• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Morning Digest: ಇಳಿಕೆಯಾದ ಚಿನ್ನದ ಬೆಲೆ, ಶೀಘ್ರದಲ್ಲೇ ಕೋವಿಡ್ ಮಾತ್ರೆ ಲಭ್ಯ, ಬೆಳಗಿನ ಟಾಪ್​ ನ್ಯೂಸ್​​ಗಳು

Morning Digest: ಇಳಿಕೆಯಾದ ಚಿನ್ನದ ಬೆಲೆ, ಶೀಘ್ರದಲ್ಲೇ ಕೋವಿಡ್ ಮಾತ್ರೆ ಲಭ್ಯ, ಬೆಳಗಿನ ಟಾಪ್​ ನ್ಯೂಸ್​​ಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Gold Price Today: ಆಭರಣ ಪ್ರಿಯರಿಗೆ ಗುಡ್​ನ್ಯೂಸ್​, ಬೆಂಗಳೂರಿನಲ್ಲಿ ಮತ್ತಷ್ಟು ಇಳಿಕೆಯಾದ ಚಿನ್ನದ ಬೆಲೆ


Gold Rate on Jan 5, 2022: ನೀವು ಚಿನ್ನ ಖರೀದಿಗೆ ಹೋಗುತ್ತಿದ್ರೆ ಇವತ್ತಿನ ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲೇಬೇಕು. ಇದರಿಂದ ಚಿನ್ನ (Gold) ಖರೀದಿ ಸುಲಭವಾಗಲಿದೆ. ಕಳೆದೊಂದು ವಾರದಿಂದ ಚಿನ್ನದ ಬೆಲೆ ಸಾಕಷ್ಟು ಏರಿಳಿತ ಕಾಣುತ್ತಿದೆ. ಇವತ್ತಿನ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ. ದೇಶದಲ್ಲಿಂದು ಚಿನ್ನದ ಬೆಲೆ (Gold Price)ಯಲ್ಲಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಇಂದು ಬಂಗಾರದ ಬೆಲೆ ಇಳಿಕೆ ಕಂಡಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,250 ರೂ. ಇತ್ತು. ಇಂದು 10 ರೂ. ಏರಿಕೆಯಾಗಿದ್ದು 47,260 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 49,250 ರೂ. ಇತ್ತು. ಇಂದು 10 ರೂ. ಹೆಚ್ಚಳವಾಗಿದ್ದು, 49,260 ರೂ. ಆಗಿದೆ.


2.Petrol And Diesel Price Today: ವಾಹನಕ್ಕೆ ಇಂಧನ ತುಂಬಿಸುವ ಮೊದಲು ಇವತ್ತಿನ ಬೆಲೆ ಚೆಕ್ ಮಾಡ್ಕೊಳ್ಳಿ


Petrol And Diesel Price today: ಕೇಂದ್ರ ಹಾಗೂ ರಾಜ್ಯ ಸರ್ಕಾರದ ದೀಪಾವಳಿ ಕೊಡುಗೆಯಾಗಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಸುಂಕವನ್ನು ಕಡಿತಗೊಳಿಸಿದ್ದವು. ಇದರ ಪರಿಣಾಮವಾಗಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಎಲ್​ಪಿಜಿ ಬೆಲೆ (LPG) ಏರಿಕೆಯಿಂದ ಕಂಗಾಲಾಗಿದ್ದ ಜನ ದಿನನಿತ್ಯ ಏರುತ್ತಿದ್ದ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆ ಜನ ಸಾಮಾನ್ಯರಿಗೆ ತೈಲ ದರದ ಹೊರೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿದೆ. ಉಳಿದ ಹಲವು ಜಿಲ್ಲೆಗಳಲ್ಲಿ ಏರಿಳಿತ ಕಂಡಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.


3.Covid Pill: ಮುಂದಿನ ವಾರದಿಂದ ಎಲ್ಲಾ ಕಡೆ ಕೋವಿಡ್ ಮಾತ್ರೆ ಲಭ್ಯ, ಬೆಲೆ ಎಷ್ಟು? ಎಲ್ಲಿ ಸಿಗುತ್ತದೆ? ಫುಲ್ ಡೀಟೆಲ್ಸ್


ಕೊರೊನಾ(Corona) ಒಂದು ಮತ್ತು ಎರಡನೇ ಅಲೆಯ ಅಬ್ಬರ ಕಡಿಮೆಯಾಯಿತು ಎನ್ನುವಾಗಲೇ ದೇಶದಾದ್ಯಂತ ಕೋವಿಡ್ ರೂಪಾಂತರಿ ಒಮಿಕ್ರೋನ್(Omicron) ಆರ್ಭಟ ಶುರುವಾಗಿದೆ. ಹೀಗಾಗಿ ಜನರನ್ನು ಮತ್ತಷ್ಟು ಆರೋಗ್ಯವಾಗಿ(Health) ಇರಿಸಲು ಕೇಂದ್ರ ಸರ್ಕಾರ ಕೆಲವು ನಿರ್ದಿಷ್ಟ ವಯಸ್ಸಿನವರಿಗೆ ಬೋಸ್ಟರ್ ಡೋಸ್ ಲಸಿಕೆ(Booster Dose vaccine) ನೀಡುತ್ತಿದೆ.. ಅಲ್ಲದೆ ಶಾಲಾ ಕಾಲೇಜುಗಳ(School and college) ಮಕ್ಕಳಿಗೂ ಲಸಿಕೆ ನೀಡಲು ಪ್ರಾರಂಭ ಮಾಡಿದೆ.. ಈಗಾಗಲೇ ದೇಶದಲ್ಲಿ ಬಳಕೆಯಾಗುತ್ತಿರುವ ಕೊರೊನಾ ಔಷಧಿ ಗಳ ಜೊತೆಗೆ ಮತ್ತಷ್ಟು ಕೊರೊನಾ ಔಷಧಿ ಗಳಿಗೆ ಅನುಮತಿ ನೀಡುವ ಮೂಲಕ ಕೇಂದ್ರ ಸರ್ಕಾರ ಸೋಂಕು ನಿಯಂತ್ರಣ ಮಾಡಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.. ಹೀಗಾಗಿಯೇ ಭಾರತದಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಡ್-19 ಲಸಿಕೆ ಕೋವೊವಾಕ್ಸ್, ಬಯೋಲಾಜಿಕಲ್ ಇ ಸಂಸ್ಥೆಯ ಕಾರ್ಬೆವಾಕ್ಸ್ ಮತ್ತು ಕೋವಿಡ್ ವಿರೋಧಿ ಮಾತ್ರೆ ಮೊಲ್ನುಪಿರಾವಿರ್ ಅನ್ನು ಕೇಂದ್ರ ಔಷಧ ಪ್ರಾಧಿಕಾರ ಸಿಡಿಎಸ್‌ಸಿಒ ಅನುಮೋದಿಸಿದೆ.


4.Coronavirus: ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 18,466 ಕೋವಿಡ್​ ಪ್ರಕರಣಗಳು ಪತ್ತೆ, 20 ಮಂದಿ ಸಾವು


ಮುಂಬೈ(ಜ.05): ದೇಶದಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳ(Corona cases) ಸಂಖ್ಯೆ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸುತ್ತಿದೆ. ಇದು ಮೂರನೇ ಅಲೆ(3rd Wave) ಪ್ರಾರಂಭದ ಮುನ್ಸೂಚನೆ ಎಂದು ತಜ್ಞರು ಹೇಳುತ್ತಿದ್ದಾರೆ. ಮೆಟ್ರೋ ನಗರಗಳಲ್ಲೇ ಕೋವಿಡ್ ಪ್ರಕರಣಗಳ(COVID Cases) ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತೊಂದು ಆತಂಕಕ್ಕೆ ಕಾರಣವಾಗಿದೆ. ದೆಹಲಿ(Delhi), ಮುಂಬೈ(Mumbai), ಬೆಂಗಳೂರಿನಂತಹ(Bengaluru) ಮಹಾನಗರಿಗಳಲ್ಲಿ ಪ್ರತಿದಿನ ಪತ್ತೆಯಾಗುತ್ತಿರುವ ಕೊರೋನಾ ಕೇಸ್​ಗಳಲ್ಲಿ ಏರಿಕೆ ಕಾಣುತ್ತಿದೆ. ದೆಹಲಿಯಲ್ಲಿ ಪಾಸಿಟಿವಿಟಿ ದರ(Positivity Rate) ಶೇ.6 ದಾಟಿದೆ. ಇನ್ನು, ಮಹಾರಾಷ್ಟ್ರ(Maharashtra)ದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.


5.Karnataka Weather Report: ಬೆಳಗ್ಗೆ ಚಳಿ ಮಧ್ಯಾಹ್ನ ಬಿಸಿಲು; ಬಯಲು ಸೀಮೆಯಲ್ಲಿ ಮೋಡ ಕವಿದ ವಾತಾವರಣ


Karnataka Weather Report Today: ರಾಜ್ಯದಲ್ಲಿ ಅಕಾಲಿಕ ಮಳೆ (Unseasonal Rainfall) ಬ್ರೇಕ್ ನೀಡಿದ್ರೆ, ಚಳಿ (Winter) ಜನರನ್ನು ಮನೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದೆ. ಬೆಳಗಿನ ಜಾವ ಮತ್ತು ಸಂಜೆಯಾಗುತ್ತಲೇ ಶೀತದ ಸುಳಿಗಾಳಿ ಜನರು ಹೊರಗಡೆ ಹೋಗದಂತೆ ಮಾಡುತ್ತಿದೆ. ಮತ್ತೊಂದಡೆ ಕೊರೊನಾ, ಓಮೈಕ್ರಾನ್ (Corona And Omicron) ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಸಣ್ಣ ನೆಗಡಿಗೂ ಜನರು ಹೆದರುವಂತಾಗಿದೆ. ದಕ್ಷಿಣ ಒಳನಾಡಿನಲ್ಲಿ ಬೆಳಗ್ಗೆ ಚಳಿ ಮತ್ತು ಮಧ್ಯಾಹ್ನದ ವೇಳೆ ಶುಷ್ಕ ಹಮಾಮಾನ ಇರಲಿದೆ. ಇತ್ತ ಕರಾವಳಿ (Coastal) ಭಾಗದಲ್ಲಿ ಒಣ ಹವೆ ಇರಲಿದೆ. ಉತ್ತರ ಕರ್ನಾಟಕ (North Karnataka) ಜಿಲ್ಲೆಗಳಲ್ಲಿ ಶೀತಗಾಳಿ ಜೊತೆ ದಟ್ಟವಾದ ಮಂಜು ಆವರಿಸಲಿದೆ.

First published: