Morning Digest: ಚೈತ್ರಾ ಕುಂದಾಪುರ ಪೊಲೀಸರ ವಶಕ್ಕೆ, ಕಚ್ಚಾ ತೈಲ ಬೆಲೆ ಏರಿಕೆ, ಉಕ್ರೇನ್ ಸೈನಿಕರಿಗೆ ಲಕ್ಷಗಟ್ಟಲೇ ಸಂಬಳ, ಬೆಳಗಿನ ಟಾಪ್​ ನ್ಯೂಸ್​

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1. Ukraine Soldiers Salary: ರಷ್ಯಾ ವಿರುದ್ಧ ಹೋರಾಡುತ್ತಿರುವ ಉಕ್ರೇನ್ ಸೈನಿಕರ ಸಂಬಳ ಗೊತ್ತೇ? ತಿಂಗಳಿಗೆ ಲಕ್ಷಗಟ್ಟಲೆ ನಿಗದಿ

ರಷ್ಯಾದ (Russia) ವಿರುದ್ಧ ಉಕ್ರೇನ್ ಸೈನಿಕರು (Ukraine Soldiers) ಹಾಗೂ ನಾಗರಿಕರು ಹೋರಾಡುತ್ತಲೇ ಇದ್ದಾರೆ. ಬಹಳಷ್ಟು ಕಡೆಗಳಲ್ಲಿ ಸ್ಫೋಟ (Blast) ನಡೆದ ಹೊರತಾಗಿಯೂ ಉಕ್ರೇನ್ ರಷ್ಯಾ ವಿರುದ್ಧ ಆದಷ್ಟು ಮಟ್ಟಿನಲ್ಲಿ ಹೋರಾಡುತ್ತಲೇ ಇದೆ. ಈಗಾಗಲೇ ರಷ್ಯಾ ವಿರುದ್ಧ ಹೊರಾಡುತ್ತಾ ಉಕ್ರೇನ್​ನ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ. ಬಹಳಷ್ಟು ಜನರು ಅಂಡರ್​ಗ್ರೌಂಡ್​ಗಳಲ್ಲಿ ಅಡಗಿ ಪ್ರಾಣ ರಕ್ಷಿಸಿಕೊಳ್ಳುತ್ತಿದ್ದಾರೆ. ಹೀಗಿದ್ದರೂ ರಷ್ಯಾ ದಾಳಿ ಕ್ರೂರವಾಗಿ ನಡೆಯುತ್ತಿದೆ. ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರದ್ದು ಬೇರೆಯೇ ಪಾಡು. ಅವರು ತಾಯ್ನಾಡಿಗೆ ಮರಳು ಕಷ್ಟಪಡುತ್ತಿದ್ದಾರೆ. ಉಕ್ರೇನ್​​ನ ಬೃಹತ್​ ನಗರಗಳಿಗೆ ರಷ್ಯಾ ಪಡೆಗಳು ಲಗ್ಗೆ ಇಟ್ಟ ದಾಳಿ ಮಾಡುತ್ತಿದ್ದರೂ ಉಕ್ರೇನ್ ಹೋರಾಡುತ್ತಲೇ ಇದೆ. ಉಕ್ರೇನ್​ ಸೈನಿಕರು ಬಲಿಷ್ಠ ರಷ್ಯಾ ಪಡೆಯನ್ನು ಎದುರಿಸಿಕೊಂಡೇ ಬಂದಿದ್ದಾರೆ. ಹಾಗಾದರೆ ಉಕ್ರೇನ್ ಸೈನಿಕರು ತಿಂಗಳಿಗೆ ಪಡೆಯೋ ವೇತನ (Monthly Salary) ಎಷ್ಟು ಗೊತ್ತೇ? ರಷ್ಯಾದ ಪಡೆಗಳ ವಿರುದ್ಧ ದೇಶವನ್ನು ರಕ್ಷಿಸುತ್ತಿರುವ ತನ್ನ ಸೈನಿಕರಿಗೆ ಉಕ್ರೇನ್ ತಿಂಗಳಿಗೆ 100,000 ಹ್ರೈವ್ನಿಯಾಗಳನ್ನು (ಸುಮಾರು ₹ 2.5 ಲಕ್ಷ) ನೀಡಲಾಗುವುದು ಎಂದು ಉಕ್ರೇನ್ ಘೋಷಿಸಿದೆ.

2.Petrol Price In Karnataka: ಕಚ್ಚಾ ತೈಲ ದರ ಭಾರಿ ಏರಿಕೆ, ನಿಮ್ಮ ನಗರಗಳಲ್ಲಿ ಇಂದಿನ ಪೆಟ್ರೋಲ್‌, ಡೀಸೆಲ್‌ ಬೆಲೆ ಹೇಗಿದೆ?

ರಷ್ಯಾ - ಉಕ್ರೇನ್‌ ಯುದ್ಧ (Russia Ukraine War) ಪರಿಣಾಮ ದೇಶದಲ್ಲೂ ಇಂಧನ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತದೆ (Increase) ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ರೀತಿ ಕಚ್ಚಾ ತೈಲ (Crude Oil) ದರದಲ್ಲಿ ಏರಿಕೆಯಾಗುತ್ತಿದೆ. ಆದರೆ, ಸದ್ಯಕ್ಕೆ ದೇಶದಲ್ಲಿ ಅಷ್ಟರ ಮಟ್ಟಿಗೆ ಏರಿಕೆ ಕಂಡುಬಂದಿಲ್ಲ. ದೇಶದ ಬಹುತೇಕ ನಗರಗಳಲ್ಲಿ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳ (International Market) ಅನುಗುಣವಾಗಿಯೂ ಇಂಧನ ಬೆಲೆಯಲ್ಲಿ ಏರಿಕೆ, ಇಳಿಕೆ ಕಾಣುತ್ತಿದೆ. ಕಚ್ಚಾ ತೈಲ ಬೆಲೆಯ ಆಧಾರದ ಮೇಲೆ ಹಾಗೂ ತೆರಿಗೆಯ ವ್ಯತ್ಯಾಸದ ಕಾರಣದಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ವ್ಯತ್ಯಾಸವಾಗುತ್ತಿರುತ್ತದೆ. ಇದೇ ರೀತಿ, ರಾಜ್ಯದಲ್ಲೂ (State) ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಬೆಂಗಳೂರಿನಲ್ಲಿ (Bengaluru) ಮಾತ್ರ ಈ ವರ್ಷ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..

3.LPG Price Hike: ಏರಿಕೆ ಕಂಡ ಎಲ್​ಪಿಜಿ ಗ್ಯಾಸ್, ಮುಂದಿನ ವಾರ ಕಾದಿದೆ ಮತ್ತೊಂದು ಶಾಕ್!

ರಷ್ಯಾ ಮತ್ತು ಉಕ್ರೇನ್​ ನಡುವೆ ಯುದ್ಧ ನಡೆಯುತ್ತಿರುವ ಪರಿಣಾಮ ಇತ್ತ ಭಾರತದಲ್ಲಿ ಪೆಟ್ರೋಲ್-ಡೀಸೆಲ್, ಚಿನ್ನ-ಬೆಳ್ಳಿ ಹಾಗೂ ಎಲ್​ಪಿಜಿ ಸಿಲಿಂಡರ್ ಬೆಲೆ ಹೆಚ್ಚಾಗುತ್ತಿದೆ. ಷೇರು ಮಾರುಕಟ್ಟೆಯ ಮೇಲೂ ರಷ್ಯಾ-ಉಕ್ರೇನ್ ಯುದ್ಧದ ಪ್ರಭಾವ ಬೀರಿದಂತಿದೆ. ಹೀಗಾಗಿ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ-ಕಲ್ಲೋಲವಾಗುತ್ತಿದೆ. ಮಾರ್ಚ್ 1ರಂದು ಎಲ್​ಪಿಜಿ ಸಿಲಿಂಡರ್ ಬೆಲೆ 105 ರೂ. ಹೆಚ್ಚಾಗಿದೆ. ಸದ್ಯ ವಾಣಿಜ್ಯ ಎಲ್​​ಪಿಜಿ ಸಿಲಿಂಡರ್​ ಬೆಲೆ ಮಾತ್ರ ಏರಿಕೆಯಾಗಿದ್ದು, ಮುಂದಿನ ವಾರ ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆಯೂ ಏರಿಕೆಯಾಗಲಿದೆ. ಮಾರ್ಚ್​ 7ರಂದು ಗೃಹೋಪಯೋಗಿ ಎಲ್​ಪಿಜಿ ಸಿಲಿಂಡರ್ ಬೆಲೆ ಹೆಚ್ಚಾಗಲಿದೆ. ಉತ್ತರ ಪ್ರದೇಶದಲ್ಲಿ ಮಾರ್ಚ್​​ 3ರಂದು 6ನೇ ಹಂತದ ಮತದಾನ ನಡೆಯಲಿದೆ. ಮಾರ್ಚ್​ 7ರಂದು 7ನೇ ಹಂತದ ಚುನಾವಣೆ ನಡೆದಯಲಿದೆ. ಹೀಗಾಗಿ ಚುನಾವಣೆ ಮುಗಿದ ಬಳಿಕ ಎಲ್​ಪಿಜಿ ಸಿಲಿಂಡರ್ ಬೆಲೆ ಹೆಚ್ಚಿಸುವ ಪ್ಲ್ಯಾನ್​ ಸರ್ಕಾರದ್ದಾಗಿದೆ. ಅದರಂತೆ ಮಾರ್ಚ್​ 7ರ ಬಳಿಕ ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ ಇನ್ನೂ ದುಬಾರಿಯಾಗಲಿದೆ.

4.Chaithra Kundapura: ಕಲಬುರಗಿಗೆ ತೆರಳುತ್ತಿದ್ದ ಚೈತ್ರಾ ಕುಂದಾಪುರ ಪೊಲೀಸರ ವಶಕ್ಕೆ

ತಮ್ಮ ಭಾಷಣದಿಂದಲೇ ಪರಿಚಿತರಾಗಿರುವ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ (Hindu Activist Chaithra Kundapura) ಅವರನ್ನು ಶಹಬಾದ್ ಪೊಲೀಸರು (Shahabad Police) ವಶಕ್ಕೆ ಪಡೆದು, ಕಲಬುರಗಿ ನಗರ ಪ್ರವೇಶಿಸದಂತೆ ತಡೆದಿದ್ದಾರೆ. ಇಂದು ಕಲಬುರಗಿ (Kalaburagi) ನಗರದಲ್ಲಿ ನಡೆಯುತ್ತಿರುವ ಆಳಂದ ಚಲೋ (Alanda Chalo) ಕಾರ್ಯಕ್ರಮದಲ್ಲಿ ಭಾಗಿಯಾಗಲು ಚೈತ್ರಾ ಕುಂದಾಪುರ ಆಗಮಿಸುತ್ತಿದ್ರು. ಯಾದಗಿರಿ (Yadagiri) ಮಾರ್ಗವಾಗಿ ಚೈತ್ರಾ ಕುಂದಾಪುರ ಆಗಮಿಸುತ್ತಿರುವ ವಿಷಯ ತಿಳಿದ ಪೊಲೀಸರು ಗಡಿ ದಾಟಿಸಿದ್ದಾರೆ. ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಮತ್ತು ಚೈತ್ರಾ ಕುಂದಾಪುರ ಅವರಿಗೆ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಡಾಳಿತ ನಿರ್ಬಂಧ ಹಾಕಿದೆ. ಈ ಹಿನ್ನೆಲೆ ಚೈತ್ರಾರನ್ನ ಮಾರ್ಗ ಮಧ್ಯೆ ತಡೆದಿದ್ದಾರೆ. ಫೆಬ್ರವರಿ 27 ರಿಂದ ಮಾರ್ಚ್ 3ರವರೆಗೆ ಪ್ರಮೋದ್ ಮುತಾಲಿಕ್ ಮತ್ತು ಚೈತ್ರಾ ಕುಂದಾಪುರ ಇಬ್ಬರಿಗೂ ನಿಷೇಧ ಹೇರಿದೆ. ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

5. ಹೊಸ ವೈಶಿಷ್ಟ್ಯಗಳೊಂದಿಗೆ UDAY Express ಮತ್ತೆ ಆರಂಭ: ಇಲ್ಲಿದೆ ರೈಲಿನ ವೇಳಾಪಟ್ಟಿ & ಮಾರ್ಗ

ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಬೆಂಗಳೂರು (Bengaluru) ಮತ್ತು ಕೊಯಮತ್ತೂರು (Coimbatore) ನಡುವಿನ ಉದಯ್ ಎಕ್ಸ್‌ ಪ್ರೆಸ್‌ (Uday Express) ರೈಲು (Railway) ಮತ್ತೆ ಹಳಿಗಿಳಿದಿದೆ. ಉದಯ್ ಎಕ್ಸ್‌ ಪ್ರೆಸ್‌ (Utkrisht Double Decker Air-Conditioned Yatri (UDAY) Express) ಅನ್ನು ಮರು ಓಡಿಸಲು ದಕ್ಷಿಣ ವಲಯ ರೈಲ್ವೆ (Southern Railways) ನಿರ್ಧರಿಸಿದ್ದು, ಮತ್ತೆ ಸಂಚಾರಕ್ಕೆ ಇಲಾಖೆ ಅನುವು ಮಾಡಿಕೊಟ್ಟಿದೆ. ಇದೇ ಮಾರ್ಚ್ 31ರಿಂದ ರೈಲು ಮತ್ತೆ ಸಂಚರಿಸಲಿದೆ. ಉದಯ್ ಎಕ್ಸ್‌ ಪ್ರೆಸ್‌ ಬೆಂಗಳೂರು ಮತ್ತು ಕೊಯಮತ್ತೂರು ನಡುವೆ ಸಂಪರ್ಕ ಕಲ್ಪಿಸುವ ಡಬಲ್ ಡೆಕ್ಕರ್ ರೈಲು (Double Decker Railway) ಆಗಿತ್ತು. ಆದರೆ ರೈಲನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈ ಪರಿಸ್ಥಿತಿಯಲ್ಲಿ ಪ್ರಯಾಣಿಕರ (Passengers) ಕೋರಿಕೆಯ ಮೇರೆಗೆ ಬೆಂಗಳೂರು ಮತ್ತು ಕೊಯಮತ್ತೂರು ನಡುವೆ ಉದಯ್ ಎಕ್ಸ್‌ ಪ್ರೆಸ್‌ ಅನ್ನು ಮರು ಓಡಿಸಲು ದಕ್ಷಿಣ ವಲಯ ರೈಲ್ವೆ ನಿರ್ಧರಿಸಿದೆ. ಅದರಂತೆ ಇದೇ ತಿಂಗಳು ಅಂದರೆ ಮಾರ್ಚ್ 31ರಿಂದ ರೈಲು ಮತ್ತೆ ಸಂಚರಿಸಲಿದೆ.
Published by:Latha CG
First published: