Morning Digest: ಅಲ್ಪ ಏರಿಕೆ ಕಂಡ ಚಿನ್ನದ ಬೆಲೆ, ತಂದೆ-ತಾಯಿಯಾದ ನಿಕ್ ಜೋನಾಸ್-ಪಿಗ್ಗಿ; ಬೆಳಗಿನ ಟಾಪ್​ ನ್ಯೂಸ್​​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Priyanka Chopra: ತಾಯಿಯಾದ ನಟಿ ಪ್ರಿಯಾಂಕಾ ಚೋಪ್ರಾ, ಅಭಿಮಾನಿಗಳಿಗೆ ಬಿಗ್​ ಸರ್ಪ್ರೈಸ್​

Priyanka Chopra: ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಮತ್ತು ನಿಕ್​ ಜೋನಾಸ್(Nick Jonas) ದಂಪತಿ ಅಭಿಮಾನಿಗಳಿಗೆ ಬಿಗ್ ಸರ್​​ಪ್ರೈಸ್ ನೀಡಿದ್ದಾರೆ. ಈ ಸ್ಟಾರ್ ದಂಪತಿಗಳು ತಂದೆ-ತಾಯಿ (parents) ಆಗಿ ಬಡ್ತಿ ಪಡೆದಿದ್ದಾರೆ. ಈ ವಿಷಯವನ್ನು ತಮ್ಮ ಸೋಶಿಯಲ್​ ಮೀಡಿಯಾ(Social Media)ದಲ್ಲಿ ಹಂಚಿಕೊಂಡಿದ್ದಾರೆ. ಹೌದು, ಬಾಲಿವುಡ್ ಹಾಟ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಈಗ ತಾಯಿಯಾಗಿದ್ದಾರೆ. ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್​​ ಜೋನಾಸ್ ಅವರು, ನಾವು ನಮ್ಮ ಮಗುವನ್ನು ಸ್ವಾಗತಿಸಿದ್ದೇವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ.

2.Petrol And Diesel Price Today: ಇವತ್ತು ಸಹ ತೈಲ ಬೆಲೆಯಲ್ಲಿ ಏರಿಳಿತ; ವಾಹನದ ಟ್ಯಾಂಕ್ ಫುಲ್ ಮಾಡಿಸಬಹುದಾ?

Petrol And Diesel Price Today Jan 22, 2022: ರಾಜ್ಯದ (State) ವಿವಿಧ ನಗರಗಳಲ್ಲಿ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ (Petrol-Diesel Price) ಎಷ್ಟು ಅಂತ ತಿಳ್ಕೋಬೇಕಾ..? ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.04 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.

3.Karnataka Weather Report: ಕರ್ನಾಟಕದಲ್ಲಿ ಸಣ್ಣ ಚಳಿ ಜೊತೆ ಒಣ ಹವೆ: ನಿಮ್ಮ ನಗರದ ಹವಾಮಾನ ವರದಿ ಇಲ್ಲಿದೆ

Karnataka Weather Report Jan 22, 2022: ರಾಜ್ಯದಲ್ಲಿ ಚಳಿಯ (Cold) ಪ್ರಮಾಣ ತಗ್ಗಿದ್ದು, ಮಧ್ಯಾಹ್ನದ ವೇಳೆಗೆ ಸೂರ್ಯ ಪ್ರಖರವಾಗಿ ಪ್ರಕಾಶಿಸಲಿದ್ದಾನೆ. ನವೆಂಬರ್ ಅಂತ್ಯಕ್ಕೆ ಆರಂಭವಾದ ಚಳಿ ಸದ್ಯ ತಗ್ಗುತ್ತಿದೆ. ಆದ್ರೆ ಕೆಲ ಭಾಗಗಳಲ್ಲಿ ವಾತಾವಾರಣ ದಿನದಿಂದ ದಿನಕ್ಕೆ ವ್ಯತ್ಯಾಸ ಆಗುತ್ತಿದೆ. ಇನ್ನು ದಕ್ಷಿಣ ಕರ್ನಾಟಕ, ಮಲೆನಾಡು ಭಾಗದಲ್ಲಿ ಚಳಿ ಎಂದಿನಂತೆ ಮುಂದುವರಿದಿದ್ದು, ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ 30 ರಿಂದ 31 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಇತ್ತ ಉತ್ತರ ಭಾರತದಲ್ಲಿ (North India Weather) ಹವಾಮಾನ ತದ್ವಿರುದ್ಧವಾಗಿದ್ದು, ಹಿಮಪಾತ (Snowfall) ಮತ್ತು ಮಳೆ(Rainfall)ಯಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವ ವರದಿಗಳು ಸಹ ಬರುತ್ತಿವೆ. ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 30 ಮತ್ತು ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ಇರಲಿದೆ.

4.Gold Price Today: ಚಿನ್ನದ ಬೆಲೆಯಲ್ಲಿ 50 ರೂ. ಹೆಚ್ಚಳ: ನಿನ್ನೆ ಎಷ್ಟಿತ್ತು? ಇಂದು ಎಷ್ಟಿದೆ? ಇಲ್ಲಿದೆ ಮಾಹಿತಿ

Gold Rate on Jan 22, 2022: ದೇಶದಲ್ಲಿಂದು ಚಿನ್ನದ ಬೆಲೆ (Gold Price)ಯಲ್ಲಿ ಕೊಂಚ ಏರಿಕೆಯಾಗಿದೆ.. ಬೆಂಗಳೂರಿನಲ್ಲಿ (Bengaluru) ಸಹ ಇಂದು ಬಂಗಾರದ ಬೆಲೆ ಏರಿಕೆಯಾಗಿದೆ ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,590 ರೂ. ಇತ್ತು. ಇಂದು 50 ರೂ. ಹೆಚ್ಚಾಗಿ 47,640 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 49,590 ರೂ. ಇತ್ತು. ಇಂದು 50 ರೂ. ಹೆಚ್ಚಾಗಿ 49,640 ರೂ. ಆಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 45.500 ರೂ. ಇತ್ತು. ಇಂದು 100 ರೂ. ಹೆಚ್ಚಾಗಿ 45,650 ರೂ. ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನ ನಿನ್ನೆ 49,700 ರೂ. ಇತ್ತು. ಇಂದು 100 ರೂ. ಹೆಚ್ಚಾಗಿ 49,800 ರೂ. ಆಗಿದೆ.
Published by:Latha CG
First published: