Morning Digest: ಪಂಚರಾಜ್ಯಗಳಲ್ಲಿ ಮತ ಎಣಿಕೆ ಆರಂಭ: ರಾಜ್ಯದಲ್ಲಿ ಇಂದು ಚಿನ್ನ, ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ? ಬೆಳಗಿನ ಸುದ್ದಿಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಮಾರ್ನಿಂಗ್​ ನ್ಯೂಸ್​

ಮಾರ್ನಿಂಗ್​ ನ್ಯೂಸ್​

  • Share this:
Election Results 2022: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭಗೊಂಡಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಈ ರಾಜ್ಯಗಳಲ್ಲಿ ಫೆಬ್ರವರಿ 10 ಮತ್ತು ಮಾರ್ಚ್ 7 ರ ನಡುವೆ ಚುನಾವಣೆ ನಡೆದಿದ್ದು, ಉತ್ತರ ಪ್ರದೇಶದಲ್ಲಿ 7 ಹಂತಗಳಲ್ಲಿ ಮತದಾನ ನಡೆದಿದೆ. ಮಣಿಪುರದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆದರೆ, ಪಂಜಾಬ್, ಉತ್ತರಾಖಂಡ ಮತ್ತು ಗೋವಾದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಜುಲೈನಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಐದು ವಿಧಾನಸಭಾ ಚುನಾವಣೆಗಳ ಫಲಿತಾಂಶ ಸಾಕಷ್ಟು ಮಹತ್ವದಾಗಿದೆ. ವಿಶೇಷವಾಗಿ ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ರಾಷ್ಟ್ರ ರಾಜಕಾರಣದ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ.

ಗೋವಾದಲ್ಲಿ ಅಮಿತ್ ಶಾ, ಕುದುರೆ ವ್ಯಾಪಾರ ಎಂದ ಕಾಂಗ್ರೆಸ್​ 
ಗೃಹ ಸಚಿವ ಅಮಿತ್ ಶಾ (Amit Shah) ಅವರು ಚುನಾವಣಾ ಫಲಿತಾಂಶದ (Election Result) ಸಂದರ್ಭ ಬಿಜೆಪಿ (BJP) ಗೆಲುವು ಖಚಿತಪಡಿಸಿಕೊಂಡ ಉತ್ತರಪ್ರದೇಶದಲ್ಲಿದ್ದಾರೆ ಎಂದುಕೊಂಡಿರಾ? ಆದರೆ ಆಗಿಲ್ಲ. ಅವರು ಕಾಂಗ್ರೆಸ್ ಗೆಲುವು ಸಾಧಿಸುವ ಸಾಧ್ಯತೆ ಇರುವಂತಹ ಗೋವಾಗೆ (Goa) ಬಂದಿಳಿದಿದ್ದಾರೆ. ಇದು ಕಾಂಗ್ರೆಸ್ನಿಂದ (Congress) ತೀವ್ರ ಟೀಕೆಗೆ ಗುರಿಯಾಗಿದೆ. ಗೋವಾದಲ್ಲಿ ಅಸೆಂಬ್ಲಿ ಚುನಾವಣೆ ಎಕ್ಸಿಟ್ ಪೋಲ್ ಹೊರಬಿದ್ದ ನಡುವೆಯೇ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕಾರ್ಯದರ್ಶಿ ಐವನ್ ಡಿಸೋಜಾ ಬುಧವಾರ ಭಾರತೀಯ ಜನತಾ ಪಕ್ಷದ (ಬಿಜೆಪಿ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಪಕ್ಷದಿಂದ "ಕುದುರೆ ವ್ಯಾಪಾರ" ಎಂದು ಆರೋಪಿಸಿ ವಾಗ್ದಾಳಿ ನಡೆಸಿದ್ದಾರೆ. ಕುದುರೆ ವ್ಯಾಪಾರಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ನಾಯಕರು ರಾಜ್ಯ ವಿಧಾನಸಭಾ ಚುನಾವಣೆಯ ಎಣಿಕೆಗೆ ಮುಂಚಿತವಾಗಿ ಗೋವಾಕ್ಕೆ ಬಂದಿಳಿದರು ಎಂದು ಹೇಳಿದ್ದಾರೆ.

ಪಕ್ಷಗಳ ಪ್ಲಾನ್ B ಏನು?
ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ (Assembly Election) ಕದನದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಎರಡು ತಿಂಗಳ ಕಾಲದ ಸಸ್ಪೆನ್ಸ್ ಇಂದು ಕೊನೆಗೊಳ್ಳಲಿದೆ. ದೇಶಾದ್ಯಂತ ಜನರ ಕಣ್ಣು ಪಂಚಕ್ಷೇತ್ರ ಚುನಾವಣಾ (5 State Election) ಕದನದ ಮೇಲಿದೆ. ಫಲಿತಾಂಶ, ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಬೆಳಗ್ಗೆ 8 ಗಂಟೆಗೆ ಐದು ರಾಜ್ಯಗಳಲ್ಲಿ ಮತ ಎಣಿಕೆಗೆ ವೇದಿಕೆ ಸಜ್ಜಾಗಿದೆ. ಪ್ರಕ್ರಿಯೆ ಸುಗಮವಾಗಿ ನಡೆಯಲು ಚುನಾವಣಾ ಆಯೋಗ (Election Commission) ವ್ಯಾಪಕ ವ್ಯವಸ್ಥೆ ಮಾಡಿದೆ. ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರ ರಾಜ್ಯಗಳಲ್ಲಿ ಪಕ್ಷಗಳು ಮತ್ತು ರಾಜಕಾರಣಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:Assembly elections Results 2022: ಎಲ್ಲರ ಕಣ್ಣು ಫಲಿತಾಂಶದ ಮೇಲೆ, ಪಕ್ಷಗಳ ಪ್ಲಾನ್ B ಏನು?

ಇಂದು ಚಿನ್ನದ ಬೆಲೆ ಎಷ್ಟು?
ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮದಿಂದಾಗಿ ಎಲ್ಲೆಡೆ ಷೇರು ಮಾರುಕಟ್ಟೆಯಲ್ಲಿ ವ್ಯತ್ಯಾಸವಾಗುತ್ತಿದ್ದು ಇದರ ಪ್ರಭಾವ ಚಿನ್ನ ಬೆಳ್ಳಿ ದರಗಳ ಮೇಲೂ ಬೀಳುತ್ತಿದೆ. ಈಗ ಪ್ರಸ್ತುತ ಮತ್ತೆ ಚಿನ್ನ ಏರುಮುಖ ಮಾಡಿ ಸಾಗುತ್ತಿದೆ. ಇಂದು ಭಾರತದ ಮಾರುಕಟ್ಟೆಯಲ್ಲಿ ಬಂಗಾರದ ದರದಲ್ಲಿ ನಿನ್ನೆಗೆ ಹೋಲಿಸಿದರೆ ಭಾರಿ ವ್ಯತ್ಯಾಸವೇನೂ ಆಗಿಲ್ಲ. ಒಂದು ಗ್ರಾಂ 22 ಕ್ಯಾರಟ್ ನ ಬಂಗಾರದ ಬೆಲೆ ರೂ. ರೂ. 4,940 ಆಗಿದೆ.

ಇಂದಿನ ಪೆಟ್ರೋಲ್-ಡೀಸೆಲ್ ದರ ಎಷ್ಟು?
ನಿನ್ನೆಗೆ ಹೋಲಿಸಿದರೆ, ದೇಶದ ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಯಾವ ಬದಲಾವಣೆಗಳು ಕಂಡುಬಂದಿಲ್ಲ. ಇಂದು ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 101.40 ರೂ ಇದ್ದು ನಿನ್ನೆಗೆ ಹೋಲಿಸಿದರೆ ದರದಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಡೀಸೆಲ್ ಬೆಲೆ 91.43 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.
Published by:Kavya V
First published: