• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Morning Digest: ಈ ರಾಜ್ಯಗಳಲ್ಲಿ ಆಲಿಕಲ್ಲು ಮಳೆ, ಅಪಘಾತದಲ್ಲಿ 17 ಮಂದಿ ಸಾವು, ಚಿನ್ನದ ಬೆಲೆ ಇಳಿಕೆ, ಬೆಳಗಿನ ಟಾಪ್​ ನ್ಯೂಸ್​ಗಳು

Morning Digest: ಈ ರಾಜ್ಯಗಳಲ್ಲಿ ಆಲಿಕಲ್ಲು ಮಳೆ, ಅಪಘಾತದಲ್ಲಿ 17 ಮಂದಿ ಸಾವು, ಚಿನ್ನದ ಬೆಲೆ ಇಳಿಕೆ, ಬೆಳಗಿನ ಟಾಪ್​ ನ್ಯೂಸ್​ಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Karnataka Weather Today: ಕರ್ನಾಟಕದಲ್ಲಿ ಶೀತಗಾಳಿ ಜೊತೆಗೆ ದಟ್ಟವಾದ ಮಂಜು, ಈ ರಾಜ್ಯಗಳಲ್ಲಿ ಆಲಿಕಲ್ಲು ಮಳೆ


Karnataka Weather Report Today: ರಾಜ್ಯದಲ್ಲಿ ದಿನೇ ದಿನೇ ಚಳಿಯ(Cold) ಪ್ರಮಾಣ ಹೆಚ್ಚಾಗುತ್ತಿದ್ದು, ಜನರನ್ನು ನಡುಗಿಸುತ್ತಿದೆ. ಬೆಳಗಿನ ಜಾವ ಮತ್ತು ಸಂಜೆಯಾಗುತ್ತಲೇ ಶೀತದ ಸುಳಿಗಾಳಿ(Cold Wave) ಜನರು ಹೊರಗಡೆ ಹೋಗದಂತೆ ಮಾಡುತ್ತಿದೆ. ಮತ್ತೊಂದೆಡೆ ಕೊರೋನಾ, ಓಮೈಕ್ರಾನ್ (Corona And Omicron) ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಸಣ್ಣ ನೆಗಡಿಗೂ ಜನರು ಹೆದರುವಂತಾಗಿದೆ. ದಕ್ಷಿಣ ಒಳನಾಡಿನಲ್ಲಿ ಬೆಳಗ್ಗೆ ಚಳಿ ಮತ್ತು ಮಧ್ಯಾಹ್ನದ ವೇಳೆ ಶುಷ್ಕ ಹಮಾಮಾನ ಇರಲಿದೆ. ಇತ್ತ ಕರಾವಳಿ (Coastal) ಭಾಗದಲ್ಲಿ ಒಣ ಹವೆ ಇರಲಿದೆ. ಉತ್ತರ ಕರ್ನಾಟಕ (North Karnataka) ಜಿಲ್ಲೆಗಳಲ್ಲಿ ಶೀತಗಾಳಿ ಜೊತೆ ದಟ್ಟವಾದ ಮಂಜು ಆವರಿಸಲಿದೆ.


2.Kukke Subramanya Temple: ಇಂದಿನಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯಾವುದೇ ಧಾರ್ಮಿಕ ಸೇವೆಗೆ ಅವಕಾಶವಿಲ್ಲ


ಇಂದಿನಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ (Kukke Subramanya) ಯಾವುದೇ ಸೇವೆಗೆ (Religious Services) ಅವಕಾಶವಿಲ್ಲ. ನಾಗಾರಾಧನೆಯ ಪುಣ್ಯ ಕ್ಷೇತ್ರ ದಕ್ಷಿಣಕನ್ನಡ (Dakshina Kannada) ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇಶದಾದ್ಯಂತ ಮತ್ತು ರಾಜ್ಯಾದ್ಯಂತ ಹರಡುತ್ತಿರುವ ಓಮಿಕ್ರಾನ್ ವೈರಸ್ ಅನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಮತ್ತು ದಕ್ಷಿಣಕನ್ನಡ ಜಿಲ್ಲಾಧಿಕಾರಿಯವರ ಆದೇಶದ ಪ್ರಕಾರ ಜನವರಿ 6 ಗುರುವಾರದಿಂದ ಮುಂದಿನ ಆದೇಶದವರೆಗೆ ಶ್ರೀ ದೇವಳದಲ್ಲಿ ಯಾವುದೇ ಸೇವೆಗಳು ನಡೆಯವುದಿಲ್ಲ. ಶ್ರೀ ದೇವರ ದರುಶನಕ್ಕೆ ಮಾತ್ರ ಭಕ್ತರಿಗೆ ಅವಕಾಶವನ್ನು ನೀಡಲಾಗಿದೆ.


3.Accident: ಬಸ್​ & ಟ್ರಕ್ ನಡುವೆ ಭೀಕರ ಅಪಘಾತ, 17 ಮಂದಿ ದುರಂತ ಸಾವು, 26 ಜನರಿಗೆ ಗಾಯ


ಜಾರ್ಖಂಡ್(ಜ.06): ಬಸ್​ ಮತ್ತು ಟ್ರಕ್​ ನಡುವೆ ಭೀಕರ ಅಪಘಾತ(Accident) ಸಂಭವಿಸಿ ಸುಮಾರು 17 ಮಂದಿ ಸಾವನ್ನಪ್ಪಿರುವ ದುರಂತ ಘಟನೆ ಜಾರ್ಖಂಡ್(Jarkhand)​ನ ಪಕುರ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ 26 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. Accident at Jarkhand: ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ 50,000 ಪರಿಹಾರ ಧನ ನೀಡುವುದಾಗಿ ಮೋದಿ ಘೋಷಿಸಿದ್ದಾರೆ.


4.Gold Price Today: ದೇಶದಲ್ಲಿ ಮತ್ತೆ ಇಳಿಕೆಯಾದ ಚಿನ್ನದ ಬೆಲೆ; ಬೆಂಗಳೂರಿನಲ್ಲಿಂದು ಎಷ್ಟಿದೆ ರೇಟು?


Gold Rate on Jan 6, 2022: ನೀವು ಚಿನ್ನ ಖರೀದಿಗೆ ಹೋಗುತ್ತಿದ್ರೆ ಇವತ್ತಿನ ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲೇಬೇಕು. ಇದರಿಂದ ಚಿನ್ನ (Gold) ಖರೀದಿ ಸುಲಭವಾಗಲಿದೆ. ಕಳೆದೊಂದು ವಾರದಿಂದ ಚಿನ್ನದ ಬೆಲೆ ಸಾಕಷ್ಟು ಏರಿಳಿತ ಕಾಣುತ್ತಿದೆ. ಇವತ್ತಿನ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ. ದೇಶದಲ್ಲಿಂದು ಚಿನ್ನದ ಬೆಲೆ (Gold Price)ಯಲ್ಲಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಇಂದು ಬಂಗಾರದ ಬೆಲೆ ಏರಿಕೆ ಕಂಡಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,260 ರೂ. ಇತ್ತು. ಇಂದು 180 ರೂ. ಇಳಿಕೆಯಾಗಿದ್ದು 47,080 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 49,260 ರೂ. ಇತ್ತು. ಇಂದು 180 ರೂ. ಕಡಿಮೆಯಾಗಿದ್ದು, 49,080 ರೂ. ಆಗಿದೆ.

top videos
    First published: