆಯಲ್ಲಿ (Gold Price) ಏರಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಸಹ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,700 ರೂ. ಇತ್ತು. ಇಂದು 1,000 ರೂ. ಏರಿಕೆಯಾಗಿ 47,700 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 50,950 ರೂ. ಇತ್ತು. ಇಂದು 1,090 ರೂ. ಹೆಚ್ಚಾಗಿ 52,040 ರೂ. ಆಗಿದೆ.

2. ICC T20 Ranking: ಐಸಿಸಿ T-20 ರ‍್ಯಾಂಕಿಂಗ್​​ನಲ್ಲಿ ಟಾಪ್ 10ನಿಂದ ಹೊರ ಬಿದ್ದ ಕೊಹ್ಲಿ & ರೋಹಿತ್

ಹಲವು ತಿಂಗಳಿನಿಂದ ಟಿ-ಟ್ವೆಂಟಿ(T-20) ಪಂದ್ಯದಲ್ಲಿ(Match) ಬ್ಯಾಟಿಂಗ್(Batting) ವೈಫಲ್ಯ ಅನುಭವಿಸುತ್ತಿರುವ ಭಾರತ (India)ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ(Virat Kohli) ಹಾಗೂ ಹಾಲಿ ನಾಯಕ ರೋಹಿತ್ ಶರ್ಮಾಗೆ (Rohit Sharma)ಭಾರಿ ಹಿನ್ನಡೆ ಉಂಟಾಗಿದೆ. ಭಾರತ ಹಾಗೂ ಶ್ರೀಲಂಕಾ(Sri Lanka) ನಡುವಿನ ಟಿ20 ಪಂದ್ಯದ ಬಳಿಕ ಐಸಿಸಿ(ICC) ನೂತನ ರ್ಯಾಂಕಿಂಗ್‌(Ranking) ಪಟ್ಟಿ ಬಿಡುಗಡೆಯಾಗಿದ್ದು, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಭಾರೀ ಕುಸಿತ ಕಂಡಿದ್ದಾರೆ..ಅಲ್ಲದೆ ಈ ಇಬ್ಬರು ದಿಗ್ಗಜ ಆಟಗಾರರು ರ್ಯಾಂಕಿಂಗ್‌ ಟಾಪ್ 10 ನಿಂದ ಹೊರಬಿದ್ದಿದ್ದಾರೆ.

3.Water Supply: ಇಂದು ಬೆಂಗಳೂರಿನಲ್ಲಿ ನೀರಿನ ಸಮಸ್ಯೆ; 18 ಗಂಟೆ ಕಾವೇರಿ ನೀರು ಸ್ಥಗಿತ

ಬೆಂಗಳೂರು (Bengaluru Water Supply) ಜನರಿಗೆ ಇಂದು ನೀರಿನ ಕಿರಿಕಿರಿ ಉಂಟಾಗಲಿದೆ. ಸುಮಾರು 18 ಗಂಟೆಗಳ‌ ಕಾಲ ಕಾವೇರಿ ನೀರು (Cauvery Water) ಸರಬರಾಜು ಪೂರೈಕೆ ಸ್ಥಗಿತಗೊಳ್ಳಲಿದೆ. ನಗರದ ಸುಮಾರು 100 ಕ್ಕೂ ಅಧಿಕ ವಾರ್ಡ್ ಗಳಲ್ಲಿ ಇಂದು ಬೆಳಗ್ಗೆ 6ರಿಂದ ಮದ್ಯರಾತ್ರಿ 12 ಗಂಟೆ ವರೆಗೆ ನೀರು ಸ್ಥಗಿತವಾಗಲಿದೆ. ಕಾವೇರಿ 6ನೇ ಹಂತದ ಜಲಸಂಗ್ರಹಾಗಾರದ ಕಾಮಗಾರಿ ಹಿನ್ನೆಲೆ ಬೆಂಗಳೂರಿನ ಬಹುತೇಕ ಕಡೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಹೇಳಿದೆ. ಈ ಸಂಬಂಧ BWSSB ಸೋಮವಾರವೇ ಪತ್ರಿಕಾ ಪ್ರಕಟನೆ ಹೊರಡಿಸಿತ್ತು. ಜಲಮಂಡಳಿ ಹೊಸದಾಗಿ ನಿರ್ಮಿಸಿರುವ 18 ದಶಲಕ್ಷ ಲೀಟರ್ ನ ಜಲಸಂಗ್ರಹಣಾಗಾರದ ದುರಸ್ತಿ ಹಿನ್ನೆಲೆ ನೀರು ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ.

4.Modi: ರಷ್ಯಾ ಅಧ್ಯಕ್ಷರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ, ಭಾರತೀಯರ ಬಗ್ಗೆ ಪುಟಿನ್ ಕೊಟ್ಟ ಭರವಸೆ ಏನು?

ದೆಹಲಿ: ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವಿನ ಯುದ್ಧ ಮತ್ತಷ್ಟು ತೀವ್ರವಾಗುತ್ತಿದೆ. ಉಕ್ರೇನ್‌ನಲ್ಲಿ ಭಾರತೀಯರು (Indians) ಪರದಾಡುತ್ತಲೇ ಇದ್ದಾರೆ. ಇಬ್ಬರು ಭಾರತೀಯ ವಿದ್ಯಾರ್ಥಿಗಳು (Students) ಯುದ್ಧಕ್ಕೆ ಬಲಿಯಾಗಿದ್ದು, ಆತಂಕ ಇನ್ನಷ್ಟು ಹೆಚ್ಚಾಗಿದೆ. ಭಾರತೀಯರ ಏರ್‌ಲಿಫ್ಟ್ (Air Lift) ಮುಂದುವರೆದಿದ್ದು, ಇಂದು ಇನ್ನಷ್ಟು ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ಸಾಗಲಿದ್ದಾರೆ. ಈ ನಡುವೆ ಭಾರತದ ಪ್ರಧಾನಿ (PM) ನರೇಂದ್ರ ಮೋದಿ (Narendra Modi) ಅವರು ರಷ್ಯಾ ಅಧ್ಯಕ್ಷ (Russian President) ವ್ಲಾಡಿಮಿರ್ ಪುಟಿನ್ (Vladimir Putin) ಅವರಿಗೆ ದೂರವಾಣಿ ಕರೆ (Phone Call) ಮಾಡಿ, ಮಾತನಾಡಿದ್ದಾರೆ. ಉಕ್ರೇನ್‌ನ ಪರಿಸ್ಥಿತಿಯನ್ನು ಚರ್ಚಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ವಿಶೇಷವಾಗಿ ಖಾರ್ಕಿವ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರ ಕುರಿತು ಮಾತನಾಡಿದರು. ಸಂಘರ್ಷದ ಪ್ರದೇಶಗಳಿಂದ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕುರಿತು ಪುಟಿನ್‌ ಅವರೊಂದಿಗೆ ಚರ್ಚಿಸಿದರು.

5.Air India: ಟರ್ಕಿಶ್ ಪ್ರಜೆಯ ನೇಮಕಕ್ಕೆ ವಿರೋಧ, ಏರ್ ಇಂಡಿಯಾ CEO ಹುದ್ದೆ ನಿರಾಕರಿಸಿದ ಇಲ್ಕರ್ ಐಸಿ

ಟರ್ಕಿಯ ಇಲ್ಕರ್ ಐಸಿ ಅವರು ಏರ್ ಇಂಡಿಯಾದ (Air India) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಸ್ಥಾನವನ್ನು ನಿರಾಕರಿಸಿದ್ದಾರೆ. ಏರ್ ಇಂಡಿಯಾವನ್ನು ತೆಕ್ಕೆಗೆ ತೆಗೆದುಕೊಂಡ ಟಾಟಾ ಸನ್ಸ್​ನಿಂದ ಟರ್ಕಿಯ ಏರ್‌ಲೈನ್ಸ್‌ನ ಮಾಜಿ ಅಧ್ಯಕ್ಷ ಇಲ್ಕರ್ ಐಸಿಯನ್ನು ಏರ್ ಇಂಡಿಯಾದ ಸಿಇಒ ಮತ್ತು ಎಂಡಿ ಆಗಿ ನೇಮಿಸುವುದಾಗಿ ಫೆಬ್ರವರಿ 14 ರಂದು ಘೋಷಿಸಿತ್ತು. ಈ ನೇಮಕಾತಿಯ (Appointment) ಘೋಷಣೆಯು ಹಲವಾರು ವಿರೋಧಗಳಿಗೆ ಕಾರಣವಾಗಿತ್ತು. ಈ ವರ್ಷ ಏಪ್ರಿಲ್ 1 ಅಥವಾ ಅದಕ್ಕೂ ಮೊದಲು ಐಸಿ ತಮ್ಮ ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಹೊಸ ಹುದ್ದೆಗೆ ಅವರ ನೇಮಕಾತಿಯು ಅಗತ್ಯ ನಿಯಂತ್ರಕ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ ಎಂದು ಸಹ ಹೇಳಿಕೆಯಲ್ಲಿ ಸೇರಿಸಲಾಗಿತ್ತು. ಆದರೆ ಟಾಟಾ ಗ್ರೂಪ್‍ನ ಪ್ರಸ್ತಾಪವನ್ನು ಐಸಿ ನಿರಾಕರಿಸಿದ್ದಾರೆ.
Published by:Latha CG
First published: