Morning Digest: ಈ ರಾಜ್ಯಗಳಲ್ಲಿ ಇಂದು ಮಳೆ ಸಾಧ್ಯತೆ, ಚಿನ್ನದ ಬೆಲೆ ಏರಿಕೆ; ಬೆಳಗಿನ ಟಾಪ್ ನ್ಯೂಸ್​​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Karnataka Weather Report: ರಾಜ್ಯದಲ್ಲಿ ಚಳಿ ಇಳಿಕೆ, ಮೋಡ ಕವಿದ ವಾತಾವರಣ; ಉತ್ತರ ಭಾರತದಲ್ಲಿ ಮಳೆ ಸಾಧ್ಯತೆ

Karnataka Weather Report: ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಚಳಿ (Cold) ಪ್ರಮಾಣ ಇಳಿಕೆಯಾಗುತ್ತಿದೆ. ಇತ್ತ ಉತ್ತರ ಕರ್ನಾಟಕ (North Karnataka) ಭಾಗದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ (Cloudy Weather) ನಿರ್ಮಾಣವಾಗುತ್ತಿದೆ, ಇನ್ನುಳಿದಂತೆ ಉಳಿದ ಭಾಗಗಳಲ್ಲಿ ಒಣ ಹವೆ ಇರಲಿದೆ. ಈ ವರ್ಷ ಅಕಾಲಿಕ ಮಳೆಯಿಂದಾಗಿ (Unseasonal Rains) ಹವಾಮಾನದಲ್ಲಿ ಹೆಚ್ಚು ಬದಲಾವಣೆ ಆಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 27 ಮತ್ತು ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಭಾರತೀಯ ಹವಾಮಾನ ಇಲಾಖೆ (IMD), ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ, ಕರ್ನಾಟಕದ ದಕ್ಷಿಣ ಒಳನಾಡು, ಪುದುಚೇರಿ ಮತ್ತು ಕೇರಳದಲ್ಲಿ ಡಿಸೆಂಬರ್‌ನಿಂದ ಫೆಬ್ರುವರಿ ವರೆಗೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

2.Gold Price Today: ಮತ್ತೆ ಏರಿಕೆಯಾದ ಚಿನ್ನದ ಬೆಲೆ, ಖರೀದಿಗೂ ಮುನ್ನ ಇಂದಿನ ದರ ತಿಳಿದುಕೊಳ್ಳಿ..!

Gold Rate on Jan 2, 2022: ಹೊಸ ವರ್ಷದ ಆರಂಭವಾದಾಗಿನಿಂದ ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ. ಇಂದೂ ಸಹ ಭಾರತದಲ್ಲಿ ಚಿನ್ನದ ಬೆಲೆ ಏರಿಕೆಯಾಗಿದ್ದು, ಗ್ರಾಹಕರಿಗೆ ಶಾಕ್ ಕೊಟ್ಟಿದೆ. ನೀವು ಚಿನ್ನ ಖರೀದಿಗೆ ಹೋಗುತ್ತಿದ್ರೆ ಇವತ್ತಿನ ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲೇಬೇಕು. ಇದರಿಂದ ಚಿನ್ನ (Gold) ಖರೀದಿ ಸುಲಭವಾಗಲಿದೆ. ಕಳೆದೊಂದು ವಾರದಿಂದ ಚಿನ್ನದ ಬೆಲೆ ಸಾಕಷ್ಟು ಏರಿಳಿತ ಕಾಣುತ್ತಿದೆ. ಇವತ್ತಿನ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ. ಹೊಸ ವರ್ಷದ ದಿನದಂದು ಚಿನ್ನದ ಬೆಲೆ ಏರಿಕೆಯಾಗಿದ್ದು, ಗ್ರಾಹಕರಿಗೆ ಶಾಕ್​ ಕೊಟ್ಟಿತ್ತು. ಬೆಂಗಳೂರಿನಲ್ಲಿ (Bengaluru)ಯೂ ಇಂದು ಬಂಗಾರದ ಬೆಲೆ ಏರಿಕೆ ಕಂಡಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,010 ರೂ. ಇತ್ತು. ಇಂದು 140 ರೂ. ಏರಿಕೆಯಾಗಿದ್ದು 47,150 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 49,010 ರೂ. ಇತ್ತು. ಇಂದು 140 ರೂ. ಏರಿಕೆಯಾಗಿದ್ದು, 49,150 ರೂ. ಆಗಿದೆ.

3.Serving Meat: ಕ್ರಿಸ್​ಮಸ್​ ವೇಳೆ ವಿದ್ಯಾರ್ಥಿಗಳಿಗೆ ಮಾಂಸಾಹಾರ ವಿತರಣೆ, ಶಾಲೆ ಮುಚ್ಚಿಸಿದ ಶಿಕ್ಷಣಾಧಿಕಾರಿ

ಕ್ರಿಸ್​ಮಸ್ ಆಚರಣೆಯ ದಿನದಂದು ಶಾಲಾ ಮಕ್ಕಳಿಗೆ ಮಾಂಸಾಹಾರ ನೀಡಿದ ಆರೋಪ ಕೇಳಿಬಂದಿದ್ದು, ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದ ಸೇಂಟ್ ಪಾಲ್ಸ್ ಶಾಲೆಯಲ್ಲಿ ಮಾಂಸಾಹಾರ ನೀಡಿದ ಬಳಿಕ ಶಾಲೆಯನ್ನು ಮುಚ್ಚುವಂತೆ ಬಾಗಲಕೋಟೆಯ ಕ್ಷೇತ್ರ ಶಿಕ್ಷಣಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ಶಿಕ್ಷಣ ಇಲಾಖೆ ತಡೆ ನೀಡಿದೆ ಎಂದು ತಿಳಿದು ಬಂದಿದೆ. ಶಾಲೆಯ ಆಡಳಿತ ಮಂಡಳಿಗೆ ಶಿಕ್ಷಣಾಧಿಕಾರಿ ಪತ್ರ ಬರೆದಿದ್ದಾರೆ. ಕ್ರಿಸ್​ಮಸ್​ ಆಚರಣೆಯಂದು ನಿಮ್ಮ ಶಾಲೆಯಲ್ಲಿ ಮಕ್ಕಳಿಗೆ ಮಾಂಸಾಹಾರ ನೀಡಿರುವುದು ನಮ್ಮ ಗಮನಕ್ಕೆ ತರಲಾಗಿದೆ. ಈ ನಿಮ್ಮ ವರ್ತನೆ ನಮ್ಮ ಇಲಾಖೆ ಹಾಗೂ ಸಾರ್ವನಿಕರನ್ನು ಮುಜುಗರಕ್ಕೆ ದೂಡಿದೆ. ಮತ್ತೊಂದು ಆದೇಶ ಬರುವವರೆಗೂ ಶಾಲೆಯನ್ನು ತೆರೆಯುವಂತಿಲ್ಲ ಎಂದು ಪತ್ರದಲ್ಲಿ ಶಿಕ್ಷಣಾಧಿಕಾರಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

Areca Nut Growers: ಅಡಿಕೆಯಿಂದ ನಷ್ಟದಲ್ಲಿರುವ ಬೆಳೆಗಾರರಿಗೆ ಹೊಸ ಭರವಸೆ.. ಮುತ್ತು-ಮೀನು ಲಾಭ ತರಲಿದೆಯಾ?

ಪುತ್ತೂರು: ಹಳದಿ ರೋಗದಿಂದ ಕಂಗೆಟ್ಟ ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಸರಕಾರ ಸ್ಪಂದಿಸಲಿದ್ದು, ಈ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು ಎಂದು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಬಂದರು-ಮೀನುಗಾರಿಕಾ ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಭರವಸೆ ನೀಡಿದ್ದಾರೆ. ಹಳದಿ ರೋಗದಿಂದ ಕಂಗೆಟ್ಟ ಕೃಷಿಕರ ಬದುಕಿನ ಬಗ್ಗೆ ನ್ಯೂಸ್ 18 ಕನ್ನಡ ವಿಸ್ತೃತ ವರದಿಯನ್ನು ಇತ್ತೀಚೆಗಷ್ಟೇ ಪ್ರಸರಿಸಿತ್ತು. ಆ ಬಳಿಕದ ಬೆಳವಣಿಗೆಯಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಸದನದಲ್ಲೂ ಹಳದಿ ರೋಗದಿಂದ‌ ಕಂಗೆಟ್ಟ ಅಡಿಕೆ ಬೆಳೆಗಾರರ ಕುರಿತು ಸದನದ ಗಮನಕ್ಕೆ ತಂದಿದ್ದರು. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವರೂ, ಸುಳ್ಯ ಶಾಸಕರೂ ಆಗಿರುವ ಎಸ್.ಅಂಗಾರ ಜಿಲ್ಲೆಯ ಸುಳ್ಯ,ಪುತ್ತೂರು ಭಾಗದಲ್ಲಿ ನೂರಾರು ಎಕರೆ ಪ್ರದೇಶದಲ್ಲಿರುವ ಅಡಿಕೆ ತೋಟದಲ್ಲಿ ಹಳದಿ ರೋಗ ಕಾಣಿಸಿಕೊಂಡಿದ್ದು, ಈ ಬಗ್ಗೆ ರಾಜ್ಯ ತೋಟಗಾರಿಕಾ ಸಚಿವರಲ್ಲೂ ಮಾತನಾಡಿದ್ದೇನೆ ಎಂದರು.
Published by:Latha CG
First published: