Morning Digest: ಇಳಿಕೆಯಾದ ಚಿನ್ನದ ಬೆಲೆ, ಈ ರಾಜ್ಯಗಳಲ್ಲಿ ಭಾರೀ ಮಳೆ, ಬೆಂಗಳೂರಿನಲ್ಲಿ ಪವರ್ ಕಟ್, ಬೆಳಗಿನ ಟಾಪ್ ನ್ಯೂಸ್​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Karnataka Weather Today: ಈ ರಾಜ್ಯಗಳಲ್ಲಿ ಮುಂದಿನ 3 ದಿನ ಗುಡುಗು ಸಹಿತ ಭಾರೀ ಮಳೆ, ಯೆಲ್ಲೋ ಅಲರ್ಟ್​ ಘೋಷಣೆ

Karnataka Weather Report Jan 19 2022: ರಾಜ್ಯದ ಹಲವೆಡೆ ಹಗುರ ಮಳೆಯಾಗಿದ್ದರೆ(Rain), ಮತ್ತೆ ಕೆಲವೆಡೆ ಮೋಡ ಕವಿದ(Cloudy Weather) ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ದಕ್ಷಿಣ ಕರ್ನಾಟಕ (South Karnataka) ಮತ್ತು ಒಳನಾಡು ಭಾಗಗಳಲ್ಲಿ ದಟ್ಟವಾದ ಮಂಜು ಆವರಿಸಿದೆ. ಕರ್ನಾಟಕದ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಚಿಕ್ಕಬಳ್ಳಾಪುರ ಸೇರಿ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಹಗುರ ಮಳೆಯಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಬದಲಾಗುತ್ತಿರುವ ಹವಾಮಾನದಿಂದ ಜನರು ಶೀತ ಮತ್ತು ಕೆಮ್ಮು ಸಂಬಂಧಿತ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇಂದು ಎಲ್ಲೆಲ್ಲಿ ಮಳೆಯಾಗಲಿದೆ? ಎಲ್ಲಿ ಚಳಿಯ ಪ್ರಮಾಣ ಹೆಚ್ಚಾಗಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

2.INS Ranvir ನೌಕೆಯಲ್ಲಿ ಸ್ಪೋಟ ಮೂವರು ಸಾವು; 11ಮಂದಿಗೆ ಗಾಯ

ಭಾರತೀಯ ನೌಕಾಪಡೆಯ ನೌಕಪಡೆಯ ಡಾಕ್‌ಯಾರ್ಡ್‌ (Dockyard) ಐಎನ್‌ಎಸ್ ರಣವೀರ್‌ (INS Ranvir) ನೌಕೆಯ ಆಂತರಿಕ ವಿಭಾಗದಲ್ಲಿ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ 3 ಭಾರತೀಯ ನೌಕಾಪಡೆ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗಾಯಗೊಂಡಿರುವ 11 ನಾವಿಕರು ಸ್ಥಳೀಯ ನೌಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಎನ್ಐ ವರದಿ ಮಾಡಿದೆ. ಈ ಸ್ಫೋಟವು ಸಂಜೆ 4:30 ರ ಸುಮಾರಿಗೆ ಸಂಭವಿಸಿದೆ. ಶಸ್ತ್ರಾಸ್ತ್ರಗಳು ಅಥವಾ ಮದ್ದುಗುಂಡುಗಳ ಸ್ಫೋಟಕ್ಕೆ ಯಾವುದೇ ಹಾನಿ ಆಗಿಲ್ಲ ಎಂದು ಮೂಲಗಳು ಹೇಳುತ್ತವೆ. ಕಾರಣವನ್ನು ತನಿಖೆ ಮಾಡಲು ತನಿಖಾ ಮಂಡಳಿಗೆ ಆದೇಶಿಸಲಾಗಿದೆ.

3.Bengaluru Power Cut: ಇಂದಿನಿಂದ ಜನವರಿ 21ರವರೆಗೆ ಬೆಂಗಳೂರಿನ ಹಲವೆಡೆ ಪವರ್ ಕಟ್

ಕೊರೋನಾ(Corona) ಮಹಾಮಾರಿ ಓಮಿಕ್ರಾನ್(Omicron) ಹೆಸರಲ್ಲಿ ತನ್ನ ಆರ್ಭಟವನ್ನ ಮತ್ತೆ ಶುರು ಮಾಡಿದೆ. ರಾಜ್ಯದಲ್ಲಿ(State) ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಕರಣಗಳು(Case) ಪತ್ತೆಯಾಗುತ್ತಿವೆ. ಜನರು ಮನೆಯಿಂದ(Home) ಆಚೆ ಹೋಗಲು ಭಯ(Fear) ಪಡುವ ವಾತವಾರಣ ನಿರ್ಮಾಣವಾಗಿದೆ. ಅದ್ರಲ್ಲೂ ರಾಜಧಾನಿ (Capital)ಬೆಂಗಳೂರಿನ(Bengaluru) ಪರಿಸ್ಥಿತಿ ನಿಜಕ್ಕೂ ಬೆಚ್ಚಿ ಬೀಳುವಂತಿದ್ದು ಜನ ಮನೆಯಿಂದ ಕಾಲಿಡಲು ಹಿಂದೆ-ಮುಂದೆ ನೋಡಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಮನೆಯಲ್ಲಿ ನೆಮ್ಮದಿಯಾಗಿ ಕಾಲ ಕಳೆಯೋಣಾ ಎಂದು ಬೆಂಗಳೂರಿನ ಜನರು ಅಂದುಕೊಳ್ಳುತ್ತಿರುವ ಸಮಯದಲ್ಲಿ ಬೆಸ್ಕಾಂ ಎಂದಿನಂತೆ ಶಾಕ್ ನೀಡಿದ್ದು, ಮೂರು ದಿನಗಳ ಕಾಲ ಬೆಂಗಳೂರಿನ ಹಲವೆಡೆ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ವಿದ್ಯುತ್ ಕಡಿತಗೊಳಿಸುತ್ತಿದೆ.

4.Gold Price Today: ಬೆಂಗಳೂರಲ್ಲಿ ಇಳಿಕೆಯಾದ ಚಿನ್ನದ ಬೆಲೆ, ನಿಮ್ಮ ನಗರಗಳಲ್ಲಿ ಇಂದಿನ ದರ ವಿವರ ನೋಡಿ..

Gold Rate on Jan 19, 2022: ದೇಶದಲ್ಲಿಂದು ಚಿನ್ನದ ಬೆಲೆ (Gold Price)ಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.. ಬೆಂಗಳೂರಿನಲ್ಲಿ (Bengaluru) ಇಂದು ಬಂಗಾರದ ಬೆಲೆ ಇಳಿಕೆಯಾಗಿದೆ ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,090 ರೂ. ಇತ್ತು. ಇಂದು ಸಹ ಅದೇ ಬೆಲೆ ಇದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 49,090 ರೂ. ಇತ್ತು. ಇಂದೂ ಸಹ ಅದೇ ಬೆಲೆ ಇದೆ. ಇನ್ನು, ಬೆಂಗಳೂರು ಸೇರಿ ದೇಶದ ವಿವಿಧ ನಗರಗಳಲ್ಲಿ ಇಂದಿನ ಚಿನ್ನ(Gold), ಬೆಳ್ಳಿ(Silver) ದರ ದರ ಎಷ್ಟಿದೆ ಎಂಬುದನ್ನು ಇಲ್ಲಿ ನೋಡೋಣ.

5.Petrol Price Today: ನಿಮ್ಮ ವಾಹನಕ್ಕೆ ಇಂಧನ ತುಂಬಿಸ್ಬೇಕಾ..? ವಿವಿಧ ನಗರಗಳಲ್ಲಿ ಇಂದಿನ ಪೆಟ್ರೋಲ್‌, ಡೀಸೆಲ್‌ ಬೆಲೆ ಹೀಗಿದೆ

Petrol And Diesel Price Today Jan 19, 2022: ರಾಜ್ಯದ ವಿವಿಧ ನಗರಗಳಲ್ಲಿ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ(Petrol-Diesel Price) ಎಷ್ಟು ಅಂತ ತಿಳ್ಕೋಬೇಕಾ..? ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು 1 ಲೀಟರ್ ಪೆಟ್ರೋಲ್(Petrol)​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.
Published by:Latha CG
First published: